ಎಲ್ಲೆಲ್ಲೂ ಉಸಿರಬೇಕು
ನಮ್ಮ ನುಡಿ ಕನ್ನಡ
ಸಿರಿನಾಡನು ಕಟ್ಟಲಿಕ್ಕೆ
ಬರ್ರಿ ನಮ್ಮ ಸಂಗಡ
ನಮ್ಮ ನುಡಿ ಕನ್ನಡ
ಸಿರಿನಾಡನು ಕಟ್ಟಲಿಕ್ಕೆ
ಬರ್ರಿ ನಮ್ಮ ಸಂಗಡ
ಕೈಯ ತುಂಬ ಕೆಲಸ ಬೇಕು
ಬೇಕು ಹೊಟ್ಟೆಗನ್ನ
ಅಕ್ಷರಗಳ ಕನ್ನ ಕೊರೆದು
ಬರಲಿ ಅರಿವು-ಚಿನ್ನ
ಬೇಕು ಹೊಟ್ಟೆಗನ್ನ
ಅಕ್ಷರಗಳ ಕನ್ನ ಕೊರೆದು
ಬರಲಿ ಅರಿವು-ಚಿನ್ನ
ಮೈಯ ತುಂಬ ಬಟ್ಟೆ ಬೇಕು
ನೆತ್ತಿಗೊಂದು ಆಸರ
ಭೂಮಿ ತುಂಬ ಬಿತ್ತಬೇಕು
ತನ್ನ ಬೆಳಕು ನೇಸರ
ನೆತ್ತಿಗೊಂದು ಆಸರ
ಭೂಮಿ ತುಂಬ ಬಿತ್ತಬೇಕು
ತನ್ನ ಬೆಳಕು ನೇಸರ
ತಲೆಯ ತುಂಬ ಬೆಂಕಿ ತುಂಬಿ
ಮಿಂಚಬೇಕು ಕಂಗಳು
ಎದೆಯ ತುಂಬಿ ತುಳುಕಬೇಕು
ಪ್ರೀತಿಯ ಬೆಳದಿಂಗಳು
ಮಿಂಚಬೇಕು ಕಂಗಳು
ಎದೆಯ ತುಂಬಿ ತುಳುಕಬೇಕು
ಪ್ರೀತಿಯ ಬೆಳದಿಂಗಳು
ಇಂಥ ನಾಡು ಕಟ್ಟಬೇಕು
ಬರ್ರಿ ನಮ್ಮ ಸಂಗಡ
ಎಲ್ಲೆಲ್ಲೂ ಮೊಳಗಬೇಕು
ಕನ್ನಡ ಕನ್ನಡ ಕನ್ನಡ
ಬರ್ರಿ ನಮ್ಮ ಸಂಗಡ
ಎಲ್ಲೆಲ್ಲೂ ಮೊಳಗಬೇಕು
ಕನ್ನಡ ಕನ್ನಡ ಕನ್ನಡ
ರಚನೆ: ಚಂದ್ರಶೇಖರ ಪಾಟೀಲ
ವಿದ್ಯಾರ್ಥಿ ಕಿರುಪರಿಚಯ | |
ಬಿಂದು, ಟಿ. ಎಂ. 7ನೇ ತರಗತಿ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ