ಚಿತ್ರ ಕೃಪೆ : ಗೂಗಲ್ |
ಮರೆಯದ ಮಮತೆ ನೀಡಿ
ಪ್ರೀತಿ ವಾತ್ಸಲ್ಯ ನಿನ್ನಲಿ ಕೂಡಿ
ಒಳ್ಳೆ ಕೆಲಸಗಳನ್ನು ಮಾಡಿಸಿ
ನಮಗೆ ದೇವರು ನೀನಮ್ಮ.
ಯಶಸ್ಸಿನ ಪಥ ತೋರಿಸಿ
ನಮ್ಮಲ್ಲಿ ಜ್ಞಾನವನ್ನು ತುಂಬಿಸಿ
ಸಮಾಜದಲ್ಲಿ ಒಳ್ಳೆಯವರನ್ನಾಗಿಸಿ
ನಮಗೆ ದೇವರು ನೀನಮ್ಮ.
ಕಷ್ಟ ನೋವುಗಳನ್ನು ಸಹಿಸಿ
ನಮಗೆ ಬೇಕಾದುದ್ದನ್ನು ಕೊಡಿಸಿ
ನಮ್ಮ ಬದುಕನ್ನು ಸೃಷ್ಟಿಸಿ
ನಮಗೆ ದೇವರು ನೀನಮ್ಮ.
ಅಮ್ಮನ ಮುತ್ತಿನ ಮಾತುಗಳು
ನಮ್ಮ ಜೀವನದ ನುಡಿಮುತ್ತುಗಳು
ನಮ್ಮ ತಾಯಂದಿರನ್ನು ಮರೆಯದಿರಿ
ನಮ್ಮೆಲ್ಲರ ಅಮ್ಮಂದಿರು ದೇವರು.
ವಿದ್ಯಾರ್ಥಿ ಕಿರುಪರಿಚಯ | |
ಮಾಸ್ಟರ್. ನವೀನ್ ಕುಮಾರ್ 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ