ಚಿತ್ರ ಕೃಪೆ : ಗೂಗಲ್ |
ಸಿಂಹವೊಂದು ಮರದ ಕೆಳಗೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಆಗ ಒಂದು ಇಲಿಮರಿ ತನ್ನ ಬಿಲದಿಂದ ಹೊರಬಂದು ಸಿಂಹದ ಮೈಮೇಲೆ ಓಡಾಡಲಾರಂಭಿಸಿತು. ಗಾಢ ನಿದ್ರೆಯಲ್ಲಿದ್ದ ಸಿಂಹಕ್ಕೆ ಕಿರಿಕಿರಿಯಾಯಿತು. ಸಿಂಹ ಎಚ್ಚೆತ್ತು ಇಲಿಯನ್ನು ಹಿಡಿಯಿತು. ಗಾಬರಿಯಾದ ಇಲಿ, ತನಗೇನೂ ಮಾಡಬಾರದೆಂದು ಸಿಂಹವನ್ನು ಪ್ರಾರ್ಥಿಸಿತು. ತನ್ನನ್ನು ಬಿಟ್ಟುಬಿಟ್ಟರೆ ಆಪತ್ಕಾಲದಲ್ಲಿ ಸಹಾಯ ಮಾಡುವೆನೆಂದು ಸಿಂಹಕ್ಕೆ ಇಲಿಯು ಭರವಸೆ ಕೊಟ್ಟಿತು. ನನ್ನಂತ ಬಲಿಷ್ಠನಿಗೆ ನಿನ್ನಿಂದ ಏನು ಸಹಾಯವಾಗುವುದು? ಎಂದು ನಿರ್ಲಕ್ಷ್ಯದಿಂದ ಸಿಂಹ ಇಲಿಯನ್ನು ಬಿಟ್ಟುಬಿಟ್ಟಿತು.
ಕೆಲ ದಿನಗಳ ಬಳಿಕ ಬೇಟೆಗಾರನೊಬ್ಬ ಹಾಕಿದ್ದ ಬಲೆಗೆ ಸಿಂಹ ಸಿಲುಕಿಹಾಕಿಕೊಂಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಅಲ್ಲಿಗೆ ಬಂದ ಇಲಿಯು ಸಿಂಹವನ್ನು ಕಂಡು ಬಲೆಯನ್ನೆಲ್ಲಾ ತನ್ನ ಹರಿತವಾದ ಹಲ್ಲುಗಳಿಂದ ಕತ್ತರಿಸಿ ಸಿಂಹವನ್ನು ಬಲೆಯಿಂದ ಬಿಡಿಸಿತು.
ಚಿಕ್ಕ ಪ್ರಾಣಿಯಾಗಿದ್ದರೂ ತನ್ನನ್ನು ಕಾಪಾಡಿದ ಇಲಿಗೆ ಸಿಂಹವು ಕೃತಜ್ಞತೆ ಸಲ್ಲಿಸಿತು. ಅಂದಿನಿಂದ ಸಿಂಹ ಮತ್ತು ಇಲಿ ಸ್ನೇಹಿತರಾದರು.
ವಿದ್ಯಾರ್ಥಿ ಕಿರುಪರಿಚಯ | |
ಮಾಸ್ಟರ್ ವರುಣ್ 4ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಚೆನ್ನಾಗಿ ಬರೆದದ್ದೀರಾ........
ಪ್ರತ್ಯುತ್ತರಅಳಿಸಿGood
ಪ್ರತ್ಯುತ್ತರಅಳಿಸಿVery good 👍👍
ಪ್ರತ್ಯುತ್ತರಅಳಿಸಿ