ಚಿತ್ರ ಕೃಪೆ: ಗೂಗಲ್ |
ಒಂದು ದಿನ ಮೇಕೆಯೊಂದು ನದಿಯ ದಡದಲ್ಲಿ ಮೇಯುತ್ತಾ ಇತ್ತು. ನದಿಯ ಇನ್ನೊಂದು ತೀರದಲ್ಲಿ ಹುಲ್ಲು ತುಂಬಾ ಹಸಿರಾಗಿರುವುದನ್ನು ನೋಡಿ, ಅದನ್ನು ತಿನ್ನಬೇಕು ಎಂದು ಆಸೆಯಾಯಿತು. ನದಿಯನ್ನು ದಾಟೋದು ಹೇಗೆ? ಎಂದು ಯೋಚಿಸುತ್ತಿರುವಾಗ ಅದಕ್ಕೆ ಒಂದು ಕಿರಿದಾದ ಸೇತುವೆ ಕಾಣಿಸಿತು. "ಆಹಾ.. ಈ ಸೇತುವೆಯ ಮೇಲಿಂದ ನದಿ ದಾಟ್ತೀನಿ.. ಹೋಗಿ ಹಸಿರಾದ ಹುಲ್ಲನ್ನು ತಿಂತೀನಿ.. ಆಹಾ" ಎಂದು ಸಂತಸದಿಂದ ಸೇತುವೆಯ ಮೇಲೆ ಹತ್ತಿ ನಡೆಯತೊಡಗಿತು.
ಅದೇ ಸಮಯಕ್ಕೆ ಸರಿಯಾಗಿ ಸೇತುವೆಯ ಮತ್ತೊಂದು ತುದಿಯಿಂದ ಇನ್ನೊಂದು ಮೇಕೆ ಬರುತ್ತಿತ್ತು. ಎರಡೂ ಮೇಕೆಗಳು ಸೇತುವೆಯ ಮೇಲೆ ಎದುರಾದಾಗ ಆಕಡೆಯಿಂದ ಬಂದ ಮೇಕೆ "ನಾನು ಮೊದಲು ನದಿ ದಾಟಬೇಕು, ದಾರಿ ಬಿಡು.." ಎಂದು ಹೇಳಿತು. ಇದಕ್ಕೆ ಇನ್ನೊಂದು ಮೇಕೆ ಹೇಳಿತು ಸೇತುವೆಯನ್ನು ನಾನು ಮೊದಲು ನೋಡಿ ಅದರ ಮೇಲೆ ಹತ್ತಿದ್ದು, ಅದಕ್ಕೆ ನಾನೇ ಮೊದಲು ಆಕಡೆಗೆ ಹೋಗ್ತೀನಿ".
ಆಗ ಮೊದಲ ಮೇಕೆ ಯೋಚಿಸಿತು. ಅದರ ತಾತ ಹೇಳಿದ ಒಂದು ಕಥೆ ಅದಕ್ಕೆ ನೆನಪಾಯಿತು. ಇದೇ ರೀತಿ ಎರಡು ಮೇಕೆಗಳು ಒಂದಕ್ಕೊಂದು ದಾರಿಬಿಡದೆ ಜಗಳವಾಡಿ ಕೊನೆಗೆ ನದಿಗೆ ಬಿದ್ದು ಮುಳುಗಿಹೋದ್ವು ಅಂತ ಆ ಕಥೆಯಲ್ಲಿತ್ತು.
ಅದಕ್ಕೆ ಮೊದಲ ಮೇಕೆ ಬುದ್ಧಿ ಉಪಯೋಗಿಸಿ ಯೋಚಿಸಿ ಹೇಳಿತು "ಇದು ಜಗಳ ಆಡುವ ಸಮಯ ಅಲ್ಲ. ಬುದ್ಧಿ ಉಪಯೋಗಿಸೋಣ. ನಾನು ಬಗ್ಗಿ ಸೇತುವೆಯ ಮೇಲೆ ಕರ‍್ತೀನಿ.. ನೀನು ನನ್ನ ಮೇಲಿಂದ ಜಿಗಿದು ಇನ್ನೊಂದು ತೀರಕ್ಕೆ ಹೋಗು".
ಮೊದಲನೇ ಮೇಕೆ ಬಗ್ಗಿ ಕುಳಿತುಕೊಂಡಾಗ ಇನ್ನೊಂದು ಮೇಕೆ ಅದರ ಮೇಲಿಂದ ಜಿಗಿದು ಇನ್ನೊಂದು ಬದಿಗೆ ಹೋಯಿತು. ಎರಡನೆಯ ಮೇಕೆ ಹೇಳಿತು "ಧನ್ಯವಾದ ಗೆಳೆಯ.. ನೀನು ತುಂಬಾ ಬುದ್ಧಿವಂತ". ನಂತರ ಎರಡೂ ಮೇಕೆಗಳು ತಮ್ಮ ತಮ್ಮ ದಾರಿಯಲ್ಲಿ ಹೋದವು.
ನೀತಿ: ಅಹಂಕಾರ ಬಿಟ್ಟು ಯೋಚಿಸಿ ಬುದ್ಧಿವಂತಿಕೆಯಿAದ ಕೆಲಸ ಮಾಡಬೇಕು.
ವಿದ್ಯಾರ್ಥಿ ಕಿರುಪರಿಚಯ | |
ಭಾನು ಪ್ರಕಾಶ್, ಎಂ. 10ನೇ ತರಗತಿ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ