ನನ್ನ ಹಾರ್ಡ್ ಡಿಸ್ಕ್ ನ ನೆನಪಿನಲ್ಲಿ ಇನ್ನೂ ಫ್ರೆಶ್ ಆಗಿದೆ. ಮೊಬೈಲ್ ವಿಕಿರಣಗಳ ಹಾನಿ ಬಗ್ಗೆ ವಿಪರೀತ ಓದಿಕೊಂಡಿದ್ದ ನಾನು ಮೊಬೈಲ್ ವಿರುದ್ಧ ಗೆಳೆಯರ ಜತೆ ವಾದಿಸಿದ್ದು. ಅಪ್ಪನಿಗೆ ಮೊಬೈಲ್ ತೆಗೆದುಕೊಳ್ಳಬೇಡ, ಆರೋಗ್ಯಕ್ಕೆ ಹಾನಿಕರ ಎಂದು ತಡೆಗಾಲು ಹಾಕಿದ್ದು. ನಿನ್ನ ಮಗನಿಗೆ ಬ್ಲ್ಯಾಕ್ ಬೆರಿಯಾಗಿ ರೇಷ್ಮೆ ಹಣ್ಣಿನ ಚಿತ್ರವನ್ನೇ ತೋರಿಸು ಮೊಬೈಲ್ ಅಲ್ಲ ಎಂದು ಅಕ್ಕನಲ್ಲಿ ವಿನಂತಿಸಿಕೊಡಿದ್ದು, ಎಲ್ಲವೂ. ಆದರೆ ಅದೆಂತಹ ವೇಗ! ಕಿರಣ - ವಿಕಿರಣಗಳ ಲಾಭ ಹಾನಿ ಲೆಕ್ಕ ಹಾಕಲೂ ಸಮಯ ಸಂಯಮ ಇಲ್ಲದಂತೆ ಎಲೆಕ್ಟ್ರಾನಿಕ್ ಗೆಜೆಟ್ ಜಗತ್ತಿನಲ್ಲಿ ಜಾಲಾಡುವ ಅನಿವಾರ್ಯತೆ ಇಂದು.
ಅಕಾಲದಲ್ಲಿ ಸೇಬು ಹಣ್ಣು ಬೇಕೆಂದು ಹಠಹಿಡಿದಾಗ ಅಂತೂ ಇಂತೂ ಸಮಾಧಾನ ಮಾಡಿದ್ದ ಅಪ್ಪನಿಗೆ ಈಗ ನಿತ್ಯವೂ ಆಪಲ್ ರುಚಿ ಹತ್ತಿಸುವಾಸೆ. ನಾನು ಗುಳಿಗೆ ತೆಗೆದುಕೊಳ್ಳಲು ಖಂಡಿತಾ ಒಲ್ಲೆ ಎಂದಿದ್ದ ದೊಡ್ಡಪ್ಪ, ನಿನ್ನ ಟ್ಯಾಬ್ಲೆಟ್ ಇಟ್ಟು ಹೋಗುತ್ತೀಯಾ? ಎಂದು ಕೇಳಿದಾಗ, ಬೇಕು ಬೇಕಾದಾಗ ಹಳೆ ಹಾಡಿನ ಕಚಗುಳಿ ಇಡುವ ದೃಶ್ಯ ನೋಡುವ ಆತನ ಆಸೆಗೆ ಸೈ ಎನ್ನುವಾಸೆ. ಎಂಥ ಬದಲಾವಣೆ!
ಐಸ್ ಕ್ರೀಮ್ ಕ್ಯಾಂಡಿ ತೆಗೆಸಿಕೊಡು ಎಂದು ಹಠಮಾಡಿ ಅಜ್ಜಿಯಿಂದ ಅದನ್ನು ಗಿಟ್ಟಿಸಿಕೊಂಡಿದ್ದ ಮೊಮ್ಮಗ ಈಗ ಆಕೆಗೇ ಈಸ್ ಕ್ರೀಮ್ ಸ್ಯಾಂಡ್ ವಿಚ್ ತಿನ್ನುವುದು ಹೇಗೆ ಎಂದು ಹೇಳಿಕೊಟ್ಟಿದ್ದಾನೆ. ಅರಬ್ ನಾಡಿನ ಜೆಲ್ಲಿಬೀನ್ ಸವಿಯಿತ್ತ ತುರ್ಕಿಸ್ತಾನದ ತಾತನ ತಲೆಗೆ ಮಾಡರ್ನ್ ಜೆಲ್ಲಿಬೀನ್ ತುರುಕಿಸುವ ಯತ್ನದಲ್ಲಿದ್ದೇವೆ (ಜೆಲ್ಲಿಬೀನ್ ಟರ್ಕಿಯ ನೆಚ್ಚಿನ ಖಾದ್ಯಗಳಲ್ಲೊಂದು). ಮೊನ್ನೆ ಮೊನ್ನೆ ಬಾಯಿಗೆ ಕಿಟ್ ಕ್ಯಾಟ್ ಮೆತ್ತಿಕೊಂಡು ತಿರುಗುತ್ತಿದ್ದ ಪೋರ ಕಿಟ್ ಕ್ಯಾಟ್ ನ ಪರಿ ಪರಿಯನ್ನು ವಿವರಿಸಿ ಹೇಳುವಷ್ಟು ಜೋರಾಗಿದ್ದಾನೆ. ಗೆಳೆಯರಿಗೆಲ್ಲ ಜಿಂಜರ್ ಬ್ರೆಡ್, ಹನಿಕೂಂಬ್ ತಿನ್ನಿಸಿ ಸಂಭ್ರಮಿಸಿ ಅದೆಷ್ಟೋ ದಿನಗಳೇ ಕಳೆದುಹೋಗಿವೆ ನೋಡಿ. ಈಗೇನು ಲಾಲಿ ಹಾಡಿದ ಅಮ್ಮನಿಗೆ ಲಾಲಿಪಾಪ್ ತಿನ್ನಿಸುವ ತವಕದಲ್ಲಿದ್ದೇವೆ. ಮಕ್ಕಳಿಗೆ ಮೊಬೈಲ್ ನಲ್ಲೇ ಮಾಜಾ ಕುಡಿಸುವ ಮಜ ಇಲ್ಲವೇ ಮಿಂಟ್ ಮಿತ್ರರನ್ನಾಗಿಸುವ ದಿನವೂ ಬರಬಹುದು ಸಧ್ಯದಲ್ಲೇ!
ತನ್ನ ಎ-ಬಿ-ಸಿ-ಡಿ ಆಟದ ಮೋಡಿಗೆ ನಮ್ಮನ್ನು ಅರಿವಿಲ್ಲದೇ ಕೊಂಡೊಯ್ದಿರುವ ಆಂಡ್ರಾಯಿಡ್ ತನ್ನ ಮೊಬೈಲ್ ನಿಯಮಾವಳಿಯಂತೆ ಮುಂದಿನ ಮೊಬೈಲ್ "ಎಂ" ಅಕ್ಷರದ ಮೋಡಿ ಮಾಡಲು ಹೆಚ್ಚು ದಿನವೂ ಬೇಕಿಲ್ಲ.
ಅಂದು ಸದಾ ತನ್ನಮ್ಮನ ಬರುವಿಕೆಗಾಗಿ ಕಿಟಕಿಯಾಚೆಯೇ ನೋಡುತ್ತಿದ್ದ ಗೆಳತಿ ಇಂದು ಅಮ್ಮನಿಗಾಗಿಯೇ ವಿಂಡೋಸ್ ಫೋನ್ ಕೊಂಡಾಗ ಇನ್ನೊಮ್ಮೆ ಮನದಟ್ಟಾಯಿತು. ನಮ್ಮ ಮುಂದಿದ್ದ ವಸ್ತುಗಳು ಅದೆಷ್ಟು ಬೇಗ ತಮ್ಮ ರೂಪ ಬದಲಿಸಿಕೊಂಡು ಬಿಟ್ಟಿವೆ! ರೂಪವೊಂದೇ ಅಲ್ಲ. ನಾಮಕೋಟಿಯ ಎಲ್ಲೆ ಮೀರಿ ನಮ್ಮ ಜಗತ್ತಿನಾಚೆಗೇ ಸಾಗಿಬಿಟ್ಟಿವೆ. ನಾವಿನ್ನೂ ಕುವೆಂಪು ವಿಶ್ವಮಾನವತೆಯ ಮಂತ್ರವನ್ನೇ ಜಪಿಸುತ್ತಿದ್ದರೆ, ನಮ್ಮ ಕಣ್ಮುಂದಿನ ವಸ್ತುಗಳೆಲ್ಲ ಯಂತ್ರ-ತಂತ್ರಗಳಾಗಿಬಿಟ್ಟಿವೆ. ನಮ್ಮ ಮನಸ್ಸು ಪರವಶಗೊಂಡುಬಿಟ್ಟಿದೆ.
ಫೇಸ್ ಬುಕ್ ನೋಡದೇ ಫೇಸ್ ತೊಳೆಯದ ಕಾಲದಲ್ಲಿ ಇದನ್ನೆಲ್ಲ ಓದಿ ಹೌದಲ್ಲವೇ ಎಂದು ಯೋಚಿಸಲೂ ಯಾರಿಗೂ ಸಮಯವಿಲ್ಲವೇನೋ. ನಾವೆಲ್ಲ ಅದೆಷ್ಟು ಬೇಗ ಈ ಇಲೆಕ್ಟ್ರಾನಿಕ್ ಜೀವನಕ್ಕೆ ಒಗ್ಗಿ ಹೋಗಿದ್ದೇವೆಂದರೆ ಹೊಸತನದ ಹೊಸ್ತಿಲಲ್ಲಿ ನೆಟ್ ನ ನಾಗಾಲೋಟದಲ್ಲಿ ನಮ್ಮ ಬದುಕಿನ ಹಿಂದಿನ ಪುಟ ಹೋಗಲಿ, ಫೊಟೋ ತೆಗೆದು ನೋಡಲೂ ಒಲ್ಲೆವೆನ್ನುತ್ತಿದ್ದೇವೆ.
ಮನೋವೇಗದ ಮಷಿನ್ ಅನ್ನು ಮನೆಯಲ್ಲೇ ಇಟ್ಟುಕೊಂಡಿದ್ದೇವೆ. ಬಾಹ್ಯ ಜಗತ್ತನ್ನು ಭೌತಿಕವಾಗಿ ನೋಡುವುದಕ್ಕಿಂತಲೂ ಹೆಚ್ಚು ವರ್ಚುಯಲ್ ಆಗಿ ಹುಡುಕುವುದರಲ್ಲೇ ತುಂಬು ಆಸಕ್ತಿ ತೋರಿದ್ದೇವೆ. ಎದುರಿಗಿರುವವರ ಅನಿವಾರ್ಯತೆಯಿಲ್ಲ. ಆದರೆ ಇಂಟರ್ ನೆಟ್ ಎಂಬ ಮಾಯೆ ಇಲ್ಲದಿರೆ ತಲೆ ನೆಟ್ಟಗಿರುವುದಿಲ್ಲ. ಗುರುವಿನ ಗುಲಾಮನಾಗುವ ಗೊಡವೆಯಿಲ್ಲ. ಗೂಗಲ್ ಗೋಡೆಗೆ ಒರಗಿಕೊಂಡಿದ್ದೇವಲ್ಲ. ನೆನಪಿನ ಶಕ್ತಿಗೆ ತನ್ನ ನೆನಪು ಇಲ್ಲವಾಗಿದೆ; ನೆಲೆಯೂ ಇಲ್ಲವಾಗಬಹುದಲ್ಲ?
ಆನೋ ಭದ್ರಾಹಃ ಕೃತವೋ ಯಂತು ವಿಶ್ವತಃ - ಅಂದರೆ ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ಹರಿದುಬರಲಿ ಎಂಬ ಹಿರಿಯರ ಮಾತನ್ನು ಓಪನ್ ಸೋರ್ಸ್ ಹೆಸರಲ್ಲಿ ಅಕ್ಷರಶಃ ನಿಜವಾಗಿಸಿದ್ದೇವೆ. ಹಿರಿ-ಕಿರಿಯ ಪರದೆ ಸರಿದೇ ಹೋಗಿದೆಯೇನೋ. ಕಿರಿಯರೇ ಹಿರಿಯರಿಗೆ ಗುರುವಾಗುತ್ತಿರುವ ಕಾಲದಲ್ಲಿ ಕೆಲವೊಮ್ಮೆ ಜಿಜ್ಞಾಸೆಯೊಂದು ಕಾಡುತ್ತಿರುತ್ತದೆ.
ಕ್ಷಣಕ್ಕೊಂದು ಗೆಜೆಟ್ ದಾಸರಾಗುವ ನಾವು ಹಿಂದಿನವರಂತೆ ಅನುಭವದ ಮೂಸೆಯನ್ನು ಮೂಸಲಾದರೂ ಸಾಧ್ಯವೇ? ನೈತಿಕತೆಯ ಮುಂದೆ ನೋ ನೆಟ್ ವರ್ಕ್ ಫೌಂಡ್ ಎಂಬ ನೋಟಿಫಿಕೇಷನ್ ಬಂದಾಗಿದೆ ಎನ್ನಿಸುತ್ತಿದೆ. ಒಂದನ್ನು ಅರಿತು ಅರಗಿಸಿಕೊಳ್ಳುವ ಮೊದಲೇ ಇನ್ನೊಂದು ನಮ್ಮನ್ನಾಕ್ರಮಿಸಿಬಿಟ್ಟಿರುತ್ತದೆ. ಈ ಆಕ್ರಮಣ ಹೀಗೇ ಮುಂದುವರಿದರೆ ವೈರಿ ಜಗತ್ತೆನ್ನುವುದು ವೈರಸ್ ಜಗತ್ತಿನಿಂದಲೇ ತುಂಬಿ ಹೋಗಬಹುದು. ಸೈಬರ್ ಭಯವಂತೂ ಭರದಿಂದಲೇ ಸಾಗಿದೆ.
ಏನೇ ಆದರೂ ತಂತ್ರಜ್ಞಾನದ ಐಕ್ಯತೆಯ ಮಾಂತ್ರಿಕ ಶಕ್ತಿಗೆ ತಲೆಬಾಗಲೇಬೇಕಲ್ಲ? ಬಡವ-ಬಲ್ಲಿದ, ಹಿರಿಯ-ಕಿರಿಯ, ಗಂಡು-ಹೆಣ್ಣು ಎಂಬಿತ್ಯಾದಿ ಬೇಧವೇ ಇಲ್ಲದೇ ಎಲ್ಲರನ್ನೂ ಹಿಡಿಟ್ಟಿರುವ ಅದ್ಭುತ ಜಾಲ ಈ ತಂತ್ರಜ್ಞಾನ.
ಸದಾ ಆನ್ಲೈನ್ ನಲ್ಲೇ ನೀವು ಆನ್ ಆಗಿರುವಾಗ, ಡ್ರೋನ್ ನಲ್ಲಿ ನಿಮ್ಮ ವಸ್ತುವನ್ನು ವಶೀಕರಿಸಿಕೊಳ್ಳುವ ದಾರಿಯಲ್ಲಿರುವಾಗ, ಸಹಾಯಕ್ಕೆಂದು ಸದಾ ಒಂದು ರೋಬೊ ಜತೆಗಿರುವ ಕನಸನ್ನು ನೀವು ಕಾಣುತ್ತಿರುವಾಗ ನಾನು ಬೇಗ ಟಾ ಟಾ ಎನ್ನದಿದ್ದರೆ ನೀವಿಲ್ಲಿ ಆಫ್ ಲೈನ್ ಆಗಿ ಟ್ವಿಟರ್ ಗೆ ತಗುಲಿಕೊಳ್ಳುತ್ತೀರೆಂದು ನಾ ಬಲ್ಲೆ. ತಂತ್ರಜ್ಞಾನದ ತಾಳಕ್ಕೆ ಜಗತ್ತು ಕಟ್ಟಿಕೊಂಡಿರುವ ಮೇಳಕ್ಕೆ ನನ್ನದೂ ಒಂದು ಜೈ! ಎನ್ನುತ್ತ ನಾ ಲಾಗ್ ಔಟ್.

ಚಿತ್ರ ಕೃಪೆ : ಗೂಗಲ್ |

ಲೇಖಕರ ಕಿರುಪರಿಚಯ | |
ಸಹನಾ ಬಾಳಕಲ್ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಇವರ ಹುಟ್ಟೂರು; ದೂರಸಂಪರ್ಕ ವಿಭಾಗದ ಇಂಜಿನಿಯರಿಂಗ್ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಉನ್ನತ ಪದವಿ ಪಡೆದಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. Blog | Facebook | Twitter |
So very true.. nicely composed, Sahana.
ಪ್ರತ್ಯುತ್ತರಅಳಿಸಿKeep writing..
Thanks Sandhya:)
ಅಳಿಸಿಸುಂದರ ಲೇಖನ. (ವಿಷಯವನ್ನು ಕನ್ನಡದಲ್ಲಿ ಬರೆಯುವುದೇ ಒಂದು ಸವಾಲು.) ಇಂಗ್ಲಿಷ್ ಪದಗಳು ಹೆಚ್ಚಿಗೆ ಬಳಕೆಯಾಗಿದ್ದರೂ ಸಹ ಅನವಶ್ಯಕ ಎನಿಸುತ್ತಿಲ್ಲ.
ಪ್ರತ್ಯುತ್ತರಅಳಿಸಿ