ಚಿತ್ರ ಕೃಪೆ : Google |
ಜವಾಹರಲಾಲ್ ನೆಹರು ಅವರ ಪ್ರಾಧಮಿಕ ಶಿಕ್ಷಣ ಮನೆಯಲ್ಲಿ ನಡೆಯಿತು. ಮುಂದೆ ಮಾಧ್ಯಮಿಕ ಶಿಕ್ಷಣ ಮುಗಿಸಿ, ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದರು. ಸ್ವದೇಶಕ್ಕೆ ಬಂದ ಮೇಲೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಬೇಕೆಂಬ ಪ್ರೇರಣೆ ತಂದೆಯವರಿಂದ ದೊರಕಿತು. ಅಲ್ಲದೇ ಗಾಂಧೀಜಿಯವರ ಆಪ್ತ ಅನುಯಾಯಿಯಾಗಿದ್ದರು. ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು.
ಭಾರತ ಸ್ವತಂತ್ರವಾದ ಮೇಲೆ ಅವರು ಭಾರತದ ಮೊದಲನೆಯ ಪ್ರಧಾನ ಮಂತ್ರಿಗಳಾಗಿ ಕಾರ್ಯ ಮಾಡಿದರು. ಅವರು 'ಆರಾಮ ಹಾರಾಮ ಹೈ' ಎಂದು ಜನತೆಗೆ ಹೇಳುತ್ತಿದ್ದರು. ಅವರು 1964ರ ಮೇ 27 ರಂದು ನಿಧನ ಹೊಂದಿದರು. ದೇಶವಿದೇಶಗಳಲ್ಲಿ ಭಾರತದ ಹಿರಿಮೆ ಹೆಚ್ಚುವಂತೆ ದುಡಿದ ಮಹಾಮಹಿಮರು ಇವರಾಗಿದ್ದಾರೆ. ಇವರು ವಿಶ್ವದಲ್ಲಿ 'ಶಾಂತಿದೂತ' ಎಂದು ಹೆಸರಾಗಿದ್ದಾರೆ.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ | |
ಕುಮಾರಿ. ಕವನ, ಎಸ್. 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ