ಒಂದು ಕೋತಿ ಮರದ ಮೇಲೆ ಆರಾಮವಾಗಿ ಕುಳಿತಿತ್ತು. ಆ ಕೋತಿಯ ಬಾಲ ತುಂಬಾ ಉದ್ದವಿತ್ತು, ಅದು ನೆಲದವರೆಗೆ ನೇತಾಡುತ್ತಿತ್ತು. ಒಂದು ಅಳಿಲು ಕುಣಿದಾಡುತ್ತಾ ಅಲ್ಲಿಗೆ ಬಂದಿತು. ಅಳಿಲು ಕೋತಿಯ ಬಾಲ ಹಿಡಿದು "ಈ ಜೋಲಾಲಿ ಎಷ್ಟು ಚಂದ!" ಎಂದು ಸಂತೋಷಪಟ್ಟಿತು. ಕೋತಿಯ ಉದ್ದನೆಯ ಬಾಲ ಹಿಡಿದು ಅಳಿಲು ಜೋತಾಡತೊಡಗಿತು.
ಕೋತಿಗೆ ಕಚಗುಳಿ ಆಯಿತು. ಅದು ಕೆಳಗೆ ನೋಡಿತು ಮತ್ತು ನಗುತ್ತಾ ಹೇಳಿತು "ತಂಗಿ, ಏನು ಮಾಡುತ್ತಿರುವೆ? ನನಗೆ ಕಚಗುಳಿ ಆಗುತ್ತಿದೆ". ಆಗ ಅಳಿಲಿಗೆ ಗಾಬರಿಯಾಯಿತು. "ಮಂಗಣ್ಣಾ, ಇದು ನಿನ್ನ ಬಾಲವೇ? ನನಗೆ ತಿಳಿಯಲಿಲ್ಲ. ಜೋಕಾಲಿ ಎಂದು ಜೀಕುತ್ತಿದ್ದೆ. ನನ್ನನ್ನು ಕ್ಷಮಿಸು" ಎಂದು ಹೇಳಿತು. ಬಾಲವನ್ನು ಬಿಟ್ಟಿತ್ತು.
ಕೋತಿ ಅಳಿಲಿಗೆ "ನಿನಗೆ ಗೊತ್ತಿಲ್ಲದೆ ತಪ್ಪು ಮಾಡಿದ್ದೀಯ. ಪರವಾಗಿಲ್ಲ, ಹೋಗಿ ಬೇರೆ ಕಡೆ ಆಟ ಆಡು.." ಎಂದು ಹೇಳಿತು. ಅಳಿಲು ಕೋತಿಯ ಬಾಲ ಬಿಟ್ಟು, ಓಡಿ ಹೋಗಿ ಮರದ ಕೊಂಬೆಯನ್ನು ಏರಿತು.
ಗೊತ್ತಿಲ್ಲದೆ ತಪ್ಪು ಮಾಡಿದಾಗ ಅವರನ್ನು ಕ್ಷಮಿಸಬೇಕು.

ವಿದ್ಯಾರ್ಥಿ ಕಿರುಪರಿಚಯ | |
ಕುಮಾರಿ. ಮಮತ, ಆರ್. 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ