1.
ಹಸಿರು ಪುಕ್ಕ, ಕೆಂಪು ಕೊಕ್ಕು
ನೆಟ್ಟ ಕಣ್ಣು, ಊಟ ಹಣ್ಣು.
ನಾನು ಯಾರು ಗೊತ್ತೆ?
2.
ಸೋಗೆ ಗರಿ, ಸೊಗಸು ನಾಟ್ಯ
ನೂರು ನೂರು ಕಣ್ಣು.
ನಾನು ಯಾರು ಗೊತ್ತೆ?
3.
ದೊಡ್ಡ ದೇಹ, ಮೋಟು ಬಾಲ
ಕಣ್ಣು ಸಣ್ಣ, ಸಂಘಜೀವಿ.
ನಾನು ಯಾರು ಗೊತ್ತೆ?
4.
ಬಾಲ ಬಹಳ ಚಿಕ್ಕದು, ವಾಸ ನೀರಿನಲ್ಲಿ
ನನ್ನನ್ನು ಎಲ್ಲರೂ ತಿನ್ನುತಾರೆ.
ನಾನು ಯಾರು ಗೊತ್ತೆ?
5.
ಅಂಗಣ್ಣ ಮಂಗಣ್ಣ
ಅಂಗಿ ಬಿಚ್ಕೊಂಡು ನುಂಗಣ್ಣ.
ನಾನು ಯಾರು ಗೊತ್ತೆ?
6.
ಹಸಿರು ಗಿಡದಲ್ಲಿ
ಮೊಸರು ಚೆಲ್ಲಿದೆ.
ನಾನು ಯಾರು ಗೊತ್ತೆ?
7.
ಒಂದೇ ಮನೆ
ನೂರಾರು ಬಾಗಿಲು.
ನಾನು ಯಾರು ಗೊತ್ತೆ?
ಉತ್ತರಗಳು
4. ಮೀನು
7. ಹುತ್ತ
1. ಗಿಳಿ
5. ಬಾಳೆಹಣ್ಣು
3. ಆನೆ
6. ಮಲ್ಲಿಗೆ ಹೂವು
2. ನವಿಲು
ವಿದ್ಯಾರ್ಥಿ ಕಿರುಪರಿಚಯ | |
ಕುಮಾರಿ. ಭೂಮಿಕ 5ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ