ಚಿತ್ರ ಕೃಪೆ : ಗೂಗಲ್ |
ಹಾವಿನ ಹೆಡಿ ಚೆಂದ, ಮಾವಿನ ಮಿಡಿ ಚೆಂದ
ಹಾರ್ಯಾಡಿ ಬರುವ ಗಿಳಿ ಚೆಂದ, ನನ ಕಂದ
ನೀ ಇದ್ದರ ನನ್ನ ಮನಿ ಚೆಂದ.
ನನ್ನ ಕಂದ ಮುದ್ದು, ಹೊನ್ನ ತಾವರೆ ಮುದ್ದು
ಹಣ್ಣುಳ್ಳ ಗಿಡದಿ ಗಿಳಿ ಮುದ್ದು ಕಂದವ್ವ
ನೀ ಮುದ್ದು ನನ್ನ ಬಳಗಾಕ.
ಹಸಿರಂಗಿ ತೊಡಸೀನ, ಕಾಲ್ಗಡಗ ಇಡಸೀನ
ಹಳ್ಳಕ್ಕೆ ನೀನು ಬರಬ್ಯಾಡ ನನಕಂದ
ಬೆಳ್ಳಕ್ಕಿ ಹಿಂಡು ಬೆದರ್ಯಾವ.
ಗುಜ್ಜೆ ನನ ಕಂದಯ್ಯನ ಗೆಜ್ಜೆ ಸಪ್ಪಳ ಕೇಳಿ
ನಿಬ್ಬಣದೆತ್ತು ಬೆದರ್ಯಾವ, ಮುದ್ಯಾಣದ
ಹುಲ್ಲು ತಿನ್ನೋದ ಮರೆತಾವ.
ತವರೂರಿಗ್ಹೋದಾಗ ನವಿಲು ಬಣ್ಣದ ಪಕ್ಷಿ
ಹಾರ್ಯಾಡಿ ಬರುವ ಗಿಳಿ ಚೆಂದ, ನನ ಕಂದ
ನೀ ಇದ್ದರ ನನ್ನ ಮನಿ ಚೆಂದ.
ನನ್ನ ಕಂದ ಮುದ್ದು, ಹೊನ್ನ ತಾವರೆ ಮುದ್ದು
ಹಣ್ಣುಳ್ಳ ಗಿಡದಿ ಗಿಳಿ ಮುದ್ದು ಕಂದವ್ವ
ನೀ ಮುದ್ದು ನನ್ನ ಬಳಗಾಕ.
ಹಸಿರಂಗಿ ತೊಡಸೀನ, ಕಾಲ್ಗಡಗ ಇಡಸೀನ
ಹಳ್ಳಕ್ಕೆ ನೀನು ಬರಬ್ಯಾಡ ನನಕಂದ
ಬೆಳ್ಳಕ್ಕಿ ಹಿಂಡು ಬೆದರ್ಯಾವ.
ಗುಜ್ಜೆ ನನ ಕಂದಯ್ಯನ ಗೆಜ್ಜೆ ಸಪ್ಪಳ ಕೇಳಿ
ನಿಬ್ಬಣದೆತ್ತು ಬೆದರ್ಯಾವ, ಮುದ್ಯಾಣದ
ಹುಲ್ಲು ತಿನ್ನೋದ ಮರೆತಾವ.
ತವರೂರಿಗ್ಹೋದಾಗ ನವಿಲು ಬಣ್ಣದ ಪಕ್ಷಿ
ತಲಿಬ್ಯಾನಿಯೆದ್ದು ಅಳುತಿತ್ತು, ಕಂದನ
ಚಲುವೀನ ನೋಡಿ ನಗುತಿತ್ತು.
ಚಲುವೀನ ನೋಡಿ ನಗುತಿತ್ತು.
ವಿದ್ಯಾರ್ಥಿ ಕಿರುಪರಿಚಯ | |
ಕುಮಾರಿ. ರಂಜಿತ 5ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ