ಶುಕ್ರವಾರ, ನವೆಂಬರ್ 10, 2017

ಒಗಟುಗಳು

 1. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ : ?
 2. ಆರು ತಿಂಗಳು ಬಸುರಿ ಹೆಣ್ಣು, ಮೂರು ತಿಂಗಳು ಬಾಣಂತಿ : ?
 3. ಅಂಕುಡೊಂಕಾದ ಬಾವಿಲಿ ಒಂದು ತೊಟ್ಟು ನೀರಿಲ್ಲ : ?
 4. ಮದುಮಕ್ಕಳಿಗೆ ದಂತದ ಕುಲಾವಿ : ?
 5. ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು : ?
 6. ದೊಡ್ಡ್ಹೊಟ್ಟೆ ಹೈದನಿಗೆ ಹಿಂದೆ ಬಾಲ, ಮುಂದೂ ಬಾಲ : ?
 7. ಚಿಕ್ಕಕ್ಕನಿಗೆ ಪುಕ್ಕ ಉದ್ದ : ?
 8. ಕಪ್ಪು ಮೈದಾನ, ಬಿಳಿ ರಸ್ತೆ : ?
 9. ಹಗ್ಗ ಹಾಸಿದೆ, ಕೋಣ ಮಲಗಿದೆ : ?
 10. ಕಕ್ಕಟೆ ಕಾಯಿ ನಾಲ್ಕು ಸೋಟೆ ಕಾಯಿ : ?
 11. ತನ್ನನ್ನು ತಾನೇ ಕಾಣಲಾರ : ?
 12. ಪ್ರತಿ ಮನೆಯಲ್ಲೂ ಕೆಂಚ ಹುಡುಗಿ : ?
 13. ಬಿಳಿ ಕುದುರೆಗೆ ಹಸಿರು ಬಾಲ : ?
 14. ಹಿಡಿದರೆ ಹಿಡಿ, ಬಿಟ್ಟರೆ ಮನೆ ತುಂಬ : ?
 15. ತುಂಬಿದ ಕೆರೆಯಲ್ಲಿ ನಿಂಬೆ ಹಣ್ಣು ತೇಲಾಡುತ್ತಿದೆ : ?
 16. ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ : ?
 17. ಗೂಡಿನಲ್ಲಿನ ಪಕ್ಷಿ ನಾಡೆಲ್ಲಾ ನೋಡುವುದು : ?
 18. ಪ್ರಾಣವಿಲ್ಲ ಹಾರುತ್ತೆ, ಜೀವವಿಲ್ಲ ಕೂಗುತ್ತೆ : ?
 19. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ : ?
 20. ಹೊಕ್ಕಿದ್ದು ಒಂದಾಗಿ, ಹೊರಟಿದ್ದು ಅದು ನೂರಾಗಿ : ?
 21. ಮೈಯೆಲ್ಲಾ ಬೂದಿ, ತಲೆಯಲ್ಲಿ ಸಂಡಿಗೆ, ಕೈಯಲ್ಲಿ ಹಪ್ಪಳ : ?
 22. ಬಂಗಾರದ ಗಿಣಿ ಬಾಗಿಲು ಕಾಯುತ್ತೆ : ?
 23. ಮುಳ್ಳು ಮುಖದವಳಿಗೆ ಮೂರೇ ಮೂರು ಮಕ್ಕಳು : ?
 24. ಎಂಟು ಕಂಬಗಳಿಗೆ ಒಂದೇ ಆಧಾರ : ?
 25. ಚಿಕ್ಕ ಮಕ್ಕಳಿಗೆ ಮೈ ತುಂಬಾ ಬಟ್ಟೆ : ?
 26. ಇರುವೆ ಗೂಡಲ್ಲಿ ಹುಲಿ ಕೂರುತ್ತೆ : ?
 27. ಕೆರೆ ಹಿಂದೆ ಬಾಲ ಬೀಸುತ್ತೆ ಅಂದರೇನು : ?
 28. ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆ ಮಕ್ಕಳು : ?
 29. ಮಗುವಿನ ಮನೆಗೆ ಬಾಗಿಲೇ ಇಲ್ಲ : ?
 30. ನಾನು ತುಳಿದೆ ಅದನ್ನು, ಅದು ತುಳಿಯಿತು ನನ್ನನ್ನು : ?
 31. ತುಂಟ ಹೈದರನಿಗೆ ರಾಜನ ಸಂಗಡವೇ ಊಟ : ?
 32. ತಾತನ ಕಣ್ಣು ಥಳ ಥಳ ಹೊಳೆಯುತ್ತೆ : ?
 33. ಕಿರಿ ಎಲೆ ಮೇಲೆ ಕಿನ್ನರಿ ಕುಣಿತಾಳೆ : ?
 34. ಕೈಯುಂಟು ಕಾಲಿಲ್ಲ, ಕತ್ತುಂಟು ತಲೆಯಿಲ್ಲ : ?
 35. ಆಗಸದಲ್ಲಿ ಅರಿವೆಗಳು ಹರಡಿವೆ : ?
 36. ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರೂ ಬೆರಳಿಲ್ಲ : ?
 37. ಎರಡು ಬಾವಿಗಳ ನಡುವೆಯೊಂದು ಸೇತುವೆ : ?
 38. ಕಾಸಿನ ಕುದುರೆಗೆ ಬಾಲದ ಲಗಾಮು : ?
 39. ಬಾನಲ್ಲಿ ಬೆಣ್ಣೆ ಮುದ್ದೆಗಳು ತೇಲಾಡುತ್ತವೆ : ?
 40. ಒಂದು ಬಾವಿಯಲ್ಲಿ ಮೂವರು ಬಿದ್ದು ಸಾಯುತ್ತಾರೆ : ?
 41. ಅಪ್ಪ ಕಜ್ಜಿಗ, ಮಗ ಮುದ್ದುಗಾರ : ?
 42. ಅಪ್ಪನಿಗೆ ಮೂರು ಅವ್ವನಿಗೆ ಒಂದು : ?
 43. ಅಮ್ಮನವರು ಅಗಲ, ಅಯ್ಯನವರು ಉದ್ದ : ?
 44. ಅವತಂಟಿರ ಮಗ ಬೋಳಿ : ?
 45. ಅವ್ವ ಕೂತಿದ್ದಾಳೆ, ಮಗಳು ಓಡಾಡುತ್ತಿದ್ದಾಳೆ : ?
 46. ಅವ್ವ ತಲೆಗೆದರಿ ಮಗಳು ಸುಭದ್ರೆ : ?
 47. ಅವ್ವ ತಲೆಗೆದರಿ ಮಗಳು ನುಣ್ಣಗಿ : ?
 48. ಅವ್ವ ತಲೆಗೆದರಿ ಮಗಳು ಕತ್ತುರಿಗಿ : ?


ಉತ್ತರಗಳು:

 1. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ : ಕಣ್ಣು 
 2. ಆರು ತಿಂಗಳು ಬಸುರಿ ಹೆಣ್ಣು, ಮೂರು ತಿಂಗಳು ಬಾಣಂತಿ : ಭತ್ತದ ತೆನೆ 
 3. ಅಂಕುಡೊಂಕಾದ ಬಾವಿಲಿ ಒಂದು ತೊಟ್ಟು ನೀರಿಲ್ಲ : ಕಿವಿ 
 4. ಮದುಮಕ್ಕಳಿಗೆ ದಂತದ ಕುಲಾವಿ : ಉಗುರು 
 5. ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು : ಸುಣ್ಣ 
 6. ದೊಡ್ಡ್ಹೊಟ್ಟೆ ಹೈದನಿಗೆ ಹಿಂದೆ ಬಾಲ, ಮುಂದೂ ಬಾಲ : ಆನೆ 
 7. ಚಿಕ್ಕಕ್ಕನಿಗೆ ಪುಕ್ಕ ಉದ್ದ : ಸೌಟು 
 8. ಕಪ್ಪು ಮೈದಾನ, ಬಿಳಿ ರಸ್ತೆ : ಬೈತಲೆ 
 9. ಹಗ್ಗ ಹಾಸಿದೆ, ಕೋಣ ಮಲಗಿದೆ : ಕುಂಬಳಕಾಯಿ 
 10. ಕಕ್ಕಟೆ ಕಾಯಿ ನಾಲ್ಕು ಸೋಟೆ ಕಾಯಿ, ಇದು ಏನು? : ದನ 
 11. ತನ್ನನ್ನು ತಾನೇ ಕಾಣಲಾರ : ಕಣ್ಣು 
 12. ಪ್ರತಿ ಮನೆಯಲ್ಲೂ ಕೆಂಚ ಹುಡುಗಿ : ಬೆಂಕಿ 
 13. ಬಿಳಿ ಕುದುರೆಗೆ ಹಸಿರು ಬಾಲ : ಮೂಲಂಗಿ 
 14. ಹಿಡಿದರೆ ಹಿಡಿ, ಬಿಟ್ಟರೆ ಮನೆ ತುಂಬ : ದೀಪ 
 15. ತುಂಬಿದ ಕೆರೆಯಲ್ಲಿ ನಿಂಬೆ ಹಣ್ಣು ತೇಲಾಡುತ್ತಿದೆ : ಬೆಣ್ಣೆ 
 16. ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ : ಬೆಕ್ಕು 
 17. ಗೂಡಿನಲ್ಲಿನ ಪಕ್ಷಿ ನಾಡೆಲ್ಲಾ ನೋಡುವುದು : ಕಣ್ಣು 
 18. ಪ್ರಾಣವಿಲ್ಲ ಹಾರುತ್ತೆ, ಜೀವವಿಲ್ಲ ಕೂಗುತ್ತೆ : ವಿಮಾನ 
 19. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ : ಬದನೆಕಾಯಿ 
 20. ಹೊಕ್ಕಿದ್ದು ಒಂದಾಗಿ, ಹೊರಟಿದ್ದು ಅದು ನೂರಾಗಿ : ಶ್ಯಾವಿಗೆ 
 21. ಮೈಯೆಲ್ಲಾ ಬೂದಿ, ತಲೆಯಲ್ಲಿ ಸಂಡಿಗೆ, ಕೈಯಲ್ಲಿ ಹಪ್ಪಳ : ಔಡಲಕಾಯಿ 
 22. ಬಂಗಾರದ ಗಿಣಿ ಬಾಗಿಲು ಕಾಯುತ್ತೆ : ಬೀಗದ ಕೈ 
 23. ಮುಳ್ಳು ಮುಖದವಳಿಗೆ ಮೂರೇ ಮೂರು ಮಕ್ಕಳು : ಹರಳುಕಾಯಿ 
 24. ಎಂಟು ಕಂಬಗಳಿಗೆ ಒಂದೇ ಆಧಾರ : ತರಡಿ 
 25. ಚಿಕ್ಕ ಮಕ್ಕಳಿಗೆ ಮೈ ತುಂಬಾ ಬಟ್ಟೆ : ಬೆಳ್ಳುಳ್ಳಿ 
 26. ಇರುವೆ ಗೂಡಲ್ಲಿ ಹುಲಿ ಕೂರುತ್ತೆ : ಬಂದೂಕು 
 27. ಕೆರೆ ಹಿಂದೆ ಬಾಲ ಬೀಸುತ್ತೆ ಅಂದರೇನು : ಭತ್ತ 
 28. ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆ ಮಕ್ಕಳು : ಬೆಳ್ಳುಳ್ಳಿ 
 29. ಮಗುವಿನ ಮನೆಗೆ ಬಾಗಿಲೇ ಇಲ್ಲ : ದಾಳಿಂಬೆ 
 30. ನಾನು ತುಳಿದೆ ಅದನ್ನು, ಅದು ತುಳಿಯಿತು ನನ್ನನ್ನು : ನೀರು 
 31. ತುಂಟ ಹೈದರನಿಗೆ ರಾಜನ ಸಂಗಡವೇ ಊಟ : ನೊಣ 
 32. ತಾತನ ಕಣ್ಣು ಥಳ ಥಳ ಹೊಳೆಯುತ್ತೆ : ಚಂದ್ರ 
 33. ಕಿರಿ ಎಲೆ ಮೇಲೆ ಕಿನ್ನರಿ ಕುಣಿತಾಳೆ : ಮಂಜಿನ ಹನಿ 
 34. ಕೈಯುಂಟು ಕಾಲಿಲ್ಲ, ಕತ್ತುಂಟು ತಲೆಯಿಲ್ಲ : ಅಂಗಿ 
 35. ಆಗಸದಲ್ಲಿ ಅರಿವೆಗಳು ಹರಡಿವೆ : ಮೋಡಗಳು 
 36. ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರೂ ಬೆರಳಿಲ್ಲ : ಕೋಟು ಅಂಗಿ 
 37. ಎರಡು ಬಾವಿಗಳ ನಡುವೆಯೊಂದು ಸೇತುವೆ : ಮೂಗು 
 38. ಕಾಸಿನ ಕುದುರೆಗೆ ಬಾಲದ ಲಗಾಮು : ಸೂಜಿ ದಾರ 
 39. ಬಾನಲ್ಲಿ ಬೆಣ್ಣೆ ಮುದ್ದೆಗಳು ತೇಲಾಡುತ್ತವೆ : ಮೋಡ 
 40. ಒಂದು ಬಾವಿಯಲ್ಲಿ ಮೂವರು ಬಿದ್ದು ಸಾಯುತ್ತಾರೆ : ಎಲೆ, ಅಡಿಕೆ, ಸುಣ್ಣ 
 41. ಅಪ್ಪ ಕಜ್ಜಿಗ, ಮಗ ಮುದ್ದುಗಾರ : ಹಲಸಿನ ತೊಳೆ 
 42. ಅಪ್ಪನಿಗೆ ಮೂರು ಅವ್ವನಿಗೆ ಒಂದು : ನವ ತೆನೆ 
 43. ಅಮ್ಮನವರು ಅಗಲ, ಅಯ್ಯನವರು ಉದ್ದ : ಬಾವಿಹಗ್ಗ 
 44. ಅವತಂಟಿರ ಮಗ ಬೋಳಿ : ಬೇಲದ ಹಣ್ಣು 
 45. ಅವ್ವ ಕೂತಿದ್ದಾಳೆ, ಮಗಳು ಓಡಾಡುತ್ತಿದ್ದಾಳೆ : ಹಂಡೆ ಚೆಂಬು 
 46. ಅವ್ವ ತಲೆಗೆದರಿ ಮಗಳು ಸುಭದ್ರೆ : ಈಚಲ ಮರ 
 47. ಅವ್ವ ತಲೆಗೆದರಿ ಮಗಳು ನುಣ್ಣಗಿ : ಮೆಣಸಿನಕಾಯಿ 
 48. ಅವ್ವ ತಲೆಗೆದರಿ ಮಗಳು ಕತ್ತುರಿಗಿ : ತೆಂಗಿನ ಮರಕಾಯಿ
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ನವ್ಯಶ್ರೀ. ವಿ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

23 ಕಾಮೆಂಟ್‌ಗಳು:

 1. ಬಡವರು ಎಸಿತಾರೆ ಶ್ರೀಮಂತರು ಅದನ್ನು ತೆಗೆದುಕೊಂಡು ಜೇಬಲ್ಲಿ ಇಟ್ಟುಕೊಳ್ಳುತ್ತಾರೆ
  ನನಗೆ ಇದರ ಅರ್ಥ ತಿಳಿಸಿಕೊಡಿ

  ಪ್ರತ್ಯುತ್ತರಅಳಿಸಿ


 2. ಅಂಧನ ಪತ್ನಿಯ
  ಮಗನ ಹೆಂಡತಿಯ
  ಮೈದುನನ ಮದಿಸಿದವನ
  ಮಡದಿಯ ಬಯಸಿದವನ ಚೆಂಡಾಡಿದವನ ತಮ್ಮನ
  ಸದಾ ಸಂರಕ್ಷಿಸಿದವನ
  ಅತ್ತೆಯ ಭಾವನ
  ಜನಕನ ತಾಯಿಯ
  ಗಂಡನ ಹಿರಿ ಮಗನ
  ಧುರದಲ್ಲಿ ಗೆದ್ದವ ಯಾರು ?

  ಪೂರ್ತಿ ವಿವರದೊಂದಿಗೆ ಉತ್ತರಿಸಿ

  ಪ್ರತ್ಯುತ್ತರಅಳಿಸಿ
 3. ಡಿಮ್ಮಿ ಹುಡುಗಿಗೆ ಸಿಲ್ಕ್ ಸೀರೆ.... ನಾನ್ಯರು

  ಪ್ರತ್ಯುತ್ತರಅಳಿಸಿ
 4. ಕತಲೆ ಕೋಣೆಯಲ್ಲಿ ಕತಿ ಬಿಸುಟದೆ

  ಪ್ರತ್ಯುತ್ತರಅಳಿಸಿ
 5. ಈ ಒಗಟು ಬಿಡಿಸಿ!

  ಹೆಸರಿಲ್ಲದ ಊರಗೌಡನ ಹೆಂಡತಿ, ತಳವಿಲ್ಲದ ಮಡಿಕೆ ತಗೊಂಡು, ನೀರಿಲ್ಲದ ಕೆರೆಗೆ ಹೋಗುತ್ತಾಳೆ. ಅಲ್ಲಿ ತಲೆ ಇಲ್ಲದ ಹುಲ್ಲೆಕರು, ಬೇರಿಲ್ಲದ ಗರಿಕೆ ಮೇಯುತ್ತಿರುತ್ತದೆ. ಇದನ್ನು ಕಣ್ಣಿಲ್ಲದವನು ನೋಡಿ, ಕಿವಿಯಿಲ್ಲದವನು ಕೇಳಿ, ಕೈ‌ಯಿಲ್ಲದವನು ಹೊಡೆದು, ತಲೆ ಇಲ್ಲದವನು ಹೊತ್ತೊಯ್ದು, ಭೂಮಿ ಇಲ್ಲದೆಡೆ ಹೂತುಹಾಕ್ತಾರೆ.

  ಏನಿದು?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಈ ಒಗಟು ಬಿಡಿಸಿ!

   ಹೆಸರಿಲ್ಲದ ಊರಗೌಡನ ಹೆಂಡತಿ, ತಳವಿಲ್ಲದ ಮಡಿಕೆ ತಗೊಂಡು, ನೀರಿಲ್ಲದ ಕೆರೆಗೆ ಹೋಗುತ್ತಾಳೆ. ಅಲ್ಲಿ ತಲೆ ಇಲ್ಲದ ಹುಲ್ಲೆಕರು, ಬೇರಿಲ್ಲದ ಗರಿಕೆ ಮೇಯುತ್ತಿರುತ್ತದೆ. ಇದನ್ನು ಕಣ್ಣಿಲ್ಲದವನು ನೋಡಿ, ಕಿವಿಯಿಲ್ಲದವನು ಕೇಳಿ, ಕೈ‌ಯಿಲ್ಲದವನು ಹೊಡೆದು, ತಲೆ ಇಲ್ಲದವನು ಹೊತ್ತೊಯ್ದು, ಭೂಮಿ ಇಲ್ಲದೆಡೆ ಹೂತುಹಾಕ್ತಾರೆ.

   ಏನಿದು?

   ಅಳಿಸಿ
 6. ಕಾಗೆಗಿಂತ ಕಪ್ಪು ಸುಣ್ಣಕ್ಕಿಂತ ಬಿಳಿ ನೋಡಿದರೆ ಸಣ್ಣದು ಸಮುದ್ರಕ್ಕಿಂತ ದೊಡ್ಡದು.

  ಪ್ರತ್ಯುತ್ತರಅಳಿಸಿ
 7. ಅಣ್ಣ ಅಂದ್ರೆ ದೂರ ಒಗ್ರಾರೆ,ತಮ್ಮ ಅಂದ್ರೆ ಅತ್ತಿರ ಬರ್ತಾರೆ....ಇದರ ಉತ್ತರ ಏನು...

  ಪ್ರತ್ಯುತ್ತರಅಳಿಸಿ