- ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ.
- ಉತ್ತರನ ಪೌರುಷ ಒಲೆಯ ಮುಂದೆ.
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
- ಬೆಳ್ಳಗಿರುವುದೆಲ್ಲಾ ಹಾಲಲ್ಲ.
- ತುಂಬಿದ ಕೊಡ ತುಳುಕುವುದಿಲ್ಲ.
- ವಿದ್ಯೆಗೆ ವಿನಯವೇ ಭೂಷಣ.
- ಹುಟ್ಟುತ್ತಾ ಅಣ್ಣತಮ್ಮಂದಿರು; ಬೆಳೆಯುತ್ತಾ ದಾಯಾದಿಗಳು.
- ಕೆಟ್ಟಮೇಲೆ ಬುದ್ಧಿ ಬಂತು.
- ಮನೆಗೆ ಮಾರಿ; ಊರಿಗೆ ಉಪಕಾರಿ.
- ಕೈ ಕೆಸರಾದರೆ, ಬಾಯಿ ಮೊಸರು.
- ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬಾರದು.
- ಮಾಡುವುದೆಲ್ಲಾ ಅನಾಚಾರ; ಮನೆ ಮುಂದೆ ಮಾತ್ರ ಬೃಂದಾವನ.
- ಅತಿ ಆಸೆ ಗತಿಗೇಡು.
- ಹಿತ್ತಲ ಗಿಡ ಮದ್ದಲ್ಲ.
- ಹಾಸಿಗೆ ಇದ್ದಷ್ಟು ಕಾಲು ಚಾಚು.
- ಒಗ್ಗಟ್ಟಿನಲ್ಲಿ ಬಲವಿದೆ.
- ಆರೋಗ್ಯವೇ ಭಾಗ್ಯ.
- ಬೆಳೆಯುವ ಸಿರಿ ಮೊಳಕೆಯಲ್ಲಿ.
- ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ.
- ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
- ಮಾಡಿದ್ದುಣ್ಣೋ ಮಹರಾಯ.
- ಗಾಳಿ ಬಂದಂತೆ ತೂರಿಕೋ.
- ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು.
- ಮಾತು ಬೆಳ್ಳಿ, ಮೌನ ಬಂಗಾರ.
- ತಾಳಿದವನು ಬಾಳಿಯಾನು.
- ಕಣ್ಣಿರುವ ತನಕ ನೋಟ; ಕಾಲಿರುವ ತನಕ ಓಟ.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ | |
ಕುಮಾರಿ. ಲಕ್ಷ್ಮಿ, ಆರ್. 6ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ