ಭಾನುವಾರ, ನವೆಂಬರ್ 5, 2017

ಕವನಗಳು

ಮಾತಿನಲ್ಲಿ ಮಮತೆ ಇರಲಿ
ವಿದ್ಯೆಯಲ್ಲಿ ವಿನಯ ಇರಲಿ
ಕಣ್ಣಿನಲ್ಲಿ ಕರುಣೆ ಇರಲಿ
ನೀ ನಗುವಾಗ ನನ್ನ ನೆನಪಿರಲಿ.

* * *

ತಾಯಿ ಕೊಟ್ಟಿದ್ದು ಜನ್ಮ
ದೇವರು ಕೊಟ್ಟಿದ್ದು ಬುದ್ಧಿ
ಗುರುಗಳು ಹೇಳಿದ್ದು ವಿದ್ಯೆ
ಆದರೆ, ಯಾರಿಗೂ ತಿಳಿಯದ್ದು ಸ್ನೇಹ.

* * *

ಮನುಷ್ಯ ಮನೆಮನೆಯಲ್ಲೂ ಜನಿಸುತ್ತಾನೆ
ಆದರೆ, ಮನುಷ್ಯತ್ವ ಎಂಬುದು
ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ.

* * *

ಹಣದಿಂದ ಕೂಡಿಸಿದರೆ, ಸಿರಿವಂತ
ಗುಣದಿಂದ ಗುಣಿಸಿದರೆ, ಗುಣವಂತ
ಭಾವನೆಗಳಿಂದ ಭಾಗಿಸಿದರೆ, ಭಾಗ್ಯವಂತ.

* * *

ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ
ಭೂಮಿ ನಮ್ಮದಲ್ಲ, ಪ್ರಕೃತಿ ನಮ್ಮದಲ್ಲ
ನಮ್ಮದು ಅಂತ ನಮ್ಮ ಜೊತೆ ಇರುವುದು
ನಮ್ಮ ಈ ಸ್ನೇಹ ಮಾತ್ರ.

* * *

ಗೆದ್ದು ಸಣ್ಣವರಾಗುವುದಕ್ಕಿಂತ
ಸೋತು ದೊಡ್ಡವರಾಗಬೇಕಂತೆ
ಆಗ ಸಂಬಂಧಗಳು ಶಾಶ್ವತವಾಗಿ
ಉಳಿಯುತ್ತವೆಯಂತೆ.

* * *

ನೀವು ಇನ್ನೊಬ್ಬರ ಸಂತೋಷ ಬರೆಯುವ
ಪೆನ್ಸಿಲ್ ಆಗಬೇಡಿ; ಅವರ ಮನದಲ್ಲಿನ ದುಃಖ
ಅಳಿಸೋ ಒಂದು ಪುಟ್ಟ ರಬ್ಬರ್ ಆಗಿ ಸಾಕು.

* * *

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ರೋಹಿತ್, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ