ಭಾಗವಹಿಸಿ

ಕಹಳೆ - 2015

ನವಂಬರ್ 2015ರ ಕನ್ನಡ ರಾಜ್ಯೋತ್ಸವ ನಾಡಹಬ್ಬದ ಪ್ರಯುಕ್ತ "ಕಹಳೆ - 2015" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಸದರಿ ಕಾರ್ಯಕ್ರಮಕ್ಕೆ ಆಸಕ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.

'ಕಹಳೆ' ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ ನಮ್ಮೊಡನೆ ನೀವೂ ಸಹ ಭಾಗಿಯಾಗಬೇಕು; ಕನ್ನಡ ನಾಡಹಬ್ಬವನ್ನು ಅತ್ಯಂತ ವಿಜೃ೦ಭಣೆಯಿಂದ ಆಚರಿಸುವ ಹೊಣೆಗಾರಿಕೆ ಕನ್ನಡಿಗರಾದ ನಮ್ಮಗಳೆಲ್ಲರ ಮೇಲಿದೆ.

ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಭಾಷೆಯಲ್ಲಿ ಒಂದು ಲೇಖನವನ್ನು ಬರೆದು ನಮಗೆ ಕಳುಹಿಸಿಕೊಡಲು ಕೋರಿದೆ:
  1. ಲೇಖನವು 'ಕನ್ನಡ ಭಾಷೆ'ಯಲ್ಲಿರಬೇಕು.
  2. ಬರವಣಿಗೆಯು ಸ್ವಂತದ್ದಾಗಿರಬೇಕು.
  3. ಲೇಖನವು ಹಿಂದೆ ಯಾವುದೇ ಮಾಧ್ಯಮದಲ್ಲೂ ಪ್ರಕಟಗೊಂಡಿರಬಾರದು.
  4. ವಿಷಯದ ಆಯ್ಕೆ ನಿಮ್ಮದು, ಇದಕ್ಕೆ ಯಾವುದೇ ನಿರ್ಬಂಧಗಳಿಲ್ಲ.
  5. ಲೇಖನವು ಸುಮಾರು 500 ಪದಗಳನ್ನು ಹೊಂದಿರುವಂತಿರಬೇಕು.
  6. ಲೇಖನವನ್ನು NUDI ತಂತ್ರಾಂಶ ಬಳಸಿ ಬೆರಳಚ್ಚಿಸಿರಬೇಕು (Download: NUDI-5.0 | Nudi Fonts).
  7. ಲೇಖನದ ಜೊತೆಗೆ ನಿಮ್ಮ ಸಂಪೂರ್ಣ ಅಂಚೆ ವಿಳಾಸ (ಪಿನ್-ಕೋಡ್ ಸಹಿತ), ಚರ-ದೂರವಾಣಿ ಸಂಖ್ಯೆ ಹಾಗೂ ಸ್ಥೂಲ ಪರಿಚಯವನ್ನು ಇತ್ತೀಚಿನ ಭಾವಚಿತ್ರದೊಂದಿಗೆ ಲಗತ್ತಿಸಬೇಕು.
  8. ನಿಮ್ಮ Blog, Facebook, Twitter ಇನ್ನಿತರೇ ಮಾಹಿತಿಗಳನ್ನು ಸಾಧ್ಯವಾದರೆ ಒದಗಿಸಬೇಕು.
  9. blow@kahale.gen.in ಮಿಂಚಂಚೆ ವಿಳಾಸಕ್ಕೆ ಲೇಖನಗಳನ್ನು ಕಳುಹಿಸಬೇಕು.
  10. ಲೇಖನವು 30ನೇ ನವಂಬರ್‍ 2015 ರ ಒಳಗೆ ನಮಗೆ ತಲುಪಬೇಕು.

ನಿಮಗೆ ಪರಿಚಯವಿರುವ ಎಲ್ಲಾ ಕನ್ನಡಿಗರಿಗೂ 'ಕಹಳೆ'ಯ ಬಗ್ಗೆ ದಯಮಾಡಿ ತಿಳಿಸಿ, ನಿಮ್ಮ-ನಮ್ಮೆಲ್ಲರೊಡನೆ ಭಾಗವಹಿಸಲು ಪ್ರೇರೇಪಿಸಿ.

'ಕಹಳೆ' ಬಗೆಗಿನ ಇನ್ಯಾವುದೇ ಮಾಹಿತಿಗಾಗಿ ನಮ್ಮ ಮಿಂಚಂಚೆ ವಿಳಾಸವಾದ info@kahale.gen.in ಗೆ ಬರೆಯಿರಿ; ನಿಮ್ಮೊಡನೆ ಸಂಭಾಷಿಸಲು ನಾವು ಉತ್ಸುಕರಾಗಿದ್ದೇವೆ.

=> ಕಹಳೆ ತಂಡ.