ಸುರಿಸೋಣ ಭರಣಿ ಮಳೆ
ನಾನು ಹೊಲ ನೀನು ಜಲ
ಬೆಳೆಸೋಣ ಹುಲುಸು ಬೆಳೆ.
ನಾನು ಎಣ್ಣೆ ನೀನು ಬತ್ತಿ
ಬೆಳಗೋಣ ಮೂಲೆ ಮುಡುಕು
ನಾನು ಎಲರು ನೀನು ಅಲರು
ಹರಡೋಣ ಕಂಪು ಅಗರು.
ನಾನು ಭಾವ ನೀನು ಲಹರಿ
ಹಾಡೋಣ ಭಾವ ಗೀತೆ
ನಾನು ಗೆಜ್ಜೆ ನೀನು ಹೆಜ್ಜೆ
ಮಾಡೋಣ ಭರತ ನಾಟ್ಯ.
ನಾನು ಕುಂಚ ನೀನು ಬಣ್ಣ
ಬಿಡಿಸೋಣ ನವ್ಯ ಚಿತ್ರ
ನಾನು ಸಾಕ್ಷಿ ನೀನು ಅಕ್ಷಿ
ಸಾರೋಣ ನಗ್ನ ಸತ್ಯ.
ನಾನು ಕವಿ ನೀನು ಕಿವಿ
ಹಾಡಿ ಕೇಳೋಣ ಬನ್ನ ಬವಣೆ
ನಾನು ಪಥಿಕ ನೀನು ರಥಿಕ
ಸವೆಸೋಣ ಬಾಳ ಪಯಣ.
ವಿದ್ಯಾರ್ಥಿ ಕಿರುಪರಿಚಯ | |
ಮಾಸ್ಟರ್. ನಿರಂಜನ 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ