ಕಹಳೆ ತಂಡ

'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ನಾಣ್ನುಡಿಯಂತೆ, ಕನ್ನಡಿಗರೆಲ್ಲರೂ ಒಟ್ಟಾಗಿ 'ಕಹಳೆ'ಯನ್ನು ಬೆಳಸಬೇಕಾಗಿದೆ. ಪ್ರತಿಯೊಬ್ಬ ಹೆಮ್ಮೆಯ ಕನ್ನಡಿಗರಿಗೂ ಕಹಳೆ ತಂಡವನ್ನು ಸೇರಿಕೊಳ್ಳಲು ತುಂಬುಹೃದಯದ ಆತ್ಮೀಯ ಸ್ವಾಗತ.ಪ್ರಸ್ತುತ ನಮ್ಮ ಕಹಳೆ ತಂಡ:
ಪ್ರಶಾಂತ್ ಜಚಿ

ಹುಟ್ಟಿ ಬೆಳೆದದ್ದು ಉದ್ಯಾನನಗರಿ ಬೆಂಗಳೂರಿನಲ್ಲಿ, ವೃತ್ತಿ-ಪ್ರವೃತ್ತಿಗಳ ಸಂಘರ್ಷ-ಸಮಾಗಮವೇ ನನ್ನ ಜೀವನದ ಸಾರ-ಸತ್ವ.

'ಎಲ್ಲಾದರೂ ಇರು, ಎಂತಾದರೂ ಇರು; ಎಂದೆಂದಿಗೂ ನೀ ಕನ್ನಡವಾಗಿರು' - ರಾಷ್ಟ್ರಕವಿ ಕುವೆಂಪುರವರ ಈ ಮಾತುಗಳು ನನ್ನ ಅಂತರಂಗದಲ್ಲಿ ಅಚ್ಚಾಗಿಹೋಗಿ, 'ಕಹಳೆ'ಯ ಹುಟ್ಟಿಗೆ ನಾಂದಿ ಹಾಡಿವೆ..

Blog | Facebook | TwitterGururaja V
ಗುರುರಾಜ ವಿ.

ಎಲ್ಲರಿಗೂ ನಮಸ್ಕಾರ..
ನನ್ನ ಹೆಸರು ಗುರುರಾಜ. ನಾನು ವೃತ್ತಿಯಲ್ಲಿ ಗಣಕಯಂತ್ರ ನಿರ್ವಾಹಕ, ಪ್ರವೃತ್ತಿ ಹಲವು; ಕನ್ನಡದಲ್ಲಿ ಬ್ಲಾಗ್ ಬರೆಯುವುದೂ ಕೂಡಾ ಒಂದು. ಇಲ್ಲಿ ಕನ್ನಡದ ಕಹಳೆ ಬಾರಿಸೋಣ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಂತ ಅಗತ್ಯ.
ಈ ಕನ್ನಡದ ಕಹಳೆಯನ್ನು ನೀವು ಊ(ಓ)ದುತ್ತೀರಲ್ಲವೇ?

Blog | Facebook | TwitterDr. Chennakeshavamurthy
ಡಾ. ಕೆ. ಎಂ. ಚೆನ್ನಕೇಶವಮೂರ್ತಿ

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕನಾಗಿ, ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

ಕನ್ನಡದ ಅಚಲ ಅಭಿಮಾನಿ ಹಾಗೂ ಅನುಯಾಯಿಯಾಗಿದ್ದು, ಕನ್ನಡ ನಾಡು-ನುಡಿಯ ಏಳಿಗೆಗೆ ಸದಾ ದುಡಿಯುವ ಕಹಳೆಯ ಒಬ್ಬ ಸಕ್ರಿಯ ಸದಸ್ಯ.

Blog | Facebook | TwitterShivakumara B. S.
ಶಿವಕುಮಾರ ಬಿ. ಎಸ್.

ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಗ್ರಾಮೀಣ ಭಾಗದಲ್ಲಿ ಲಭ್ಯವಿದ್ದ ಅಲ್ಪ-ಸ್ವಲ್ಪ ಶಿಕ್ಷಣವನ್ನೇ ಸಮರ್ಪಕವಾಗಿ ಬಳಸಿಕೊಂಡು, ನಗರ ಪ್ರದೇಶದವರೊಡನೆ ಸ್ಪರ್ಧೆ ನಿಡುವ ಸಾಮರ್ಥ್ಯವನ್ನು ಗಳಿಸಿರುವುದಕ್ಕೆ ನನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇದು ಅಹಂ ಅಲ್ಲ, ಆತ್ಮವಿಶ್ವಾಸ.

ಪ್ರತಿಯೊಬ್ಬ ಜನ-ಸಾಮಾನ್ಯನಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲು ನನ್ನ ಕೈಲಾದ ಅಳಿಲು ಸೇವೆ ಮಾಡಬೇಕೆಂಬ ಹಂಬಲವಿದೆ. ಕೊನೆಯ ಪಕ್ಷ ನಮ್ಮೂರಿನ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಯಾವುದಾದರೊಂದು ಒಳ್ಳೆಯ ಕೆಲಸ ಮಾಡಬೇಕೆಂಬ ಆಸೆಯಿದೆ.

Blog | Facebook | TwitterVivekanand V.
ವಿವೇಕಾನಂದ್ ವಿ.

ಓದಿ, ಬೆಳೆದದ್ಧು ಬೆಂಗಳೂರಿನಲ್ಲಿ, ಕೆಲಸ ಮಾಡುವುದು ಮಹಿತಿ ತಂತ್ರಜ್ಞಾನದಲ್ಲಿ. ನನ್ನ ಜೀವನವನ್ನು ಸುಗಮವಾಗಿ ಸಾಗಿಸಲು ನೆರವಾಗಿರುವ ನಮ್ಮ ರಾಜ್ಯ ಹಾಗೂ ಕನ್ನಡ ಭಾಷೆಗಾಗಿ ನನ್ನ ಕೈಲಾದ ಅಳಿಲು ಸೇವೆ ಮಾಡುವ ಪುಟ್ಟ ಹೆಜೆಯೇ ನನ್ನ ಮತ್ತು ಕನ್ನಡ ಕಹಳೆಯ ಸಂಬಂಧ.

Blog | Facebook | TwitterDr. A. M. Shivakumar
ಡಾ. ಎ. ಎಂ. ಶಿವಕುಮಾರ್

ವೃತ್ತಿಯಲ್ಲಿ ಪಶುವೈದ್ಯನಾಗಿರುವ ನಾನು ಕನ್ನಡಿಗನಾಗಿವುದಕ್ಕೆ ಹೆಮ್ಮೆ ಪಡುತ್ತಾ, ಕನ್ನಡಕ್ಕೆ ಕೈಲಾದ ಕೊಡುಗೆ ನೀಡಲು ಸಾಧ್ಯವಾದಾಗಲೆಲ್ಲಾ ಪ್ರಯತ್ನಿಸುತ್ತಿರುತ್ತೇನೆ; ಹಾಗಾಗಿ ಕಹಳೆ ತಂಡದಲ್ಲಿದ್ದೇನೆ. ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ನನ್ನ ಊರು, ಈಗ ಉದ್ಯೋಗದ ನಿಮಿತ್ತ ಬೆಂಗಳೂರಿನ ಹೆಸರಘಟ್ಟದಲ್ಲಿ ನೆಲೆಸಿದ್ದೇನೆ.

Blog | Facebook | Twitter
ಮುಂದುವರೆಯಲಿದೆ..