ಸೋಮವಾರ, ನವೆಂಬರ್ 25, 2019

ಡೊಳ್ಳು ಕುಣಿತ

ಕೃಪೆ: YouTube

ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮೀಸಲಾದ ಕಲೆ. ಒಳ್ಳೆಯ ಮೈಕಟ್ಟು ಮತ್ತು ಶಕ್ತಿಯುಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳು ಕುಣಿತ, ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಪ್ರಸಿದ್ಧವಾಗಿದೆ.

ಡೊಳ್ಳು ಕುಣಿತ ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂದು ಹೆಸರು.

ಇತಿಹಾಸ: ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕøತಿ ಹಾಗೂ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳು ವಾದ್ಯದ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಢಿಯಲ್ಲಿದ್ದು, ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುವಂತೆ ಮಾಡುತ್ತವೆ. ಅವುಗಳಲ್ಲಿ ಒಂದು ಕತೆಯ ಪ್ರಕಾರ, ಡೊಳ್ಳಾಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ, ಅವನು ತನ್ನ ಹೊಟ್ಟೆಯಲ್ಲಿಯೇ ನೆಲೆಸಬೇಕೆಂದು ವರ ಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖತಪ್ತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕವು. ವಿಷ್ಣು ಡೊಳ್ಳಾಸುರನ ಹೊಟ್ಟೆಯನ್ನೇ ವಾದ್ಯವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಭಿಸಿದ. ಶಿವನು ಆ ವಾದ್ಯದ ದನಿಗೆ ರಕ್ಕಸನ ಹೊಟ್ಟೆಯಿಂದ ಹೊರಬಂದ.

ತಲತಲಾಂತರದಿಂದ ದೈವ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನಾ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಡೊಳ್ಳು ಕುಣಿತವನ್ನು ಒಂದು ಮುಖ್ಯ ಕಲೆಯಾಗಿ ಗುರುತಿಸಲಾಗುತ್ತದೆ..

ವಿದ್ಯಾರ್ಥಿ ಕಿರುಪರಿಚಯ
ನೇಹಾ, ಎಸ್. ಎ.

8ನೇ ತರಗತಿ
ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ,
ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಜಾನಪದ ಕುಣಿತ ಡೊಳ್ಳು ಕುಣಿತ ಕರುನಾಡಿನ ಹೆಮ್ಮಯ ಕಲೆ.
    ಇಂದಿನ ಜಾಗತೀಕರಣದ ದಿನಗಳಲ್ಲಿ ದೇಸಿ ಜನಪದ ಪರಂಪರೆ ಡೊಳ್ಳು ಕುಣಿತ ಮರೆಯಬಾರದು.
    ಡೊಳ್ಳು ಕುಣಿತದವರು ಈ ಡೊಳ್ಳು ಕಲಿಕೆಯಿಂದ ಮಾನಸಿಕವಾಗಿ ,ದೈಹಿಕವಾಗಿ ಸದೃಢರಾಗಿರುತ್ತಾರೆ. ಆರ್ಥಿಕವಾಗಿಯೂ ಡೊಳ್ಳು ಕುಣಿತದ ಅವರಿಗೆ ಸಾಕಷ್ಟು ಅನುಕೂಲವಾಗಿದೆ.
    GOOD, KEEP IT UP ನೇಹಾ ಎಸ್ ಎ

    ಪ್ರತ್ಯುತ್ತರಅಳಿಸಿ
  2. DOLLU KUNITHA IS A MAJOR POPULAR DRUM DANCE OF KARNATAKA. ACCOMPANIED BY SINGING, IT PROVIDES SPECTACULAR VARIETY AND COMPLEXITY OF SKILLS.
    GOOD BRIGHT FUTURE NEHA S A

    ಪ್ರತ್ಯುತ್ತರಅಳಿಸಿ