ಶನಿವಾರ, ನವೆಂಬರ್ 4, 2017

ನೆಲಮಂಗಲ ತಾಲ್ಲೂಕು

ನೆಲಮಂಗಲ ತಾಲ್ಲೂಕಿನ ಬಗ್ಗೆ ಬರೆಯುತ್ತಿದ್ದೇನೆ.

ನೆಲಮಂಗಲ ತಾಲ್ಲೂಕಿನಲ್ಲಿ ಮೂರು ಹೋಬಳಿಗಳಿವೆ. ನಮ್ಮ ತಾಲ್ಲೂಕಿನಲ್ಲಿ ಪ್ರಮುಖ ದೇವಾಲಯಗಳಿವೆ. ನಮ್ಮ ಕ್ಷೇತ್ರದ ಶಾಸಕರು ಡಾ. ಕೆ. ಶ್ರೀನಿವಾಸಮೂರ್ತಿ ಮತ್ತು ತಾಲ್ಲೂಕಿನ ಪರಿಸರ ಚೆನ್ನಾಗಿದೆ. ನಮ್ಮ ತಾಲ್ಲೂಕಿನಲ್ಲಿ ಶಾಲೆಗಳು ಇವೆ. ತಾಲ್ಲೂಕಿನಲ್ಲಿ ಪೋಲೀಸ್ ಠಾಣೆ ಇದೆ. ನಮ್ಮ ತಾಲ್ಲೂಕಿನಲ್ಲಿ ಅಂಚೆ ಕಛೇರಿ ಇದೆ. ನಮ್ಮ ನೆಲಮಂಗಲ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಾರೆ. ಉತ್ತಮ ಪ್ರವಾಸಿ ತಾಣಗಳು ಮತ್ತು ದೇವಾಲಯಗಳನ್ನು ಹೊಂದಿದೆ. ಶಿವಗಂಗೆ ಮಠ ಅಂತಹ ತಾಣಗಳನ್ನು ಹೊಂದಿದ್ದು, ಮಣ್ಣಿ ಅಥವಾ ಮಾನ್ಯಪುರ ನಮ್ಮ ತಾಲ್ಲೂಕಿನಲ್ಲಿ ಹೆಮ್ಮೆಯ ತಾಣವಾಗಿದೆ. ಇದು ಗಂಗರಸರ ರಾಜಧಾನಿ ಎಂಬುದು ಪ್ರತೀತಿ.

ನಮ್ಮ ತಾಲ್ಲೂಕಿನಲ್ಲಿ ಸುಮಾರು ಐದು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುತ್ತವೆ. ಈ ಬಾರಿ ನಮ್ಮ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯಾಗಿದೆ. ನಮ್ಮ ತಾಲ್ಲೂಕು ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿದ್ದು, ಎಲ್ಲಾ ಸಂಪರ್ಕಗಳಿಗೆ ಉತ್ತಮವಾಗಿದೆ. ಉದಾಹರಣೆಗೆ: ರೈಲ್ವೆ ಸಂಪರ್ಕ, ರಸ್ತೆ ಮಾರ್ಗಗಳು, ವಿಮಾನ ಯಾನ. ರಾಜಕೀಯವಾಗಿ ನಮ್ಮ ತಾಲ್ಲೂಕಿನ ವಿಧಾನಸಭೆಯಲ್ಲಿ ಈ ಬಾರಿ ನಮ್ಮ ಕ್ಷೇತ್ರದ ಎಂ. ಎಲ್. ಎ., ಡಾ. ಕೆ. ಶ್ರೀನಿವಾಸಮೂರ್ತಿ ಯವರಾಗಿರುತ್ತಾರೆ. ವಿಧಾನ ಪರಿಷತ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸೇರಿರುತ್ತದೆ. ವಿಧಾನ ಪರಿಷತ್ ಎಂ. ಎಲ್. ಎ. ಯಾಗಿ ಡಾ. ವೀರಪ್ಪ ಮೊಯ್ಲಿ ರವರು ಚುನಾಯಿತರಾಗಿರುತ್ತಾರೆ. ನಮ್ಮ ತಾಲ್ಲೂಕು ಉತ್ತಮ ಕೈಗಾರಿಕಾ ಘಟಕಗಳನ್ನು ಹೊಂದಿದೆ. ನಮ್ಮ ತಾಲ್ಲೂಕು ಸುಮಾರು ಏಳು ಪೋಲೀಸ್ ಠಾಣೆಗಳನ್ನು ಹೊಂದಿರುತ್ತದೆ. ನಮ್ಮ ತಾಲ್ಲೂಕಿನ ಸಮೀಪ ಕೋರ್ಟು, ತಾಲ್ಲೂಕು ಕಛೇರಿ, ತಾಲ್ಲೂಕು ಜಲಮಂಡಳಿ ಇತ್ಯಾದಿ ಸರ್ಕಾರಿ ಕಛೇರಿಗಳು ಇರುತ್ತವೆ.

ನಮ್ಮ ತಾಲ್ಲೂಕಿನ ಬಗ್ಗೆ ನಮಗೆ ಹೆಮ್ಮೆ ಇದೆ.

ಇಂತಿ ನಿಮ್ಮ ಪ್ರೀತಿಯ,
ಕುಮಾರಸ್ವಾಮಿ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಕುಮಾರಸ್ವಾಮಿ

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ