|
ಚಿತ್ರ ಕೃಪೆ: ಗೂಗಲ್ |
ತಾಜ್ ಮಹಲ್: ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲನ್ನು ಮೊಘಲ್ ದೊರೆ ಷಹಜಹಾನ್ ತನ್ನ ಪ್ರೀತಿಪಾತ್ರಳಾದ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿಸಿದನು. ಭಾರತೀಯ, ಪರ್ಷಿಯಾ ಮತ್ತು ಇಸ್ಲಾಂ ವಾಸ್ತುಶೈಲಿಯ ಅನನ್ಯ ಸಂಯೋಜನೆಯಾಗಿರುವ ಮೊಘಲ್ ವಾಸ್ತುಶಿಲ್ಪ ಶೈಲಿಯ ಅತ್ಯುತ್ತಮ ಉದಾಹರಣೆ ಇದು. ಕ್ರಿ.ಶ. 1632 ರಲ್ಲಿ ತಾಜ್ ಮಹಲ್ ನಿರ್ಮಾಣ ಕಾರ್ಯ ಪ್ರಾರಂಭವಾಗಿ, 1653 ರಲ್ಲಿ ಪೂರ್ಣಗೊಂಡಿತು. ತಾಜ್ ಮಹಲ್ 1983ರಲ್ಲಿ ವಿಶ್ವ ಪರಂಪರೆ ಸ್ಥಳವಾಗಿ ಮಾನ್ಯತೆ ಪಡೆಯಿತು. ಪ್ರಪಂಚದ ಏಳು ವಿಸ್ಮಯಗಳಲ್ಲಿ ತಾಜ್ ಮಹಲ್ ಕೂಡ ಒಂದು.
|
ಚಿತ್ರ ಕೃಪೆ: ಗೂಗಲ್ |
ಚಾರ್ ಮಿನಾರ್: ಸುಪ್ರಸಿದ್ಧ ಐತಿಹಾಸಿಕ ಸ್ಮಾರಕ ಚಾರ್ ಮಿನಾರ್ ಇರುವುದು ಆಂಧ್ರಪ್ರದೇಶದ ಹೈದರಾಬಾದಿನಲ್ಲಿ. ಅಲ್ಲಿ ಕಾಣಿಸಿಕೊಂಡಿದ್ದ ಭೀಕರ ಪ್ಲೇಗ್ ಕಾಯಿಲೆಯು ಕೊನೆಗೊಂಡ ನೆನಪಿಗಾಗಿ 1591 ರಲ್ಲಿ ಮೊಹಮ್ಮದ್ ಖುಲಿ ಕುತುಬ್ ಶಾಯ್ ಮಹಾರಾಜನು ಈ ಸ್ಮಾರಕವನ್ನು ನಿರ್ಮಿಸಿದನು. ಚಾರ್ ಮಿನಾರ್ ಸ್ಮಾರಕವು ಪ್ರಮುಖವಾಗಿ ನಾಲ್ಕು ಮಿನಾರ್‍ಗಳನ್ನು ಒಳಗೊಂಡಿದೆ. ಹೈದರಾಬಾದ್ ನಗರವನ್ನು ಸಾಂಸ್ಕøತಿಕವಾಗಿ ಶ್ರೀಮಂತಗೊಳಿಸುವಲ್ಲಿ ಚಾರ್ ಮಿನಾರ್ ಪಾತ್ರ ಮಹತ್ತರದ್ದಾಗಿದೆ.
|
ಚಿತ್ರ ಕೃಪೆ: ಗೂಗಲ್ |
ಕುತುಬ್ ಮಿನಾರ್: ಕುತುಬ್ ಮಿನಾರ್ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿದೆ. ಈ ಐತಿಹಾಸಿಕ ಸ್ಮಾರಕವನ್ನು ಕ್ರಿ. ಶ. 1199 ರಲ್ಲಿ ಕುತುಬ್ ಉದ್ದೀನ್ ಐಬಕ್ ಪ್ರಾರಂಭಿಸಿದನು. ಈತನ ಉತ್ತರಾಧಿಕಾರಿ ಹಾಗೂ ಅಳಿಯನಾದ ಇಲ್ತುಮಶ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದನು. ಕೆಂಪು ಕಲ್ಲಿನಿಂದ ನಿರ್ಮಿತವಾಗಿರುವ ಈ ಕಟ್ಟಡವು ಐದು ಅಂತಸ್ತಿನದ್ದಾಗಿದೆ ಹಾಗೂ 379 ಮೆಟ್ಟಿಲುಗಳನ್ನು ಹೊಂದಿದೆ. ಕುತುಬ್ ಮಿನಾರ್ ಹೊರಮೈ ಅನೇಕ ಅರಬ್ಬಿ ಹಾಗೂ ನಾಗರಿ ಲಿಪಿಯ ಕೆತ್ತನೆಗಳನ್ನೊಳಗೊಂಡಿದೆ.
ವಿದ್ಯಾರ್ಥಿ ಕಿರುಪರಿಚಯ |
| ಗಜೆಂದ್ರ, ಡಿ. ಎಂ.
7ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.
Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ