ಶನಿವಾರ, ನವೆಂಬರ್ 11, 2017

ಒಗಟು


  1. ಜುಟ್ಟುಂಟು ಹರನಲ್ಲ, ಹೊಟ್ಟೆಯುಂಟು ಗಣಪನಲ್ಲ, ನೀರುಂಟು ಗಂಗೆಯಲ್ಲ : ?
  2. ಹನ್ನೆರಡು ಇಡ್ಲಿ, ಒಂದು ತಟ್ಟೆ, ಮೂರು ಚಮಚ : ?
  3. ಹಾರಿದರೆ ಹನುಮಂತ, ಕೂಗಿದರೆ ರಾವಣ, ಕೂತರೆ ಮುನಿ : ?
  4. ಮೂಲೆಲಿ ಇರೋ ಮುದುಕಿಗೆ, ಮೈಯೆಲ್ಲಾ ಕಣ್ಣು : ?
  5. ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ : ?
  6. ಚೋಟುದ್ದ ರಾಜ, ಮೇಲೊಂದು ಟೋಪಿ, ಚಟ್-ಪಟ್ ಎಂದು ಹೋರಾಡಿದರೆ, ಸುಟ್ಟು ಭಸ್ಮ : ?
  7. ಹಂಚಿ ಹರವೆಯಲ್ಲಿ ಕೆಂಚಣ್ಣ ಕೂತಿದ್ದಾನೆ : ?
  8. ಅಟ್ಟದ ಮೇಲೆ ಪುಟ್ಟಲಕ್ಷ್ಮಿ ಕುಂತೋಳೆ : ?
  9. ಕತ್ತಲ ಮನೇಲಿ ಕತ್ತಿ ಬೀಸುತ್ತೆ : ?
  10. ಚಿಕ್ಕ ಮನೆಗೆ ಚಿನ್ನದ ಬೀಗ : ?
  11. ಐದು ಮನೆಗೆ ಒಂದೇ ಅಂಗಳ : ?
  12. ನೂರಾರು ಮಕ್ಕಳಿಗೆ ಒಂದೇ ಉಡುದಾರ : ?
  13. ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ : ?
  14. ಮುಳ್ಳು ಗಿಡದಲ್ಲಿ ಚಿನ್ನದ ಮೊಟ್ಟೆ : ?
  15. ದೊಡ್ಡಣ್ಣನ ಹಿಂದೆ ನೂರಾರು ತಮ್ಮಂದಿರು, ಊರೆಲ್ಲಾ ಸುತ್ತುತ್ತಾರೆ : ?
  16. ಏರಿ ಮೇಲೆ ಮುಳ್ಳ್ಹಂದಿ ಕೊಯ್ಯುತ್ತಾರೆ : ?
  17. ಗೊಂತು ಕಿತ್ತಿಕೊಂಡು ಸಂತೆಗೆ ಹೋದ : ?
  18. ಏರಿ ಮೇಲೆ ಸಾಲು ಮರ : ?
  19. ಬರ್ತಾ ಇಳಿತಾನೆ, ಹೋಗ್ತಾ ಏರ್ತಾನೆ : ?
  20. ಪುಟ್ಟ ಪುಟ್ಟ ದೇವಸ್ಥಾನ, ಬಗ್ಗಿ ಬಗ್ಗಿ ನಮಸ್ಕಾರ : ?
  21. ಕಪ್ಪು ಸೀರೆ ಉಟ್ಯಾಳ, ಕಾಲುಂಗುರ ಇಟ್ಯಾಳ, ಮೇಲಕ್ಕೆ ಹೋಗ್ತಾಳ, ಕೆಳಕ್ಕೆ ಇಳಿತಾಳ : ?
  22. ಬೆಟ್ಟದ ಸುತ್ತ ಬೆಳ್ಳಿ ಉಡುದಾರ : ?
  23. ಬುಡ್ಡೆ ಬಿಚ್ಚಿದರೆ ಮನೆ ತುಂಬಾ ಮಕ್ಕಳು : ?
  24. ಹಸಿರು ಆಸ್ಪತ್ರೆ, ಕಪ್ಪು ಡಾಕ್ಟರ್, ಕೆಂಪು ಔಷಧಿ : ?
  25. ಗೂಡಲ್ಲೇ ಕೂತು ಊರೆಲ್ಲಾ ನೋಡುತ್ತೆ : ?
  26. ಅಡ್ಡ ಮರದಲ್ಲಿ ಬೊಡ್ಡ ಕುಳಿತಿದ್ದಾನೆ : ?
  27. ಮಣ್ಣು ಕೊರೆದೆ, ಕಲ್ಲು ಸಿಕ್ಕಿತು, ಕಲ್ಲು ಕೊರೆದೆ, ಬೆಳ್ಳಿ ಸಿಕ್ಕಿತು, ಬೆಳ್ಳಿ ಕೊರೆದೆ, ನೀರು ಸಿಕ್ಕಿತು : ?
  28. ಕುದುರೆ ಓಡುತ್ತೆ, ಕುಂಕುಮ ಚೆಲ್ಲುತ್ತೆ : ?
  29. ಅಂಗಣ್ಣ ಮಂಗಣ್ಣ, ಅಂಗಿ ಬಿಚ್ಕೊಂಡು ನುಂಗಣ್ಣ : ?
  30. ಸುತ್ತಲೂ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ : ?





ಉತ್ತರಗಳು :

  1. ಜುಟ್ಟುಂಟು ಹರನಲ್ಲ, ಹೊಟ್ಟೆಯುಂಟು ಗಣಪನಲ್ಲ, ನೀರುಂಟು ಗಂಗೆಯಲ್ಲ : ತೆಂಗಿನಕಾಯಿ 
  2. ಹನ್ನೆರಡು ಇಡ್ಲಿ, ಒಂದು ತಟ್ಟೆ, ಮೂರು ಚಮಚ : ಗಡಿಯಾರ 
  3. ಹಾರಿದರೆ ಹನುಮಂತ, ಕೂಗಿದರೆ ರಾವಣ, ಕೂತರೆ ಮುನಿ : ಕಪ್ಪೆ 
  4. ಮೂಲೆಲಿ ಇರೋ ಮುದುಕಿಗೆ, ಮೈಯೆಲ್ಲಾ ಕಣ್ಣು : ಜರಡಿ 
  5. ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ : ಹುರಳಿಕಾಯಿ 
  6. ಚೋಟುದ್ದ ರಾಜ, ಮೇಲೊಂದು ಟೋಪಿ, ಚಟ್-ಪಟ್ ಎಂದು ಹೋರಾಡಿದರೆ, ಸುಟ್ಟು ಭಸ್ಮ : ಬೆಂಕಿ ಕಡ್ಡಿ 
  7. ಹಂಚಿ ಹರವೆಯಲ್ಲಿ ಕೆಂಚಣ್ಣ ಕೂತಿದ್ದಾನೆ : ಮೂಗುತಿ 
  8. ಅಟ್ಟದ ಮೇಲೆ ಪುಟ್ಟಲಕ್ಷ್ಮಿ ಕುಂತೋಳೆ : ಬೊಟ್ಟು 
  9. ಕತ್ತಲ ಮನೇಲಿ ಕತ್ತಿ ಬೀಸುತ್ತೆ : ಹಸುವಿನ ಬಾಲ 
  10. ಚಿಕ್ಕ ಮನೆಗೆ ಚಿನ್ನದ ಬೀಗ : ಮೂಗುತಿ 
  11. ಐದು ಮನೆಗೆ ಒಂದೇ ಅಂಗಳ : ಅಂಗೈ 
  12. ನೂರಾರು ಮಕ್ಕಳಿಗೆ ಒಂದೇ ಉಡುದಾರ : ಪೊರಕೆ 
  13. ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ : ಬುಗುರಿ 
  14. ಮುಳ್ಳು ಗಿಡದಲ್ಲಿ ಚಿನ್ನದ ಮೊಟ್ಟೆ : ನಿಂಬೆಹಣ್ಣು 
  15. ದೊಡ್ಡಣ್ಣನ ಹಿಂದೆ ನೂರಾರು ತಮ್ಮಂದಿರು, ಊರೆಲ್ಲಾ ಸುತ್ತುತ್ತಾರೆ : ರೈಲು ಬಂಡಿ 
  16. ಏರಿ ಮೇಲೆ ಮುಳ್ಳ್ಹಂದಿ ಕೊಯ್ಯುತ್ತಾರೆ : ಹಲಸಿನ ಹಣ್ಣು 
  17. ಗೊಂತು ಕಿತ್ತಿಕೊಂಡು ಸಂತೆಗೆ ಹೋದ : ಮೂಲಂಗಿ 
  18. ಏರಿ ಮೇಲೆ ಸಾಲು ಮರ : ನೆರಳು 
  19. ಬರ್ತಾ ಇಳಿತಾನೆ, ಹೋಗ್ತಾ ಏರ್ತಾನೆ : ಹುಬ್ಬು 
  20. ಪುಟ್ಟ ಪುಟ್ಟ ದೇವಸ್ಥಾನ, ಬಗ್ಗಿ ಬಗ್ಗಿ ನಮಸ್ಕಾರ : ಒಲೆ 
  21. ಕಪ್ಪು ಸೀರೆ ಉಟ್ಯಾಳ, ಕಾಲುಂಗುರ ಇಟ್ಯಾಳ, ಮೇಲಕ್ಕೆ ಹೋಗ್ತಾಳ, ಕೆಳಕ್ಕೆ ಇಳಿತಾಳ : ಒನಕೆ 
  22. ಬೆಟ್ಟದ ಸುತ್ತ ಬೆಳ್ಳಿ ಉಡುದಾರ : ರಾಗಿಕಲ್ಲು 
  23. ಬುಡ್ಡೆ ಬಿಚ್ಚಿದರೆ ಮನೆ ತುಂಬಾ ಮಕ್ಕಳು : ಬೆಳ್ಳುಳ್ಳಿ 
  24. ಹಸಿರು ಆಸ್ಪತ್ರೆ, ಕಪ್ಪು ಡಾಕ್ಟರ್, ಕೆಂಪು ಔಷಧಿ : ಕಲ್ಲಂಗಡಿ 
  25. ಗೂಡಲ್ಲೇ ಕೂತು ಊರೆಲ್ಲಾ ನೋಡುತ್ತೆ : ಕಣ್ಣು 
  26. ಅಡ್ಡ ಮರದಲ್ಲಿ ಬೊಡ್ಡ ಕುಳಿತಿದ್ದಾನೆ : ಹಲಸಿನ ಹಣ್ಣು 
  27. ಮಣ್ಣು ಕೊರೆದೆ, ಕಲ್ಲು ಸಿಕ್ಕಿತು, ಕಲ್ಲು ಕೊರೆದೆ, ಬೆಳ್ಳಿ ಸಿಕ್ಕಿತು, ಬೆಳ್ಳಿ ಕೊರೆದೆ, ನೀರು ಸಿಕ್ಕಿತು : ಏಲಕ್ಕಿ 
  28. ಕುದುರೆ ಓಡುತ್ತೆ, ಕುಂಕುಮ ಚೆಲ್ಲುತ್ತೆ : ರಾಗಿ ಮಿಲ್ಲು 
  29. ಅಂಗಣ್ಣ ಮಂಗಣ್ಣ, ಅಂಗಿ ಬಿಚ್ಕೊಂಡು ನುಂಗಣ್ಣ : ಬಾಳೆಹಣ್ಣು 
  30. ಸುತ್ತಲೂ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ : ಮೊಟ್ಟೆ

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಶಶಾಂಕ್, ಪಿ.

8ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

13 ಕಾಮೆಂಟ್‌ಗಳು:

  1. ಇದು ಒಂದು ಹೆಣ್ಣಿನ ಹೆಸರು. ನಾಲ್ಕಕ್ಷರ ಇದೆ. ಮೊದಲನೆಯ ಹಾಗೂ ಕೊನೆಯ ಅಕ್ಷರ ಸೇರಿಸಿದರೆ ಸಮಾದಿ ಎಂಬ ಅರ್ಥವನ್ನು, ಎರಡನೆಯ ಹಾಗೂ ನಾಲ್ಕನೆಯ ಅಕ್ಷರ ಸೇರಿಸಿದರೆ ರಸ್ತೆ ಎಂಬ ಅರ್ಥವನ್ನು, ಮೊದಲನೆಯ ಹಾಗೂ ಮೂರನೆ ಅಕ್ಷರ ಸೇರಿಸಿದರೆ ಒಂದು ಊರಿನ ಹೆಸರನ್ನು, ಎರಡು ಮತ್ತು ಮೂರನೇ ಸೇರಿಸಿದರೆ ಬಾಯಾರಿಕೆ ಅರ್ಥವನ್ನು ನೀಡುತ್ತದೆ. ಹಾಗಾದರೆ ಆ ಹೆಣ್ಣಿನ ಹೆಸರು ಏನೆಂದು ಹೇಳಿ?

    ಪ್ರತ್ಯುತ್ತರಅಳಿಸಿ
  2. ಹೆಸರಿಲ್ಲದ ಊರ ಗೌಡನ ಹೆಂಡತಿ ಈ ಒಗಟನ್ನು ಪೂರ್ಣ ಮಾಡಿ ಈ ಒಗಟಿನ ಉತ್ತರವನ್ನು ಹೇಳಿ

    ಪ್ರತ್ಯುತ್ತರಅಳಿಸಿ
  3. ಒಂದು ಹಗ ಇದ್ದೆ ಅದ್ನಾ ಮಾರಿದ್ರೆ ಅಮೌಂಟ್ ಅರರ್ಬೇಕು ಮತ್ತೇ ಹಗ್ಗ ವಾಪಾಸ್ ಬರ್ಬೇಕು

    ಪ್ರತ್ಯುತ್ತರಅಳಿಸಿ