ಶುಕ್ರವಾರ, ನವೆಂಬರ್ 3, 2017

ರಾಷ್ಟ್ರೀಯ ಪ್ರಾಣಿ ಹುಲಿ ಬಗ್ಗೆ

ಹುಲಿ:- ಇದರ ವೈಜ್ಞಾನಿಕ ಹೆಸರು "ಪ್ಯಾಂಥೆರಾ ಟೈಗ್ರಿಸ್". ಇದನ್ನು ಕಾಡಿನ ರಾಜ ಎಂದು ಕರೆಯುತ್ತಾರೆ. ಹುಲಿಯು ಹಳದಿ ಬಣ್ಣವಿದ್ದು ಅದರ ಮೇಲೆ ಕಪ್ಪು ಪಟ್ಟಿಗಳಿರುತ್ತವೆ. ಆದ್ದರಿಂದ ಹುಲಿಯು ಆಕರ್ಷಕವಾಗಿದೆ. ಹಾಗೂ ಹುಲಿಯು ಧೈರ್ಯ ಮತ್ತು ಗಾಂಭೀರ್ಯಗಳ ಸಂಕೇತವಾಗಿದೆ. ಹಿಂದೆ ಜನರು ಬೆಲೆಬಾಳುವ ಹುಲಿಯ ಚರ್ಮಕ್ಕಾಗಿ ಹುಲಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೇಟೆ ಆಡುತ್ತಿದ್ದರು. ಇದರಿಂದಾಗಿ ಹುಲಿಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಕುಸಿಯಿತು. 1973 ರಲ್ಲಿ "ಹುಲಿ ರಕ್ಷಣಾ ಯೋಜನೆ"ಯು ಆರಂಭಗೊಂಡಿತು. ನಂತರ ಹುಲಿಗಳ ಸಂಖ್ಯೆಯಲ್ಲಿ ಗಮನಾರ್ಹ ವೃದ್ಧಿ ಕಂಡಿತು.

ಕಲೆ: ಕಿಶೋರ್, ಹೆಚ್. ಅರ್.

ಹುಲಿಯು ಮಾಂಸಹಾರಿ ಪ್ರಾಣಿ. ಜಿಂಕೆ, ಕಾಡುಕೋಣ, ಕಾಡುಹಂದಿಗಳನ್ನು ಹಿಡಿದು ಆಹಾರಕ್ಕಾಗಿ ಭಕ್ಷಿಸುವ ಹುಲಿಗಳು ಪ್ರಕೃತಿಯಲ್ಲಿ ಸಮತೋಲನವನ್ನು ಕಾಪಾಡುತ್ತಿವೆ. ಹುಲಿಗಳು ಕೆಲವೊಮ್ಮ ನರಭಕ್ಷಕಗಳಾಗುವುದೂ ಉಂಟು. ಹುಲಿಯು ನಮ್ಮ ರಾಷ್ಟ್ರ ಪ್ರಾಣಿ ಮತ್ತು ಹುಲಿಗಳು ಅರಣ್ಯ, ಮೃಗಾಲಯ, ಬನ್ನೇರುಘಟ್ಟಗಳಲ್ಲಿ ಕಂಡುಬರುತ್ತವೆ.
ಹುಲಿಗಳು ಕಾಡಿನಲ್ಲಿರುವ ಗುಹೆಗಳಲ್ಲಿ ಇರುತ್ತವೆ. ಹುಲಿಯ ಕಾಲಿನಲ್ಲಿ ಚೂಪಾದ ಉಗುರುಗಳಿವೆ ಮತ್ತು ಅದರ ಆಕರ್ಷಕ ವರ್ಣ ವಿನ್ಯಾಸದ ಶರೀರವು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಪ್ರಕೃತಿ ಒದಗಿಸಿರುವ ರಕ್ಷಣಾ ಕವಚ ಎಂದು ಹೇಳಬಹುದು. ಹುಲಿಯನ್ನು ರಾಷ್ಟ್ರ ಪ್ರಾಣಿ ಎಂದು ಘೋಷಿಸಲಾಗಿದೆ. ಪ್ರಕೃತಿಯ ಅತ್ಯಂತ ಸುಂದರವಾದ ಪ್ರಾಣಿ ಹುಲಿ. ಹುಲಿಯ ನೋಟ ಆಕರ್ಷಕ. ಅದರ ಮೈಕಟ್ಟು ಬಲಿಷ್ಠ. ಗಂಡು ಹುಲಿ ಸುಮಾರು 5 ಅಡಿ ಎತ್ತರವಿದ್ದು, 14 ಅಡಿ ಉದ್ದವಿರುತ್ತದೆ. ತೂಕ 250 ಕೆ.ಜಿ.ಗಳ ತನಕ ಇರುತ್ತದೆ.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಕಿಶೋರ್, ಹೆಚ್. ಆರ್.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ