ಕನ್ನಡ ಭಾಷೆಯ ನುಡಿಯುವೆವು
ಕನ್ನಡ ನಮ್ಮುಸಿರೆನ್ನುವೆವು
ಕನ್ನಡ ನಾಡು ನಮ್ಮಯ ನಾಡು
ಕನ್ನಡ ನುಡಿಯುವವರ ನಾಡು
ಅದುವೇ ನಮ್ಮ ಕನ್ನಡ ನಾಡು.
ಕನ್ನಡ ನಮ್ಮುಸಿರೆನ್ನುವೆವು
ಕನ್ನಡ ನಾಡು ನಮ್ಮಯ ನಾಡು
ಕನ್ನಡ ನುಡಿಯುವವರ ನಾಡು
ಅದುವೇ ನಮ್ಮ ಕನ್ನಡ ನಾಡು.
* * *
ಪ್ರಕೃತಿಯನು ಮಲಿನಗೊಳಿಸುವರು
ಮಾನವರು,
ಪ್ರಕೃತಿಗೆ ಅವರಾಗುವರು
ದಾನವರು.
* * *
ಓ ಪ್ರಕೃತಿ
ಏನು ನಿನ್ನ ಸುಂದರ ಆಕೃತಿ
ಗಿರಿಝರಿಗಳು ನಿನ್ನದು
ನದಿ ಹೊಳೆಗಳು ನಿನ್ನದು.
* * *
ಕನ್ನಡ ಜನರು ಚೆಂದ
ಕನ್ನಡ ಭಾಷೆ ಚೆಂದ
ಕವಿ ಪುಂಗವರು ಹುಟ್ಟಿದ ನಾಡು
ಸತ್ಯವಂತರು ಇರುವ ನಾಡು
ಅದುವೇ ನಮ್ಮ ಕನ್ನಡ ನಾಡು.
* * *
ಸಂಗೀತ ಪುರಾಣ ಕಲೆಗಳ ನಾಡು
ಮನ ಮುದಗೊಳಿಸುವ
ಬೇಲೂರು-ಹಳೇಬೀಡು
ಪುಣ್ಯವಂತರು ನೆಲೆಸಿಹ ನಾಡು
ನಿಷ್ಠಾವಂತರ ಕಲೆಗಳ ಬೀಡು
ಅದುವೇ ನಮ್ಮ ಕನ್ನಡ ನಾಡು.
* * *
ಕವಿಗಳಿಗೆ ನೀನು ಕಾವ್ಯ
ಋಷಿಗಳಿಗೆ ನೀವು ದಿವ್ಯ
ನಿನ್ನ ರೂಪವೇ ಭವ್ಯ
ನಿನ್ನಲಿದೆ ಸುಮಗಳ ಸೌಮ್ಯ.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ | |
ಕುಮಾರಿ. ಕುಸುಮ, ಎಸ್. 8ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ