ಸಮಾಚಾರ

ಕಹಳೆ ಕಾರ್ಯಕ್ರಮದ ಕುರಿತು ಇತ್ತೀಚಿನ ಸುದ್ದಿ / ಸಮಾಚಾರ



ಕಹಳೆ 2013 ಮತ್ತು 2014 ರ ಪುಸ್ತಕಗಳ ಕುರಿತು
ದಿನಾಂಕ: 02-08-2015, ಭಾನುವಾರ

ಆತ್ಮೀಯರೇ,

2011 ರಿಂದ ಮೊದಲ್ಗೊಂಡು, 2014 ರವರೆಗೆ ಕಹಳೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವ ಪ್ರತಿಯೊಬ್ಬ ಲೇಖಕರು ಹಾಗೂ ಸಮಸ್ತ ಕನ್ನಡ ಸಹೃದಯೀ ಓದುಗರಿಗೆ ಅನಂತ ವಂದನೆಗಳು. ಬಹುದಿನಗಳ ನಿರೀಕ್ಷೆಯಾಗಿರುವ ಕಹಳೆ 2013 ಮತ್ತು 2014 ರ ಪುಸ್ತಕಗಳು ಸಧ್ಯದಲ್ಲೇ ನಮ್ಮೆಲ್ಲರ ಕೈಸೇರಿ, ಕನ್ನಡ ಸಾಹಿತ್ಯ ಕ್ಷೇತ್ರದ ಇತಿಹಾಸ ಪುಟಗಳಲ್ಲಿ ಸ್ಥಾನ ಪಡೆದುಕೊಳ್ಳಲಿವೆ.

ಎಂದಿನ ವಾಡಿಕೆಯಂತೆ, ಕಹಳೆ ಪುಸ್ತಕಗಳನ್ನು ಲೇಖಕರುಗಳ ಮೂಲಕ ಕನ್ನಡ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ, ಎಲ್ಲ ಲೇಖಕರ ಇತ್ತೀಚಿನ ಅಂಚೆ ವಿಳಾಸ (ಪಿನ್‍-ಕೋಡ್ ಸಹಿತ), ಮಿಂಚಂಚೆ ವಿಳಾಸ ಹಾಗೂ ಚರ ದೂರವಾಣಿ ಸಂಖ್ಯೆಯ ಜೊತೆಗೆ ಅಗತ್ಯವಿರುವ ಪುಸ್ತಕಗಳ ಸಂಖ್ಯೆಯ ಕುರಿತು ಮಾಹಿತಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಲೇಖಕರುಗಳು ಮಾತ್ರವಲ್ಲದೇ, ಆಸಕ್ತ ಓದುಗರೂ ಸಹ ಪುಸ್ತಕಗಳನ್ನು ಪಡೆದುಕೊಳ್ಳಲು ತಮ್ಮ ಮಾಹಿತಿಯನ್ನು ಒದಗಿಸಲು ಕೋರುತ್ತೇವೆ. ಮುಂದಿನ 10 ದಿನಗಳೊಳಗಾಗಿ ಕಹಳೆ ಪುಸ್ತಕ ವಿತರಣೆ ಮಾಹಿತಿಕೋಶದಲ್ಲಿ ನಿಮ್ಮ ಕೋರಿಕೆಯನ್ನು ಸೇರಿಸಲು ದಯಮಾಡಿ http://goo.gl/forms/t2kV7IqWdK ಅಂತರ್ಜಾಲ ವಿಳಾಸಕ್ಕೆ ಭೇಟಿನೀಡಿ.

ಮುಂದುವರೆಯುತ್ತಾ, ಕಹಳೆ-2011 ಮತ್ತು 2012 ರ ಕಾರ್ಯಕ್ರಮದ ಪುಸ್ತಕಗಳ ಕೆಲವು ಪ್ರತಿಗಳು ಲಭ್ಯವಿದ್ದು, ಆಸಕ್ತರು ಅವುಗಳನ್ನು ಪಡೆದುಕೊಳ್ಳಲೂ ಸಹ ಕೋರಿಕೆ ಸಲ್ಲಿಸಬಹುದು, ಲಭ್ಯತೆಗೆ ಅನುಗುಣವಾಗಿ ಅವುಗಳನ್ನು ವಿತರಿಸಲಾಗುವುದು.

ಕಹಳೆ ನಿಮ್ಮ ಕಾರ್ಯಕ್ರಮ; ದಯವಿಟ್ಟು ಸಹಕರಿಸಿ-ಭಾಗವಹಿಸಿ, ಯಶಸ್ವಿಗೊಳಿಸಿ. ಉಳಿದಂತೆ ಇನ್ಯಾವುದೇ ವಿಷಯಗಳ ಬಗೆಗೆ ದಯವಿಟ್ಟು ನಮಗೆ ಮಿಂಚಂಚೆ ಸಂದೇಶ ಕಳುಹಿಸಿ; ನಿಮ್ಮೊಡನೆ ಸಂಭಾಷಿಸಲು ನಾವು ಉತ್ಸುಕರಾಗಿದ್ದೇವೆ.

ವಂದನೆಗಳು,
=> ಕಹಳೆ ತಂಡ.




ಕಹಳೆ 'ಸಂವಹನಾ ನೀತಿ' ಬದಲಾವಣೆ: ದಯವಿಟ್ಟು ಗಮನಿಸಿ
ದಿನಾಂಕ: 31-10-2014, ಶುಕ್ರವಾರ

ಆತ್ಮೀಯರೇ,

ಕಹಳೆ-2014 ಕಾರ್ಯಕ್ರಮದ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ, ದಿನಾಂಕ 01-11-2014 ರಿಂದ ಮೊದಲ್ಗೊಂಡು ದಿನಾಂಕ 30-11-2014 ರವರೆಗೆ ಪ್ರತಿದಿನ ಒಂದು ಬರೆಹವನ್ನು ನಮ್ಮ ಅಂತರ್ಜಾಲ ತಾಣ www.kahale.gen.in ದಲ್ಲಿ ಪ್ರಕಟಿಸಲಾಗುವುದು. ಕಹಳೆ-2014 ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ತಮ್ಮಲ್ಲಿ ಮಾಡಿದ ನಮ್ಮ ಮನವಿಗೆ ಅಭೂತಪೂರ್ವ ಸ್ಪಂದನೆ ದೊರೆತಿರುವುದು ನಮಗೆ ಅತೀವ ಸಂತಸ ತಂದಿದೆ. ಕಹಳೆ ಬಗೆಗಿನ ನಿಮ್ಮ ಪ್ರೀತಿ-ಅಭಿಮಾನ-ಸಹಕಾರಗಳಿಗೆ ನಾವು ಋಣಿಗಳು.

ಮುಂದುವರೆಯುತ್ತಾ, ಇತ್ತೀಚಿನ ದಿನಗಳಲ್ಲಿ 'ಮಿಂಚಂಚೆ ಸಂದೇಶ'ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದರೆ ತಪ್ಪಾಗಲಾರದು. ಹಾಗೆಯೇ, ನಮಗೆ ತಲುಪುವ ಮಿಂಚಂಚೆ ಸಂದೇಶಗಳನ್ನೂ ಸಹ ನಾವು ಅತ್ಯಂತ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ. ಹಲವಾರು ಮಿತ್ರರು ಕಹಳೆಯ ಮಿಂಚಂಚೆ ಸಂದೇಶಗಳನ್ನು 'ಅನಪೇಕ್ಷಿತ' (SPAM) ಎಂದು ನಮೂದಿಸಿರುವುದು ನಮ್ಮ ಅರಿವಿಗೆ ಬಂದಿರುತ್ತದೆ.

ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ಪ್ರತಿದಿನ ಪ್ರಕಟವಾಗುವ ಲೇಖನಗಳ ಬಗ್ಗೆ ನಾವು ಮಿಂಚಂಚೆ ಸಂದೇಶ ರವಾನಿಸುವುದರಿಂದ ಹಿಂದೆ ಸರಿಯುತ್ತಿದ್ದೇವೆ. ನಿಮ್ಮ ಮಿಂಚಂಚೆ ಹಾಗೂ ಅಂತರ್ಜಾಲ ಗೌಪ್ಯತೆಯನ್ನು ಗೌರವಿಸುವುದು ಇದರ ಹಿಂದಿರುವ ನಮ್ಮ ಆಶಯ. ಆದ್ದರಿಂದ, ನೀವು ಮುಂದಿನ ದಿನಗಳಲ್ಲಿ ಕಹಳೆ ಕಾರ್ಯಕ್ರಮದ ಬಗೆಗಿನ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲು ಈ ಕೆಳಕಂಡ ಮಾಧ್ಯಮಗಳ ಮೂಲಕ ಸ್ವಯಿಚ್ಛೆಯಿಂದ ನೊಂದಾಯಿಸಿಕೊಳ್ಳಲು ಕೋರಿದೆ:

1. ನಮ್ಮ ಅಂತರ್ಜಾಲ ತಾಣ (www.kahale.gen.in) ದ ಮೂಲಕ ಮಿಂಚಂಚೆ ಸಂದೇಶ ಪಡೆದುಕೊಳ್ಳಲು ತಾವು ತಮ್ಮ ಮಿಂಚಂಚೆ ವಿಳಾಸವನ್ನು ನೊಂದಾಯಿಸಿಕೊಳ್ಳಬಹುದು. ಇದು Google Feedburner ಸೇವೆಯನ್ನು ಬಳಸಿಕೊಳ್ಳುತ್ತದೆ.
2. ನಮ್ಮ Facebook ಪುಟ (https://www.facebook.com/kannada.kahalae) ಕ್ಕೆ ಭೇಟಿಕೊಟ್ಟು ಅಥವಾ ನೊಂದಾಯಿಸಿಕೊಂಡು, ಅಲ್ಲಿ ಬಿತ್ತರಿಸಲ್ಪಡುವ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
3. ನಮ್ಮ Twitter ಖಾತೆ (https://twitter.com/KannadaKahalae) ಯ ಪುಟಗಳಿಂದಲೂ ಸಹ ಕಹಳೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

ಕಹಳೆಯಲ್ಲಿ ಪ್ರಕಟವಾಗುವ ಲೇಖನಗಳ ಮಾಹಿತಿಯನ್ನು ಸಂಬಂಧಪಟ್ಟ ಲೇಖಕರಿಗೆ ಅವರ ಚರದೂರವಾಣಿ ಸಂಖ್ಯೆ ಲಭ್ಯವಿದ್ದಲ್ಲಿ ಕಿರುಸಂದೇಶದ ಮೂಲಕ ರವಾನಿಸಲಾಗುವುದು. ಅತೀ ಮುಖ್ಯವೆನಿಸಿದ ಮಾಹಿತಿಗಳನ್ನು ಮಾತ್ರವೇ ಇನ್ನು ಮುಂದೆ ಸಮೂಹ ಮಿಂಚಂಚೆ ಸಂದೇಶದ ರೂಪದಲ್ಲಿ ಕಳುಹಿಸಲಾಗುವುದು.

ನೊಂದಾಯಿತರ ಸಂಪೂರ್ಣ ಮಾಹಿತಿಗಳನ್ನು ಕಹಳೆ ಕಾರ್ಯಕ್ರಮದ ಬಗೆಗಿನ ಮಾಹಿತಿ ಸಂವಹನಕ್ಕಾಗಿ ಮಾತ್ರ ಬಳಸಲಾಗುವುದೇ ಹೊರೆತು, ಇತರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

ಇವುಗಳನ್ನು ಹೊರೆತುಪಡಿಸಿ, ಎಂದಿನಂತೆ ನಾವು ನಮ್ಮ ಮಿಂಚಂಚೆ ವಿಳಾಸದ ಮೂಲಕ ತಮ್ಮೊಡನೆ ನೇರ ಹಾಗೂ ನಿರಂತರ ಸಂಪರ್ಕದಲ್ಲಿರಲು ಉತ್ಸುಕರಾಗಿದ್ದೇವೆ. ಕಹಳೆ ಕಾರ್ಯಕ್ರಮದ ಬಗೆಗಿನ ಇನ್ಯಾವುದೇ ಮಾಹಿತಿಗಾಗಿ, ದಯವಿಟ್ಟು ನಮಗೆ ಸಂದೇಶ ಕಳುಹಿಸಿ.


ವಂದನೆಗಳು,
=> ಕಹಳೆ ತಂಡ.



ಕಹಳೆ-2014 ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ
ದಿನಾಂಕ: 29-09-2014, ಸೋಮವಾರ

ಆತ್ಮೀಯರೇ,

ನಿಮಗೂ, ಸಮಸ್ತ ಕನ್ನಡಿಗರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ನವೆಂಬರ್ ತಿಂಗಳಿನುದ್ದಕ್ಕೂ ವಿವಿಧ ಲೇಖಕರಿಂದ ಕನ್ನಡ ಭಾಷೆಯಲ್ಲಿ ರಚಿತವಾದ ವೈವಿಧ್ಯ ವಸ್ತು-ವಿಷಯದ ಬಗೆಗಿನ ಲೇಖನಗಳನ್ನು ದಿನಕ್ಕೊಂದರಂತೆ ಈ ತಾಣದಲ್ಲಿ ಪ್ರಕಟಿಸುವ ಮೂಲಕ ಕನ್ನಡ ನಾಡಹಬ್ಬವಾದ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಉದ್ದೇಶ ಹೊಂದಿದ್ದು, ಆಸಕ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಹೆಚ್ಛಿನ ಮಾಹಿತಿಗಾಗಿ ದಯಮಾಡಿ ಈ ಪುಟ ವೀಕ್ಷಿಸಿ.


ವಂದನೆಗಳು,
=> ಕಹಳೆ ತಂಡ.