ಗುರುವಾರ, ನವೆಂಬರ್ 30, 2017

ಪ್ರಸಿದ್ಧ ವಚನಕಾರರು

ನವಂಬರ್ 2017ರ ಮಾಹೆಯುದ್ದಕ್ಕೂ ನಡೆದ ಕಹಳೆ ಏಳನೇ ಆವೃತ್ತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಡನೆ ಎಂದಿನಂತೆ ಸಹಕರಿಸಿದ ಎಲ್ಲ ಸಹೃದಯೀ ಓದುಗರಿಗೂ, ಬರೆಹಗಳನ್ನು ಪ್ರಸ್ತುತಿಪಡಿಸಿದ ಓಬಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲ ಮಕ್ಕಳಿಗೂ, ಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲ ಶಿಕ್ಷಕರಿಗೂ; ಪ್ರಮುಖವಾಗಿ ಶಾಲಾ ಪ್ರಾಂಶುಪಾಲರಿಗೂ ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಕಹಳೆಯ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು; ನೀವೆಲ್ಲರೂ ಸದಾ ಕಹಳೆಯೊಟ್ಟಿಗೆ ಇರುತ್ತೀರೆಂದು ನಾವು ನಂಬಿದ್ದೇವೆ.


ಅಲ್ಲಮಪ್ರಭು
ಚಿತ್ರ ಕೃಪೆ : Google
ಅಲ್ಲಮಪ್ರಭು: ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ ಜನನ. 12ನೇ ಶತಮಾನದ ಧಾರ್ಮಿಕ ಮಹಾತ್ಮರಲ್ಲಿ ಪ್ರಮುಖ ವ್ಯಕ್ತಿ. ಶರಣ ಮಾರ್ಗಕ್ಕೆ ಗುರು ಎನಿಸಿದ, ಅನುಭವ ಮಂಟಪದ ಅಧ್ಯಕ್ಷ, ಶೂನ್ಯ ಸಿಂಹಾಸನದ ದೊರೆ. ಡಾಂಬಿಕತೆ, ಅಂಧ ಶ್ರದ್ಧೆ, ಅಜ್ಞಾನ, ಅಸತ್ಯ, ವಿಕಾಶತೆಗಳ ವಿರೋಧಿ. ಜ್ಞಾನ ವೈರಾಗ್ಯದ ಗಣಿ ಅಲ್ಲಮ ತನ್ನ ವಚನಗಳನ್ನು "ಗುಹೇಶ್ವರ" ಎಂಬ ಅಂಕಿತದಿಂದ ರಚಿಸಿದ್ದಾರೆ. ಮಹಾ ವ್ಯಕ್ತಿತ್ವದ ಅಲ್ಲಮನನ್ನು ಕುರಿತು ಹರಿಹರ ಕವಿಯು ಪ್ರಭು ದೇವರ ರಗಳೆ, ಚಾಮರಸ ಕವಿಯು ಪ್ರಭುಲಿಂಗಲೀಲೆ ಕೃತಿಗಳನ್ನು ರಚಿಸಿದ್ದಾರೆ.


ಜೇಡರದಾಸಿಮಯ್ಯ
ಚಿತ್ರ ಕೃಪೆ : Google
ಜೇಡರದಾಸಿಮಯ್ಯ: 11ನೇ ಶತಮಾನದ ಉತ್ತರಾರ್ಧ ಹಾಗೂ 12ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಹಿರಿಯ ಶಿವಶರಣ ಹಾಗೂ ವಚನಕಾರ. ಸುರಪುರ ತಾಲ್ಲೂಕು ಮನಸೂರು ಜನ್ಮಸ್ಥಳ. ರಾಮನಾಥ ಈತನ ಆರಾಧ್ಯದೈವ. ನೇಯ್ಗೆಯು ಕಾಯಕ. ಈತನ ಸುಮಾರು 142 ವಚನಗಳು ದೊರೆತಿವೆ. "ರಾಮನಾಥ" ಎಂಬುದು ದಾಸಿಮಯ್ಯನ ವಚನಗಳ ಅಂಕಿತ. ಇವನ ವಚನಗಳಲ್ಲಿ ಭಕ್ತಿಯ ಮೇಲ್ಮೈ, ನಿಷ್ಠುರವಾದ ಸ್ವಚ್ಛ ವಾಕ್ಯರಚನೆ, ಆಳವಾದ ಅರ್ಥಭಾವ ಧ್ವನಿ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ ಇತ್ಯಾದಿ ಗುಣಗಳು ಎದ್ದು ಕಾಣುತ್ತದೆ.


ಚೆನ್ನಬಸವಣ್ಣ
ಚಿತ್ರ ಕೃಪೆ : Google
ಚೆನ್ನಬಸವಣ್ಣ: ಬಸವಣ್ಣನ ಸೋದರಳಿಯ ಶಿವಶರಣ ವಚನಕಾರ. ಪಟ್‌ಸ್ಥಲ ವಚನಕಾರ. ಕರಣ ಹಸಿವಿಗೆ ಮಿಶ್ರಾರ್ಪಣ ಮಂತ್ರಘೋಷ, ಕಾಲಜ್ಞಾನ ಕೃತಿಗಳಲ್ಲಿವೆ. ಅನೇಕ ವಚನಗಳನ್ನು ರಚಿಸಿದ್ದಾರೆ. ನೈಜವಾದ ನಿರೂಪಣೆಗೆ ಪ್ರಸಿದ್ಧನಾಗಿದ್ದಾನೆ. ಪಾದರಸದಂತಹ ಈತನ ಪ್ರತಿಭೆ, ಈತನ ವಚನಗಳಲ್ಲಿನ ಆತ್ಮಪ್ರತ್ಯಯ, ಸ್ಪಷ್ಟೋಕ್ತಿ ಮೆಚ್ಚುವಂಥದ್ದು.


ಅಕ್ಕಮಹಾದೇವಿ
ಚಿತ್ರ ಕೃಪೆ : Google
ಅಕ್ಕಮಹಾದೇವಿ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಜನನ. ಕನ್ನಡ ಸಾಹಿತ್ಯದ ಮೊದಲ ಕವಿಯಿತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಪ್ರಧಾನ ಸಮಾಜಚನ್ನು ಪ್ರತಿಭಟಿಸಿದವಳು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವಳು. "ಚನ್ನಮಲ್ಲಿಕಾರ್ಜುನ" ಎಂಬುದು ಈಕೆಯ ವಚನಗಳ ಅಂಕಿತ. "ಯೋಗಾಂಗತ್ರಿವಿಧಿ" ಅಕ್ಕಮಾಹಾದೇವಿಯ ಪ್ರಮುಖ ಕೃತಿ. ರಾಜ ಪ್ರಭುತ್ವ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿ ನಿಂತ ಅಕ್ಕನ ವಚನಗಳು ಕನ್ನಡದ ಸ್ತ್ರೀ ಸಂವೇದನಾ ಅಭಿವ್ಯಕ್ತಿಯ ದಾಖಲೆಯಾಗಿವೆ.


ಬಸವಣ್ಣ
ಚಿತ್ರ ಕೃಪೆ : Google
ಬಸವಣ್ಣ: 12ನೇ ಶತಮಾನದ ಶರಣ, ಪ್ರಮುಖ ಪ್ರಸಿದ್ಧ ವಚನಕಾರ. ಸಮಾಜ ಸುಧಾರಕ. ಅಂದು ಕರ್ನಾಟಕದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಮಹಾಕ್ರಾಂತಿಯ ನೇತಾರ. ಬಿಜಾಪುರ ಜಿಲ್ಲೆಯ ಬಾಗೇವಾಡಿ ಇವರ ಜನ್ಮ ಸ್ಥಳ. ಕವಿ ಹೃದಯದ ಇವರು ವಚನಕಾರರಾಗಿದ್ದರು. ಇವರ 100ಕ್ಕೂ ಹೆಚ್ಚು ವಚನಗಳು ದೊರೆತಿವೆ. "ಕೂಡಲ ಸಂಗಮದೇವ" ಎಂಬುದು ಇವರ ವಚನಗಳ ಅಂಕಿತ


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಕಾವ್ಯ, ಆರ್.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 29, 2017

ಬುದ್ಧಿವಂತ ಬೀರಬಲ್

ಅಕ್ಬರನ ಆಸ್ಥಾನಕ್ಕೆ ಒಮ್ಮೆ ವಿದೇಶಿ ದೂತನೊಬ್ಬ ಬಂದು ತನ್ನ ಅರಸರ ಓಲೆಯನ್ನು ಚಕ್ರವರ್ತಿಗೆ ನೀಡಿದನು. ಅದರಲ್ಲಿ "ಚಕ್ರವರ್ತಿಗಳೇ, ತಮ್ಮ ಆಸ್ಥಾನದಲ್ಲಿ ಬಹಳ ಜನ ಮಹಾನ್ ಪಂಡಿತರಿದ್ದಾರೆ ಎಂಬ ವಿಷಯ ನಮ್ಮ ದೇಶವರೆಗೂ ಹರಡಿದೆ. ಆವರ ಪಾಂಡಿತ್ಯವನ್ನು ಒಂದು ಗಡಿಗೆಯಲ್ಲಿ ತುಂಬಿ ಕಳುಹಿಸಿದರೆ ನಾವೂ ಅದನ್ನು ನೋಡಬಹುದು" ಎಂದು ಬರೆದಿತ್ತು. ಈ ಸಮಸ್ಯೆಯಿಂದ ಚಿಂತಿತನಾದ ಅಕ್ಬರನು ಅದನ್ನು ಉಪಸ್ಥಿತರಿದ್ದ ಎಲ್ಲ ಆಸ್ಥಾನ ಪಂಡಿತರ ಮುಂದೆ ಇರಿಸಿದ. ಗಡಿಗೆಯಲ್ಲಿ ಪಾಂಡಿತ್ಯವನ್ನು ತುಂಬುವುದು ಹೇಗೆ? ಎಂಬುದು ಎಲ್ಲರಿಗೂ ಬಗೆಹರಿಸಲಾಗದ ಕಗ್ಗಂಟಾಯಿತು.

ತಮ್ಮ ಅರಸರನ್ನು ಅವಮಾನಿಸುವ ವಿದೇಶಿ ಅರಸನ ಸಂಚನ್ನು ಅರ್ಥ ಮಾಡಿಕೊಂಡ ಬೀರಬಲ್ಲನು ಈ ಸಮಸ್ಯೆಗೆ ಉತ್ತರಿಸಲು ತನಗೆ ಎರಡು ತಿಂಗಳು ಕಾಲಾವಾವಕಾಶ ಬೇಕೆಂದು ಕೇಳಿ ದೂತನಿಂದ ಅಷ್ಟು ಸಮಯ ಪಡೆದನು. ಆ ದಿನವೇ ಅವನು ತನ್ನ ಮನೆಯ ಹಿತ್ತಲಲ್ಲಿ ಕುಂಬಳ ಬೀಜವನ್ನು ನೆಟ್ಟು ನೀರು ಹಾಕಿ ಬೆಳೆಸಿದನು. ಕುಂಬಳ ಗಿಡ ಹೂಬಿಟ್ಟು ಹೀಚಾದಾಗ ಅದನ್ನು ಗಡಿಗೆಯೊಳಗಿಟ್ಟು ಗಿಡವನ್ನು ಚೆನ್ನಾಗಿ ಆರೈಕೆ ಮಾಡಿದನು. ಕುಂಬಳಕಾಯಿಯು ಗಡಿಗೆಯ ಒಳಗೇ ಬೆಳೆದು ದೊಡ್ಡದಾಯಿತು.


ಎರಡು ತಿಂಗಳ ನಂತರ ಆ ದೂತ ಬಂದಾಗ, ಗಡಿಗೆ ಸಹಿತ ಕುಂಬಳಕಾಯಿಯನ್ನು ಗಿಡದಿಂದ ಬೇರ್ಪಡಿಸಿ ಆಸ್ಥಾನಕ್ಕೆ ತಂದು, ಪಾಂಡಿತ್ಯವನ್ನು ಗಡಿಗೆಯಲ್ಲಿ ತುಂಬಿ ತಂದಿರುವೆನು, ನಿಮ್ಮ ದೇಶದ ಅರಸರಿಗೆ ನಮ್ಮ ಅರಸರು ಇದನ್ನು ಕಾಣಿಕೆಯಾಗಿ ನೀಡುತ್ತಿರುವರು. ಅವರಿಗೆ ತಲುಪಿಸಿ. ಎಂದು ಆ ದೂತನಿಗೆ ಅದನ್ನು ಒಪ್ಪಿಸಿದನು. ಉಪಾಯ ಮಾಡಿ ಮತ್ತೊಮ್ಮೆ ತನ್ನ ಬುದ್ಧಿವಂತಿಕೆಯಿಂದ ದೇಶದ ಮಾನ ಉಳಿಸಿದ ಬೀರಬಲ್ಲನನ್ನು ಅಕ್ಬರ್ ಚಕ್ರವರ್ತಿ ಸಭೆಯಲ್ಲಿ ತುಂಬಾ ಕೊಂಡಾಡಿ ಹೇರಳ ಧನಕನಕ ನೀಡಿ ಸನ್ಮಾನಿಸಿದನು.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸುಚಿತ್ರ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 28, 2017

ನಸ್ರುದ್ದೀನ್‌ನ ಮನೆಯ ಔತಣ

ಚಿತ್ರ ಕೃಪೆ : Google
ಮುಲ್ಲಾ ನಸ್ರುದ್ದೀನ್ ಚುರುಕು ಬುದ್ಧಿಗೆ ಹೆಸರುವಾಸಿ. ಕೆಲವರಿಗೆ ಅವನ ಖ್ಯಾತಿಯನ್ನು ಕಂಡು ಹೊಟ್ಟೆಕಿಚ್ಚು. ಅವನಿಗಿಂತ ತಾವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವ ಚಪಲ. ಇದಕ್ಕಾಗಿ ಒಮ್ಮೆ ಅವರು ಒಂದು ಉಪಾಯ ಹೂಡಿದರು. ಅವನ ಬಳಿಗೆ ಹೋಗಿ, "ನಸ್ರುದ್ದೀನ್, ಊರ ಹೊರಗಿನ ಹಿಮಬೆಟ್ಟದಲ್ಲಿ ನೀನು ಒಬ್ಬನೇ ಒಂದು ರಾತ್ರಿ ಕಳೆದು ಬಂದರೆ ಬಹುಮಾನ ಕೊಡುತ್ತೇವೆ; ಆದರೆ, ಒಪ್ಪಿಗೆಯೇ?" ಎಂದು ಪಂಥ ಹೂಡಿದರು. ನಸ್ರುದ್ದೀನ್ ಒಪ್ಪಿಕೊಂಡು ಒಂದು ಮೊಂಬತ್ತಿಯನ್ನು ಹಚ್ಚಿಕೊಂಡು, ಒಂದು ಪುಸ್ತಕವನ್ನು ಹಿಡಿದುಕೊಂಡು, ರಾತ್ರಿಯನ್ನು ಕಳೆಯಲು ಹಿಮಬೆಟ್ಟಕ್ಕೆ ಹೋದ. ಕಗ್ಗತ್ತಲ ರಾತ್ರಿ, ಮೈಕೊರೆಯುವ ಚಳಿ, ನಡುಗುತ್ತಾ ರಾತ್ರಿಯನ್ನು ಕಳೆದ. ಬೆಳಗಾಯಿತು, ಊರಿಗೆ ಹಿಂದಿರುಗಿದ. ಬಹುಮಾನ ಕೊಡುವಂತೆ ಅವರನ್ನು ಕೇಳಿದ. "ನೀನು ರಾತ್ರಿಯನ್ನು ಹೇಗೆ ಕಳೆದೆ?" ಎಂದು ಅವರು ಪ್ರಶ್ನಿಸಿದರು. "ಮೊಂಬತ್ತಿಯ ಪುಟ್ಟ ಬೆಳಕಿನಲ್ಲಿ ಪುಸ್ತಕವನ್ನು ಓದುತ್ತಾ ಕಳೆದೆ" ಎಂದ ನಸ್ರುದ್ದೀನ್. "ಮೊಂಬತ್ತಿ ಹಚ್ಚಿಕೊಂಡಿದ್ದೆಯಾ? ಹಾಗಾದರೆ ಅದರ ಬಿಸಿಯಿಂದ ನೀನು ಚಳಿ ದೂರವಾಗಿಸಿರುವೆ. ಆದ್ದರಿಂದ ನಿನಗೆ ಬಹುಮಾನ ಇಲ್ಲ" ಎಂದುಬಿಟ್ಟರು. ನಸ್ರುದ್ದೀನ್ ಮಾತಾಡದೆ ಮನೆಗೆ ಹೊರಟುಹೋದ.

ಒಂದೆರಡು ದಿನಗಳ ನಂತರ ಅವನು ಅವರನ್ನು ಭೇಟಿಯಾಗಿ, "ನಾಳೆ ನೀವೆಲ್ಲರೂ ನಮ್ಮ ಮನೆಗೆ ಊಟಕ್ಕೆ ಬರಬೇಕು" ಎಂದು ಕೇಳಿಕೊಂಡ. ಅವರು ಖುಷಿಯಿಂದ ಒಪ್ಪಿಕೊಂಡರು. ಮಾರನೆಯ ದಿನ ಎಲ್ಲರೂ ನಸ್ರುದ್ದೀನ್ ಮನೆಗೆ ಹೋದರು. ನಸ್ರುದ್ದೀನ್ ಒಳಗಿರಬಹುದು, ಬಂದು ಕರೆದುಕೊಂಡು ಹೋಗಲಿ ಎಂದು ತೀರ್ಮಾನಿಸಿ, ಜಗುಲಿಯ ಮೇಲೆ ಕಾಯುತ್ತಾ ಕುಳಿತರು. ಎಷ್ಟು ಹೊತ್ತಾದರೂ ನಸ್ರುದ್ದೀನ್ ಹೊರಗೆ ಬರಲೇ ಇಲ್ಲ. ಹಸಿವು ಹೆಚ್ಚಾಗುತ್ತಿತ್ತು. ಮನೆಯ ಒಳಗೆ ಹೋಗಿ ನೋಡಿದರು. ಒಂದು ಮೂಲೆಯಲ್ಲಿ ಒಲೆಯಿತ್ತು. ಅದರ ಮೇಲೆ ಒಂದು ದೊಡ್ಡ ಪಾತ್ರೆಯಿತ್ತು. ಕೆಳಗೆ ಒಂದು ಮೊಂಬತ್ತಿ ಉರಿಯುತ್ತಿತ್ತು. ನಸ್ರುದ್ದೀನ್ ಪಾತ್ರೆಯ ಬಳಿ ನಿಂತಿದ್ದ. "ಇನ್ನೂ ಎಷ್ಟು ಹೊತ್ತು ಕಾಯಬೇಕು ಮುಲ್ಲಾ? ನಮಗೆ ಹಸಿವು ತಡೆಯಲಾಗುತ್ತಿಲ್ಲ, ಪ್ರಾಣ ಹೋಗುತ್ತಿದೆ" ಎಂದರು. "ಸಾರು ಮಾಡಲು ಪಾತ್ರೆಯಲ್ಲಿ ನೀರಿಟ್ಟಿದ್ದೇನೆ, ನೀರು ಕುದಿಸಲು ಒಲೆಯಲ್ಲಿ ಮೊಂಬತ್ತಿ ಹಚ್ಚಿಟ್ಟಿದ್ದೇನೆ" ನಸ್ರುದ್ದೀನ್ ಉತ್ತರಿಸಿದ. ಆಗ ಅವರು ಎಲ್ಲಾದರೂ ಹೀಗೆ ಮೊಂಬತ್ತಿ ಉರಿಸಿ ಪಾತ್ರೆಯಲ್ಲಿ ಸಾರು ಮಾಡಲು ಸಾಧ್ಯವೇ? ಏನು ನಮ್ಮನ್ನು ಹೀಗೆ ಮೋಸದ ಆಟವಾಡಿ ಮಾಡಿ ಅವಮಾನಿಸುತ್ತಿರುವೆಯಾ? ಎಂದೆಲ್ಲಾ ಗಲಾಟೆ ಮಾಡಿ ಪ್ರಶ್ನಿಸಿದರು. ಅದಕ್ಕೆ ಮುಲ್ಲಾ ಮೊಂಬತ್ತಿಯ ಬಿಸಿಯಿಂದ ಹಿಮಬೆಟ್ಟದ ಚಳಿ ದೂರವಾಗುವುದಾದರೆ, ಹಂಡೆಯಲ್ಲಿ ನೀರು ಕಾಯಿಸಲು ಏಕೆ ಸಾಧ್ಯವಿಲ್ಲ? ಸಾರು ತಯಾರಾಗುವವರೆಗೆ ಕಾಯಿರಿ. ಊಟ ಮಾಡಿ ಹೋಗುವಿರಂತೆ ಎಂದನು. ಆಗ ಅವನನ್ನು ಅವಮಾನಿಸಿ ಮೋಸ ಮಾಡಿದ್ದ ಅವರೆಲ್ಲಾ ಪೆಚ್ಚು ಮೋರೆ ಹಾಕಿಕೊಂಡು ಹಿಂದಿರುಗಿದರು.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸ್ನೇಹ, ಎಲ್.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 27, 2017

ಸಾಮಾನ್ಯ ಜ್ಞಾನದ ಪ್ರಶ್ನೋತ್ತರ

 1. ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ ಯಾವುದು?
 2. "ಸಹಾಯಕ್ಕೆ ಸೈನ್ಯ" ಪದ್ಧತಿಯನ್ನು ಜಾರಿಗೆ ತಂದವರು ಯಾರು?
 3. ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು ಯಾವುದು?
 4. ಕಪ್ಪೆಯ ಹೃದಯದಲ್ಲಿ ಎಷ್ಟು ಭಾಗಗಳಿವೆ?
 5. ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು?
 6. ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು ಹೊಂದಿವೆ?
 7. ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ?
 8. ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ?
 9. ಮದ್ರಾಸ್ ರಾಜ್ಯವು ತಮಿಳುನಾಡು ಎಂದು ನಾಮಕರಣಗೊಂಡ ವರ್ಷ ಯಾವುದು?

ಉತ್ತರಗಳು:
 1. ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ ಯಾವುದು?
  ಮೇಕೆದಾಟು
 2. "ಸಹಾಯಕ್ಕೆ ಸೈನ್ಯ" ಪದ್ಧತಿಯನ್ನು ಜಾರಿಗೆ ತಂದವರು ಯಾರು?
  ವೆಲ್ಲೆಸ್ಲಿ
 3. ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು ಯಾವುದು?
  ಹ್ಯಾಲಿ ಧೂಮಕೇತು
 4. ಕಪ್ಪೆಯ ಹೃದಯದಲ್ಲಿ ಎಷ್ಟು ಭಾಗಗಳಿವೆ?
  ಮೂರು
 5. ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು?
  ಅನಿಮೋಮೀಟರ್
 6. ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು ಹೊಂದಿವೆ?
  ಬ್ರಾಹ್ಮಿ
 7. ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ?
  ಚದುರಂಗ
 8. ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ?
  ಚರಣಸಿಂಗ್
 9. ಮದ್ರಾಸ್ ರಾಜ್ಯವು ತಮಿಳುನಾಡು ಎಂದು ನಾಮಕರಣಗೊಂಡ ವರ್ಷ ಯಾವುದು?
  1969


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಮಾಲಾ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 26, 2017

ಚುಟುಕಗಳು

ಮನಸೆಂಬ ಮಲ್ಲಿಗೆಯ ಮೇಲೆ
ಕನಸೆಂಬ ಇಬ್ಬನಿ ಹನಿ ಬಿದ್ದು
ನಗುವೆಂಬ ಸುವಾಸನೆ ತುಂಬಿ
ನಿಮ್ಮ ಬಾಳಿಗೆ ಹೊಸ ಚೈತನ್ಯ ತರಲಿ

* * *

ಮನಸ್ಸು ಒಂಥರಾ ವಾಟರ್ ಇದ್ದಹಾಗೆ
ಯಾವಾಗ ಬೇಕಾದ್ರೂ ಛೇಂಜ್ ಆಗುತ್ತೆ;
ನೆನಪು ಹಾಗಲ್ಲ, ಗಾಳಿ ಥರ ಯಾವಾಗ್ಲೂ
ನಮ್ಮ ಉಸಿರಲ್ಲೇ ಇರುತ್ತೆ

* * *

ಅಮ್ಮನ ಪ್ರೀತಿ ಅಮೃತ
ಅಪ್ಪನ ಪ್ರೀತಿ ಅದ್ಭುತ
ಗುರುವಿನ ಪ್ರೀತಿ ನಿಸ್ವಾರ್ಥ
ಲವರ್‌ನ ಪ್ರೀತಿ ಸ್ವಾರ್ಥ
ಬಟ್, ಫ್ರೆಂಡ್ಸ್ ಪ್ರೀತಿ ಶಾಶ್ವತ

* * *

ನೋವು ಇರೋ ಫ್ರೆಂಡ್‌ನ ಪ್ರೀತಿ ಮಾಡಿ
ಆದರೆ ಪ್ರೀತಿ ಮಾಡೋ ಫ್ರೆಂಡ್‌ಗೆ ನೋವು ಕೊಡಬೇಡಿ
ಫ್ರೆಂಡ್‌ಗಾಗಿ ಎಲ್ಲಾ ಸಂತೋಷನ ತ್ಯಾಗ ಮಾಡಿ
ಆದರೆ ಸಂತೋಷಕ್ಕಾಗಿ ಫ್ರೆಂಡ್‌ನ ತ್ಯಾಗ ಮಾಡ್ಬೇಡಿ

* * *

ನೋವಿನಲ್ಲಿ ಜೊತೆಯಾಗಿ
ನಗುವಿನಲ್ಲಿ ಖುಷಿಯಾಗಿ
ಅಳುವಿನಲ್ಲಿ ಕಣ್ಣೀರಾಗಿ
ಪ್ರತಿ ನಿಮಿಷದಲ್ಲೂ ನಿಮ್ಮ ಸ್ನೇಹಕ್ಕಾಗಿ
ಕಾಯುತ್ತಿರುವ ಪುಟ್ಟ ಹೃದಯವಿದು


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಯಶವಂತ್, ಎಲ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 25, 2017

ಮಕ್ಕಳಿಗಿರುವ ಹಕ್ಕುಗಳು


ಚಿತ್ರ ಕೃಪೆ : Google
 1. ಮಾಧ್ಯಮದ ಅರಿವ ಹಕ್ಕು
 2. ಬದುಕುವ ಹಕ್ಕು
 3. ಭಾಗವಹಿಸುವ ಹಕ್ಕು
 4. ದತ್ತು ಹೋಗುವ ಹಕ್ಕು
 5. ಅಭಿವ್ಯಕ್ತಿ ಹಕ್ಕು
 6. ವಿಶ್ರಾಂತಿ ಹೋಗುವ ಹಕ್ಕು
 7. ರಕ್ಷಣೆಯ ಹಕ್ಕು
 8. ಮನರಂಜನೆಯ ಹಕ್ಕು
 9. ರಾಷ್ಟ್ರೀಯತೆಯ ಹಕ್ಕು
 10. ಶೋಷಣೆ ವಿರುದ್ಧದ ಹಕ್ಕು
 11. ವಿಕಾಸಹೊಂದುವ ಹಕ್ಕು
 12. ಮಾದಕ ದ್ರವ್ಯಗಳಿಂದ ದೂರ ಇರುವ ಹಕ್ಕು
 13. ಕಾನೂನು ತಿಳಿಯುವ ಹಕ್ಕು
 14. ಲೈಂಗಿಕ ಶೋಷಣೆಯಿಂದ ರಕ್ಷಣೆ ಹಕ್ಕು
 15. ಮಾಹಿತಿ ಪಡೆಯುವ ಹಕ್ಕು
 16. ಗುರುತಿಸಿಕೊಳ್ಳುವ ಹಕ್ಕು
 17. ಧಾರ್ಮಿಕ ಹಕ್ಕು
 18. ಸಾಮಾಜಿಕ ಭದ್ರತೆಯ ಹಕ್ಕು
 19. ಸಂಘಟಿತರಾಗುವ ಹಕ್ಕು
 20. ಏಕಾಂತವಾಗಿರುವ ಹಕ್ಕು
 21. ಶಿಕ್ಷಣದ ಹಕ್ಕು
 22. ಆಹಾರ ಪಡೆಯುವ ಹಕ್ಕು
 23. ಹೆಸರು ಹೊಂದುವ ಹಕ್ಕು
 24. ನಾಗರಿಕ ಹಕ್ಕು
 25. ಪೋಷಕರೊಂದಿಗೆ ಇರುವ ಹಕ್ಕು    
 26. ಸ್ವಾಯತ್ರತೆ ಪಡೆಯುವ ಹಕ್ಕು
 27. ಸ್ವಾತಂತ್ರ್ಯದ ಹಕ್ಕು
 28. ಸಾಂಸ್ಕೃತಿಕ ಹಕ್ಕು
 29. ಸಮಾನತೆಯ ಹಕ್ಕು
 30. ಮಾರಾಟ ಬಂಧನ ವಿರೋಧಿಸುವ ಹಕ್ಕು
 31. ಆರೋಗ್ಯದ ಹಕ್ಕು
 32. ವಿಶೇಷ ರಕ್ಷಣೆಯ ಹಕ್ಕು
 33. ಸೂಕ್ತ ಜೀವನದ ಹಕ್ಕು
 34. ಪ್ರತಿಭಟಿಸುವ ಹಕ್ಕು
 35. ಕ್ರೀಡಾ ಹಕ್ಕು
 36. ಅನುಕರಣೆಯ ಹಕ್ಕು
 37. ಅಂಗವಿಕಲರಿಗೆ ಭದ್ರತೆ ಹೊಂದುವ ಹಕ್ಕು
 38. ಶಿಶು ಸಂರಕ್ಷಿಸುವ ಹಕ್ಕು
 39. ಭಾಷೆಯ ಹಕ್ಕು
 40. ಸ್ವಕೀಯತೆಯ
 41. ಕೌಟುಂಬಿಕ ಹಕ್ಕು.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಲಕ್ಷ್ಮಿ, ಆರ್.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 24, 2017

ಇಬ್ಬರ ನಡುವಿನ ಸ್ನೇಹ

ಚಿತ್ರ ಕೃಪೆ : Google
ಸ್ನೇಹವೆಂಬುದು ಒಂದು ಪವಿತ್ರವಾದ ಬಂಧ. ತಂದೆ-ತಾಯಿ, ಸಹೋದರ-ಸಹೋದರಿಯರ ನಡುವೆ ಹಂಚಿಕೊಳ್ಳಲಾರದಂತಹ ವಿಷಯಗಳನ್ನು ನಾವು ಸ್ನೇಹಿತರ ಜೊತೆ ಹಂಚಿಕೊಳ್ಳುತ್ತೇವೆ. ನಾವು ಸ್ನೇಹಿತೆಯರ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತೇವೆ. ಅವರೊಂದಿಗಿನ ಆಟ-ಪಾಠಗಳು ತುಂಬಾ ಸಂತೋಷವನ್ನು ತರುತ್ತವೆ.

ನನಗೆ ಇಷ್ಟವಾದ ಗೆಳತಿ ಎಂದರೆ ಸೌಮ್ಯ, ನಾನು ಮತ್ತು ಅವಳು ಯಾವಾಗಲೂ ಒಟ್ಟಿಗೆ ಇರುತ್ತೇವೆ. ನಾವು ಎಲ್ಲದರಲ್ಲೂ ಖುಷಿಯನ್ನಾಗಲಿ-ದುಃಖವನ್ನಾಗಲಿ ಹಂಚಿಕೊಳ್ಳುತ್ತೇವೆ. ನಮ್ಮದು ಒಳ್ಳೆಯ ಗೆಳೆತನ. ನನ್ನ ಕಷ್ಟದ ಸಮಯದಲ್ಲಿ ಅವಳು, ಅವಳ ಕಷ್ಟದ ಸಮಯದಲ್ಲಿ ನಾನು ಪರಸ್ಪರ ಸಹಾಯ ಮಾಡುತ್ತೇವೆ. ನನ್ನ ಮತ್ತು ಸೌಮ್ಯನ ಇಷ್ಟಗಳು ಒಂದೇ ಆಗಿರುತ್ತವೆ. ನನಗೆ ಅವಳೆಂದರೆ ತುಂಬಾ ಇಷ್ಟ. ನಾವು ಕೆಲವು ಉಡುಗೊರೆ ಕೊಡುವುದರ ಮೂಲಕ ತೋರಿಸುತ್ತೇವೆ. ಉದಾ: ಫ್ರೆಂಡ್‌ಷಿಪ್ ಬ್ಯಾಂಡ್, ಗ್ರೀಟಿಂಗ್ ಕಾರ್ಡ್ ಮತ್ತು ಫ್ರೆಂಡ್‌ಷಿಪ್ ಡೇಯನ್ನು ಆಚರಿಸುವುದರ ಮೂಲಕ ನಾವು ನಮ್ಮ ಗೆಳೆತನವನ್ನು ಗಟ್ಟಿಯಾಗಿಸಿಕೊಳ್ಳುತ್ತೇವೆ. ನಾವು ಈ ಗೆಳೆತನವನ್ನು ಕೊನೆಯವರೆಗೆ ಉಳಿಸಿಕೊಳ್ಳುತ್ತೇವೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸಂಜನ, ಬಿ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 23, 2017

ಪಂಡಿತ್ ಜವಾಹರಲಾಲ್ ನೆಹರು

ಚಿತ್ರ ಕೃಪೆ : Google
ನೆಹರು ಅವರನ್ನು ಮಕ್ಕಳು ಚಾಚಾ ಎಂದು ಕರೆಯುತ್ತಾರೆ. ಅವರ ಪೂರ್ಣ ಹೆಸರು ಜವಾಹರಲಾಲ್ ಮೋತಿಲಾಲ್ ನೆಹರು. ಅವರು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ 1889ರ ನವೆಂಬರ್ 14 ರಂದು ಜನಿಸಿದರು. ತಂದೆ ಮೋತಿಲಾಲ್ ನೆಹರು ಪ್ರಸಿದ್ಧ ವಕೀಲರಾಗಿದ್ದರು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿ ಕಾರ್ಯ ಮಾಡಿದವರಾಗಿದ್ದಾರೆ.

ಜವಾಹರಲಾಲ್ ನೆಹರು ಅವರ ಪ್ರಾಧಮಿಕ ಶಿಕ್ಷಣ ಮನೆಯಲ್ಲಿ ನಡೆಯಿತು. ಮುಂದೆ ಮಾಧ್ಯಮಿಕ ಶಿಕ್ಷಣ ಮುಗಿಸಿ, ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದರು. ಸ್ವದೇಶಕ್ಕೆ ಬಂದ ಮೇಲೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಬೇಕೆಂಬ ಪ್ರೇರಣೆ ತಂದೆಯವರಿಂದ ದೊರಕಿತು. ಅಲ್ಲದೇ ಗಾಂಧೀಜಿಯವರ ಆಪ್ತ ಅನುಯಾಯಿಯಾಗಿದ್ದರು. ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು.

ಭಾರತ ಸ್ವತಂತ್ರವಾದ ಮೇಲೆ ಅವರು ಭಾರತದ ಮೊದಲನೆಯ ಪ್ರಧಾನ ಮಂತ್ರಿಗಳಾಗಿ ಕಾರ್ಯ ಮಾಡಿದರು. ಅವರು 'ಆರಾಮ ಹಾರಾಮ ಹೈ' ಎಂದು ಜನತೆಗೆ ಹೇಳುತ್ತಿದ್ದರು. ಅವರು 1964ರ ಮೇ 27 ರಂದು ನಿಧನ ಹೊಂದಿದರು. ದೇಶವಿದೇಶಗಳಲ್ಲಿ ಭಾರತದ ಹಿರಿಮೆ ಹೆಚ್ಚುವಂತೆ ದುಡಿದ ಮಹಾಮಹಿಮರು ಇವರಾಗಿದ್ದಾರೆ. ಇವರು ವಿಶ್ವದಲ್ಲಿ 'ಶಾಂತಿದೂತ' ಎಂದು ಹೆಸರಾಗಿದ್ದಾರೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಕವನ, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 22, 2017

ನೇತಾಜಿ ಸುಭಾಷ್ ಚಂದ್ರ ಬೋಸ್

ಚಿತ್ರ ಕೃಪೆ : Google

ನೇತಾಜಿ ಸುಭಾಷ್ ಚಂದ್ರ ಬೋಸರು ಬಂಗಾಲ ರಾಜ್ಯದ ಕಟಕ್ ಎಂಬಲ್ಲಿ 1897 ರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜಾನಕೀನಾಥ ಬೋಸ್. ಅವರು ಪ್ರಸಿದ್ಧ ವಕೀಲರು. ಸುಭಾಷರು ಚಿಕ್ಕವರಿದ್ದಾಗ ಓದು-ಬರಹದಲ್ಲಿ ಒಳ್ಳೆಯ ಹಾಗೂ ಜಾಣ ಹುಡುಗನೆಂದು ಹೆಸರಾಗಿದ್ದರು. ಉತ್ತಮ ಆಟಗಾರನೆಂದೂ ಪ್ರಸಿದ್ಧರಾಗಿದ್ದರು. ಅವರು ಸ್ವಾಭಿಮಾನಿಯಾಗಿದ್ದರು.

ಸುಭಾಷ್ ಚಂದ್ರ ಬೋಸರು ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್. (ಇಂಡಿಯನ್ ಸಿವಿಲ್ ಸರ್ವೀಸ್) ಪರೀಕ್ಷೆ ಪಾಸಾಗಿ ಭಾರತಕ್ಕೆ ಮರಳಿದರು. ಭಾರತದಲ್ಲಿ ಹಿರಿಯ ಅಧಿಕಾರ ಸ್ಥಳಗಳು ಅವರಿಗಾಗಿ ಕಾದಿದ್ದವು. ಪರಕೀಯ ಭಾರತದ ಪರಿಸ್ಥಿತಿ ಕಂಡು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಮುಂದಾದ ಸುಭಾಷ್ ಚಂದ್ರರು, ಪೋಲೀಸರ ಕಣ್ಣು ತಪ್ಪಿಸಿ ವಿದೇಶಗಳಿಗೆ ಹೋದರು. ಸಿಂಗಾಪುರ, ಮಲೇಶಿಯಾ, ಬರ್ಮ ದೇಶಗಳಲ್ಲಿ ವಾಸಿಸುತ್ತಿದ್ದ ಭಾರತೀಯರು ಅವರಿಗೆ ನೆರವು ನೀಡಿದರು.

ಆಝಾದ್ ಹಿಂದ್ ಫೌಜ್ ನ ಶೂರ ಸೈನಿಕರು ನೇತಾಜಿಯ ಮುಂದಾಳುತನದಲ್ಲಿ ಧೈರ್ಯದಿಂದ ಕಾದಾಡಿದರು. ಕ್ರಿ.ಶ. 1942 ಜುಲೈ 5 ರಂದು ವಿಮಾನ ಅಪಘಾತದಲ್ಲಿ ನೇತಾಜಿ ಮರಣ ಹೊಂದಿದರು. ಅವರ ಸಾಹಸ, ಎದೆಗಾರಿಕೆ, ಬುದ್ಧಿವಂತಿಕೆಗಳಿಂದ ಬ್ರಿಟಿಷರ ಸಾಮ್ರಾಜ್ಯದ ಅಡಿಗಲ್ಲೇ ಕಂಪಿಸಿತು. ಸುಭಾಷರು ಕೆಚ್ಚೆದೆಯ ಸ್ವಾತಂತ್ರ್ಯ ಯೋಧರೆಂದು ಚಿರಕಾಲ ನಮ್ಮ ನೆನಪಿನಲ್ಲಿ ಇರುವರು.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಅಶ್ವಿನಿ, ಹೆಚ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 21, 2017

ರಾಷ್ಟ್ರ ಪ್ರಾಣಿ

ಚಿತ್ರ ಕೃಪೆ : Google
ಆಕ್ರಮಣಶೀಲವಾದ, ಅಸಮಾನ್ಯ ಬೇಟೆಗಾರನೆನಿಸಿರುವ, ಬಲಿಷ್ಠ, ಸುಂದರ ಪ್ರಾಣಿ ಹುಲಿಯನ್ನು ಭಾರತ ತನ್ನ ರಾಷ್ಟ್ರಪ್ರಾಣಿ ಎಂದು ಪರಿಗಣಿಸಿದೆ. ಹಳದಿಯ ಮೇಲೆ ಕಪ್ಪು ಪಟ್ಟೆಗಳಿರುವ ಭಾರೀ ಶರೀರ, ಗಿಡ್ಡ ಕಾಲುಗಳು, ನೀಳ ಬಾಲ, ದುಂಡಗಿನ ಆಕರ್ಶಕ ಮುಖದ ಈ ಪ್ರಾಣಿ, ಮನೆಮನೆಯ ಮುದ್ದು ಪ್ರಾಣಿ ಬೆಕ್ಕಿನ ಜಾತಿಗೆ ಸೇರಿದ ಊಗ್ರ ರೂಪಿ. ಗವಿಗಳಲ್ಲಿ ವಾಸಿಸುವ ಹುಲಿ ಮರಿಗಳನ್ನು, ತಾಯಿ ಮೂರು ವರ್ಷಗಳ ತನಕ ಪೋಷಿಸಿದ ಬಳಿಕ ಬೇಟೆಯಾಡುವ ಕಲೆಯನ್ನು ಕಲಿಸುತ್ತದೆ.

ಹುಲಿ ಹೊಟ್ಟೆ ತುಂಬಿದ ಮೇಲೂ ತನಗೆ ಕಿಂಚಿತ್ ಅಪಾಯವಾಗುತ್ತದೆ ಎನಿಸಿದರೂ, ಎದುರಿಗಿರುವ ಯಾವುದೇ ಪ್ರಾಣಿ ಅಥವಾ ಮನುಷ್ಯನ ಮೇಲೆ ಆಕ್ರಮಣ ಮಾಡುತ್ತದೆ. ಹುಲಿ ಮನುಷ್ಯನ ಸಹವಾಸದಲ್ಲಿರಲು ಇಷ್ಟ ಪಡದು. ಹುಲಿ ಬೆನ್ನ ಹಿಂದಿನಿಂದ ಆಕ್ರಮಣ ಮಾಡುವುದಿಲ್ಲ, ಸ್ವಂತ ಶಿಕಾರಿಯಲ್ಲದೆ ಇತರ ಪ್ರಾಣಿಗಳು ಕೊಂದಿದ್ದನ್ನು ತಿನ್ನುವುದಿಲ್ಲ, ಇತ್ಯಾದಿ ಹಸಿ ಹಸಿ ಸುಳ್ಳುಗಳನ್ನು ನ್ಯಾಷನಲ್ ಜಿಯಾಗ್ರಾಫಿಕ್, ಡಿಸ್ಕವರಿ ಚಾನಲ್‌ಗಳು ಬಟಾ ಬಯಲಾಗಿಸಿದೆ.

ಜಿಂಕೆ, ದನ, ಕಾಡೆಮ್ಮೆಗಳು ಹುಲಿಯ ಮುಖ್ಯ ಆಹಾರ. ಹುಲಿ ಚಿರತೆಗಳನ್ನು ಕೊಲ್ಲಬಲ್ಲದು. ಹಾಗೆಯೇ ಗುಂಪಿನಲ್ಲಿರುವ ಸೀಳುನಾಯಿಗಳು, ಸಿಂಹಗಳು ಹುಲಿಯನ್ನು ಕೊಲ್ಲುತ್ತವೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಪೂಜಾ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 20, 2017

ಮುಖ್ಯೋಪಾಧ್ಯಾಯರ ಬಗ್ಗೆ

ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಅನಂತರಾಮಯ್ಯ ಸರ್.

ಅವರು ನಮಗೆ ಕನ್ನಡ ಪಾಠ ಮತ್ತು ವ್ಯಾಕರಣಗಳನ್ನು, ಗೊತ್ತಾಗದಿದ್ದನ್ನು ಹೇಳಿಕೊಡುತ್ತಾರೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದುದರಿಂದ ಅವರು ಜೆ.ಸಿ.ಬಿ.ಯನ್ನು ತರಿಸಿ ದೊಡ್ಡದಾಗಿ ಗುಂಡಿಯನ್ನು ತೆಗೆಸಿದರು. ಮುಳ್ಳುಗಿಡ, ಕಾಂಗ್ರೆಸ್‌ ಗಿಡಗಳನ್ನು ಜೆ. ಸಿ. ಬಿ. ಯಿಂದ ತೆಗೆಸಿದರು.


ನಮ್ಮ ಶಾಲೆಯ ಒಳಗಿನ ಮತ್ತು ಹೊರಗಿನ ಪರಿಸರವನ್ನು ಸ್ವಚ್ಛವಾಗಿ ಇರಿಸುವ ವ್ಯವಸ್ಥೆ ಮಾಡಿದ್ದಾರೆ. ಅವರು ಗಿಡಗಳನ್ನು ನೆಡಲು ಅನೇಕ ಗುಂಡಿಗಳನ್ನು ತೋಡಿಸಿ, ಅದಕ್ಕೆ ಗೊಬ್ಬರ ಹಾಕಿಸಿದರು ಮತ್ತು ಗಿಡಗಳನ್ನು ನೆಡಿಸಿದರು. ಅವರು ಶೌಚಾಲಯವನ್ನು ಕಟ್ಟಿಸಿದರು.

ನಮ್ಮ ಶಾಲೆಗೆ ಬಂದ ಮುಖ್ಯೋಪಾಧ್ಯಾಯರಾದ ಅನಂತರಾಮಯ್ಯ ಸರ್ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಿದರು. ಒಂದೊಂದು ಗಿಡವನ್ನು ಒಬ್ಬೊಬ್ಬ ವಿದ್ಯಾರ್ಥಿಗೆ ವಹಿಸಿ, ಅದಕ್ಕೆ ನೀರು, ಗೊಬ್ಬರ, ಅದರ ಪೋಷಣೆಯನ್ನು ಅವರಿಗೆ ವಹಿಸಿದರು. ಅನೇಕ ತರಕಾರಿಗಳನ್ನು ಬೆಳೆಸಿ ಶಾಲೆಯ ಅಡುಗೆಗೆ ಅದನ್ನು ಉಪಯೋಗಿಸಲು ಹೇಳಿದರು. ದೊಡ್ಡ ದೊಡ್ಡ ಮರದ ತುಂಡುಗಳನ್ನು ತೆಗೆಸಿ ಗಿಡಗಳನ್ನು ನೆಡಿಸಿದರು. ಶಾಲೆಯಲ್ಲಿ ಅನೇಕ ಹಬ್ಬಗಳನ್ನು ಮತ್ತು ದಿನಾಚರಣೆಗಳನ್ನು ನಾವೆಲ್ಲರೂ ಒಂದಾಗಿ ಸಡಗರದಿಂದ ಆಚರಿಸುವಂತೆ ವ್ಯವಸ್ಥೆ ಮಾಡಿದ್ದಾರೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಕೃಪಾಕರ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 19, 2017

ಕವನಗಳು

ಆಕಾಶವೆಂಬ ಸಾಗರದಲ್ಲಿ
ಚಂದ್ರನಂತ ದೋಣಿಯಲ್ಲಿ
ಸಾಗಲಿ ನನ್ನ ನಿನ್ನ ಗೆಳೆತನ.

* * *

ಸ್ನೇಹವನ್ನು ಅಳಿಸೋದು ಕಷ್ಟ.
ಅಳಿಸಿದ ಸ್ನೇಹವನ್ನು
ಬೆಳೆಸೋದು ಬಲು ಕಷ್ಟ.
ಬೆಳೆದ ಸ್ನೇಹವನ್ನು
ಕೊನೆತನಕ ಉಳಿಸೋದಂದ್ರೆ
ನನಗಿಷ್ಟ.

* * *

ಹುಟ್ಟುವಾಗ ಅಮ್ಮ,
ಅಳುವಾಗ ಅಮ್ಮ,
ನಗುವಾಗ ಅಮ್ಮ,
ನಾವು ಎಲ್ಲಿದ್ರೂ ನಮ್ಮ
ಜೊತೆ ಇರ್ತಾಮಳೆ ಅಮ್ಮ.
ಕಾರಣ ಅವಳಿಂದಲೇ ಸಿಕ್ಕಿದೆ
ನಮಗೆ ಈ ಜೀವನ.

* * *

ನೀನು ಕರೆದ್ರೆ ಹತ್ತು ಜನ,
ನಾನು ಕರೀದೇನೆ ಇಷ್ಟು ಜನ.
ಇನ್ನು ನಾನು ಕರೆದ್ರೆ ಇಡೀ
ಕರ್ನಾಟಕವೇ ನನ್ನ ಹಿಂದೆ ಇರುತ್ತೆ.

* * *

ಕಣ್ಣಿಗೆ ಕಾಣಿಸದ ದೇವರನ್ನು
ಪೂಜಿಸುವ ಮುನ್ನ
ಕಣ್ಣಿಗೆ ಕಾಣುವ
ತಾಯಿಯನ್ನು ಪೂಜಿಸು.

* * *

ಬಡ ಮಕ್ಕಳಿಗೆ ಬೇಕು ಸ್ಕಾಲರ್‌ಶಿಪ್,
ಆಟಗಾರರಿಗೆ ಬೇಕು ಚಾಂಪಿಯನ್‌ಶಿಪ್.
ನನಗೆ ಬೇಕು ನಿಮ್ಮ ಫ್ರೆಂಡ್‌ಶಿಪ್.

* * *

ಸಿಪಾಯಿ ದಂಗೆಗೆ ಮೊದಲು
ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ
ಸಮರ ಸಾರಿದ ವೀರಯೋಧ
ಸಂಗೊಳ್ಳಿರಾಯಣ್ಣ.


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸುನೀತ, ಟಿ. ಸಿ.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 18, 2017

ನಮ್ಮ ಶಾಲೆ

ಶಾಲೆಯ ಹೆಸರು: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಓಬಳಾಪುರ.

ಶಾಲೆ ಎಂದರೆ ದೇವಾಲಯವಿದ್ದಂತೆ. ಕೈ ಮುಗಿದು ಒಳಗೆ ಬರಬೇಕು. ನಮಗೆ ಶಾಲೆ ಎಂದರೆ ತುಂಬಾ ಇಷ್ಟ. ಶಾಲೆಯಲ್ಲಿ ಕಾಂಪೌಂಡ್ ಸುತ್ತ ಮುತ್ತ ತರತರದ ಹೂವುಗಳು ಮತ್ತು ತರತರ ಹಣ್ಣುಗಳು, ನೆರಳು ಕೊಡುವ ಗಿಡಗಳನ್ನು ನೆಡಿಸಿದ್ದಾರೆ. ಶಾಲೆಯ ವಾತಾವರಣ ಚೆನ್ನಾಗಿದೆ. ನಮ್ಮ ಶಾಲೆಯ ಒಳಗೆ ಜನರು ಬರದಂತೆ ಸುತ್ತ ಮುತ್ತ ಕಾಂಪೌಂಡ್ ಕಟ್ಟಿಸಿದ್ದಾರೆ. ನಮ್ಮ ಶಾಲೆಯಲ್ಲಿ ಆರು ಜನ ಶಿಕ್ಷಕರು ಇದ್ದಾರೆ. ಅವರು ತುಂಬಾ ಒಳ್ಳೆಯವರು.

ನಮ್ಮ ಶಾಲೆಯಲ್ಲಿ ಪುಸ್ತಕಗಳನ್ನು ಜೋಡಿಸಲು ರಾಕ್ ಇವೆ. ನಮ್ಮ ಶಾಲೆಯಲ್ಲಿ ಸಮಾಜಕ್ಕೆ ಸಂಬಂಧಿಸಿದಂತೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ, ಕನ್ನಡಕ್ಕೆ ಸಂಬಂಧಿಸಿದಂತೆ ಗ್ರಂಥಾಲಯಗಳು ಇವೆ.

ನಮ್ಮ ಶಾಲೆಯಲ್ಲಿ "ನೂರು ಬಲವಾದ ಕೈಗಳಿಗಿಂತ ಒಂದೇ ಮೆದುಳು ಶ್ರೇಷ್ಠ" ಎಂದು ಬರೆಸಿದ್ದಾರೆ. ಮತ್ತು "ಗುರು ಹಿರಿಯರಲ್ಲಿ ಭಕ್ತಿಯಿಡಿ" ಎಂದು ಬರೆದಿದ್ದಾರೆ. ನಮ್ಮ ಶಾಲೆಯಲ್ಲಿ "ಕಾಯಕವೇ ಕೈಲಾಸ" ಎಂದು ಬರೆದಿದ್ದಾರೆ.

ನಮ್ಮ ಶಾಲೆಯಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಚಾರ್ಟ್ಗಳನ್ನು ಹಾಕಿದ್ದಾರೆ. ನಮ್ಮ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ. ನಮ್ಮ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಇದೆ.

ನಮ್ಮ ಶಾಲೆಯಲ್ಲಿ 9 ಕೊಠಡಿಗಳು ಇವೆ. ಕೊಠಡಿಗಳನ್ನು ಸ್ವಚ್ಛಮಾಡುತ್ತೇವೆ. ನಮ್ಮ ಶಾಲೆಗೆ ದಾನಿಗಳು ಡೆಸ್ಕ್ ಗಳನ್ನು ಕೊಡಿಸಿದ್ದಾರೆ ಮತ್ತು ತಟ್ಟೆ ಲೋಟಗಳನ್ನು ಕೊಡಿಸಿದ್ದಾರೆ.

ನಮ್ಮ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಕೊಡುತ್ತಾರೆ.

ನಾವು ಶಾಲೆಗೆ ಹೋಗುವುದರಿಂದ ನಾವು ಒಳ್ಳೆ ವ್ಯಕ್ತಿ ಆಗುತ್ತೇವೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಅನಿತ, ಎಸ್. ಕೆ.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 17, 2017

ನಮ್ಮ ಭಾಷೆ ಕನ್ನಡ

ಕನ್ನಡ ನಾಡು ಕನ್ನಡಿಗರ ನಾಡು. ಅದು ಹರಿದು ಚಿಂದಿಯಾದ ಕಾಲವೊಂದಿತ್ತು. ಕನ್ನಡಿಗರು ಚಳುವಳಿಯ ಮೂಲಕ ನ್ಯಾಯ ಪಡೆಯಲು ಹೋರಾಟ ನಡೆಸಿದರು. ಅಂದಿನ ಏಕೀಕರಣ ಚಳುವಳಿಯನ್ನು ಇಂದೂ ನಾವು ಸ್ಮರಿಸಿಕೊಳ್ಳಬೇಕು. ಕನ್ನಡ ನಾಡಿಗೆ ಇತರೆ ಭಾಷಿಕರಿಂದ ಪದೇ ಪದೇ ಆಘಾತ ಒದಗಿಬಂದಿರುವುದು ಗಮನಿಸುತ್ತಾ ಬಂದಿದ್ದೇವೆ.
ಕನ್ನಡಿಗರಾದ ನಾವು ಕನ್ನಡ ನಾಡು, ಕನ್ನಡಿಗರ ನಾಡು ಎಂದು ಅರಿತು ಬದುಕಬೇಕು. ಮಾತೃ ಭಾಷೆಗೆ ಅನ್ಯಾಯವಾದಾಗ ಒಕ್ಕೂರಲಿನಿಂದ ಪ್ರತಿಭಟಿಸಬೇಕು.

ಕನ್ನಡ ನಾಡ ಮಾನವರಾದ ನಾವು ಪ್ರಕೃತಿಯಿಂದ ಕಲಿಯಬೇಕಾದದು ಅಪಾರ. ಪ್ರಕೃತಿಯ ಪ್ರತಿಯೊಂದು ವಸ್ತುವೂ ಪರಸ್ಪರ ಸಂಬಂಧವುಳ್ಳದ್ದಾಗಿರುತ್ತವೆ. ಅಂತೆಯೇ ಋತುಮಾನಗಳೂ ಕೂಡ. ಅವು ಬದಲಾದಂತೆ ಹವಾಮಾನವೂ ಏರುಪೇರಾಗುತ್ತಿರುತ್ತದೆ. ಒಮ್ಮೆ ಪ್ರಖರವಾದ ಬಿಸಿಲು, ಮತ್ತೊಮ್ಮೆ ಗಡಗಡ ನಡುಗುವ ಚಳಿ, ಮಳೆ, ಗಾಳಿ ಹೀಗೆ ಏನೇ ಆದರೂ ಯಾವುದೇ ಕೆಲಸ ಕಾರ್ಯಗಳು ನಿಲ್ಲುವುದಿಲ್ಲ. ಹೊಸಗನ್ನಡ ಸಾಹಿತ್ಯವು ನವೋದಯ, ಪ್ರಗತಿಶೀಲ, ದಲಿತ-ಬಂಡಾಯ, ಮಹಿಳಾ ಸಾಹಿತ್ಯ ಎಂಬ ವಿವಿಧ ದೃಷ್ಠಿಕೋನಗಳಲ್ಲಿ ಬೆಳೆದು ಬಂದಿದೆ. ದಲಿತರು ತಮ್ಮ ಬದುಕಿನ ಶೋಷಣೆ ನೋವುಗಳನ್ನು ಹಾಡಾಗಿ ಹೊಮ್ಮಿಸಿದ್ದೇ ದಲಿತ ಸಾಹಿತ್ಯ. ಸ್ವಾತಂತ್ರ್ಯ, ಸಂವಿಧಾನ ಬಂದರೂ ದಲಿತರ ಬದುಕು ಇನ್ನೂ ಬದಲಾಗಲಿಲ್ಲ ಎಂಬ ನೋವಿದೆ.

ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು.

ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.

ನಾವೆಲ್ಲೇ ಹೋದರೂ ನಮ್ಮ ಕನ್ನಡ ನಾಡನ್ನು ಮರೆಯಬಾರದು.

ಕನ್ನಡ ನಾಡು, ಕನ್ನಡಿಗರ ನಾಡು.


( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಆನಂದ್, ಎಸ್. ವಿ.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 16, 2017

ನುಡಿರತ್ನಗಳು

 1. ನುಡಿದಂತೆ ನಡೆ, ನಡೆದಂತೆ ನುಡಿ
 2. ಊರಿಗೊಂದು ವನ, ಮನೆಗೊಂದು ಮರ
 3. ದೇಶ ತಿರುಗು, ಇಲ್ಲವಾದರೆ ಕೋಶ ಓದು
 4. ಕಾಡಿದ್ದರೆ ನಾಡು, ಇಲ್ಲದಿದ್ರೆ ಈ ನಾಡು ಸುಡುಗಾಡು
 5. ಸ್ವಾತಂತ್ರ್ಯ ಜೀವನ, ಬದುಕಿಗೆ ಸಾಧನ
 6. ಮಾತು ಬೆಳ್ಳಿ, ಮೌನ ಬಂಗಾರ
 7. ಹಾಸಿಗೆ ಇದ್ದಷ್ಟು ಕಾಲು ಚಾಚು
 8. ತಾಳಿದವನು ಬಾಳಿಯಾನು
 9. ಓದು ಬರಹ ಕಲಿಯಿರಿ, ಜ್ಞಾನ ದೀಪ ಬೆಳಗಿರಿ
 10. ಬೆಳೆಯುವ ಸಿರಿ ಮೊಳಕೆಯಲ್ಲಿ
 11. ರೈತ ನಮ್ಮೆಲ್ಲರ ಅನ್ನದಾತ
 12. ಅಂತರ್ಜಲ ಸಂರಕ್ಷಿಸು - ಜೀವಕುಲ ಉಳಿಸು
 13. ವಿದ್ಯೆ ವಿನಯವನ್ನು ಕಲಿಸುತ್ತದೆ; ಬುದ್ಧಿ ವಿವೇಕವನ್ನು ಕಲಿಸುತ್ತದೆ
 14. ಕಂದ ಕಲಿತರೆ ಕನ್ನಡವ, ಎಂದೆಂದಿಗೂ ಮುನ್ನಡೆವ
 15. ಜನವಾಣಿ ಬೇರು, ಕವಿವಾಣಿ ಹೂವು
 16. ಹೆಣ್ಣು ಸಂಸಾರದ ಕಣ್ಣು

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಮೋಹನ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 15, 2017

ಕವನ

ಕನ್ನಡ ಭಾಷೆಯ ನುಡಿಯುವೆವು
ಕನ್ನಡ ನಮ್ಮುಸಿರೆನ್ನುವೆವು
ಕನ್ನಡ ನಾಡು ನಮ್ಮಯ ನಾಡು
ಕನ್ನಡ ನುಡಿಯುವವರ ನಾಡು
ಅದುವೇ ನಮ್ಮ ಕನ್ನಡ ನಾಡು.

* * *

ಪ್ರಕೃತಿಯನು ಮಲಿನಗೊಳಿಸುವರು
ಮಾನವರು,
ಪ್ರಕೃತಿಗೆ ಅವರಾಗುವರು
ದಾನವರು.

* * *

ಓ ಪ್ರಕೃತಿ
ಏನು ನಿನ್ನ ಸುಂದರ ಆಕೃತಿ
ಗಿರಿಝರಿಗಳು ನಿನ್ನದು
ನದಿ ಹೊಳೆಗಳು ನಿನ್ನದು.

* * *

ಕನ್ನಡ ಜನರು ಚೆಂದ
ಕನ್ನಡ ಭಾಷೆ ಚೆಂದ
ಕವಿ ಪುಂಗವರು ಹುಟ್ಟಿದ ನಾಡು
ಸತ್ಯವಂತರು ಇರುವ ನಾಡು
ಅದುವೇ ನಮ್ಮ ಕನ್ನಡ ನಾಡು.

* * *

ಸಂಗೀತ ಪುರಾಣ ಕಲೆಗಳ ನಾಡು
ಮನ ಮುದಗೊಳಿಸುವ
ಬೇಲೂರು-ಹಳೇಬೀಡು
ಪುಣ್ಯವಂತರು ನೆಲೆಸಿಹ ನಾಡು
ನಿಷ್ಠಾವಂತರ ಕಲೆಗಳ ಬೀಡು
ಅದುವೇ ನಮ್ಮ ಕನ್ನಡ ನಾಡು.

* * *

ಕವಿಗಳಿಗೆ ನೀನು ಕಾವ್ಯ
ಋಷಿಗಳಿಗೆ ನೀವು ದಿವ್ಯ
ನಿನ್ನ ರೂಪವೇ ಭವ್ಯ
ನಿನ್ನಲಿದೆ ಸುಮಗಳ ಸೌಮ್ಯ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಕುಸುಮ, ಎಸ್.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 14, 2017

ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ದಿಗ್ಗಜರು

 1. ಕುವೆಂಪು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 1904 ಡಿಸೆಂಬರ್ 29 ರಂದು ಜನಿಸಿದರು. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಕುವೆಂಪು ಕನ್ನಡದಲ್ಲಿ ಕವನ, ಕಥೆ, ನಾಟಕ, ಕಾದಂಬರಿ, ವಿಮರ್ಶೆ ಈ ಎಲ್ಲದರಲ್ಲಿ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ 1955 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1967 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಕನ್ನಡದ ಮಹೋನ್ನತ ಕವಿ ಕುವೆಂಪುರವರಿಗೆ ಹಲವಾರು ಗೌರವ ಡಾಕ್ಟರೇಟ್ ಪದವಿಗಳು ಹಾಗೂ ಭಾರತ ಸರ್ಕಾರದ ಪದ್ಮಭೂ಼ಷಣ ಪ್ರಶಸ್ತಿ ಲಭಿಸಿವೆ. ಮರಣ: 10/11/1994. ಕೃತಿಗಳು: ಕಾನೂರು ಸುಬ್ಬಮ್ಮ, ಶ್ರೀ ರಾಮಾಯಣ ದರ್ಶನಂ, ಕಿಂದರಿ ಜೋಗಿ, ಬೆರಳ್ ಗೆ ಕೊರಳ್, ನವಿಲು.
2. ದ. ರಾ. ಬೇಂದ್ರೆ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ 1896ನೇ ಜನವರಿ 31ರಂದು ಧಾರವಾಡದ ಸಾಧನಕೇರಿಯಲ್ಲಿ ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ. ಹೈಸ್ಕೂಲು, ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದ ಅವರು ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಕೃತಿಗಳ ರಚನೆ ಮಾಡಿದರು. ಬೇಂದ್ರೆಯವರ ಅರಳು ಮರಳು ಕವನ ಸಂಕಲನಕ್ಕೆ 1958ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 1973ರಲ್ಲಿ ನಾಕುತಂತಿ ಕವನಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತಿವೆ. ಬೇಂದ್ರೆಯವರು ಅದಮ್ಯ ದೇಶಭಕ್ತರು. ಅರವಿಂದ ದರ್ಶನದಲ್ಲಿ ಆಸಕ್ತರು. ಒಳ್ಳೆಯ ಗದ್ಯ ಲೇಖಕರು. ಮರಾಠಿಯಲ್ಲಿ ಕೃತಿ ರಚನೆ ಮಾಡಿದ್ದಾರೆ. ಬೇಂದ್ರೆಯವರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ಪದ್ಮಶ್ರೀ ಪ್ರಶಸ್ತಿ ದೊರೆತಿವೆ. ಮರಣ: 26/10/1981. ಕೃತಿಗಳು: ನಾದಲೀಲೆ, ನಾಕುತಂತಿ, ಅರಳು ಮರಳು, ಗರಿ, ಕೃಷ್ಣ ಕುಮಾರಿ, ಸಾಯೋ ಆಟ.
3. ಶಿವರಾಮ ಕಾರಂತ: ಅರಬ್ಬಿ ಸಮುದ್ರದ ಕರಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಟದಲ್ಲಿ ಕಾರಂತರು 1902 ಅಕ್ಟೋಬರ್ 10 ರಂದು ಜನಿಸಿದರು. ಅಸಹಕಾರ ಚಳುವಳಿ, ಪತ್ರಿಕಾ ಪ್ರಪಂಚ, ಕಥೆ, ಕಾದಂಬರಿ, ಗೀತನಾಟಕ, ಶಿಶುಸಾಹಿತ್ಯ, ವಿಜ್ಞಾನ ಸಾಹಿತ್ಯ, ನಿಘಂಟು, ಚಿತ್ರಾಕಾರ, ನಟನೆ, ನರ್ತನ, ಸಿನಿಮಾ, ಯಕ್ಷಗಾನ ಹೀಗೆ ಕಾರಂತರು ಪಳಗಿಸಿಕೊಂಡದ್ದು ವೈವಿಧ್ಯಮಯವಾದದ್ದು. ಕಾರಂತರು ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಸಂಸ್ಥೆ ಎನ್ನುವುದು ಅತಿಶಯೋಕ್ತಿಯಲ್ಲ. ಕಾರಂತರಿಗೆ ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಹಾಗೂ 1977 ರಲ್ಲಿ ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
4. ಮಾಸ್ತಿ ವೆಂಕಟೇಶ್ ಅಯ್ಯಂಗಾರ್: ಮಾಸ್ತಿಯವರು ಕನ್ನಡ ನಾಡಿನ ಅಮೂಲ್ಯ ಆಸ್ತಿ. ಶ್ರೀನಿವಾಸ ಎಂಬುದು ಅವರ ಕಾವ್ಯನಾಮ. ಅವರು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ 1891 ಜೂನ್ 6 ರಂದು ಜನಿಸಿದರು. ಆಗಿನ ಮೈಸೂರು ಸಿವಿಲ್ ಸೇವಾ ಇಲಾಖೆಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮಾಸ್ತಿಯವರು ತಮ್ಮ ಸಾಹಿತ್ಯದ ಅಭಿವ್ಯಕ್ತಿಗೆ ಪ್ರಧಾನವಾಗಿ ಆರಿಸಿಕೊಂಡ ಮಾಧ್ಯಮ ಸಣ್ಣ ಕಥೆ. ಮಾಸ್ತಿಯವರು ನೂರಾರು ಸಣ್ಣ ಕಥೆಗಳನ್ನು ಬರೆದು, ಹಲವು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಾಸ್ತಿಯವರ ಚಿಕವೀರ ರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಮರಣ: 06/06/1986. ಕೃತಿಗಳು: ಚಿಕವೀರ ರಾಜೆಂದ್ರ, ರಂಗನ ಮದುವೆ, ಕೆಲವು ಸಣ್ಣ ಕಥೆಗಳು, ಸುಬ್ಬಣ್ಣ, ಚನ್ನಬಸಪ್ಪ ನಾಯಕ.
5. ವಿ. ಕೃ. ಗೋಕಾಕ್: 1909 ಆಗಸ್ಟ್ 9 ರಂದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ವಿನಾಯಕ ಕೃಷ್ಣ ಗೋಕಾಕರು ಜನಿಸಿದರು. ಇವರ ಮೊದಲ ಸಾಹಿತ್ಯ ಕೃತಿ ಇಜ್ಜೋಡು. ಇವರ ಕಾವ್ಯನಾಮ ವಿನಾಯಕ. ಇವರು ಕವಿ, ವಿಮರ್ಶಕ, ಕಾದಂಬರಿಕಾರ, ಪ್ರಬಂಧಕಾರ, ನಾಟಕಕಾರ. ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ ಗೋಕಾಕ್ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 1990 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಮರಣ: 28/04/1992. ಕೃತಿಗಳು: ಕಲೋಪಸಕ, ತ್ರಿವಿಕ್ರಮ, ಆಕಾಶಗಂಗೆ, ಸಮುದ್ರ ಗೀತೆಗಳು, ಕಾಶ್ಮೀರ, ಇಜ್ಜೋಡು, ಸಮರಸವೇ ಜೀವನ, ಜನನಾಯಕ.
6. ಗಿರೀಶ್ ಕಾರ್ನಾಡ್: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆಯಲ್ಲಿ 1938 ಮೇ 19ರಂದು ಜನನ. ಇವರ ನಾಟಕಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದಿವೆ. ಸ್ವತಃ ಚಿತ್ರ ನಿರ್ದೇಶಕರಾಗಿ ಚಿತ್ರಿಸಿರುವ ಇವರ ಚಿತ್ರಗಳಿಗೆ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿ ದೊರೆತಿದೆ. ಯಯಾತಿ, ತಲೆದಂಡ ನಾಟಕಗಳಿಗೆ ಕೇಂದ್ರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಗೌರವ ಡಾಕ್ಟರೇಟ್ ಪದವಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಕೃತಿಗಳು: ಹಯವದನ, ಯಯಾತಿ, ಹಿಟ್ಟಿನ ಹುಂಜ, ತುಘಲಕ್, ತಲೆದಂಡ, ನಾಗಮಂಡಲ, ಅಗ್ನಿ ಮತ್ತು ಮಳೆ.
7. ಯು. ಆರ್. ಅನಂತಮೂರ್ತಿ: ಮಹಾರಾಷ್ರದ ಮಾಥೇರಾನದಲ್ಲಿ 1932 ಡಿಸೆಂಬರ್ 20 ರಂದು ಜನನ. ಸಣ್ಣಕಥೆ, ಕಾದಂಬರಿ, ಪ್ರಬಂಧ, ವಿಮರ್ಶೆಯಲ್ಲಿ ಪ್ರಸಿದ್ಧಿ ಪಡೆದಿರುವ ವರು ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಹಾಗೂ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದಿರೆತಿವೆ. ಇವರು ಆಗಸ್ಟ್ 22 2014 ರಂದು ನಿಧನರಾದರು. ಕೃತಿಗಳು: ಆಕಾಶ ಮತ್ತು ಬೆಕ್ಕು, ಸಂಸಾರ, ಭಾರತೀಪುರ, ಅವಸ್ಥೆ, ಭವ ದಿವ್ಯ, ಘಟಶ್ರಾಧ, ಸಮಕ್ಷಮ, ಪ್ರಜ್ಞೆ ಮತ್ತು ಪರಿಸರ.
8. ಚಂದ್ರಶೇಖರ ಕಂಬಾರ: ಜನ್ಮ 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ತಂದೆ ಬಸವಣ್ಣೆಪ್ಪ ಆರ್ ಕಂಬಾರ, ತಾಯಿ ಚನ್ನಮ್ಮ. ಮನೆತನದ ವೃತ್ತಿ ಕಮ್ಮಾರಿಕೆ. ಪ್ರಾಥಮಿಕ ವಿದ್ಯಾಭ್ಯಾಸ ಘೋಡಗೇರಿಯಲ್ಲಿ, ಪ್ರೌಢಶಾಲಾ ವಿದ್ಯಾಭ್ಯಾಸ ಗೋಕಾಕದಲ್ಲಿ, ಕಾಲೇಜು ಶಿಕ್ಷಣ ಬೆಳಗಾವಿಯಲ್ಲಿ ಮುಂದುವರೆಯಿತು. ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಣನೀಯ. 22 ನಾಟಕಗಳು, 8 ಕವನ ಸಂಕಲನಗಳು, 3 ಕಾದಂಬರಿಗಳು ಮತ್ತು ಜನಪದ, ರಂಗಭೂಮಿ, ಶಿಕ್ಷಣ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 12 ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಋಷ್ಯರಂಗ, ಜೋಕುಮಾರ ಸ್ವಾಮಿ.

(ಚಿತ್ರಗಳ ಸಂಗ್ರಹ : ಮಾಸ್ಟರ್. ರೋಹಿತ್, ಎಸ್.)

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ರೋಹಿತ್, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಸೋಮವಾರ, ನವೆಂಬರ್ 13, 2017

ನಮ್ಮ ಶಾಲೆಯ ಸೌಲಭ್ಯದ ಬಗ್ಗೆ

ನಮ್ಮ ಶಾಲೆಯಲ್ಲಿ 1 ರಿಂದ 8ನೇ ತರಗತಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡುವ ಸೌಲಭ್ಯವಿದೆ. ಉತ್ತಮ ಕೊಠಡಿಗಳ ಸೌಲಭ್ಯವಿದೆ. ಮಕ್ಕಳಿಗೆ ಪಾಠವನ್ನು ಮಾಡಲು ಉತ್ತಮವಾದ ಶಿಕ್ಷಕ-ಶಿಕ್ಷಕಿಯರ ಸೌಲಭ್ಯವಿದೆ. ಉಚಿತ ಪುಸ್ತಕದ ಸೌಲಭ್ಯವಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್ಗಳ ಸೌಲಭ್ಯವಿದೆ. ಉಗ್ರಾಣ ಕೊಠಡಿಯ ಸೌಲಭ್ಯವಿದೆ. ಉತ್ತಮವಾದ ಕಪಾಟುಗಳ ಸೌಲಭ್ಯವಿದೆ. ಕಂಪ್ಯೂಟರ್ ಸೌಲಭ್ಯವಿದೆ. ಕಂಪ್ಯೂಟರ್ ಕಲಿಸಿಕೊಡಲು ಉತ್ತಮ ಶಿಕ್ಷಕಿಯ ಸೌಲಭ್ಯವಿದೆ. ನಮ್ಮ ಶಾಲೆಯಲ್ಲಿ ಸಂಗೀತವನ್ನು ಹೇಳಿಕೊಡುವ ಸೌಲಭ್ಯವಿದೆ. ಗ್ರಂಥಾಲಯದ ಸೌಲಭ್ಯವಿದೆ. ಪ್ರತಿ ತಿಂಗಳಿಗೊಮ್ಮೆ ಅಗಸ್ತ್ಯ ಫೌಂಡೇಷನ್ ಸಂಸ್ಥೆಯವರು ಬಂದು 6 ರಿಂದ 8ನೇ ತರಗತಿ ಮಕ್ಕಳಿಗೆ ಉಚಿತವಾಗಿ ವಿಜ್ಞಾನ ಪಾಠಗಳನ್ನು ಮಾಡುವ ಸೌಲಭ್ಯವಿದೆ.

ಸರ್ಕಾರದಿಂದ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಶೂಗಳನ್ನು ಕೊಡುವ ಸೌಲಭ್ಯವಿದೆ. ನಮ್ಮ ಶಾಲೆಯಲ್ಲಿ ಶಿಕ್ಷಣ ಫೌಂಡೇಷನ್ ಸಂಸ್ಥೆಯಿಂದ ಮಕ್ಕಳಿಗೆ ಉಪಯುಕ್ತವಾದ ಬರವಣಿಗೆ ಪುಸ್ತಕಗಳನ್ನು ಕೊಡುವ ಸೌಲಭ್ಯವಿದೆ. ಕಲಿಕಾ ಭೋಧನಕ್ರಿಯೆಯ ಬಗ್ಗೆ ಮಾರ್ಗದರ್ಶನ ಕೊಡುವ ಸೌಲಭ್ಯವಿದೆ. ನಮ್ಮ ಶಾಲೆಯಲ್ಲಿ ಉತ್ತಮವಾದ ಸಮವಸ್ತ್ರದ ಸೌಲಭ್ಯವಿದೆ. ಕಸ ಗುಡಿಸಲು, ಇನ್ನಿತರೆ ಕೆಲಸವನ್ನು ಮಾಡಲು ಆಯಾರ ಸೌಲಭ್ಯವಿದೆ. ಶಾಲೆಯ ಆವರಣದಲ್ಲಿ ವಿಶಾಲವಾದ ಆಟದ ಮೈದಾನದ ಸೌಲಭ್ಯವಿದೆ. ಗಿಡಮರಗಳನ್ನು ಬೆಳೆಸಲು ಸೌಲಭ್ಯವಿದೆ. ನಮ್ಮ ಶಾಲೆಯ ಮುಂದೆ ಉತ್ತಮವಾದ ಚರಂಡಿಯ ಸೌಲಭ್ಯವಿದೆ.

ನಮ್ಮ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿದೆ. ಅಡುಗೆ ಮನೆಯ ಸೌಲಭ್ಯವಿದೆ. ನಮ್ಮ ಶಾಲೆಯಲ್ಲಿ ಬಿಸಿಯೂಟದ ಸೌಲಭ್ಯವಿದೆ. ಮುಖ್ಯ ಶಿಕ್ಷಕರು ಉತ್ತಮವಾದ ತರಕಾರಿಗಳನ್ನು ತಂದುಕೊಡುವ ಸೌಲಭ್ಯ ಮಾಡಿದ್ದಾರೆ. ನಮಗೆ ಶುಚಿ-ರುಚಿಯಾದ ಅಡುಗೆ ಮಾಡಿಕೊಡುವ ಸೌಲಭ್ಯವಿದೆ. ನಲಿ-ಕಲಿ ಮಕ್ಕಳಿಗೆ ಉತ್ತಮವಾದ ಕಲಿಕಾ ತಟ್ಟೆಯ ಸೌಲಭ್ಯವಿದೆ. ಮಕ್ಕಳಿಗೆ ಊಟದ ಮುಂಚೆ ತಟ್ಟೆಗಳು ಮತ್ತು ಕೈಗಳನ್ನು ತೊಳೆಯಲು ಸಿಂಕ್ನ ಸೌಲಭ್ಯವಿದೆ. ಜೊತೆಗೆ ಕ್ಷೀರಭಾಗ್ಯದ ಸೌಲಭ್ಯವಿದೆ.

ನಮ್ಮ ಶಾಲೆಯಲ್ಲಿ ಶೌಚಾಲಯದ ಸೌಲಭ್ಯವಿದೆ. ನಮ್ಮ ಶಾಲೆಗೆ ಪ್ರತಿ ಸೋಮವಾರ ಜಿಂದಾಲ್ ಸಂಸ್ಥೆಯವರು ಬಂದು ಅನಾರೋಗ್ಯದ ಮಕ್ಕಳಿಗೆ ಉಚಿತವಾಗಿ ಮಾತ್ರೆಗಳನ್ನು ಕೊಡುವ ಸೌಲಭ್ಯವಿದೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ವರ್ಷಿತ, ಎ.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಭಾನುವಾರ, ನವೆಂಬರ್ 12, 2017

ನಮ್ಮ ರಾಷ್ಟ್ರ ಪಕ್ಷಿಯ ಬಿಗ್ಗೆ

ಚಿತ್ರ ಕೃಪೆ : Google
ನಮ್ಮ ರಾಷ್ಟ್ರ ಪಕ್ಷಿ ನವಿಲು. ಇದು ಅತ್ಯಂತ ಸುಂದರ ಪಕ್ಷಿ. ನವಿಲು ಪಾವೋಕ್ರಿಸ್ಪೇಟಸ್ ಪ್ರಭೇದಕ್ಕೆ ಸೇರಿದ ಪಕ್ಷಿ. ಗಂಡು ನವಿಲಿನ ಕಣ್ಣು ಕೋರೈಸುವ ವರ್ಣರಂಜಿತವಾದ ಬಾಲ ದರ ಆಕರ್ಷಣೆ. ನವಿಲಿನ ಗರಿಗಳ ಮೇಲೆ ಕಣ್ಣಿನ ಆಕೃತಿಯ ಮಚ್ಚೆಗಳಿವೆ. ಇದು ಹಂಸ ಗಾತ್ರದ ನೀಳ ಕೊರಳಿನ ಪಕ್ಷಿ. ತನ್ನ ಗರಿಗಳನ್ನು ಬೀಸಣಿಕೆಯಂತೆ ಬಿಚ್ಚಿ, ಹರಡಿ ನರ್ತಿಸುವುದು ನಯನ ಮನೋಹರ ದೃಶ್ಯ.
ಚಿತ್ರ ಕೃಪೆ : Google
ನವಿಲುಗಳು ಪ್ರಪಂಚದಾದ್ಯಂತ ವಾಸಿಸುತ್ತವೆ. ಮುಂಜಾನೆ ಹೊತ್ತು ಸೂರ್ಯೋದಯಕ್ಕೆ ಮೊದಲು ಬೇಟೆಗೆ ಹೊರಡುವ ನವಿಲುಗಳು ಧಾನ್ಯಗಳನ್ನು, ಕ್ರಿಮಿಕೀಟಗಳನ್ನು ಆಹಾರವಾಗಿ ಹುಡುಕಲು ಹೋಗುತ್ತವೆ. ನನಗೆ ನವಿಲು ಎಂದರೆ ತುಂಬಾ ಇಷ್ಟ. ನಮ್ಮ ಊರಲ್ಲಿ ಹಲವಾರು ನವಿಲುಗಳಿವೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸುಚಿತ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಶನಿವಾರ, ನವೆಂಬರ್ 11, 2017

ಒಗಟು


 1. ಜುಟ್ಟುಂಟು ಹರನಲ್ಲ, ಹೊಟ್ಟೆಯುಂಟು ಗಣಪನಲ್ಲ, ನೀರುಂಟು ಗಂಗೆಯಲ್ಲ : ?
 2. ಹನ್ನೆರಡು ಇಡ್ಲಿ, ಒಂದು ತಟ್ಟೆ, ಮೂರು ಚಮಚ : ?
 3. ಹಾರಿದರೆ ಹನುಮಂತ, ಕೂಗಿದರೆ ರಾವಣ, ಕೂತರೆ ಮುನಿ : ?
 4. ಮೂಲೆಲಿ ಇರೋ ಮುದುಕಿಗೆ, ಮೈಯೆಲ್ಲಾ ಕಣ್ಣು : ?
 5. ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ : ?
 6. ಚೋಟುದ್ದ ರಾಜ, ಮೇಲೊಂದು ಟೋಪಿ, ಚಟ್-ಪಟ್ ಎಂದು ಹೋರಾಡಿದರೆ, ಸುಟ್ಟು ಭಸ್ಮ : ?
 7. ಹಂಚಿ ಹರವೆಯಲ್ಲಿ ಕೆಂಚಣ್ಣ ಕೂತಿದ್ದಾನೆ : ?
 8. ಅಟ್ಟದ ಮೇಲೆ ಪುಟ್ಟಲಕ್ಷ್ಮಿ ಕುಂತೋಳೆ : ?
 9. ಕತ್ತಲ ಮನೇಲಿ ಕತ್ತಿ ಬೀಸುತ್ತೆ : ?
 10. ಚಿಕ್ಕ ಮನೆಗೆ ಚಿನ್ನದ ಬೀಗ : ?
 11. ಐದು ಮನೆಗೆ ಒಂದೇ ಅಂಗಳ : ?
 12. ನೂರಾರು ಮಕ್ಕಳಿಗೆ ಒಂದೇ ಉಡುದಾರ : ?
 13. ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ : ?
 14. ಮುಳ್ಳು ಗಿಡದಲ್ಲಿ ಚಿನ್ನದ ಮೊಟ್ಟೆ : ?
 15. ದೊಡ್ಡಣ್ಣನ ಹಿಂದೆ ನೂರಾರು ತಮ್ಮಂದಿರು, ಊರೆಲ್ಲಾ ಸುತ್ತುತ್ತಾರೆ : ?
 16. ಏರಿ ಮೇಲೆ ಮುಳ್ಳ್ಹಂದಿ ಕೊಯ್ಯುತ್ತಾರೆ : ?
 17. ಗೊಂತು ಕಿತ್ತಿಕೊಂಡು ಸಂತೆಗೆ ಹೋದ : ?
 18. ಏರಿ ಮೇಲೆ ಸಾಲು ಮರ : ?
 19. ಬರ್ತಾ ಇಳಿತಾನೆ, ಹೋಗ್ತಾ ಏರ್ತಾನೆ : ?
 20. ಪುಟ್ಟ ಪುಟ್ಟ ದೇವಸ್ಥಾನ, ಬಗ್ಗಿ ಬಗ್ಗಿ ನಮಸ್ಕಾರ : ?
 21. ಕಪ್ಪು ಸೀರೆ ಉಟ್ಯಾಳ, ಕಾಲುಂಗುರ ಇಟ್ಯಾಳ, ಮೇಲಕ್ಕೆ ಹೋಗ್ತಾಳ, ಕೆಳಕ್ಕೆ ಇಳಿತಾಳ : ?
 22. ಬೆಟ್ಟದ ಸುತ್ತ ಬೆಳ್ಳಿ ಉಡುದಾರ : ?
 23. ಬುಡ್ಡೆ ಬಿಚ್ಚಿದರೆ ಮನೆ ತುಂಬಾ ಮಕ್ಕಳು : ?
 24. ಹಸಿರು ಆಸ್ಪತ್ರೆ, ಕಪ್ಪು ಡಾಕ್ಟರ್, ಕೆಂಪು ಔಷಧಿ : ?
 25. ಗೂಡಲ್ಲೇ ಕೂತು ಊರೆಲ್ಲಾ ನೋಡುತ್ತೆ : ?
 26. ಅಡ್ಡ ಮರದಲ್ಲಿ ಬೊಡ್ಡ ಕುಳಿತಿದ್ದಾನೆ : ?
 27. ಮಣ್ಣು ಕೊರೆದೆ, ಕಲ್ಲು ಸಿಕ್ಕಿತು, ಕಲ್ಲು ಕೊರೆದೆ, ಬೆಳ್ಳಿ ಸಿಕ್ಕಿತು, ಬೆಳ್ಳಿ ಕೊರೆದೆ, ನೀರು ಸಿಕ್ಕಿತು : ?
 28. ಕುದುರೆ ಓಡುತ್ತೆ, ಕುಂಕುಮ ಚೆಲ್ಲುತ್ತೆ : ?
 29. ಅಂಗಣ್ಣ ಮಂಗಣ್ಣ, ಅಂಗಿ ಬಿಚ್ಕೊಂಡು ನುಂಗಣ್ಣ : ?
 30. ಸುತ್ತಲೂ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ : ?

ಉತ್ತರಗಳು :

 1. ಜುಟ್ಟುಂಟು ಹರನಲ್ಲ, ಹೊಟ್ಟೆಯುಂಟು ಗಣಪನಲ್ಲ, ನೀರುಂಟು ಗಂಗೆಯಲ್ಲ : ತೆಂಗಿನಕಾಯಿ 
 2. ಹನ್ನೆರಡು ಇಡ್ಲಿ, ಒಂದು ತಟ್ಟೆ, ಮೂರು ಚಮಚ : ಗಡಿಯಾರ 
 3. ಹಾರಿದರೆ ಹನುಮಂತ, ಕೂಗಿದರೆ ರಾವಣ, ಕೂತರೆ ಮುನಿ : ಕಪ್ಪೆ 
 4. ಮೂಲೆಲಿ ಇರೋ ಮುದುಕಿಗೆ, ಮೈಯೆಲ್ಲಾ ಕಣ್ಣು : ಜರಡಿ 
 5. ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ : ಹುರಳಿಕಾಯಿ 
 6. ಚೋಟುದ್ದ ರಾಜ, ಮೇಲೊಂದು ಟೋಪಿ, ಚಟ್-ಪಟ್ ಎಂದು ಹೋರಾಡಿದರೆ, ಸುಟ್ಟು ಭಸ್ಮ : ಬೆಂಕಿ ಕಡ್ಡಿ 
 7. ಹಂಚಿ ಹರವೆಯಲ್ಲಿ ಕೆಂಚಣ್ಣ ಕೂತಿದ್ದಾನೆ : ಮೂಗುತಿ 
 8. ಅಟ್ಟದ ಮೇಲೆ ಪುಟ್ಟಲಕ್ಷ್ಮಿ ಕುಂತೋಳೆ : ಬೊಟ್ಟು 
 9. ಕತ್ತಲ ಮನೇಲಿ ಕತ್ತಿ ಬೀಸುತ್ತೆ : ಹಸುವಿನ ಬಾಲ 
 10. ಚಿಕ್ಕ ಮನೆಗೆ ಚಿನ್ನದ ಬೀಗ : ಮೂಗುತಿ 
 11. ಐದು ಮನೆಗೆ ಒಂದೇ ಅಂಗಳ : ಅಂಗೈ 
 12. ನೂರಾರು ಮಕ್ಕಳಿಗೆ ಒಂದೇ ಉಡುದಾರ : ಪೊರಕೆ 
 13. ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ : ಬುಗುರಿ 
 14. ಮುಳ್ಳು ಗಿಡದಲ್ಲಿ ಚಿನ್ನದ ಮೊಟ್ಟೆ : ನಿಂಬೆಹಣ್ಣು 
 15. ದೊಡ್ಡಣ್ಣನ ಹಿಂದೆ ನೂರಾರು ತಮ್ಮಂದಿರು, ಊರೆಲ್ಲಾ ಸುತ್ತುತ್ತಾರೆ : ರೈಲು ಬಂಡಿ 
 16. ಏರಿ ಮೇಲೆ ಮುಳ್ಳ್ಹಂದಿ ಕೊಯ್ಯುತ್ತಾರೆ : ಹಲಸಿನ ಹಣ್ಣು 
 17. ಗೊಂತು ಕಿತ್ತಿಕೊಂಡು ಸಂತೆಗೆ ಹೋದ : ಮೂಲಂಗಿ 
 18. ಏರಿ ಮೇಲೆ ಸಾಲು ಮರ : ನೆರಳು 
 19. ಬರ್ತಾ ಇಳಿತಾನೆ, ಹೋಗ್ತಾ ಏರ್ತಾನೆ : ಹುಬ್ಬು 
 20. ಪುಟ್ಟ ಪುಟ್ಟ ದೇವಸ್ಥಾನ, ಬಗ್ಗಿ ಬಗ್ಗಿ ನಮಸ್ಕಾರ : ಒಲೆ 
 21. ಕಪ್ಪು ಸೀರೆ ಉಟ್ಯಾಳ, ಕಾಲುಂಗುರ ಇಟ್ಯಾಳ, ಮೇಲಕ್ಕೆ ಹೋಗ್ತಾಳ, ಕೆಳಕ್ಕೆ ಇಳಿತಾಳ : ಒನಕೆ 
 22. ಬೆಟ್ಟದ ಸುತ್ತ ಬೆಳ್ಳಿ ಉಡುದಾರ : ರಾಗಿಕಲ್ಲು 
 23. ಬುಡ್ಡೆ ಬಿಚ್ಚಿದರೆ ಮನೆ ತುಂಬಾ ಮಕ್ಕಳು : ಬೆಳ್ಳುಳ್ಳಿ 
 24. ಹಸಿರು ಆಸ್ಪತ್ರೆ, ಕಪ್ಪು ಡಾಕ್ಟರ್, ಕೆಂಪು ಔಷಧಿ : ಕಲ್ಲಂಗಡಿ 
 25. ಗೂಡಲ್ಲೇ ಕೂತು ಊರೆಲ್ಲಾ ನೋಡುತ್ತೆ : ಕಣ್ಣು 
 26. ಅಡ್ಡ ಮರದಲ್ಲಿ ಬೊಡ್ಡ ಕುಳಿತಿದ್ದಾನೆ : ಹಲಸಿನ ಹಣ್ಣು 
 27. ಮಣ್ಣು ಕೊರೆದೆ, ಕಲ್ಲು ಸಿಕ್ಕಿತು, ಕಲ್ಲು ಕೊರೆದೆ, ಬೆಳ್ಳಿ ಸಿಕ್ಕಿತು, ಬೆಳ್ಳಿ ಕೊರೆದೆ, ನೀರು ಸಿಕ್ಕಿತು : ಏಲಕ್ಕಿ 
 28. ಕುದುರೆ ಓಡುತ್ತೆ, ಕುಂಕುಮ ಚೆಲ್ಲುತ್ತೆ : ರಾಗಿ ಮಿಲ್ಲು 
 29. ಅಂಗಣ್ಣ ಮಂಗಣ್ಣ, ಅಂಗಿ ಬಿಚ್ಕೊಂಡು ನುಂಗಣ್ಣ : ಬಾಳೆಹಣ್ಣು 
 30. ಸುತ್ತಲೂ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ : ಮೊಟ್ಟೆ

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಶಶಾಂಕ್, ಪಿ.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಶುಕ್ರವಾರ, ನವೆಂಬರ್ 10, 2017

ಒಗಟುಗಳು

 1. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ : ?
 2. ಆರು ತಿಂಗಳು ಬಸುರಿ ಹೆಣ್ಣು, ಮೂರು ತಿಂಗಳು ಬಾಣಂತಿ : ?
 3. ಅಂಕುಡೊಂಕಾದ ಬಾವಿಲಿ ಒಂದು ತೊಟ್ಟು ನೀರಿಲ್ಲ : ?
 4. ಮದುಮಕ್ಕಳಿಗೆ ದಂತದ ಕುಲಾವಿ : ?
 5. ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು : ?
 6. ದೊಡ್ಡ್ಹೊಟ್ಟೆ ಹೈದನಿಗೆ ಹಿಂದೆ ಬಾಲ, ಮುಂದೂ ಬಾಲ : ?
 7. ಚಿಕ್ಕಕ್ಕನಿಗೆ ಪುಕ್ಕ ಉದ್ದ : ?
 8. ಕಪ್ಪು ಮೈದಾನ, ಬಿಳಿ ರಸ್ತೆ : ?
 9. ಹಗ್ಗ ಹಾಸಿದೆ, ಕೋಣ ಮಲಗಿದೆ : ?
 10. ಕಕ್ಕಟೆ ಕಾಯಿ ನಾಲ್ಕು ಸೋಟೆ ಕಾಯಿ : ?
 11. ತನ್ನನ್ನು ತಾನೇ ಕಾಣಲಾರ : ?
 12. ಪ್ರತಿ ಮನೆಯಲ್ಲೂ ಕೆಂಚ ಹುಡುಗಿ : ?
 13. ಬಿಳಿ ಕುದುರೆಗೆ ಹಸಿರು ಬಾಲ : ?
 14. ಹಿಡಿದರೆ ಹಿಡಿ, ಬಿಟ್ಟರೆ ಮನೆ ತುಂಬ : ?
 15. ತುಂಬಿದ ಕೆರೆಯಲ್ಲಿ ನಿಂಬೆ ಹಣ್ಣು ತೇಲಾಡುತ್ತಿದೆ : ?
 16. ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ : ?
 17. ಗೂಡಿನಲ್ಲಿನ ಪಕ್ಷಿ ನಾಡೆಲ್ಲಾ ನೋಡುವುದು : ?
 18. ಪ್ರಾಣವಿಲ್ಲ ಹಾರುತ್ತೆ, ಜೀವವಿಲ್ಲ ಕೂಗುತ್ತೆ : ?
 19. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ : ?
 20. ಹೊಕ್ಕಿದ್ದು ಒಂದಾಗಿ, ಹೊರಟಿದ್ದು ಅದು ನೂರಾಗಿ : ?
 21. ಮೈಯೆಲ್ಲಾ ಬೂದಿ, ತಲೆಯಲ್ಲಿ ಸಂಡಿಗೆ, ಕೈಯಲ್ಲಿ ಹಪ್ಪಳ : ?
 22. ಬಂಗಾರದ ಗಿಣಿ ಬಾಗಿಲು ಕಾಯುತ್ತೆ : ?
 23. ಮುಳ್ಳು ಮುಖದವಳಿಗೆ ಮೂರೇ ಮೂರು ಮಕ್ಕಳು : ?
 24. ಎಂಟು ಕಂಬಗಳಿಗೆ ಒಂದೇ ಆಧಾರ : ?
 25. ಚಿಕ್ಕ ಮಕ್ಕಳಿಗೆ ಮೈ ತುಂಬಾ ಬಟ್ಟೆ : ?
 26. ಇರುವೆ ಗೂಡಲ್ಲಿ ಹುಲಿ ಕೂರುತ್ತೆ : ?
 27. ಕೆರೆ ಹಿಂದೆ ಬಾಲ ಬೀಸುತ್ತೆ ಅಂದರೇನು : ?
 28. ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆ ಮಕ್ಕಳು : ?
 29. ಮಗುವಿನ ಮನೆಗೆ ಬಾಗಿಲೇ ಇಲ್ಲ : ?
 30. ನಾನು ತುಳಿದೆ ಅದನ್ನು, ಅದು ತುಳಿಯಿತು ನನ್ನನ್ನು : ?
 31. ತುಂಟ ಹೈದರನಿಗೆ ರಾಜನ ಸಂಗಡವೇ ಊಟ : ?
 32. ತಾತನ ಕಣ್ಣು ಥಳ ಥಳ ಹೊಳೆಯುತ್ತೆ : ?
 33. ಕಿರಿ ಎಲೆ ಮೇಲೆ ಕಿನ್ನರಿ ಕುಣಿತಾಳೆ : ?
 34. ಕೈಯುಂಟು ಕಾಲಿಲ್ಲ, ಕತ್ತುಂಟು ತಲೆಯಿಲ್ಲ : ?
 35. ಆಗಸದಲ್ಲಿ ಅರಿವೆಗಳು ಹರಡಿವೆ : ?
 36. ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರೂ ಬೆರಳಿಲ್ಲ : ?
 37. ಎರಡು ಬಾವಿಗಳ ನಡುವೆಯೊಂದು ಸೇತುವೆ : ?
 38. ಕಾಸಿನ ಕುದುರೆಗೆ ಬಾಲದ ಲಗಾಮು : ?
 39. ಬಾನಲ್ಲಿ ಬೆಣ್ಣೆ ಮುದ್ದೆಗಳು ತೇಲಾಡುತ್ತವೆ : ?
 40. ಒಂದು ಬಾವಿಯಲ್ಲಿ ಮೂವರು ಬಿದ್ದು ಸಾಯುತ್ತಾರೆ : ?
 41. ಅಪ್ಪ ಕಜ್ಜಿಗ, ಮಗ ಮುದ್ದುಗಾರ : ?
 42. ಅಪ್ಪನಿಗೆ ಮೂರು ಅವ್ವನಿಗೆ ಒಂದು : ?
 43. ಅಮ್ಮನವರು ಅಗಲ, ಅಯ್ಯನವರು ಉದ್ದ : ?
 44. ಅವತಂಟಿರ ಮಗ ಬೋಳಿ : ?
 45. ಅವ್ವ ಕೂತಿದ್ದಾಳೆ, ಮಗಳು ಓಡಾಡುತ್ತಿದ್ದಾಳೆ : ?
 46. ಅವ್ವ ತಲೆಗೆದರಿ ಮಗಳು ಸುಭದ್ರೆ : ?
 47. ಅವ್ವ ತಲೆಗೆದರಿ ಮಗಳು ನುಣ್ಣಗಿ : ?
 48. ಅವ್ವ ತಲೆಗೆದರಿ ಮಗಳು ಕತ್ತುರಿಗಿ : ?


ಉತ್ತರಗಳು:

 1. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ : ಕಣ್ಣು 
 2. ಆರು ತಿಂಗಳು ಬಸುರಿ ಹೆಣ್ಣು, ಮೂರು ತಿಂಗಳು ಬಾಣಂತಿ : ಭತ್ತದ ತೆನೆ 
 3. ಅಂಕುಡೊಂಕಾದ ಬಾವಿಲಿ ಒಂದು ತೊಟ್ಟು ನೀರಿಲ್ಲ : ಕಿವಿ 
 4. ಮದುಮಕ್ಕಳಿಗೆ ದಂತದ ಕುಲಾವಿ : ಉಗುರು 
 5. ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು : ಸುಣ್ಣ 
 6. ದೊಡ್ಡ್ಹೊಟ್ಟೆ ಹೈದನಿಗೆ ಹಿಂದೆ ಬಾಲ, ಮುಂದೂ ಬಾಲ : ಆನೆ 
 7. ಚಿಕ್ಕಕ್ಕನಿಗೆ ಪುಕ್ಕ ಉದ್ದ : ಸೌಟು 
 8. ಕಪ್ಪು ಮೈದಾನ, ಬಿಳಿ ರಸ್ತೆ : ಬೈತಲೆ 
 9. ಹಗ್ಗ ಹಾಸಿದೆ, ಕೋಣ ಮಲಗಿದೆ : ಕುಂಬಳಕಾಯಿ 
 10. ಕಕ್ಕಟೆ ಕಾಯಿ ನಾಲ್ಕು ಸೋಟೆ ಕಾಯಿ, ಇದು ಏನು? : ದನ 
 11. ತನ್ನನ್ನು ತಾನೇ ಕಾಣಲಾರ : ಕಣ್ಣು 
 12. ಪ್ರತಿ ಮನೆಯಲ್ಲೂ ಕೆಂಚ ಹುಡುಗಿ : ಬೆಂಕಿ 
 13. ಬಿಳಿ ಕುದುರೆಗೆ ಹಸಿರು ಬಾಲ : ಮೂಲಂಗಿ 
 14. ಹಿಡಿದರೆ ಹಿಡಿ, ಬಿಟ್ಟರೆ ಮನೆ ತುಂಬ : ದೀಪ 
 15. ತುಂಬಿದ ಕೆರೆಯಲ್ಲಿ ನಿಂಬೆ ಹಣ್ಣು ತೇಲಾಡುತ್ತಿದೆ : ಬೆಣ್ಣೆ 
 16. ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ : ಬೆಕ್ಕು 
 17. ಗೂಡಿನಲ್ಲಿನ ಪಕ್ಷಿ ನಾಡೆಲ್ಲಾ ನೋಡುವುದು : ಕಣ್ಣು 
 18. ಪ್ರಾಣವಿಲ್ಲ ಹಾರುತ್ತೆ, ಜೀವವಿಲ್ಲ ಕೂಗುತ್ತೆ : ವಿಮಾನ 
 19. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ : ಬದನೆಕಾಯಿ 
 20. ಹೊಕ್ಕಿದ್ದು ಒಂದಾಗಿ, ಹೊರಟಿದ್ದು ಅದು ನೂರಾಗಿ : ಶ್ಯಾವಿಗೆ 
 21. ಮೈಯೆಲ್ಲಾ ಬೂದಿ, ತಲೆಯಲ್ಲಿ ಸಂಡಿಗೆ, ಕೈಯಲ್ಲಿ ಹಪ್ಪಳ : ಔಡಲಕಾಯಿ 
 22. ಬಂಗಾರದ ಗಿಣಿ ಬಾಗಿಲು ಕಾಯುತ್ತೆ : ಬೀಗದ ಕೈ 
 23. ಮುಳ್ಳು ಮುಖದವಳಿಗೆ ಮೂರೇ ಮೂರು ಮಕ್ಕಳು : ಹರಳುಕಾಯಿ 
 24. ಎಂಟು ಕಂಬಗಳಿಗೆ ಒಂದೇ ಆಧಾರ : ತರಡಿ 
 25. ಚಿಕ್ಕ ಮಕ್ಕಳಿಗೆ ಮೈ ತುಂಬಾ ಬಟ್ಟೆ : ಬೆಳ್ಳುಳ್ಳಿ 
 26. ಇರುವೆ ಗೂಡಲ್ಲಿ ಹುಲಿ ಕೂರುತ್ತೆ : ಬಂದೂಕು 
 27. ಕೆರೆ ಹಿಂದೆ ಬಾಲ ಬೀಸುತ್ತೆ ಅಂದರೇನು : ಭತ್ತ 
 28. ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆ ಮಕ್ಕಳು : ಬೆಳ್ಳುಳ್ಳಿ 
 29. ಮಗುವಿನ ಮನೆಗೆ ಬಾಗಿಲೇ ಇಲ್ಲ : ದಾಳಿಂಬೆ 
 30. ನಾನು ತುಳಿದೆ ಅದನ್ನು, ಅದು ತುಳಿಯಿತು ನನ್ನನ್ನು : ನೀರು 
 31. ತುಂಟ ಹೈದರನಿಗೆ ರಾಜನ ಸಂಗಡವೇ ಊಟ : ನೊಣ 
 32. ತಾತನ ಕಣ್ಣು ಥಳ ಥಳ ಹೊಳೆಯುತ್ತೆ : ಚಂದ್ರ 
 33. ಕಿರಿ ಎಲೆ ಮೇಲೆ ಕಿನ್ನರಿ ಕುಣಿತಾಳೆ : ಮಂಜಿನ ಹನಿ 
 34. ಕೈಯುಂಟು ಕಾಲಿಲ್ಲ, ಕತ್ತುಂಟು ತಲೆಯಿಲ್ಲ : ಅಂಗಿ 
 35. ಆಗಸದಲ್ಲಿ ಅರಿವೆಗಳು ಹರಡಿವೆ : ಮೋಡಗಳು 
 36. ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರೂ ಬೆರಳಿಲ್ಲ : ಕೋಟು ಅಂಗಿ 
 37. ಎರಡು ಬಾವಿಗಳ ನಡುವೆಯೊಂದು ಸೇತುವೆ : ಮೂಗು 
 38. ಕಾಸಿನ ಕುದುರೆಗೆ ಬಾಲದ ಲಗಾಮು : ಸೂಜಿ ದಾರ 
 39. ಬಾನಲ್ಲಿ ಬೆಣ್ಣೆ ಮುದ್ದೆಗಳು ತೇಲಾಡುತ್ತವೆ : ಮೋಡ 
 40. ಒಂದು ಬಾವಿಯಲ್ಲಿ ಮೂವರು ಬಿದ್ದು ಸಾಯುತ್ತಾರೆ : ಎಲೆ, ಅಡಿಕೆ, ಸುಣ್ಣ 
 41. ಅಪ್ಪ ಕಜ್ಜಿಗ, ಮಗ ಮುದ್ದುಗಾರ : ಹಲಸಿನ ತೊಳೆ 
 42. ಅಪ್ಪನಿಗೆ ಮೂರು ಅವ್ವನಿಗೆ ಒಂದು : ನವ ತೆನೆ 
 43. ಅಮ್ಮನವರು ಅಗಲ, ಅಯ್ಯನವರು ಉದ್ದ : ಬಾವಿಹಗ್ಗ 
 44. ಅವತಂಟಿರ ಮಗ ಬೋಳಿ : ಬೇಲದ ಹಣ್ಣು 
 45. ಅವ್ವ ಕೂತಿದ್ದಾಳೆ, ಮಗಳು ಓಡಾಡುತ್ತಿದ್ದಾಳೆ : ಹಂಡೆ ಚೆಂಬು 
 46. ಅವ್ವ ತಲೆಗೆದರಿ ಮಗಳು ಸುಭದ್ರೆ : ಈಚಲ ಮರ 
 47. ಅವ್ವ ತಲೆಗೆದರಿ ಮಗಳು ನುಣ್ಣಗಿ : ಮೆಣಸಿನಕಾಯಿ 
 48. ಅವ್ವ ತಲೆಗೆದರಿ ಮಗಳು ಕತ್ತುರಿಗಿ : ತೆಂಗಿನ ಮರಕಾಯಿ
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ನವ್ಯಶ್ರೀ. ವಿ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಗುರುವಾರ, ನವೆಂಬರ್ 9, 2017

ಗಾದೆಗಳು

 1. ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ.
 2. ಉತ್ತರನ ಪೌರುಷ ಒಲೆಯ ಮುಂದೆ.
 3. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
 4. ಬೆಳ್ಳಗಿರುವುದೆಲ್ಲಾ ಹಾಲಲ್ಲ.
 5. ತುಂಬಿದ ಕೊಡ ತುಳುಕುವುದಿಲ್ಲ.
 6. ವಿದ್ಯೆಗೆ ವಿನಯವೇ ಭೂಷಣ.
 7. ಹುಟ್ಟುತ್ತಾ ಅಣ್ಣತಮ್ಮಂದಿರು; ಬೆಳೆಯುತ್ತಾ ದಾಯಾದಿಗಳು.
 8. ಕೆಟ್ಟಮೇಲೆ ಬುದ್ಧಿ ಬಂತು.
 9. ಮನೆಗೆ ಮಾರಿ; ಊರಿಗೆ ಉಪಕಾರಿ.
 10. ಕೈ ಕೆಸರಾದರೆ, ಬಾಯಿ ಮೊಸರು.
 11. ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬಾರದು.
 12. ಮಾಡುವುದೆಲ್ಲಾ ಅನಾಚಾರ; ಮನೆ ಮುಂದೆ ಮಾತ್ರ ಬೃಂದಾವನ.
 13. ಅತಿ ಆಸೆ ಗತಿಗೇಡು.
 14. ಹಿತ್ತಲ ಗಿಡ ಮದ್ದಲ್ಲ.
 15. ಹಾಸಿಗೆ ಇದ್ದಷ್ಟು ಕಾಲು ಚಾಚು.
 16. ಒಗ್ಗಟ್ಟಿನಲ್ಲಿ ಬಲವಿದೆ.
 17. ಆರೋಗ್ಯವೇ ಭಾಗ್ಯ.
 18. ಬೆಳೆಯುವ ಸಿರಿ ಮೊಳಕೆಯಲ್ಲಿ.
 19. ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ.
 20. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
 21. ಮಾಡಿದ್ದುಣ್ಣೋ ಮಹರಾಯ.
 22. ಗಾಳಿ ಬಂದಂತೆ ತೂರಿಕೋ.
 23. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು.
 24. ಮಾತು ಬೆಳ್ಳಿ, ಮೌನ ಬಂಗಾರ.
 25. ತಾಳಿದವನು ಬಾಳಿಯಾನು.
 26. ಕಣ್ಣಿರುವ ತನಕ ನೋಟ; ಕಾಲಿರುವ ತನಕ ಓಟ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಲಕ್ಷ್ಮಿ, ಆರ್.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಬುಧವಾರ, ನವೆಂಬರ್ 8, 2017

ಕವನಗಳು

ಕತ್ತಲು ಬೆಳಕಾಗುವ ತನಕ
ಬೆಳಕು ಕತ್ತಲಾಗುವ ತನಕ
ಗೆಳೆತನ ಸಾಯುವ ತನಕ.

* * *

ಮನಸ್ಸಿಗಿಂತ ಹೆಚ್ಚು
ಸ್ನೇಹ
ಜೀವಕ್ಕಿಂತ ಹೆಚ್ಚು
ಪ್ರೀತಿ.

* * *

ವಿದ್ಯೆ ಎಂಬ ಗಿಡದಲ್ಲಿ
ವಿದ್ಯಾರ್ಥಿಯೇ ದುಂಬಿ.

* * *

ಬಡತನ ಎಂಬುದು ಕತ್ತಲೆಯ
ರೂಪ
ಸಿರಿತನ ಎಂಬುದು ಬೆಳಕಿನ
ರೂಪ
ಸ್ನೇಹ ಎಂಬುದು ಶಾಶ್ವತ
ರೂಪ

* * *

ಪ್ರೀತಿನಾ
ಪ್ರೀತಿಯಿಂದನೆ
ಪ್ರೀತಿಸು.

* * *

ಗುಲಾಬಿ ಹೂವಿಗೆ ಮುಳ್ಳು ಆಸರೆ
ಅದರೆ ನನಗೆ ಸ್ನೇಹವೇ ಆಸರೆ.

* * *

ಭೂಮಿ ನಕ್ಕರೆ ಭೂಕಂಪ
ಸಾಗರ ನಕ್ಕರೆ ಸುನಾಮಿ
ಮಗು ನಕ್ಕರೆ ಮಲ್ಲಿಗೆ
ನೀನು ನಕ್ಕರೆ ಚಿಂಪಾಂಜಿ
ನಾನು ನಕ್ಕರೆ ಅಪರಂಜಿ.

* * *

ಬೇವು – ಬೆಲ್ಲ
ಬೇವು ಕಹಿ
ಬೆಲ್ಲ ಸಿಹಿ
ನಮ್ಮೆಲ್ಲರ ಜೀವನವು ಬೇವು – ಬೆಲ್ಲ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸೌಮ್ಯ, ಜಿ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಮಂಗಳವಾರ, ನವೆಂಬರ್ 7, 2017

ರಾಷ್ಟ್ರ ಧ್ವಜ

ಕಲೆ : ಮಾಸ್ಟರ್. ಧನುಷ್, ಪಿ.
ಧ್ವಜವು ಒಂದು ರಾಷ್ಟ್ರದ ಲಾಂಛನ. ಇದು ಸ್ವಾತಂತ್ರ್ಯ, ದೇಶ ಪ್ರೇಮ, ಒಗ್ಗಟ್ಟು ಹಾಗೂ ನಿಷ್ಠೆಯ ಪ್ರತೀಕವಾಗಿದೆ. ನಮ್ಮ ರಾಷ್ರ ಧ್ವಜವು ತ್ರಿವರ್ಣಗಳಿಂದ ಕೂಡಿದೆ. ಮೇಲೆ ಕೇಸರಿ, ನಡುವೆ ಬಿಳಿ ಮತ್ತು ಕೆಳಗೆ ಹಸಿರು ಮೂರು ಬಣ್ಣಗಳಿವೆ. ಕೇಸರಿಯು ಧೈರ್ಯದ, ಬಿಳಿಯು ಶಾಂತಿಯ ಮತ್ತು ಹಸಿರು ಸಮೃದ್ಧಿಯ ಸಂಕೇತ. ಮಧ್ಯೆ ಇರುವ ಅಶೋಕ ಚಕ್ರವು 24 ಗೆರೆಗಳನ್ನು ಹೊಂದಿದ್ದು, ನೀಲಿ ಬಣ್ಣದ ಚಕ್ರ. ಇದನ್ನು ಸಾರಾನಾಥದಲ್ಲಿರುವ ಅಶೋಕ ಸ್ಥಂಭದಿಂದ ಆಯ್ಕೆ ಮಾಡಲಾಗಿದೆ. ಇದು ದಿನದ 24 ಘಂಟೆಗಳನ್ನು ಪ್ರತಿನಿಧಿಸುತ್ತದೆ ಹಾಗೂ ದೇಶದ ಪ್ರಗತಿಯ ದ್ಯೋತಕವಾಗಿದೆ. ನೀಲಿ ಬಣ್ಣವು ನೀಲಿ ಸಾಗರ, ನೀಲಾಕಾಶದ ಹಾಗೂ ಮನೋವೈಶಾಲ್ಯದ ಪ್ರತೀಕ. ಈ ಚಕ್ರವು ಚಲನಶೀಲತೆ ಮತ್ತು ಬೌದ್ಧ ಧರ್ಮಕ್ಕೆ ಶರಣಾದ ರಾಜ ಅಶೋಕನ ಶಾಂತಿ ಮಂತ್ರವನ್ನು ಸಂಕೇತಿಸುತ್ತದೆ.

ತಿರಂಗ ಎಂದು ಕರೆಯಲ್ಪಡುವ, ಈಗ ಬಳಸಲ್ಪಡುತ್ತಿರುವ ರಾಷ್ಟ್ರ ಧ್ವಜವು ಜುಲೈ 22, 1947 ರಂದು ಶಾಸನ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಇದು ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ನ ಧ್ವಜ ರಚನೆಯನ್ನು ಆಧರಿಸಿ ವೆಂಕಯ್ಯನವರಿಂದ ಮಾಡಲ್ಪಟ್ಟಿತು. ಇದು ನಮ್ಮ ಸೇನಾ ಧ್ವಜವೂ ಆಗಿದೆ. ಯಾರೂ ರಾಷ್ರ ಧ್ವಜವನ್ನು ತುಳಿಯಬಾರದು. ಧ್ವಜದ ಸಂಕೇತವೂ ಬಹಳ ಮಹತ್ವದ್ದು. ರಾಷ್ಟ್ರ ಧ್ವಜವು ಸ್ವಾತಂತ್ರ್ಯ ಸೂಚಿಸುತ್ತದೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಧನುಷ್, ಪಿ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter