ಒಂದು ದಿನ ಕಛೇರಿಯಿಂದ ಮನೆಗೆ ಹಿಂದಿರುಗಿ, ಉಸ್ಸೆಂದು ಸೋಫಾ ಮೇಲೆ ಕುಕ್ಕರಿಸಿದೆ. ಕೆಲ ಕ್ಷಣಗಳಲ್ಲೇ ಅಡುಗೆ ಮನೆಯಿಂದ ಕಾಫಿ ಲೋಟವನ್ನು ತಂದ ನನ್ನ ಮಡದಿ, ನನ್ನ ಮುಂದಿದ್ದ ಟೀಪಾಯಿಯ ಮೇಲೆ ಕಾಫಿ ಲೋಟವನ್ನು ಕುಕ್ಕಿ (ಅಲ್ಲ.. ಅಲ್ಲ.. ಇಟ್ಟು): "ಜ್ಞಾಪಕ ಇದೆ ತಾನೆ? ನಾಳಿದ್ದು ಭಾನುವಾರ ನಮ್ಮ ಕಿಟ್ಟಣ್ಣನ ಮನೆ ಗೃಹ ಪ್ರವೇಶ. ಇವತ್ತೇ ಅಂಗಡಿಗೆ ಹೋಗಿ ಜಯಂತಿ ಅತ್ತಿಗೆಗೆ ಒಂದು ಸೀರೆ, ಕಿಟ್ಟಣ್ಣನಿಗೆ ಶರ್ಟ್-ಪ್ಯಾಂಟ್ ಪೀಸು ತರಬೇಕು; ಬೇಗ ಕಾಫಿ ಕುಡಿದು ಹೊರಡಿ" ಎಂದಳು. ಕಾಫಿ ಲೋಟವನ್ನು ತೆಗೆದುಕೊಳ್ಳಲು ಚಾಚಿದ ನನ್ನ ಕೈ ಹಾಗೆಯೇ ಉಳಿಯಿತು; ಎನೋ ಹೇಳಬೇಕೆಂದು ತೆರೆದ ಬಾಯಿ (ಧೈರ್ಯ ಸಾಲದೇ) ತೆರೆದೇ ಇತ್ತು; ಹಾಗೇ ಹೆಂಡತಿ ಮುಖ ನೋಡುತ್ತಾ ಕುಳಿತೆ. "ಅಯ್ಯೋ! ಅದೇನು ಹಾಗೆ ಬಾಯಿ ಬಿಟ್ಕೊಂಡು ನೋಡ್ತಾ ಕೂತಿರಿ? ಕಾಫಿ ಲೋಟ ತೊಗೊಳ್ಳಿ" ಎಂದು ಎಚ್ಚರಿಸಿದಳು.
ಆಜ್ಞಾನುಸಾರವಾಗಿ ನಾನು ಕಾಫಿ ಹೀರುತ್ತಾ ಕುಳಿತೆ. ಅಷ್ಟರಲ್ಲಿ ಮಹಡಿಯಿಂದ ಇಳಿದು ಬಂದ ನನ್ನ ಮಗಳು: "ಅಪ್ಪಾ.. ನಾಳಿದ್ದೂ ಟ್ಯಾಕ್ಸಿಲೇ ಹೋಗಬೇಕಾ? ಒಂದು ಸೆಕೆಂಡ್ ಹ್ಯಾಂಡಾದ್ರೂ ಸರಿ, ಕಾರು ತಗೋಳ್ಳೀಪ್ಪಾ! ನಾವೆಷ್ಟು ಹೇಳಿದ್ರೂ ಕಿವಿ ಮೇಲೆ ಹಾಕ್ಕೊಳ್ಳೋಲ್ಲ ನೀವು. ನಮ್ಮೆಲ್ಲಾ ರಿಲೇಟೀವ್ಸ್ ಅವರವರ ಕಾರುಗಳಲ್ಲಿ ಬಂದಿಳೀತಾರೆ; ನಾವು ಮಾತ್ರ ಬಸ್ಸಲ್ಲೋ, ಟ್ಯಾಕ್ಸಿಯಲ್ಲೋ ಹೋಗಬೇಕು. ಎಷ್ಟು ಮುಜುಗರ ಆಗುತ್ತೆ ಗೊತ್ತಾ?" ಎಂದುಲಿದಳು. "ಅಯ್ಯೋ ಬಿಡು, ನಾವೆಲ್ಲಾ ಎಷ್ಟು ಹೇಳಿದ್ರೂ ನಿಮ್ಮಪ್ಪ ತಮ್ಮ ಮನಸ್ಸಿಗೆ ಬಾರದ ಹೊರೆತೂ ಯಾವ ಕೆಲಸವನ್ನೂ ಮಾಡೋಲ್ಲಾ. ನಾನೂ ದುಡೀತಾ ಇದೀನಿ, ನನ್ನ ಮಾತಿಗೆ ಸ್ವಲ್ಪನಾದ್ರೂ ಬೆಲೆ ಇದೆಯಾ? ಊಹೂಂ, ಇಲ್ವೇ ಇಲ್ಲ" ಎಂದು ಆರೋಪಿಸಿದಳು ಪತ್ನಿ. "ಅಪ್ಪಾ.. ಈಗ ಎಲ್ಲ ಬ್ರಾಂಡಿನ ಕಾರುಗಳ ಬೆಲೇನೂ ಕಡಿಮೆ ಆಗಿದೆ. ಅಲ್ಲದೇ ಪ್ರೀ-ಓನ್ಡ್ ಕಾರುಗಳಿಗೂ ಲೋನ್ ಕೊಡ್ತಾರೆ. ಕಾರು ಕೊಳ್ಳೋದು ಈಗ ಬಹಳ ಸುಲಭ ಅಪ್ಪಾ" ಎಂದ ಪಕ್ಕದಲ್ಲಿದ್ದ ನನ್ನ ಮಗರಾಯ.
ಅಂದು ರಾತ್ರಿ ಯಾಕೋ ಬೇಗ ನಿದ್ದೆಯೇ ಹತ್ತಲಿಲ್ಲ. ಹೆಂಡತಿಯ ಕೊರೆತ ತಾಳಲಾರದೇ ನಾನೂ ಬೆಂಗಳೂರಿನಲ್ಲಿ 30x40 ನಿವೇಶನದಲ್ಲಿ ಮೂರು ರೂಮುಗಳ ಒಂದು ಡೂಪ್ಲೆಕ್ಸ್ ಮನೆ ಕಟ್ಟಿ ಆರೇಳು ವರ್ಷಗಳೇ ಕಳೆದಿವೆ. ಮಕ್ಕಳಿಬ್ಬರೂ ಇಂಜಿನಿಯರಿಂಗ್ ಓದಿಗಾಗಿ ಬೆಂಗಳೂರಿನಲ್ಲೇ ಸೇರಿದ್ದಾಗಿದೆ. ಇಬ್ಬರದ್ದೂ ಮೆರಿಟ್ ಸೀಟೇ ಆದುದರಿಂದ ಹೆಚ್ಚೇನೂ ಕಷ್ಟವಾಗಲಿಲ್ಲ. ಆದರೂ ನಾನು ಈ ಕಾರು ಕೊಳ್ಳುವ ಯೋಜನೆಯನ್ನು ಸುಮಾರು ದಿನಗಳಿಂದ ಮುಂದೂಡುತ್ತಾ ಬಂದಿದ್ದೇನೆ.
ಕಿಟ್ಟಣ್ಣನ ಮನೆಯ ಗೃಹ ಪ್ರವೇಶಕ್ಕೆ ಅಂತೂ ಬಾಡಿಗೆ ಟ್ಯಾಕ್ಸಿಯಲ್ಲೇ ಹೋಗಿಬಂದದ್ದಾಯಿತು. ಕಾರು ಕೊಳ್ಳುವ ಯೋಚನೆ ತಲೆ ಕೊರೆಯಲು ಪ್ರಾರಂಭವಾಯ್ತು- ಹೊಸ ಕಾರು ಕೊಳ್ಳುವುದಾದರೆ ಹೆಚ್ಚು ಹಣ ಹೊಂದಿಸಬೇಕಾಗುತ್ತದೆ; ಸಾಲ ಹೆಚ್ಚಾಗುತ್ತದೆ. ಈ ಮನೆ ಕಟ್ಟಲು ಮಾಡಿದ ಹೌಸಿಂಗ್ ಲೋನ್ ಇನ್ನೂ ಪೂರ್ತಿ ತೀರಿಲ್ಲ. ಮಕ್ಕಳ ಓದಿನ ಖರ್ಚೂ ಇರುತ್ತೆ. ಒಂದು ಸೆಕೆಂಡ್ ಹ್ಯಾಂಡ್ ಕಾರು ವಾಸಿ ಎನ್ನಿಸಿತು. ಮನಸ್ಸು ಗಟ್ಟಿಯಾದ ಮೇಲೆ ಒಂದು ದಿನ ತೀರ್ಮಾನವನ್ನು ಮನೆಯಲ್ಲಿ ಘೋಷಿಸಿದೆ, ಎಲ್ಲರಿಗೂ ಸಂತಸವಾಯಿತು. "ಅಪ್ಪಾ ಫೋರ್ಡ್ ಐಕಾನ್, ಹುಂಡೈ ಅಕ್ಸೆಂಟ್ ಅಂತಹಾ ಕಾರುಗಳಾದರೆ ವಾಸಿ, ಐದೂ ಜನ ಆರಾಮವಾಗಿ ಹೋಗಬಹುದು" ಎಂದ ಮಗರಾಯ. "ನೀವು ಕೆಲಸಕ್ಕೆ ಸೇರಿ, ನಿಮಗೆ ಯಾವುದು ಬೇಕೋ ತೊಗೊಳ್ಳಿ. ನಮಗೆ ಅದೆಲ್ಲಾ ಬೇಡಾ; ನಮ್ಮ ದೇಶದ ಜನಪ್ರಿಯ ಬ್ರಾಂಡಿನ ಸಣ್ಣ ಕಾರು ಸಾಕು" ಎಂದು ನಾನು ಹೇಳಿದಾಗ ಅವನಿಗೆ ನಿರಾಶೆಯಾಯಿತು. ಆಯಾ ಕಂಪನಿಗಳವರೇ ಈಗ ಪ್ರೀ-ಓನ್ಡ್ ಕಾರುಗಳನ್ನೂ ಮಾರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎರಡು ಮೂರು ಕಡೆ ಸುತ್ತಾಡಿ, ಒಂದು ಕಡೆ ನಮಗೆ ಇಷ್ಟವೆನಿಸಿದ ಕಾರಿನ ಬೆಲೆ, ಇತ್ಯಾದಿ ಹೊಂದಾಣಿಕೆ ಆದ ನಂತರ ಹತ್ತು ಸಾವಿರ ರೂಪಾಯಿಗಳ ಚೆಕ್ ನೀಡಿ ಬಂದದ್ದಾಯಿತು. ನಂತರ ಪಿ. ಎಫ್. ನಿಂದ ಹಣ ತೆಗೆದುಕೊಂಡು, ಹೆಂಡತಿಯು ನೀಡಿದ ದೇಣಿಗೆಯನ್ನೂ ಸೇರಿಸಿ, ಮತ್ತಿನ್ನೆಲ್ಲೂ ಸಾಲ ತೆಗೆದುಕೊಳ್ಳದೇ, ಕೇವಲ 80000(!!) ಕಿ.ಮೀ. ಓಡಿದ್ದ ಒಂದು ಕಾರನ್ನು ಖರೀದಿಸಿದ್ದಾಯಿತು. ಡ್ರೈವಿಂಗ್ ಸ್ಕೂಲಿನಲ್ಲಿ ಕಲಿತು, ಲೈಸನ್ಸ್ ಕೂಡ ಪಡೆದದ್ದಾಯಿತು.
ನಮ್ಮ ಮನೆ ಸ್ವಲ್ಪ ತಗ್ಗು ಪ್ರದೇಶದಲ್ಲಿದೆ (ಆದರೆ, ನಮ್ಮ ಮನೆಯ ಹಿಂದಕ್ಕೆ ಇನ್ನೂ ಇಳಿಜಾರಿನ ಪ್ರದೇಶವಿದೆ, ಆ ಮಾತು ಬೇರೆ). ಕಾರು ಕೊಂಡ ಹೊಸತರಲ್ಲಿ ಎಲ್ಲರನ್ನೂ ಕೂಡಿಸಿಕೊಂಡು ಒಂದು ಸುತ್ತು ಹೋಗಿಬರೋಣವೆಂದು ಮನೆಯವರನ್ನು ಹೊರಡಿಸಿದೆ. ಎಲ್ಲರೂ ಬಹು ಉತ್ಸಾಹದಿಂದ ಹೊರಟರು. ಸ್ವಲ್ಪ ದೂರ ಏರು ಪ್ರದೇಶದ ರಸ್ತೆಯಲ್ಲಿ ಕ್ರಮಿಸಿಯಾದ ಮೇಲೆ ಮೊದಲ ಗೇರಿನಿಂದ ಎರಡನೇ ಗೇರಿಗೆ ಬಂದಕೂಡಲೇ, ಆ ಏರು ಪ್ರದೇಶವನ್ನು ಹತ್ತಲಾಗದೇ ಕಾರು ನಿಂತು ಬಿಟ್ಟಿತು; ಹೇಗೋ ಹ್ಯಾಂಡ್ ಬ್ರೇಕ್ ಹಾಕಿ, ಕಾರು ಹಿಂದೆ ಜಾರದಂತೆ ನಿಲ್ಲಿಸಿದೆ. ಸ್ಟಾರ್ಟ್ ಮಾಡಿ ಮೊದಲ ಗೇರಿಗೆ ಹಾಕಿ ಹ್ಯಾಂಡ್ ಬ್ರೇಕ್ ತೆಗೆದ ಕೂಡಲೇ ಮತ್ತೆ ಹಿಂದೆ ಜಾರಲು ಪ್ರಾರಂಭಿಸಿ, ಒಳಗಿದ್ದವರೆಲ್ಲಾ ಗಾಬರಿಗೊಳ್ಳುವಂತೆ ಆಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ಮಡದಿಯಂತೂ ಹೆದರಿ ಕಂಗಾಲಾಗಿ, ಕೈಜೋಡಿಸಿ, ಬಾಯಲ್ಲಿ ಪಿಟಿ ಪಿಟಿ ಎಂದು ಗುರು ರಾಘವೇಂದ್ರರ ಶ್ಲೋಕ ಪಠಿಸಲು ಪ್ರಾರಂಭಿಸಿದಳು. "ಅಪ್ಪಾ, ಹೋಗಲಿ, ನಾವೆಲ್ಲಾ ಇಳಿದಕೊಂಡು ಬಿಡೋಣ್ವಾ? ತೂಕ ಕಡಿಮೆಯಾದರೆ ಕಾರು ಈ ಅಪ್ಪು ಹತ್ತಬಹುದೇನೋ?" ಎಂದಳು ಮಗಳು. ನನಗಂತೂ ಯಾರ ಮಾತೂ ತಲೆಗೆ ಹೋಗದು, ಪುನಃ ಪುನಃ ಪ್ರಯತ್ನಿಸುತ್ತಿದ್ದೆ. ಕೊನೆಗೂ ನಮ್ಮ ಕಾರು ಆ ಏರು ರಸ್ತೆಯನ್ನು ದಾಡಿಬಿಟ್ಟಿತು! ಆದರೆ ಈ ಯಶಸ್ಸು ಕ್ಷಣಿಕವಾಯ್ತು; ಸ್ವಲ್ಪ ದೂರ ಓಡಿ, ಹಠಹಿಡಿದು ಮುಂದೆ ಓಡದೇ ನಿಂತೇ ಬಿಟ್ಟಿತು! ಬಾನೆಟ್ಟಿನಿಂದ ಹೊಗೆ ಹೊರಡಲು ಪ್ರಾರಂಭವಾಯಿತು. ನಾನು ಗಾಬರಿಗೊಂಡು ಎಂಜಿನ್ ಆಫ್ ಮಾಡಿ ಕುಳಿತೆ. ಇದಿಷ್ಟಾಗುವ ವೇಳೆಗೆ ಎಲ್ಲರಿಗೂ "ಜಾಲಿ ರೈಡ್" ಸಾಕಾಗಿಹೋಗಿತ್ತು.
"ನಾವೆಲ್ಲರೂ ಮನೆಗೆ ನಡೆದುಕೊಂಡು ಹೋಗಿರ‍್ತೀವಿ; ನೀವು, ನಿಮ್ಮ ಮಗ ಇದ್ದು, ಅದೇನೋ ನೋಡಿಕೊಂಡು ಕಾರು ತಗೊಂಡು ಬನ್ನಿ" ಎಂದು ಹೇಳಿದ ಮಡದಿ, ತನ್ನ ಅತ್ತೆ, ಮಗಳನ್ನು ಕರೆದುಕೊಂಡು ಹೊರಟೇಬಿಟ್ಟಳು. "ಅಪ್ಪಾ.. ಈ ವಿಂಡೋ ಗ್ಲಾಸಿನ ಮೇಲೆ ಹೆಲ್ಪ್‌ಲೈನ್ ನಂಬರ್ ಕೊಟ್ಟಿದ್ದಾರೆ, ಫೋನ್ ಮಾಡಿ ನೋಡಿ, ಯಾರನ್ನಾದರೂ ಕಳಿಸಬಹುದು" ಎಂದು ಸಲಹೆ ನೀಡಿದ ಮಗ. ಅಂತೂ ಅರ್ಧ ಘಂಟೆಯೊಳಗೆ ಕಂಪನಿಯ ಇಬ್ಬರು ಒಂದು ಬೈಕಿನಲ್ಲಿ ಬಂದಿಳಿದು, ಅವರಲ್ಲೊಬ್ಬ ಬಾನೆಟ್ ತೆಗೆದು ಪರೀಕ್ಷಿಸಿ "ಸರ್, ಕೂಲೆಂಟ್ ಆಯಿಲ್ ಖಾಲಿಯಾಗಿದೆ" ಎಂದು ಹೇಳಿದ. "ಅಲ್ಲರೀ, ನಿಮ್ಮ ಕಂಪನಿಯಿಂದ ಕಾರು ತೊಗೊಂಡ ಮೇಲೆ ಇಪ್ಪತ್ತೈದು ಕಿಲೋಮೀಟರ್ ಕೂಡ ಓಡಿಸಿಲ್ಲ, ನಿಮ್ಮ ವಾರಂಟಿ ಒಂದು ವರ್ಷದವರೆಗೂ ಇದೆ, ಗೊತ್ತು ತಾನೆ?" ಎಂದು ಕೋಪದಿಂದಲೇ ಹೇಳಿದೆ. "ಸರಿ ಸರ್.. ಆದರೆ ಆ ವಾರಂಟಿಲಿ ಕೂಲೆಂಟ್ ಆಯಿಲ್ ಸೇರಿದೆಯೋ ಇಲ್ಲವೋ ಕಂಪನಿಗೆ ಫೋನ್ ಮಾಡಿ ಕೇಳ್ತೀನಿ ಇರಿ" ಎಂದು ಹೇಳಿದವನು ನಂತರ "ಆಯ್ತು ಸಾರ್.. ಕೂಲೆಂಟ್ ನಾವೇ ಹಾಕಿಕೊಡ್ತೀವಿ" ಎಂದು ಹೇಳಿ, ಬೈಕ್ ನಲ್ಲೇ ಹೋಗಿ ಕೂಲೆಂಟ್ ಆಯಿಲ್ ತಂದು ಹಾಕಿ, ಮತ್ತೇನೋ ಮಾಡಿ ಕಾರು ಸ್ಟಾರ್ಟ್ ಮಾಡಿದ. "ನೀವೇ ತಂದು ಮನೆಯಲ್ಲಿ ಪಾರ್ಕ್ ಮಾಡಿ ಬಿಡೀಪ್ಪಾ, ನನಗಂತೂ ಸಾಕಾಗಿ ಹೋಯ್ತು" ಎಂದು ಹೇಳಿದೆ. ಅವರು ಅಂತೆಯೇ ಮಾಡಿದರು. ಡ್ರೈವಿಂಗ್ ಚೆನ್ನಾಗಿ ಕಲಿಯುವವರೆಗೂ ಮನೆಯವರೆಲ್ಲರನ್ನೂ ಕರೆದುಕೊಂಡು ಎಲ್ಲೂ ಹೋಗಬಾರದೆಂದು ತೀರ್ಮಾನಿಸಿದೆ.
ಮತ್ತೊಂದು ಭಾನುವಾರ ಡ್ರೈವಿಂಗ್ ಪ್ರಾಕ್ಟೀಸ್ ಮಾಡೋಣವೆಂದುಕೊಂಡು ಮಗನನ್ನು ಪುಸಲಾಯಿಸಿ ಜೊತೆಮಾಡಿಕೊಂಡು ಹೊರಟೆ. ಒಂದೆರಡು ಕಿಲೋಮೀಟರ್ ಪ್ಯಾಯಾಣ ಚೆನ್ನಾಗಿತ್ತು, ಸ್ವಲ್ಪ ಧೈರ್ಯ ಬಂದಂತಾಯ್ತು. ಹಾಗೆಯೇ ಒಂದು ಕಡೆ ಬಲಕ್ಕೆ ಕಾರನ್ನು ತಿರುಗಿಸುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಕಾರು ಇನ್ನೇನು ನಮ್ಮ ಕಾರಿಗೆ ಢಿಕ್ಕಿ ಹೊಡೆದೇ ಬಿಡುವಷ್ಟು ಹತ್ತಿರ ಬಂದು ಕರ್ರೆಂದು ನಿಂತಿತು. ಆ ಕಾರಿನಿಂದ ಕೆಳಗಿಳಿದ ಒಬ್ಬನು "ಅಲ್ರೀ ಸ್ವಾಮಿ.. ಮೈನ್ ರೋಡಿನಲ್ಲಿ ಕಾರು ಓಡಿಸುವವರು ನಿದ್ದೆ ಮಾಡುತ್ತೀರೋ, ಏನು ಕತೆ? ಇಂಡಿಕೇಟರ್ ಹಾಕಬೇಕು ಅನ್ನುವ ಜ್ಞಾನ ಬೇಡ್ವಾ ನಿಮಗೆ?" ಎಂದು ಹಿಗ್ಗಾ ಮುಗ್ಗಾ ಬೈಯಲಾರಂಭಿಸಿದ. ನಾನು ಗಾಬರಿಗೊಂಡು ಪರೀಕ್ಷಿಸಿದರೆ, ಇಂಡಿಕೇಟರ್ ನಾಬ್ ಆನ್ ಆಗಿತ್ತು.. ಆದರೆ ಹೊರಗಡೆ ಇಂಡಿಕೇಟರ್ ಲೈಟು ಆನ್ ಅಗುತ್ತಿರಲಿಲ್ಲ. "ಓಹೋ.. ಇನ್ನೂ ಎಲ್ ಬೋರ್ಡು ಬೇರೆ" ಎಂದುಕೊಂಡು ಆತ ಹೊರಟುಹೋದ. ಮತ್ತೆ ಅದೇ ಹೆಲ್ಪ್ ಲೈನ್ ನಂಬರಿಗೆ ಫೋನ್ ಮಾಡಿ ಕೂಗಾಡಿದೆ. "ಸಾರ್, ನೀವು ಹೇಗೂ ನಮ್ಮ ಕಂಪನಿಯ ಹತ್ತಿರಾನೇ ಇದ್ದೀರಾ, ಇಲ್ಲಿಗೇ ಬಂದುಬಿಡಿ ನೋಡೋಣ" ಎಂದ ಆ ಕಡೆಯಿಂದ.
ಮತ್ತೊಮ್ಮೆ, ಬಿಗ್ ಬಜಾರಿಗೆ ಹೋಗಿ ತಿಂಗಳಿಗೆ ಬೇಕಾಗುವ ದವಸ, ಧಾನ್ಯ, ಇನ್ನಿತರೆ ಕೆಲವು ಸಾಮಾನು ತರೋಣವೆಂದು ಹೋದೆವು. ಖರೀದಿಯೆಲ್ಲಾ ಮುಗಿಸಿ, ಕಾರಿನಲ್ಲಿ ಹಾಕಿಕೊಂಡು ಹಿಂದಿರುಗುತ್ತಿದ್ದೆವು. ರಸ್ತೆಯಲ್ಲಿ ಎರಡೂ ಬದಿಗೆ ಅವರ ಮನೆಗಳ ಮುಂದೆ ಕಾರುಗಳನ್ನು ನಿಲ್ಲಿಸಿದ್ದರು. ನಾನು ಬಹಳ ಜಾಗರೂಕತೆಯಿಂದ ಕಾರು ಓಡಿಸುತ್ತಿದ್ದೆ. ಆದರೆ, ಎದುರಿನಿಂದ ಬಂದ ಒಂದು ಟಾಟಾ ಸೂಮೋ ಟ್ಯಾಕ್ಸಿ ಇನ್ನೇನು ನಮ್ಮ ಕಾರನ್ನು ಉಜ್ಜಿಕೊಂಡು ಹೋಯಿತೇನೋ ಎನ್ನುವಂತೆ ನುಗ್ಗಿಸಿಕೊಂಡು ಹೋಗಿಬಿಟ್ಟ. ನಾನು ಗಾಬರಿಗೊಂಡು ಸೀದಾ ರಸ್ತೆಯ ಎಡಭಾಗಕ್ಕೆ ತಿರುಗಿಸಿಬಿಟ್ಟೆ ನೋಡಿ! ಮತ್ತೊಂದು ಕಾರಿಗೆ ಢಿಕ್ಕಿ ಹೊಡೆಯುವುದನ್ನ ತಪ್ಪಿಸಿ, ಒಂದು ಮನೆಯ ಕಾಂಪೌಂಡಿಗೆ ಢಿಕ್ಕಿ ಹೊಡೆದೇ ಬಿಟ್ಟಿತು. ಕಾಂಪೌಂಡ್ ಮುರಿದಿದ್ದರಿಂದ, ಆ ಮನೆಯವರು ರಿಪೇರಿ ಖರ್ಚನ್ನು ಕೊಡುವವರೆಗೂ ಬಿಡುವುದಿಲ್ಲವೆಂದು ಪಟ್ಟು ಹಿಡಿದ ಕಾರಣ, ಕಾರಿನಲ್ಲಿದ್ದ ಚೆಕ್ ಬುಕ್ಕಿನಿಂದ ಹತ್ತು ಸಾವಿರಕ್ಕೆ ಬರೆದ ಒಂದು ಚೆಕ್ ಕೊಟ್ಟಿದ್ದಾಯ್ತು. ಕಾರಿನ ಮುಂಭಾಗ ಸಾಕಷ್ಟು ಜಜ್ಜಿ ಹೋಗಿ, ಸ್ಟಾರ್ಟ್ ಮಾಡಲೂ ಸಾಧ್ಯವಾಗಲಿಲ್ಲ.
ಮತ್ತೆ ಹೆಲ್ಪ್ ಲೈನ್ ನಂಬರಿಗೆ ಫೋನ್ ಮಾಡಿ, ಹೀಗಾಗಿದೆಯೆಂದು ತಿಳಿಸಿದೆ. ಅವರು ಟೋ ವ್ಯಾನಿನ ಸಹಾಯದಿಂದ ಕಾರನ್ನು ಗೆರಾಜಿಗೆ ತೆಗೆದುಕೊಂಡು ಹೋದರು. ಒಂದೆರಡು ದಿನಗಳಲ್ಲಿ ಕಾರಿನ ಕಂಪನಿಯವರು ನನಗೆ ಫೋನ್ ಮಾಡಿ, ರಿಪೇರಿ ಖರ್ಚಾ ಸುಮಾರು 70-75 ಸಾವಿರಗಳಾಗಬಹುದೆಂದೂ, ಇನ್ಷುರೆನ್ಸ್ ಕಂಪನಿಯವರಿಂದ 50 ಸಾವಿರದವರೆಗೂ ಸಿಗಬಹುದೆಂದು ತಿಳಿಸಿದರು. ಮತ್ತೇನು ಮಾಡುವುದು? ರಿಪೇರಿ ಕಾರ್ಯ ಮಾಡಿಮುಗಿಸಲು ತಿಳಿಸಿದೆ.
ರಿಪೇರಿಗೊಂಡ ಕಾರನ್ನು ಹಿಂದೆ ಪಡೆಯಲು ಹೋದಾಗ ಆ ಕಂಪನಿಯವರಿಗೆ "ಈ ಕಾರನ್ನು ಮಾರಿಬಿಡುತ್ತೇನೆ, ನೀವೇ ಕೊಂಡುಕೊಳ್ಳಿ" ಎಂದು ಹೇಳಿದೆ. "ಸರ್, ಈಗ ಯುಸ್ಡ್ ಕಾರುಗಳಿಗೆ ಬೆಲೆಯೇ ಇಲ್ಲ. ಕೆಲವರು ಕೊಂಡ ಹೊಸ ಕಾರುಗಳನ್ನೇ ಮಾರಲು ಕೆಲವೇ ದಿನಗಳಲ್ಲಿ ಬರ‍್ತಾರೆ, ಅಂತಹ ಹೊಸ ಕಾರುಗಳಿಗೇ 50% ಸಹ ಸಿಗೋಲ್ಲ. ಈ ಕಾರು ಐದಾರು ವರ್ಷ ಹಳೆಯದು, 80000 ಕಿ.ಮೀ. ಓಡಿದೆ; ಸಾಲದ್ದಕ್ಕೆ ಈಗ ಆಕ್ಸಿಡೆಂಟ್ ಆಗಿರುವ ಗಾಡಿ ಬೇರೆ; ಈ ಕಾರಿಗೆ ಏನು ಬೆಲೆ ಬರಬಹುದು ನೀವೇ ಹೇಳಿ ಸಾರ್" ಎಂದು ಹೇಳಿ, ಕೊಳ್ಳುವ ಆಸಕ್ತಿಯೇ ತೋರಿಸಲಿಲ್ಲ.
ಈ ಕಾರು ಕೊಂಡು, ಇಷ್ಟೆಲ್ಲಾ ಕಷ್ಟ ಅನುಭವಿಸಿ, ಮನೆಯವರುಗಳಿಂದಲೂ ಮೂತಿ ತಿವಿಸಿಕೊಂಡು ಸಾಕಾಗಿದೆ. ಕಾರನ್ನು ಹೊರಗೆ ತೆಗೆಯಲು ಧೈರ್ಯ ಬಾರದು, ಮನೆಯಲ್ಲಿ ಉಪಯೋಗಿಸದೇ ಹಾಗೆಯೇ ಇಟ್ಟುಕೊಳ್ಳಲಾಗದು. ಅಂದ ಹಾಗೆ.. ನಿಮಗೇನಾದರೂ ಕಾರು ಕೊಳ್ಳುವ ಬಯಕೆಯಿದ್ದರೆ ಒಮ್ಮೆ ಬನ್ನಿ,.. ನೋಡಿ.. ಸಸ್ತಾ ಬೆಲೆಗೇ ಕೊಟ್ಟುಬಿಡ್ತೇನೆ.. ಬರ‍್ತೀರಾ?

ಚಿತ್ರ ಕೃಪೆ: ಎಡ್ರಿಯಾನ |

ಲೇಖಕರ ಕಿರುಪರಿಚಯ | |
ಶ್ರೀ ಜೆ. ಆರ್. ನರಸಿಂಹಸ್ವಾಮಿ ಇವರ ಅನೇಕ ಬರವಣಿಗೆಗಳು ಪ್ರಸಿದ್ಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ನಾಗಪುರದಲ್ಲಿನ ಭಾರತೀಯ ಅಂಚೆ ಕಚೇರಿಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಭಾಷಾಂತರ ತಜ್ಞರು. Blog | Facebook | Twitter |
ಸುಂದರವಾದ ಬರಹ... ಅಟೆನ್ಶನ್ ಟು ಡೀಟೇಲ್ ಬಹಳ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿಸುಂದರವಾದ ಬರಹ... ಅಟೆನ್ಶನ್ ಟು ಡೀಟೇಲ್ ಬಹಳ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ