ಚಿತ್ರಕೃಪೆ: ಗೂಗಲ್ |
ತಂಪು ಸೂಸುವ ತಾರೆಗಳು ಅತ್ತ-ಇತ್ತಲೂ
ಹಾಯೆಂದಿದೆ ಭೂವಲಯದ ತಪ್ಪಲು
ಹೊಂಗನಸ ನೇಸರ ನಿದ್ರೆಗೆ ಜಾರಲು
ನಗು ನಗುತ ಬಂದ ಕುಣಿದಾಡುತ ಬಂದ
ಇಡೀ ರಾತ್ರಿ ನನ್ನದೇ ಆಳ್ವಿಕೆಯೆಂದ
ಜಗವ ಕಂಡ ತನ್ನ ಬಾಡಿಗೆ ಬೆಳಕಿಂದ
ಅಂದ-ಚಂದ ನನ್ನ ಬಿಟ್ಟು ಬೇರಾರಿಲ್ಲೆಂದ
ಚುಕ್ಕಿಗಳು ಮೈ ಬಳುಕಿಸಿ ಕುಳಿತಿರಲು
ಕಪ್ಪು ನೆಟ್ಟ ದಟ್ಟ ಇರುಳು ಕವಿದಿರಲು
ಬಿಳಿ ಅಂಗಿಯ ಬಿಟ್ಟು ಚಂದ್ರ ನಗ್ನವಾಗಲು
ತನು ಬರಿದಾಗಲು ಮನ ಬಯಲಾಗಲು
ದಿನಕರನದಿದು ತೀರ್ಥಂಕರರ ಅನುಕರಣ
ನಿಶೆಗದು ಭರಿಸಲಾಗದ ಏಕಾಂಗಿ ಅಂತಃಕರಣ
ಮನಶ್ಶುದ್ಧಿಗೆ ಬೇಕು ನಗ್ನತೆಯ ಆವರಣ
ಇದೇ ಬೆತ್ತಲಾದ ಚಂದಿರನ ಅನಾವರಣ
ಲೇಖಕರ ಕಿರುಪರಿಚಯ | |
ಶ್ರೀ ಆದರ್ಶ ಹೆಗಡೆ ಸಿರ್ಸಿಯಲ್ಲಿ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿರುವ ಇವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಪುಸ್ತಕಗಳನ್ನು ಓದುವ ಗೀಳು ಹಚ್ಚಿಕೊಂಡಿರುವ ಇವರಿಗೆ ಕವಿತೆಗಳನ್ನು ಬರೆಯುವುದು ಹವ್ಯಾಸ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ