ಚಿತ್ರ ಕೃಪೆ: YouTube |
ಒಂದು ದಿನ ಪಕ್ಷಿಯ ಎಡತಲೆ ಬಲತಲೆಯನ್ನು ಕೇಳುತು "ಪ್ರೀತಿಯ ಬಲ ತಲೆಯೇ, ರುಚಿಕರವಾದ ಆಹಾರವನ್ನು ನೀನೇಕೆ ನನಗೂ ಸ್ವಲ್ಪ ತಿನ್ನಲು ಉಳಿಸಬಾರದು? ನಾನೂ ಕೂಡ ಅದರ ರುಚಿಯನ್ನು ನೋಡಿದಂತಾಗುತ್ತದೆ". ಇದಕ್ಕೆ ಬಲ ತಲೆಯು ಹೇಳುತು "ಅದರಲ್ಲೇನಿದೆ ಎಡ ತಲೆಯೆ? ಇಬ್ಬರೂ ತಿನ್ನುವ ಆಹಾರವು ಒಂದೇ ಹೊಟ್ಟೆಗೆ ತಾನೇ ಹೋಗುವುದು? ನೀನು ಸಾಮಾನ್ಯವಾದ ಆಹಾರವನ್ನೇ ತಿನ್ನು". ಎಡ ತಲೆಗೆ ಬಹಳ ಬೇಸರವಾಯಿತು.
ಅದು ಬರಗಾಲ, ಆಹಾರ ವಿರಳವಾಗಿ ಸಿಗುತ್ತಿತ್ತು. ಯಾವ ಪ್ರಾಣಿಯೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಎರಡು ತಲೆಯ ಪಕ್ಷಿಯು ಒಂದು ಕಾಡು ಮರದಲ್ಲಿ ಕೆಲವು ಹಣ್ಣುಗಳನ್ನು ಕಂಡು ಅಲ್ಲಿಗೆ ಹಾರಿತು. ಬಲ ತಲೆಗೆ ಹಸಿವೆಯಷ್ಟೇ ಗೊತ್ತಾಗುತ್ತಿತ್ತು. ಅದು ಇನ್ನೇನು ಹಣ್ಣನ್ನು ತಿನ್ನಬೇಕು ಎನ್ನುವಷ್ಟರಲ್ಲಿ ಎಡ ತಲೆಯು ತಡೆದು ಹೇಳುತು "ನಿಲ್ಲು ಬಲತಲೆಯೇ, ನೀನು ನಮ್ಮನ್ನು ಕೊಲ್ಲುತ್ತೀಯೆ.. ಈ ಹಣ್ಣು ವಿಷಕಾರಿ. ಮರದ ಕೆಳಗೆ ನೋಡು, ಅಲ್ಲಿ ಅನೇಕ ಪ್ರಾಣಿಗಳ ಮೂಳೆಗಳು ಬಿದ್ದಿವೆ". ಬಲ ತಲೆಯು ಕೆಳಗೆ ಬಗ್ಗಿ ನೋಡಿತು, ವಿಷಕಾರಿ ಹಣ್ಣು ತಿಂದು ಸತ್ತಿರುವ ಅನೇಕ ಪ್ರಾಣಿಗಳ ಮೂಳೆಗಳು ಕಾಣಿಸಿದವು. ಎಡತಲೆಯು ಮಾಡಿದ ಉಪಕಾರವನ್ನು ಕಂಡು ಅದಕ್ಕೆ ತನ್ನ ಸ್ವಾರ್ಥ ಬುದ್ಧಿಯ ಬಗ್ಗೆ ಲಜ್ಜೆಯುಂಟಾಯಿತು.
ಅಂದಿನಿಂದ ಬಲ ತಲೆಯು ಎಲ್ಲಾ ಆಹಾರಗಳನ್ನು ಎಡ ತಲೆಯೊಂದಿಗೆ ಸಮವಾಗಿ ಹಂಚಿಕೊಳ್ಳಲು ಪ್ರಾರಂಭಿಸಿ, ಎರಡೂ ತಲೆಗಳು ಸಂತಸದಿಂದ ಇದ್ದವು.
ನೀತಿ: ಪಕ್ಷಪಾತವು ನೋವನ್ನು ಕೊಡುತ್ತದೆ.
ವಿದ್ಯಾರ್ಥಿ ಕಿರುಪರಿಚಯ | |
ಜ್ಞಾನೇಶ್, ವಿ. 10ನೇ ತರಗತಿ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ