ಮಂಗಳವಾರ, ನವೆಂಬರ್ 21, 2017

ರಾಷ್ಟ್ರ ಪ್ರಾಣಿ

ಚಿತ್ರ ಕೃಪೆ : Google
ಆಕ್ರಮಣಶೀಲವಾದ, ಅಸಮಾನ್ಯ ಬೇಟೆಗಾರನೆನಿಸಿರುವ, ಬಲಿಷ್ಠ, ಸುಂದರ ಪ್ರಾಣಿ ಹುಲಿಯನ್ನು ಭಾರತ ತನ್ನ ರಾಷ್ಟ್ರಪ್ರಾಣಿ ಎಂದು ಪರಿಗಣಿಸಿದೆ. ಹಳದಿಯ ಮೇಲೆ ಕಪ್ಪು ಪಟ್ಟೆಗಳಿರುವ ಭಾರೀ ಶರೀರ, ಗಿಡ್ಡ ಕಾಲುಗಳು, ನೀಳ ಬಾಲ, ದುಂಡಗಿನ ಆಕರ್ಶಕ ಮುಖದ ಈ ಪ್ರಾಣಿ, ಮನೆಮನೆಯ ಮುದ್ದು ಪ್ರಾಣಿ ಬೆಕ್ಕಿನ ಜಾತಿಗೆ ಸೇರಿದ ಊಗ್ರ ರೂಪಿ. ಗವಿಗಳಲ್ಲಿ ವಾಸಿಸುವ ಹುಲಿ ಮರಿಗಳನ್ನು, ತಾಯಿ ಮೂರು ವರ್ಷಗಳ ತನಕ ಪೋಷಿಸಿದ ಬಳಿಕ ಬೇಟೆಯಾಡುವ ಕಲೆಯನ್ನು ಕಲಿಸುತ್ತದೆ.

ಹುಲಿ ಹೊಟ್ಟೆ ತುಂಬಿದ ಮೇಲೂ ತನಗೆ ಕಿಂಚಿತ್ ಅಪಾಯವಾಗುತ್ತದೆ ಎನಿಸಿದರೂ, ಎದುರಿಗಿರುವ ಯಾವುದೇ ಪ್ರಾಣಿ ಅಥವಾ ಮನುಷ್ಯನ ಮೇಲೆ ಆಕ್ರಮಣ ಮಾಡುತ್ತದೆ. ಹುಲಿ ಮನುಷ್ಯನ ಸಹವಾಸದಲ್ಲಿರಲು ಇಷ್ಟ ಪಡದು. ಹುಲಿ ಬೆನ್ನ ಹಿಂದಿನಿಂದ ಆಕ್ರಮಣ ಮಾಡುವುದಿಲ್ಲ, ಸ್ವಂತ ಶಿಕಾರಿಯಲ್ಲದೆ ಇತರ ಪ್ರಾಣಿಗಳು ಕೊಂದಿದ್ದನ್ನು ತಿನ್ನುವುದಿಲ್ಲ, ಇತ್ಯಾದಿ ಹಸಿ ಹಸಿ ಸುಳ್ಳುಗಳನ್ನು ನ್ಯಾಷನಲ್ ಜಿಯಾಗ್ರಾಫಿಕ್, ಡಿಸ್ಕವರಿ ಚಾನಲ್‌ಗಳು ಬಟಾ ಬಯಲಾಗಿಸಿದೆ.

ಜಿಂಕೆ, ದನ, ಕಾಡೆಮ್ಮೆಗಳು ಹುಲಿಯ ಮುಖ್ಯ ಆಹಾರ. ಹುಲಿ ಚಿರತೆಗಳನ್ನು ಕೊಲ್ಲಬಲ್ಲದು. ಹಾಗೆಯೇ ಗುಂಪಿನಲ್ಲಿರುವ ಸೀಳುನಾಯಿಗಳು, ಸಿಂಹಗಳು ಹುಲಿಯನ್ನು ಕೊಲ್ಲುತ್ತವೆ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಪೂಜಾ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ