ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಅನಂತರಾಮಯ್ಯ ಸರ್.
ಅವರು ನಮಗೆ ಕನ್ನಡ ಪಾಠ ಮತ್ತು ವ್ಯಾಕರಣಗಳನ್ನು, ಗೊತ್ತಾಗದಿದ್ದನ್ನು ಹೇಳಿಕೊಡುತ್ತಾರೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದುದರಿಂದ ಅವರು ಜೆ.ಸಿ.ಬಿ.ಯನ್ನು ತರಿಸಿ ದೊಡ್ಡದಾಗಿ ಗುಂಡಿಯನ್ನು ತೆಗೆಸಿದರು. ಮುಳ್ಳುಗಿಡ, ಕಾಂಗ್ರೆಸ್ ಗಿಡಗಳನ್ನು ಜೆ. ಸಿ. ಬಿ. ಯಿಂದ ತೆಗೆಸಿದರು.
ನಮ್ಮ ಶಾಲೆಯ ಒಳಗಿನ ಮತ್ತು ಹೊರಗಿನ ಪರಿಸರವನ್ನು ಸ್ವಚ್ಛವಾಗಿ ಇರಿಸುವ ವ್ಯವಸ್ಥೆ ಮಾಡಿದ್ದಾರೆ. ಅವರು ಗಿಡಗಳನ್ನು ನೆಡಲು ಅನೇಕ ಗುಂಡಿಗಳನ್ನು ತೋಡಿಸಿ, ಅದಕ್ಕೆ ಗೊಬ್ಬರ ಹಾಕಿಸಿದರು ಮತ್ತು ಗಿಡಗಳನ್ನು ನೆಡಿಸಿದರು. ಅವರು ಶೌಚಾಲಯವನ್ನು ಕಟ್ಟಿಸಿದರು.
ನಮ್ಮ ಶಾಲೆಗೆ ಬಂದ ಮುಖ್ಯೋಪಾಧ್ಯಾಯರಾದ ಅನಂತರಾಮಯ್ಯ ಸರ್ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಿದರು. ಒಂದೊಂದು ಗಿಡವನ್ನು ಒಬ್ಬೊಬ್ಬ ವಿದ್ಯಾರ್ಥಿಗೆ ವಹಿಸಿ, ಅದಕ್ಕೆ ನೀರು, ಗೊಬ್ಬರ, ಅದರ ಪೋಷಣೆಯನ್ನು ಅವರಿಗೆ ವಹಿಸಿದರು. ಅನೇಕ ತರಕಾರಿಗಳನ್ನು ಬೆಳೆಸಿ ಶಾಲೆಯ ಅಡುಗೆಗೆ ಅದನ್ನು ಉಪಯೋಗಿಸಲು ಹೇಳಿದರು. ದೊಡ್ಡ ದೊಡ್ಡ ಮರದ ತುಂಡುಗಳನ್ನು ತೆಗೆಸಿ ಗಿಡಗಳನ್ನು ನೆಡಿಸಿದರು. ಶಾಲೆಯಲ್ಲಿ ಅನೇಕ ಹಬ್ಬಗಳನ್ನು ಮತ್ತು ದಿನಾಚರಣೆಗಳನ್ನು ನಾವೆಲ್ಲರೂ ಒಂದಾಗಿ ಸಡಗರದಿಂದ ಆಚರಿಸುವಂತೆ ವ್ಯವಸ್ಥೆ ಮಾಡಿದ್ದಾರೆ.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ | |
ಮಾಸ್ಟರ್. ಕೃಪಾಕರ 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ