ಭಾನುವಾರ, ನವೆಂಬರ್ 11, 2012

ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷವೂ ಸಹ ಘನ ಕರ್ನಾಟಕ ಸರ್ಕಾರವು ಆಯ್ದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಮಾಡಿದ ಹಾಗೂ ಉತ್ತಮ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ, ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸುತ್ತಿದೆ. 1966 ರಿಂದ ಪ್ರಾರಂಭಗೊಂಡಿರುವ ಈ ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಸರ್ಕಾರವು ಇಂದಿನ ದಿನದವರೆಗೂ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಸಂಗತಿಯೆಂದೇ ಹೇಳಬಹುದು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ಬಗೆಗಿನ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಪ್ರತಿ ವರ್ಷವೂ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾದವರೆಂದು ಸ್ವೀಕರಿಸಲಾಗುವ ಸಾವಿರಾರು ಅರ್ಜಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ಪರಿಶೀಲಿಸಿ ನಿಯಮಾನುಸಾರ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ. ಈ ಆಯ್ಕೆ ಪ್ರಕ್ರಿಯೆಯು ಅತ್ಯಂತ ಜವಾಬ್ದಾರಿಯುತ ಕರ್ತವ್ಯವಾಗಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಒಂದು ಸವಾಲೇ ಸರಿ!

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಪ್ರಶಸ್ತಿ ಪಡೆಯುವ ಮಹನೀಯರಿಗೆ ಅವರ ಪರಿಶ್ರಮಕ್ಕೆ ಸಮಾಧಾನಯುತ ಗೌರವ ಸಲ್ಲಿಸಿದಂತಾಗುವುದಲ್ಲದೇ, ಇನ್ನಿತರೆ ಹಲವಾರು ಪ್ರತಿಭೆಗಳಿಗೆ ಸ್ಫೂರ್ತಿಯನ್ನೂ ಸಹ ದೊರಕಿಸಿಕೊಟ್ಟಂತಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನವಂಬರ್ ಒಂದರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು. ಈ ಶುಭ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸಮಸ್ತ ಕನ್ನಡಿಗರ ಪರವಾಗಿ ಆಯ್ದ ಮಹನೀಯರಿಗೆ ಪ್ರಶಸ್ತಿಯ ಮೂಲಕ ಗೌರವವನ್ನು ಅರ್ಪಿಸುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, 20ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಹಲವಾರು ದಿನಗಳವರೆಗೂ ಕೇವಲ 10 ಸಾವಿರ ರೂಪಾಯಿಗಳಾಗಿದ್ದ ನಗದು ಬಹುಮಾನವನ್ನು 2008 ರಿಂದ ಒಂದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಈ ವರ್ಷವೂ ವಿವಿಧ ಕ್ಷೇತ್ರಗಳಿಂದ ಒಟ್ಟು 57 ಮಂದಿ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೇ ಏಳು ಸಂಘ-ಸಂಸ್ಥೆಗಳನ್ನೂ ಸಹ ಆಯ್ಕೆಮಾಡಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ವಿವರ ಕೆಳಕಂಡಂತಿದೆ:

ಸಾಹಿತ್ಯರಂಗಭೂಮಿ
ಎಚ್. ಎಸ್. ರಾಘವೇಂದ್ರ ರಾವ್ - ಚಿತ್ರದುರ್ಗ
ಬೋಳುವಾರು ಮಹಮದ್ ಕುಂಞ - ದಕ್ಷಿಣ ಕನ್ನಡ
ನಿರಂಜನ ವಾಲಿಶೆಟ್ಟರ್ - ಧಾರವಾಡ
ಸತ್ಯಾನಂದ ಪಾತ್ರೋಟ - ಬಾಗಲಕೋಟೆ
ಜಾಣಗೆರೆ ವೆಂಕಟರಾಮಯ್ಯ - ತುಮಕೂರು
ಚಿಂದೋಡಿ ಬಂಗಾರೇಶ್ - ದಾವಣಗೆರೆ
ಎನ್. ಎಸ್. ಮೂರ್ತಿ - ತುಮಕೂರು
ಅಲ್ತಾಫ - ರಾಯಚೂರು
ಎಂ. ಕೆ. ಸುಂದರರಾಜ್ - ಬೆಂಗಳೂರು
ಸಂಗೀತ-ನೃತ್ಯಜಾನಪದ
ಮೈಸೂರು ಮಹದೇವಪ್ಪ (ಸಂಗೀತ) - ಮಂಡ್ಯ
ನಂದಿನಿ ಈಶ್ವರ್ (ನೃತ್ಯ) - ಮೈಸೂರು
ಹನುಮಂತಪ್ಪ ಬಸಪ್ಪ ತಿಮ್ಮಾಪುರ (ಸಂಗೀತ) - ಹಾವೇರಿ
ವೆಂಕಪ್ಪ ಅಂಬಾಜಿ ಸುಗತೇಕರ - ಬಾಗಲಕೋಟೆ
ಯಲ್ಲವ್ವ ಬಸಪ್ಪ ಮಾದರ - ಬೆಳಗಾವಿ
ನಗಾರಿ ಸಿದ್ದಯ್ಯ - ರಾಮನಗರ
ಡಾ. ವೇಮಗಲ್ ಡಿ. ನಾರಾಯಣಸ್ವಾಮಿ - ಕೋಲಾರ
ಪಾಲಂದಿರ ದೇವಯ್ಯ - ಮಡಕೇರಿ
ಶಿವರುದ್ರಪ್ಪ ರೇವಣಸಿದ್ದಪ್ಪ ಮುದೋಳ - ಬಾಗಲಕೋಟೆ
ಪುಂಡಲೀಕ ಪೂಜಾರಿ - ಗುಲ್ಬರ್ಗ
ರಮೇಶ್ ಕಲ್ಲಡ್ಕ - ದಕ್ಷಿಣ ಕನ್ನಡ
ಸಂಗಪ್ಪ ಫಕೀರಪ್ಪ ಹೂಗಾರ - ಬಾಗಲಕೋಟೆ
ಲಲಿತ ಕಲೆ-ಶಿಲ್ಪಕಲೆಕ್ರೀಡೆ
ಪ. ಸ. ಕುಮಾರ್ - ಮೈಸೂರು
ಕೆ. ಎನ್. ರಮಚಂದ್ರನ್ - ಬಳ್ಳಾರಿ
ಕೃಷ್ಣಪ್ಪ ರಾಮಪ್ಪ ಬಡಿಗೇರ - ಬಾಗಲಕೋಟೆ
ಎಚ್. ಎನ್. ಗಿರೀಶ್ - ಹಾಸನ
ಪ್ರಕಾಶ್ ಗುರುಸಿದ್ದಪ್ಪ ಯರಗಟ್ಟಿ - ಮಹಾರಾಷ್ಟ್ರ
ಯಕ್ಷಗಾನಚಲನಚಿತ್ರ-ಕಿರುತೆರೆ
ಗೋಡೆ ನಾರಾಯಣ ಹೆಗಡೆ - ಉತ್ತರ ಕನ್ನಡ
ರಾಧಾಬಾಯಿ ಮಾರುತಿ ಮಾದರ - ಬೆಳಗಾವಿ
ಎಸ್. ಡಿ. ಅಂಕಲಗಿ - ಬೆಂಗಳೂರು
ಬಿ. ಜಯ - ಚಾಮರಾಜನಗರ
ಶಿಕ್ಷಣವಿಜ್ಞಾನ-ತಂತ್ರನಜ್ಞಾನ
ಪ್ರೊ. ಭಾಷ್ಯಂ - ಮಂಡ್ಯ
ಡಾ. ಬಿ. ಕೆ. ಹಿರೇಮಠ - ಬಾಗಲಕೋಟೆ
ಜಿ. ಎಸ್. ಪರಮಶಿವಯ್ಯ - ತುಮಕೂರು
ಡಾ. ಸಾಗರ್ ದುಗಾಣಿ - ಬೆಳಗಾವಿ
ಸಂಕೀರ್ಣಮಾಧ್ಯಮ
ಹಿರೇಮಗಳೂರು ಕಣ್ಣನ್ - ಚಿಕ್ಕಮಗಳೂರು
ಡಾ. ಆರ್. ಎಲ್. ಕಶ್ಯಪ್ - ಬೆಂಗಳೂರು
ಪ್ರೊ. ಎನ್. ಜಿ. ಕರೂರ್ - ವಿಜಾಪುರ
ಪ್ರೊ. ಸಿ. ವಿ. ಕೆರಿಮನಿ - ಗದಗ
ಪಂಡಿತ್ ಸುಧಾಕರ್ ಚತುರ್ವೇದಿ - ಬೆಂಗಳೂರು
ಇ. ವಿ. ಸತ್ಯನಾರಯಣ - ಶಿವಮೊಗ್ಗ
ಎಸ್. ಕೆ. ಶೇಷಚಂದ್ರಿಕ - ಶಿವಮೊಗ್ಗ
ಗೋಪಲ ಪ್ರಹ್ಲಾದ್ ರಾವ್ ನಾಯ್ಕ್ - ವಿಜಾಪುರ
ಟಿ. ವಿ. ಶಿವಾನಂದ್ - ಗುಲ್ಬರ್ಗ
ಎಸ್. ಶಾಂತರಾಮ್ - ಬೆಂಗಳೂರು
ಕೃಷಿಯೋಗ
ವಸಂತ ನಾರಾಯಣ ಕುಲಕರ್ಣಿ - ಬೆಳಗಾವಿ ಸಿ. ವಿ. ರುದ್ರಾರಾಧ್ಯ - ಶಿವಮೊಗ್ಗ
ಅಮ್ಮೀನಗೌಡ ಶಿವನಗೌಡ - ಹಾವೇರಿ
ಡಾ. ಈಶ್ವರ್ ಮೆಣಸಿನಕಾಯಿ - ಧಾರವಾಡ
ಸಮಾಜ ಸೇವೆಹೊರನಾಡು/ಹೊರದೇಶ
ತಾತ್ಯರಾವ್ ಕಂಬ್ಳೆ - ಬೀದರ್
ಪಿ. ಎನ್. ಬೆಂಜಮಿನ್ - ಬೆಂಗಳೂರು
ಅರವಿಂದ ಸೀತಾರಾಮನ್ - ಬೆಂಗಳೂರು
ಬಸವಲಿಂಗ ಪಟ್ಟದೇವರು - ಬೀದರ್
ಡಿ. ಉಮಾಪತಿ - ನವದಿಲ್ಲಿ
ಡ. ಲಿಂಗಣ್ಣ ಕಲಬುರ್ಗಿ - ನ್ಯೂಜಿಲೆಂಡ್
ಪುಟ್ಟಸ್ವಾಮಿ ಗುಡಿಗಾರ್ - ಗೋವಾ
ಪರಿಸರಸಂಘ-ಸಂಸ್ಥೆಗಳು
ಶಂಕರ ಕುಂಬಿ - ಧಾರವಾಡ
ಡಾ. ಎಚ್. ಸಿ. ಶರತ್ ಚಂದ್ರ - ಮೈಸೂರು
ಅರುಣೋದಯ ಸಂಸ್ಥೆ - ಗದಗ
ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ - ಬೆಂಗಳೂರು
ರಂಗಶ್ರೀ - ಬೆಂಗಳೂರು
ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ - ಬೆಂಗಳೂರು
ನ್ಯೂ ಹೊರೈಜಾನ್ ಎಜುಕೇಷನ್ ಮತ್ತು ಕಲ್ಚರಲ್ ಟ್ರಸ್ಟ್ - ಬೆಂಗಳೂರು
ಸ್ಪೂರ್ತಿಧಾಮ - ಉಡುಪಿ
ಮೊಗವೀರ ವ್ಯವಸ್ಥಾಪಕ ಮಂಡಳಿ - ಮುಂಬಯಿ


ಇಂತಹ ಸತ್ಕಾರ್ಯಗಳ ಮೂಲಕ ಸೃಜನಶೀಲ ವ್ಯಕ್ತಿತ್ವಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ಒದಗಿಸುತ್ತಿರುವ ಕರ್ನಾಟಕ ಸರ್ಕಾರದ ಧ್ಯೇಯವು ಮೆಚ್ಚುವಂತಹುದು ಹಾಗೂ ಅನುಕರಣೀಯವಾದುದು.

ಲೇಖಕರ ಕಿರುಪರಿಚಯ
ಡಾ. ಸತೀಶ್ ಮನ್ನಾಪುರ್

ಮೂಲತಃ ಬೆಳಗಾವಿಯ ಗೋಕಾಕ್ ತಾಲ್ಲೂಕಿನಲ್ಲಿರುವ ಸುನಧೋಳಿ ಗ್ರಾಮದವರಾದ ಇವರು 1994 ರಲ್ಲಿ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಪದವಿ ಪಡೆದರು.

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ 1999 ರಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಹೆಸರಘಟ್ಟದಲ್ಲಿರುವ ರಾಜ್ಯ ವೀರ್ಯ ಸಂಕಲನಾ ಕೇಂದ್ರದಲ್ಲಿ ಪಶುವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಹಾಗೂ ಕನ್ನಡ ಭಾಷೆಯ ಬಗೆಗೆ ಅತ್ಯಂತ ಪ್ರೀತಿ ಹಾಗೂ ಅಭಿಮಾನವನ್ನು ಹೊಂದಿದ್ದಾರೆ.

Blog  |  Facebook  |  Twitter

1 ಕಾಮೆಂಟ್‌:

  1. ಡಾ. ಸತೀಶ್ ಮನ್ನಾಪುರ್, ನಿಮ್ಮ ಈ ಲೇಖನದ ಕನ್ನಡ ರಾಜ್ಯೋತ್ಸವದ ವಿವಿದ ರಂಗಗಳಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ ಉಪಯುಕ್ತವಾಗಿದೆ.ಇದು ಮುಂದಿನ ಪೀಳಿಗೆಯವರಿಗೆ ಪ್ರೇರಣೆಯಾಗಿ ತಾವು ಸಹ ಅವರಂತೆ ಪ್ರಶಸ್ತಿ ಪಡೆಯಲು ಪ್ರೇರೇಪಿಸಲಿ ಎಂದು ಆಶಿಸುತ್ತೇನೆ

    ಪ್ರತ್ಯುತ್ತರಅಳಿಸಿ