ಮಂಗಳವಾರ, ನವೆಂಬರ್ 29, 2016

ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್! - ಚಿರಂಜೀವಿ

ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್! - ಚಿರಂಜೀವಿ

ಶೀರ್ಷಿಕೆ: ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್!
ಮೂಲ ಲೇಖಕರು: ಸ್ವಾಮಿ ಸುಖಬೋಧಾನಂದ
ಕನ್ನಡ ಅನುವಾದ: ಚಿರಂಜೀವಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಕೆಂಪೇಗೌಡನಗರ, ಬೆಂಗಳೂರು. 
ಪ್ರಧಮ ಮುದ್ರಣ: 2000
ಐ.ಎಸ್.ಬಿ.ಎನ್.: 81-7531-024-3

ಪುಸ್ತಕ ಕುರಿತು: ಮತಗಳನ್ನೂ ಮನುಷ್ಯ-ಮನಸ್ಸುಗಳನ್ನೂ ಒಂದಾಗಿ ನೇಯ್ದು ಹೆಣೆಯುವಂಥ ಯಾವ ಪುಸ್ತಕವಾದರೂ ಆಗಲಿ, ಅದನ್ನು ಒಂದು ಸಲ ಆ ಕೊನೆಯಿಂದ ಈ ಕೊನೆಯವರೆಗೆ ಓದಿ ಮಗುಚಿಟ್ಟುಬಿಟ್ಟರೆ ಅದರಿಂದ ಪೂರ್ಣ ಪ್ರಯೋಜನ ದೊರೆಯಲಾರದು. ನಮ್ಮನ್ನು ನಾವು ಬೆಳೆಸಿಕೊಳ್ಳಬೇಕಾದರೆ ಇಂಥ ಸಾಹಿತ್ಯವನ್ನು ಅವಧಾನಪೂರ್ವಕ ಮತ್ತೆ ಮತ್ತೆ ಓದಿ ಮನನ ಮಾಡಬೇಕಾಗುತ್ತದೆ. ಈ ಪುಸ್ತಕದಲ್ಲಿ ಹೇಳಿರುವ ವಿಷಯಗಳನ್ನು ತಾಳ್ಮೆಯಿಂದ ಓದಿ, ತೂಗಿನೋಡಿ, ಚಿಂತನೆಗೊಳಪಡಿಸಿ, ಅಂದಂದಿನ ಬದುಕಿನಲ್ಲಿ ಜಾರಿಗೆ ತರಲು ಪ್ರಯತ್ನಿಸಿ ನೋಡಿ. ಆಗ ಅವೇ ಮಾತುಗಳು ನಿಮ್ಮ ಅರಿವನ್ನು ಜಾಗೃತಗೊಳಿಸಿ ನಿಮ್ಮನ್ನು ಇಡಿಯಾಗಿ ಬದಲಾಯಿಸಿಯಾವು! ನಾನು ಇಲ್ಲಿ ಬಳಸಿರುವ ವಿಷಯಗಳೂ ಉಪಕಥೆಗಳೂ ಹಿಂದೂ, ಬೌದ್ಧ, ಜೈನ, ಸೂಫೀ ಮೊದಲಾದ ಅನೇಕ ಮತಗಳ ಆಧಾರಗ್ರಂಥಗಳಿಂದ ಹೆಕ್ಕಿತೆಗೆದಂಥವು. ಪ್ರಸಿದ್ಧರಾದವರ ಹಾಗೂ ಅಜ್ಞಾತ ಜನಸಾಮಾನ್ಯರ ಜೀವನಗಳಿಂದಲೂ ಎಷ್ಟೊ ನೀತಿಗಳನ್ನು ತೆಗೆದು ಅಳವಡಿಸಿದ್ದೇನೆ. ಹೀಗಿರುವುದರಿಂದ, ಇಲ್ಲಿ ತೋರಿರುವ ದಿಕ್ಸೂಚಕ ಸೂತ್ರಗಳನ್ನು ಬದುಕಿನಲ್ಲಿ ಅನ್ವಯಿಸುವುದು ಕಠಿಣವಾಗಲಾರದು. ನೀವು ಪ್ರಯತ್ನ ಮಾಡಿ ನೋಡಿ; ನಿಮ್ಮ ಪ್ರಯತ್ನಗಳಿಗೆ ಫಲ ಖಂಡಿತ ಉಂಟು. - ಸ್ವಾಮಿ ಸುಖಬೋಧಾನಂದ.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ