ಭಾಷೆಯೆಂಬುದು ಕೇವಲ ಸಂವಹನ ಮಾಧ್ಯಮವಷ್ಟೇ ಅಲ್ಲ, ಅದು ಸಂಸ್ಕೃತಿಯ ಬಹುಮುಖ್ಯ ಅಂಗವೂ ಆಗಿದೆ. ಭಾರತವು ವೈವಿಧ್ಯತೆ ಮತ್ತು ವೈಶಿಷ್ಟ್ಯಗಳನ್ನೊಳಗೊಂಡ ಬಹು ಸಂಸ್ಕೃತಿಯ ನೆಲೆಬೀಡು. ಆದ್ದರಿಂದಲೇ ನಮ್ಮಲ್ಲಿ ಸುಮಾರು 125ಕ್ಕಿಂತಲೂ ಹೆಚ್ಚು ಭಾಷೆಗಳು ಬಳಕೆಯಲ್ಲಿವೆ. ಭಾಷೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿರುವ ಭಾರತದ ರಾಜ್ಯಗಳು ತಮ್ಮದೇ ಆದ ಭಾಷೆಗಳನ್ನು ಹೊಂದಿವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಾಜ್ಯದ ಭಾಷೆಗೆ ತಾಯಿಯಷ್ಟೇ ಗೌರವ ಮತ್ತು ಆದ್ಯತೆ ನೀಡುತ್ತಾನೆ. ಅಂತೆಯೇ ಕರ್ನಾಟಕದಲ್ಲಿ 'ಕನ್ನಡ' ಭಾಷೆಯು ಬಳಕೆಯಲ್ಲಿದೆ. ಕನ್ನಡಿಗರಿಗೆ ಕನ್ನಡ ಕೇವಲ ಒಂದು ಭಾಷೆಯಷ್ಟೇ ಅಲ್ಲ ಅದು ಅವರನ್ನು ಗುರುತಿಸುವ ಒಂದು ಸಾಧನ.
ಒಂದು ಭಾಷೆಯನ್ನು ನಾವು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ಬಲ್ಲೆವು ಎಂದರೆ ಆ ಭಾಷೆಯಲ್ಲಿ ಬಳಕೆಯಲ್ಲಿರುವ ಅಕ್ಷರಗಳ ಮೌಖಿಕ ಮತ್ತು ಲಿಖಿತ ರೂಪಗಳೆರಡನ್ನೂ ಕಲಿತಿರಬೇಕು. ಭಾಷೆಯನ್ನು ನಾವು ಸಂಪೂರ್ಣವಾಗಿ ಕಲಿತ್ತಿದ್ದೇವೆ ಎಂದುಕೊಂಡರೂ ಅದರ ಸ್ವರೂಪವನ್ನು ಸರಿಯಾಗಿ ಅರಿತಿರುವುದಿಲ್ಲ. ಬೆಳೆಯುತ್ತಾ ಬೆಳೆಯುತ್ತಾ ಆ ಭಾಷೆಯಲ್ಲಿ ಪ್ರಚಲಿತದಲ್ಲಿರುವ ಅಕ್ಷರಜ್ಞಾನವನ್ನು ಶಿಕ್ಷಣ ಇಲ್ಲವೆ, ಸಮಾಜದಲ್ಲಿನ ಸಂಪರ್ಕದೊಂದಿಗೆ ಕಲಿಯುತ್ತೇವೆ. ಅನೇಕ ಸಾರಿ ಒಂದು ಭಾಷೆ ತನ್ನ ಮಾತೃಭಾಷೆಯಾಗಿದ್ದು ಆ ಭಾಷೆಯನ್ನು ಹಲವಾರು ವರ್ಷಗಳ ಕಾಲ ದಿನನಿತ್ಯದ ವ್ಯವಹಾರದಲ್ಲಿ ಬಳಸುತ್ತಿದ್ದರೂ, ಜೊತೆಗೆ ಹತ್ತಾರು ವರ್ಷಗಳ ಕಾಲ ಶಿಕ್ಷಣದ ಮೂಲಕ ಆ ಭಾಷೆಯನ್ನು ಅರಿತು ಬಳಸುತ್ತಿದ್ದರೂ ಸಹ ಆ ಭಾಷೆಯ ಸ್ವರೂಪದ ಅರಿವು ಅಲ್ಪವಾಗಿರುತ್ತದೆ. ಇದಕ್ಕೆ ಅಂತಹ ದೊಡ್ಡ ಕಾರಣವೇನೂ ಇಲ್ಲದಿದ್ದರೂ ಕೆಲವೊಂದು ವಿಷಯಗಳ ಕಡೆ ಸೂಕ್ಷ್ಮ ದೃಷ್ಟಿಕೋನ ಹರಿಸದಿರುವುದು ಕಾರಣವಾಗಿರುತ್ತದೆ.
'ಕನ್ನಡ ಭಾಷೆಯನ್ನು ನಾನು ಬಲ್ಲೆ' ಎಂದು ಹೇಳಿಕೊಳ್ಳಬೇಕಾದರೆ ಆ ವ್ಯಕ್ತಿಗೆ ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ಅಕ್ಷರಗಳ ಮೌಖಿಕ ಮತ್ತು ಲಿಖಿತ ಸ್ವರೂಪಗಳು ಸ್ಪಷ್ಟವಾಗಿ ತಿಳಿದಿರಬೇಕು. ಈ ಅಂಶ ಸರ್ವರಿಗೂ ತಿಳಿದಿರುವುದೇ. ಆದರೆ ಕೆಲವೊಮ್ಮೆ ಸೂಕ್ಷ್ಮವಾಗಿ ನಮ್ಮ ತಿಳುವಳಿಕೆಯನ್ನು ಪರೀಕ್ಷಿಸಿದಾಗ ನಮಗೆ ಎಷ್ಟು ಗೊತ್ತು ಎಂದು ತಿಳಿಯುವ ಮೂಲಕವೆ ನಮಗೆಷ್ಟು ಗೊತ್ತಿಲ್ಲ ಎಂಬ ಅರಿವು ಮೂಡುತ್ತದೆ. ಜೊತೆಗೆ, ಗೊತ್ತಿರುವುದು ಎಷ್ಟು ಸರಿ ಎನ್ನುವುದೂ ಸಹ ತಿಳಿಯುತ್ತದೆ.
ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದುವುದಕ್ಕೆ ಮತ್ತು ಬರೆಯುವುದಕ್ಕೆ ಒಬ್ಬ ವ್ಯಕ್ತಿಗೆ ಅರಿವಿರಬೇಕಾದ ಅಕ್ಷರಗಳ ಸಂಖ್ಯೆ ಎಷ್ಟು? ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಉತ್ತರ ಬಹಳ ಕುತೂಹಲಕಾರಿಯಾಗಿರುತ್ತದೆ.
ಸಾಧಾರಣವಾಗಿ ಕನ್ನಡದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಅಕ್ಷರಗಳ ಸಂಖ್ಯೆ ಎಷ್ಟು? ಎಂಬುದಕ್ಕೆ ಸರಳವಾದ ಮತ್ತು ಸೂಕ್ತವಾದ ಉತ್ತರ 49 ಅಕ್ಷರಗಳು ಎಂಬುದು; ಅ-ಳ ವರೆಗೆ ([ಅ-ಅಃ = 15] + [ಕ-ಮ = 25] + [ಯ-ಳ = 9] = 49). ಇದು ಎಲ್ಲರಿಗೂ ತಿಳಿದಿರುವ ಅಂಶ ಮತ್ತು ಸರಿಯಾದದ್ದೂ ಆಗಿದೆ. ಆದರೆ ನಾವು ಹಾಕಿಕೊಂಡಿರುವ ಪ್ರಶ್ನೆಗೆ ಇದು ಸಮಂಜಸವಾದ ಉತ್ತರವೇ? ಎಂದಾಗ ಯೋಚಿಸಬೇಕಾಗುತ್ತದೆ.
ಈ ಚರ್ಚೆಯನ್ನು ಮಾಡುವ ವೊದಲು ಇದಕ್ಕೆ ಪೂರಕವಾಗಿ ಇಂಗ್ಲೀಷ್ ಭಾಷೆಯಲ್ಲಿ ಬಳಕೆಯಲ್ಲಿರುವ ಅಕ್ಷರಗಳ ಸಂಖ್ಯೆ ಎಷ್ಟು ಎಂದು ಗಮನಿಸಿದಾಗ 26 (A-Z) ಅಕ್ಷರಗಳು. ಈ ಭಾಷೆಗೆ ಮೊದಲೆತ್ತಿದ ಪ್ರಶ್ನೆಯನ್ನು ಅನ್ವಯಿಸಿದಾಗ ಉತ್ತರ ಬಹಳ ಸುಲಭ. ಹೌದು A-Z ವರೆಗೆ ಇರುವ ಅಕ್ಷರಗಳ ಕಲಿಕೆಯಿಂದ ಇಂಗ್ಲೀಷ್ ಭಾಷೆಯನ್ನು ಸಂಪೂರ್ಣವಾಗಿ ಓದಲು ಮತ್ತು ಬರೆಯಲು ಸಾಧ್ಯ. ಆದರೆ ಕನ್ನಡದಲ್ಲಿ ಈಗ ನಾವು ಬಳಸುತ್ತಿರುವ ಅ-ಳ ವರೆಗಿನ (49) ಅಕ್ಷರಗಳನ್ನು ಸಂಪೂರ್ಣವಾಗಿ ಕಲಿತವನಿಗೆ ಕನ್ನಡವನ್ನು ಸಂಪೂರ್ಣವಾಗಿ ಬರೆಯಲು ಮತ್ತು ಓದಲು ಸಾಧ್ಯವಾಗುವುದೇ ಇಲ್ಲ. ಇದರ ಜೊತೆಗೆ ಇತರೆ ಅಕ್ಷರಗಳ ಪರಿಜ್ಞಾನ ಇರಲೇಬೇಕು. ಕನ್ನಡ ಭಾಷೆಯಲ್ಲಿನ ಅಕ್ಷರಗಳ ಗುಂಪನ್ನು ಗಮನಿಸಿದಾಗ ಇದು ನಮಗೆ ಸ್ಪಷ್ಟವಾಗುತ್ತದೆ. ಸ್ವರಗಳು, ಅನುಸ್ವಾರ ಮತ್ತು ವಿಸರ್ಗ, ವರ್ಗೀಯ ವ್ಯಂಜನಗಳು, ಅವರ್ಗೀಯ ವ್ಯಂಜನಗಳು, ಕಾಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳು ಎಂದು ಗುರುತಿಸಲಾಗುತ್ತದೆ. ಈ ಎಲ್ಲ ಅಕ್ಷರಗಳ ಪರಿಜ್ಞಾನವನ್ನು ಪಡೆದವನಿಗೆ ಮಾತ್ರ ಕನ್ನಡವನ್ನು ಸಂಪೂರ್ಣವಾಗಿ ಓದಲು ಮತ್ತು ಬರೆಯಲು ಸಾಧ್ಯ ಅಲ್ಲವೇ?
ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಅಕ್ಷರಗಳ ಸಂಖ್ಯೆ ಎಷ್ಟು ಎಂದು ಯೋಚಿಸಿದರೆ ಸಿಗುವ ಉತ್ತರ 559 ಅಕ್ಷರಗಳು. ಅವುಗಳ ವಿವರ ಕೆಳಗಿನಂತಿದೆ:
ಇದು ನಮ್ಮೆಲ್ಲರಿಗೂ ಗೊತ್ತಿದ್ದರೂ ಸಹ ಕನ್ನಡದ ಅಕ್ಷರಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ತಕ್ಷಣ 49 ಎಂದು ಉತ್ತರಿಸುತ್ತೇವೆ. ಇದು ಎಷ್ಟು ಸರಿ? ನಾನಿಲ್ಲಿ ಕನ್ನಡದ ಅಕ್ಷರಗಳ ಸಂಖ್ಯೆಯನ್ನು 559 ಎಂದು ಹೇಳುತ್ತಿರುವುದು ಭಾಷಾ ವಿಜ್ಞಾನಿಗಳ ಅಥವ ಪಂಡಿತರ ಗ್ರಹಿಕೆಯ ಹಿನ್ನೆಲೆಯಲ್ಲಿ ಅಲ್ಲ. ಒಬ್ಬ ವ್ಯಕ್ತಿ ಕನ್ನಡಿಗನಾಗಿರಲಿ ಅಥವ ಅನ್ಯ ಭಾಷಿಕನಾಗಿರಲಿ, ಅವನು ಕನ್ನಡ ಭಾಷೆಯನ್ನು ಸಂಪೂರ್ಣ ಮತ್ತು ಸ್ಪಷ್ಟವಾಗಿ ಬಳಸಲು ಅಗತ್ಯವಾಗಿ ಅರಿವಿರಬೇಕಾದ ಅಕ್ಷರಗಳ ಜ್ಞಾನ ಎಷ್ಟಿರಬೇಕು ಎಂಬ ಹಿನ್ನೆಲೆಯಲ್ಲಿ ವಿವರಿಸಿದ್ದೇನೆ.
ನಮ್ಮ ಕನ್ನಡ ಭಾಷೆಯ ಅಕ್ಷರಗಳ ಸಾಮರ್ಥ್ಯ ಇಷ್ಟು ವಿಸ್ತಾರವಾಗಿರುವುದರಿಂದಲೇ ಈ ಭಾಷೆಯಲ್ಲಿ ಪದಪುಂಜಗಳು ಬಹಳ ಅಗಾಧವಾಗಿ ಕಾಣಸಿಗುತ್ತವೆ. ಅಷ್ಟೇ ಅಲ್ಲ, ಪದಗಳ ಸೃಷ್ಟಿಗೂ ಉಜ್ವಲ ಅವಕಾಶವಿದೆ. ಆದರೆ ನಾವು ನಮ್ಮ ಮುಂದಿನ ಪೀಳಿಗೆಯ ಮುಂದೆ ಕನ್ನಡದಲ್ಲಿ 49 ಅಕ್ಷರಗಳಿವೆ ಎಂದಷ್ಟೇ ತಿಳಿಸಿದರೆ ಅವರು ಅವೆಲ್ಲವನ್ನು ಸ್ಪಷ್ಟವಾಗಿ ಕಲಿತರೂ ಅರೆ ಕನ್ನಡಿಗರಾಗುತ್ತಾರಷ್ಟೇ ಅಲ್ಲವೆ? ಆದ್ದರಿಂದ ಅವರ ಗಮನವನ್ನು ನಾವು ಈ 559 ಅಕ್ಷರಗಳ ಕಡೆಗೆ ಹರಿಸಿ, ಕನ್ನಡವನ್ನು ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಈ ಎಲ್ಲಾ ಅಕ್ಷರಗಳ ಜ್ಞಾನ ಅತ್ಯವಶ್ಯಕ ಎಂದು ಸಾರಿ ಹೇಳಬೇಕು. ಈಗ ನೀವೇ ಹೇಳಿ ಕನ್ನಡದ ಅಕ್ಷರಗಳ ಸಂಖ್ಯೆಯನ್ನು 49 ಎಂದು ಹೇಳಬೇಕೆ? ಅಥವ 559 ಎಂದು ಹೇಳಬೇಕೆ??

ಸ್ವರಗಳು | ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ |
13
|
ಅನುಸ್ವಾರ ಮತ್ತು ವಿಸರ್ಗ | ಅಂ ಅಃ |
2
|
ವರ್ಗೀಯ ವ್ಯಂಜನಗಳು | ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ |
25
|
ಅವರ್ಗೀಯ ವ್ಯಂಜನಗಳು | ಯ ರ ಲ ವ ಶ ಷ ಸ ಹ ಳ |
9
|
ಕಾಗುಣಿತಾಕ್ಷರಗಳು | (ಅ-ಅಃ x ಕ-ಳ 510-34 = 476) |
476
|
ಒತ್ತಕ್ಷರಗಳು | ಕ-ಳ |
34
|
ಒಟ್ಟು
|
559
|
ಇದು ನಮ್ಮೆಲ್ಲರಿಗೂ ಗೊತ್ತಿದ್ದರೂ ಸಹ ಕನ್ನಡದ ಅಕ್ಷರಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ತಕ್ಷಣ 49 ಎಂದು ಉತ್ತರಿಸುತ್ತೇವೆ. ಇದು ಎಷ್ಟು ಸರಿ? ನಾನಿಲ್ಲಿ ಕನ್ನಡದ ಅಕ್ಷರಗಳ ಸಂಖ್ಯೆಯನ್ನು 559 ಎಂದು ಹೇಳುತ್ತಿರುವುದು ಭಾಷಾ ವಿಜ್ಞಾನಿಗಳ ಅಥವ ಪಂಡಿತರ ಗ್ರಹಿಕೆಯ ಹಿನ್ನೆಲೆಯಲ್ಲಿ ಅಲ್ಲ. ಒಬ್ಬ ವ್ಯಕ್ತಿ ಕನ್ನಡಿಗನಾಗಿರಲಿ ಅಥವ ಅನ್ಯ ಭಾಷಿಕನಾಗಿರಲಿ, ಅವನು ಕನ್ನಡ ಭಾಷೆಯನ್ನು ಸಂಪೂರ್ಣ ಮತ್ತು ಸ್ಪಷ್ಟವಾಗಿ ಬಳಸಲು ಅಗತ್ಯವಾಗಿ ಅರಿವಿರಬೇಕಾದ ಅಕ್ಷರಗಳ ಜ್ಞಾನ ಎಷ್ಟಿರಬೇಕು ಎಂಬ ಹಿನ್ನೆಲೆಯಲ್ಲಿ ವಿವರಿಸಿದ್ದೇನೆ.
ನಮ್ಮ ಕನ್ನಡ ಭಾಷೆಯ ಅಕ್ಷರಗಳ ಸಾಮರ್ಥ್ಯ ಇಷ್ಟು ವಿಸ್ತಾರವಾಗಿರುವುದರಿಂದಲೇ ಈ ಭಾಷೆಯಲ್ಲಿ ಪದಪುಂಜಗಳು ಬಹಳ ಅಗಾಧವಾಗಿ ಕಾಣಸಿಗುತ್ತವೆ. ಅಷ್ಟೇ ಅಲ್ಲ, ಪದಗಳ ಸೃಷ್ಟಿಗೂ ಉಜ್ವಲ ಅವಕಾಶವಿದೆ. ಆದರೆ ನಾವು ನಮ್ಮ ಮುಂದಿನ ಪೀಳಿಗೆಯ ಮುಂದೆ ಕನ್ನಡದಲ್ಲಿ 49 ಅಕ್ಷರಗಳಿವೆ ಎಂದಷ್ಟೇ ತಿಳಿಸಿದರೆ ಅವರು ಅವೆಲ್ಲವನ್ನು ಸ್ಪಷ್ಟವಾಗಿ ಕಲಿತರೂ ಅರೆ ಕನ್ನಡಿಗರಾಗುತ್ತಾರಷ್ಟೇ ಅಲ್ಲವೆ? ಆದ್ದರಿಂದ ಅವರ ಗಮನವನ್ನು ನಾವು ಈ 559 ಅಕ್ಷರಗಳ ಕಡೆಗೆ ಹರಿಸಿ, ಕನ್ನಡವನ್ನು ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಈ ಎಲ್ಲಾ ಅಕ್ಷರಗಳ ಜ್ಞಾನ ಅತ್ಯವಶ್ಯಕ ಎಂದು ಸಾರಿ ಹೇಳಬೇಕು. ಈಗ ನೀವೇ ಹೇಳಿ ಕನ್ನಡದ ಅಕ್ಷರಗಳ ಸಂಖ್ಯೆಯನ್ನು 49 ಎಂದು ಹೇಳಬೇಕೆ? ಅಥವ 559 ಎಂದು ಹೇಳಬೇಕೆ??
ಲೇಖಕರ ಕಿರುಪರಿಚಯ | |
ಡಾ. ಮಂಜುನಾಥ ಪಾಳ್ಯ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು, ಬಸವನಗುಡಿ ಇಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು 1999ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಎಂ.ಎ. ಮತ್ತು 2001ರಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಹಾಗೂ 2007ರಲ್ಲಿ 'ಕರ್ನಾಟಕ ಜಾನಪದದ ಮೇಲೆ ಜಾಗತೀಕರಣದ ಪ್ರಭಾವ' ಎಂಬ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕವಿ ಮತ್ತು ಲೇಖಕರಾಗಿ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ - ಒಳದನಿ (ಕವನ ಸಂಕಲನ), ಕತ್ತಲೆಯೊಳಗೆ ಬೆಳಕು (ಕವನ ಸಂಕಲನ), ಜಾನಪದ ದಿಟ್ಟಿ (ಪ್ರಬಂಧ ಸಂಕಲನ) ಮತ್ತು ಕನ್ನಡ ಭಾಷಾ ಕೈಪಿಡಿ (ವ್ಯಾಕರಣ). ಅಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಸಿದ 25ಕ್ಕೂ ಹೆಚ್ಚು ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ ಮಾಡಿದ್ದಾರೆ. Blog | Facebook | Twitter |
ಡಾ. ಮಂಜುನಾಥ ಪಾಳ್ಯರವರ ಈ ಲೇಖನವನ್ನು ಓದುವುದ್ದಕ್ಕೆ ಮೊದಲು ನಾನು ಸಹ ಕನ್ನಡದಲ್ಲಿ 49 ಅಕ್ಷರಗಳೆಂದೇ ತಿಳಿದಿದ್ದೆ .ಕನ್ನಡದ 559 ಅಕ್ಷರಗಲೆಂಬ ವಿವರವನ್ನು ಓದಿ ನನಗೂ ಹೊಸ ವಿಷಯ ತಿಳಿದಂತಾಯಿತು .ಇದಕ್ಕಾಗಿ ನಿಮಗೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿlekhakarige haagu prakata padisida kahaLe tanDakke nanna aatmeeya namanagaLu.
ಪ್ರತ್ಯುತ್ತರಅಳಿಸಿkannadada bage arivu mudisidake nimmage nama kruthgnathegalu.
ಪ್ರತ್ಯುತ್ತರಅಳಿಸಿ