ದಟ್ಟವಾದ ಕಾಡಿನಲ್ಲಿ ಒಂದು ಹರಿಣಿ ಮತ್ತು ಒಂದು ಜಿಂಕೆ ಇದ್ದವು. ಅವೆರಡೂ ಒಂದು ಅದ್ಭುತ ಜೋಡಿ! ಒಂದನ್ನೊಂದು ಆಳವಾಗಿ ಪ್ರೀತಿಸುತ್ತಿದ್ದವು ಹಾಗೂ ಒಬ್ಬರಿಗೊಬ್ಬರು ಬಹಳ ಅನ್ಯೂನ್ಯವಾಗಿದ್ದವು. ಅವುಗಳ ಜೀವನವು ಸಂತಸಮಯವಾಗಿತ್ತು.
ಚಿತ್ರ ಕೃಪೆ: ಗೂಗಲ್ |
ಒಂದು ದಿನ ಜಿಂಕೆಯು ಬೇಟೆಗಾರನೊಬ್ಬ ಹಾಕಿದ್ದ ಬಲೆಯಲ್ಲಿ ಸಿಕ್ಕಹಾಕಿಕೊಂಡಿತು. ಅದು ಹರಿಣಿಯನ್ನು ಎಚ್ಚರಿಸಿತು "ಪ್ರಿಯ ಮಡದಿಯೇ, ನೀನು ಇಲ್ಲಿಗೆ ಬರಬೇಡ. ಬಂದರೆ ನೀನೂ ಕೂಡ ಸಿಕ್ಕಿಹಾಕಿಕೊಳ್ಳುವೆ". ಆದರೂ ಹರಿಣಿಯು ತನ್ನ ಗಂಡನನ್ನು ಬಿಡಲಿಲ್ಲ, ಅಲ್ಲಿಯೇ ಇತ್ತು.
ಬೇಟೆಗಾರನು ಜಿಂಕೆಯನ್ನು ಹಿಡಿಯಲು ಅಲ್ಲಿಗೆ ಬೇಗಬೇಗನೆ ಬಂದನು. ಹರಿಣಿಯನ್ನು ಜಿಂಕೆಯ ಹತ್ತಿರ ಕಂಡು ಬೇಟೆಗಾರನಿಗೆ ಆಶ್ಚರ್ಯವಾಯಿತು. ಬೇಟೆಗಾರನನ್ನು ನೋಡಿದ ಹರಿಣಿಯು ಕೀರಲು ಧ್ವನಿಯಲ್ಲಿ ಬೇಟೆಗಾರನಿಗೆ ಹೇಳಿತು "ಬೇಟೆಗಾರನೇ, ನಿನಗೆ ನಿಜವಾಗಿಯೂ ಬೇಕಾದರೆ ನನ್ನ ಗಂಡನ ಬದಲು ನನ್ನನ್ನು ಕೊಲ್ಲು. ನಾನು ಅವನಿಲ್ಲದೆ ಇರಲಾರೆ". ಇದನ್ನು ಕೇಳಿದ ಜಿಂಕೆಯು ಹೇಳಿತು "ಹೇ ಬೇಟೆಗಾರನೇ, ನನ್ನನ್ನು ಮೊದಲು ಕೊಂದುಹಾಕು. ನಾನು ನನ್ನ ಹೆಂಡತಿ ಸಾಯುವುದನ್ನು ನೋಡಲಾರೆ".
ಬೇಟೆಗಾರನು ಅವರಿಬ್ಬರ ಪ್ರೀತಿಯನ್ನು ಕಂಡು ಬೆರಗಾದನು. ಅವನು ಜಿಂಕೆಯನ್ನು ಬಿಟ್ಟು ಬರಿಗೈಯಲ್ಲಿ ಹೋದನು. ಅವನ ಕೈಗಳಷ್ಟೇ ಖಾಲಿಯಾಗಿದ್ದವು, ಆದರೆ ಅವನ ಹೃದಯ ತುಂಬಿತ್ತು.
ನೀತಿ: ನಿಜವಾದ ಪ್ರೀತಿ ಗೆಲ್ಲುತ್ತದೆ.
ಬೇಟೆಗಾರನು ಅವರಿಬ್ಬರ ಪ್ರೀತಿಯನ್ನು ಕಂಡು ಬೆರಗಾದನು. ಅವನು ಜಿಂಕೆಯನ್ನು ಬಿಟ್ಟು ಬರಿಗೈಯಲ್ಲಿ ಹೋದನು. ಅವನ ಕೈಗಳಷ್ಟೇ ಖಾಲಿಯಾಗಿದ್ದವು, ಆದರೆ ಅವನ ಹೃದಯ ತುಂಬಿತ್ತು.
ನೀತಿ: ನಿಜವಾದ ಪ್ರೀತಿ ಗೆಲ್ಲುತ್ತದೆ.
ವಿದ್ಯಾರ್ಥಿ ಕಿರುಪರಿಚಯ | |
ಜೀವನ್, ಬಿ. ಸಿ. 7ನೇ ತರಗತಿ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ