|
ಕಲೆ : ಮಾಸ್ಟರ್. ಧನುಷ್, ಪಿ. |
ಧ್ವಜವು ಒಂದು ರಾಷ್ಟ್ರದ ಲಾಂಛನ. ಇದು ಸ್ವಾತಂತ್ರ್ಯ, ದೇಶ ಪ್ರೇಮ, ಒಗ್ಗಟ್ಟು ಹಾಗೂ ನಿಷ್ಠೆಯ ಪ್ರತೀಕವಾಗಿದೆ. ನಮ್ಮ ರಾಷ್ರ ಧ್ವಜವು ತ್ರಿವರ್ಣಗಳಿಂದ ಕೂಡಿದೆ. ಮೇಲೆ ಕೇಸರಿ, ನಡುವೆ ಬಿಳಿ ಮತ್ತು ಕೆಳಗೆ ಹಸಿರು ಮೂರು ಬಣ್ಣಗಳಿವೆ. ಕೇಸರಿಯು ಧೈರ್ಯದ, ಬಿಳಿಯು ಶಾಂತಿಯ ಮತ್ತು ಹಸಿರು ಸಮೃದ್ಧಿಯ ಸಂಕೇತ. ಮಧ್ಯೆ ಇರುವ ಅಶೋಕ ಚಕ್ರವು 24 ಗೆರೆಗಳನ್ನು ಹೊಂದಿದ್ದು, ನೀಲಿ ಬಣ್ಣದ ಚಕ್ರ. ಇದನ್ನು ಸಾರಾನಾಥದಲ್ಲಿರುವ ಅಶೋಕ ಸ್ಥಂಭದಿಂದ ಆಯ್ಕೆ ಮಾಡಲಾಗಿದೆ. ಇದು ದಿನದ 24 ಘಂಟೆಗಳನ್ನು ಪ್ರತಿನಿಧಿಸುತ್ತದೆ ಹಾಗೂ ದೇಶದ ಪ್ರಗತಿಯ ದ್ಯೋತಕವಾಗಿದೆ. ನೀಲಿ ಬಣ್ಣವು ನೀಲಿ ಸಾಗರ, ನೀಲಾಕಾಶದ ಹಾಗೂ ಮನೋವೈಶಾಲ್ಯದ ಪ್ರತೀಕ. ಈ ಚಕ್ರವು ಚಲನಶೀಲತೆ ಮತ್ತು ಬೌದ್ಧ ಧರ್ಮಕ್ಕೆ ಶರಣಾದ ರಾಜ ಅಶೋಕನ ಶಾಂತಿ ಮಂತ್ರವನ್ನು ಸಂಕೇತಿಸುತ್ತದೆ.
ತಿರಂಗ ಎಂದು ಕರೆಯಲ್ಪಡುವ, ಈಗ ಬಳಸಲ್ಪಡುತ್ತಿರುವ ರಾಷ್ಟ್ರ ಧ್ವಜವು ಜುಲೈ 22, 1947 ರಂದು ಶಾಸನ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಇದು ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ನ ಧ್ವಜ ರಚನೆಯನ್ನು ಆಧರಿಸಿ ವೆಂಕಯ್ಯನವರಿಂದ ಮಾಡಲ್ಪಟ್ಟಿತು. ಇದು ನಮ್ಮ ಸೇನಾ ಧ್ವಜವೂ ಆಗಿದೆ. ಯಾರೂ ರಾಷ್ರ ಧ್ವಜವನ್ನು ತುಳಿಯಬಾರದು. ಧ್ವಜದ ಸಂಕೇತವೂ ಬಹಳ ಮಹತ್ವದ್ದು. ರಾಷ್ಟ್ರ ಧ್ವಜವು ಸ್ವಾತಂತ್ರ್ಯ ಸೂಚಿಸುತ್ತದೆ.
(
ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ |
| ಮಾಸ್ಟರ್. ಧನುಷ್, ಪಿ.
6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ