ಗುರುವಾರ, ನವೆಂಬರ್ 2, 2017

ನಮ್ಮ ಗ್ರಾಮ ಓಬಳಾಪುರ

ನಮ್ಮ ಗ್ರಾಮದಲ್ಲಿ ಎಂ. ಎಲ್. ಎ. ಶ್ರೀನಿವಾಸಮೂರ್ತಿಯವರ ಮನೆಯಿದೆ. ನಮ್ಮ ಗ್ರಾಮದಲ್ಲಿ ಗ್ರಾಮದೇವತೆ ಗಂಗಸಂದ್ರಮ್ಮ ನೆಲೆಸಿದ್ದಾರೆ. ಪ್ರತಿ ವರ್ಷ ಈ ದೇವಿಯ ಜಾತ್ರೆ ನಡೆಯುತ್ತದೆ. ನಮ್ಮ ಗ್ರಾಮದ ಜಾತ್ರೆ ತುಂಬಾ ವೈಭವದಿಂದ ನಡೆಯುತ್ತದೆ. ಜಾತ್ರೆಯಲ್ಲಿ ಕೆಂಡದ ಮೇಲೆ ನಡೆಯುತ್ತಾರೆ. ಆರತಿ ಹೊರುತ್ತಾರೆ, ನಾನೂ ಆರತಿ ಹೊರುತ್ತೇನೆ. ನಮ್ಮ ಗ್ರಾಮದಲ್ಲಿ ಹಳೆಯ ಕಾಲದ ಲಕ್ಷ್ಮಿ ದೇವಾಲಯವಿದೆ. ಅದರ ಆವರಣದಲ್ಲಿ ಕಲ್ಯಾಣಿ ಇದೆ. ನಮ್ಮ ಗ್ರಾಮದಲ್ಲಿ ಕಲ್ಯಾಣಿಯಲ್ಲಿ ತಾವರೆ ಹೂ ಬಿಟ್ಟಿದೆ. ನಮ್ಮ ಗ್ರಾಮದಲ್ಲಿ ಗಾಂಧಮ್ಮ ದೇವಾಲಯವಿದೆ. ಇದರೊಂದಿಗೆ ಆಂಜನೇಯ ದೇವಾಲಯ, ವೆಂಕಟಸ್ವಾಮಿ ದೇವಾಲಯ ಮತ್ತು ಈಶ್ವರ ದೇವಾಲಯಗಳಿವೆ. ನಮ್ಮ ಗ್ರಾಮದಲ್ಲಿ ಹಲವಾರು ಕೆರೆಗಳಿವೆ. ನಮ್ಮ ಗ್ರಾಮದಲ್ಲಿ ಅರಳಿ ಮರ ಇದೆ. ನಮ್ಮ ಗ್ರಾಮದಲ್ಲಿ ಗಣೇಶನನ್ನು ಕೂರಿಸಿದ್ದಾಗ ಊಟದ ವ್ಯವಸ್ಥೆ ಮಾಡಿಸಿದ್ದರು.

ನಮ್ಮ ಗ್ರಾಮದಲ್ಲಿ ಶಾಲೆ ಇದೆ. ನಮ್ಮ ಗ್ರಾಮದ ಶಾಲೆಯಲ್ಲಿ ಕುಡಿಯುವ ನೀರಿನ ಘಟಕ ಇದೆ. ಶಾಲೆಯಲ್ಲಿ ಉತ್ತಮವಾದ ಮೈದಾನವಿದೆ. ನಮ್ಮ ಗ್ರಾಮದ ಶಾಲೆಯ ಆವರಣದಲ್ಲಿ ಅನೇಕ ಬಳ್ಳಿಗಳು, ಗಿಡಮರಗಳನ್ನು ನೆಟ್ಟಿದ್ದಾರೆ. ನಮ್ಮ ಗ್ರಾಮದ ಶಾಲೆಯಲ್ಲಿ ಗ್ರಂಥಾಲಯವಿದೆ. ನಮ್ಮ ಗ್ರಾಮದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಉಚಿತವಾಗಿ ತಟ್ಟೆ, ಲೋಟ, ಪೆನ್ನು, ಬುಕ್ ಕೊಡುತ್ತಾರೆ. ನಮ್ಮ ಗ್ರಾಮದ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು 6ನೇ ತರಗತಿ ಹುಡುಗ ವೀರಗಾಸೆಯನ್ನು ಆಡಿದನು. ನಮ್ಮ ಗ್ರಾಮದ ಶಾಲೆಯಲ್ಲಿ ರುಚಿರುಚಿಯಾದ ಅಡುಗೆಯನ್ನು ಮಾಡುತ್ತಾರೆ. ನಮ್ಮ ಗ್ರಾಮದ ಶಾಲೆಯಲ್ಲಿ ಪ್ರತಿವರ್ಷಕ್ಕೊಮ್ಮೆ ಪ್ರತಿಭಾ ಕಾರಂಜಿ ನಡೆಯುತ್ತದೆ. ನಮ್ಮ ಗ್ರಾಮದ ಶಾಲೆಗೆ ಎಷ್ಟೋ ವಿದ್ಯಾರ್ಥಿಗಳು ಯಾವಯಾವ ಊರಿನಿಂದಲೋ ಶಾಲೆಗೆ ಬರುತ್ತಾರೆ. ನಮ್ಮ ಗ್ರಾಮದ ಶಾಲೆಯಲ್ಲಿ ವಾಲ್ಮೀಕಿ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಿದರು.

ನಮ್ಮ ಗ್ರಾಮದಲ್ಲಿ ಆಶಾ ಕಾರ್ಯಕರ್ತರು ಇದ್ದಾರೆ. ನಮ್ಮ ಗ್ರಾಮದಲ್ಲಿ ಅಂಗನವಾಡಿ ಇದೆ. ಅದರಲ್ಲಿ ಸಣ್ಣ ಪುಟ್ಟ ಮುದ್ದಾದ ಮಕ್ಕಳಿದ್ದಾರೆ.

ನಮ್ಮ ಗ್ರಾಮದಲ್ಲಿ ಅನೇಕ ರೈತರಿದ್ದಾರೆ. ನಮ್ಮ ಗ್ರಾಮದಲ್ಲ್ಲಿ ಎಷ್ಟೋ ಮನೆಗಳಿವೆ. ನಮ್ಮ ಗ್ರಾಮದಲ್ಲಿ ಹಾಲಿನ ಡೈರಿಯಿದೆ. ನಮ್ಮ ಗ್ರಾಮದಲ್ಲಿ ಹೆಂಗಸರು ಸಂಘವನ್ನು ನಿರ್ಮಿಸಿದ್ದಾರೆ. ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಇದೆ. ನಮ್ಮ ಗ್ರಾಮದಲ್ಲಿ ದಿನವೂ ನೀರು ಬಿಡುತ್ತಾರೆ. ನಮ್ಮ ಗ್ರಾಮದಲ್ಲಿ ಉತ್ತಮವಾದ ಚರಂಡಿಯನ್ನು ಮಾಡುತ್ತಿದ್ದಾರೆ. ನಮ್ಮ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಶೌಚಾಲಯವಿದೆ. ಗ್ರಾಮದಲ್ಲಿ ಸಣ್ಣಪುಟ್ಟ ತಿನಿಸು ಅಂಗಡಿಗಳಿವೆ. ನಮ್ಮ ಗ್ರಾಮದಲ್ಲಿ ಕಟಿಂಗ್ ಅಂಗಡಿ ಇದೆ. ನಮ್ಮ ಗ್ರಾಮದಲ್ಲಿ ಬ್ಯಾಂಕ್ ಇದೆ. ನಮ್ಮ ಗ್ರಾಮದಲ್ಲಿ ಬಸ್ ನಿಲ್ದಾಣವಿದೆ. ನಮ್ಮ ಗ್ರಾಮದಲ್ಲಿ ಸ್ವಲ್ಪ ದೂರ ಹೋದರೆ ರೇಲ್ವೆ ನಿಲ್ದಾಣವಿದೆ. ನಮ್ಮ ಪಕ್ಕದ ಗ್ರಾಮ ಮಣ್ಣೆಯಲ್ಲಿ ಗಂಗರು ಆಳುತ್ತಿದ್ದ ಮನೆತನವಿದೆ.

ಒಟ್ಟಾರೆ ನಮ್ಮ ಗ್ರಾಮ ನೋಡಲು ತುಂಬಾ ಸೊಗಸಾಗಿದೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಧನು, ಎನ್.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ