ಶುಕ್ರವಾರ, ನವೆಂಬರ್ 27, 2015

ಅಂತರಂಗದ ಒಳಹೊಕ್ಕಾಗ

ನೆನಪುಗಳ ದೋಣಿಯಲಿ
ಸ್ವಾರ್ಥದ ಕಮರಿನಲಿ
ಮತ್ತದೇ ನೆನಪುಗಳು
ತೇಲುತಿವೆ ಕಣ್ಣೆದುರು.

ಹೊರ ಜಗದ ಮೋಹದ ಸುಳಿಯಲಿ
ಬದುಕು ಪ್ರಹಸನವಾಗಿದೆ ಇಂದು
ಒಳಗೆ ಇಣುಕಿ ನೋಡಿದರೆ
ತಿಳಿಯುವುದು ತಿರುಳಿಲ್ಲ ಎಂದು.

'ನೀ ನನ್ನವ, ನಾ ನಿನ್ನವ'
ಬರಿಯ ಮಾತಿನ ನುಡಿಗಳಾದವ?
ಇಷ್ಟು ದಿನ ಬೆರೆತರೂ, ನಾವು
ಏಕೆ ಅರಿತಿಲ್ಲ ನಮ್ಮ ಅಂತರಂಗವ?

ತುಕ್ಕು ಹಿಡಿದ ಮನದ
ಕವಾಟಗಳೆರಡು ಬಡಿದು, ಎಚ್ಚರಿಸಿದೆ!
ಬಾಹ್ಯ ಕಾಣುವುದು
ಬರಿಯ ಬೆರಗು
ಅಂತರಂಗದ ಒಳಹೊಕ್ಕಾಗ
ಕಾಣುವುದೇ ನಿಜವಾದ ಅರಿವು!

ಲೇಖಕರ ಕಿರುಪರಿಚಯ
ಕುಮಾರಿ ಮಾನಸ, ಎಂ. ಆರ್.

ಮೈಸೂರು ಜಿಲ್ಲೆಯವರಾದ ಇವರು ಪ್ರಸ್ತುತ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾದಂಬರಿ ಓದುವುದು, ಚಿತ್ರಕಲೆ ಹಾಗೂ ಹಾಡುಗಾರಿಕೆ ಇವರ ಹವ್ಯಾಸಗಳು.

Blog  |  Facebook  |  Twitter

2 ಕಾಮೆಂಟ್‌ಗಳು:

  1. ನಿಮ್ಮ ಕವನದಲ್ಲಿ ಬಹಳ ಸರಳವಾಗಿ ತುಂಬ ಕ್ಲಿಷ್ಟವಾದ ಆಧ್ಯಾತ್ಮವನ್ನು ಮೂಡಿಸಿ, ಒಮ್ಮೆ ಆಲೋಚಿಸುವಂತೆ ಮಾಡಿರುವಿರಿ. ನಿಜಕ್ಕೂ ಈ ರೀತಿಯ ಕವನಗಳು ಬೇಕಾಗಿದೆ ಈಗ...

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕವನದಲ್ಲಿ ಬಹಳ ಸರಳವಾಗಿ ತುಂಬ ಕ್ಲಿಷ್ಟವಾದ ಆಧ್ಯಾತ್ಮವನ್ನು ಮೂಡಿಸಿ, ಒಮ್ಮೆ ಆಲೋಚಿಸುವಂತೆ ಮಾಡಿರುವಿರಿ. ನಿಜಕ್ಕೂ ಈ ರೀತಿಯ ಕವನಗಳು ಬೇಕಾಗಿದೆ ಈಗ...

    ಪ್ರತ್ಯುತ್ತರಅಳಿಸಿ