ಶೀರ್ಷಿಕೆ: ಗಾಂಧೀ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ
ಮೂಲ ಲೇಖಕರು: ಮಹಾತ್ಮ ಗಾಂಧೀ
ಕನ್ನಡಕ್ಕೆ ಅನುವಾದ: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು: ಜಿತೇಂದ್ರ ಟಿ ದೇಸಾಯಿ, ನವಜೀವನ್ ಪಬ್ಲಿಷಿಂಗ್ ಹೌಸ್, ಅಹಮದಾಬಾದ್.
ಪ್ರಧಮ ಮುದ್ರಣ: 1995
ಪುಸ್ತಕ ಕುರಿತು: ಒಂದು ಯಥಾವತ್ತಾದ ಆತ್ಮಕಥೆಯನ್ನು ಬರೆಯಲು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ನಾನು ಹೇಳಬಯಸುವುದು ಸತ್ಯಶೋಧನೆಯ ನನ್ನ ಅನೇಕ ಪ್ರಯೋಗಗಳ ಕಥೆಯನ್ನು ಮಾತ್ರ. ನನ್ನ ಜೀವನ ಈ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ. ಆದುದರಿಂದ ಈ ಕಥೆ ಆತ್ಮಕಥೆಯ ರೂಪವನ್ನು ಹೊಂದುವುದೂ ಸತ್ಯ. ಇದರ ಪ್ರತಿಯೊಂದು ಪುಟದಲ್ಲಿಯೂ ನನ್ನ ಪ್ರಯೋಗಗಳ ವಿಷಯವನ್ನೇ ಹೇಳುವುದಾದರೂ ನನಗೆ ಚಿಂತೆಯಿಲ್ಲ. ಈ ಎಲ್ಲ ಪ್ರಯೋಗಗಳ ಒಟ್ಟು ಕಥೆ ವಾಚಕರಿಗೆ ಲಾಭವಾಗದಿರದೆಂದು ನಾನು ನಂಬುತ್ತೇನೆ. ಈಗ, ರಾಜಕೀಯ ಕ್ಷೇತ್ರದ ನನ್ನ ಪ್ರಯೋಗಗಳು ಭಾರತದಲ್ಲಿ ಮಾತ್ರವೇ ಅಲ್ಲದೆ "ನಾಗರಿಕ" ಪ್ರಪಂಚಕ್ಕೆಲ್ಲ ತಕ್ಕಮಟ್ಟಿಗೆ ಗೊತ್ತಾಗಿದೆ. ಅವುಗಳಿಂದ ನನಗೆ ಬಂದಿರುವ "ಮಹಾತ್ಮ" ಎಂಬ ಬಿರುದು ನನಗೆ ಇನ್ನೂ ಕಡಿಮೆ ಬೆಲೆಯುಳ್ಳದ್ದು. ಅನೇಕ ವೇಳೆ ಈ ಬಿರುದು ನನಗೆ ನೋವನ್ನುಂಟುಮಾಡಿದೆ. ಇದರಿಂದ ಒಂದು ಕ್ಷಣವಾದರೂ ನಾನು ಉಬ್ಬಿಹೋದುದು ನನಗೆ ನೆನಪಿಲ್ಲ. ಆದರೆ ಆಧ್ಯಾತ್ಮ ಕ್ಷೇತ್ರದಲ್ಲಿ ನಾನು ನಡೆಸಿದ ಪ್ರಯೋಗಗಳನ್ನು ವಿವರಿಸುವುದು ನನಗೆ ನಿಜವಾಗಿಯೂ ಇಷ್ಟ. ಇವು ಗೊತ್ತಿರುವುದು ನನಗೆ ಮಾತ್ರ. ಈ ಪ್ರಯೋಗಗಳು ರಾಜಕೀಯ ಕ್ಷೇತ್ರದಲ್ಲಿ ಕೆಲಸಮಾಡಲು ನನಗೆ ಶಕ್ತಿಯನ್ನು ಕೊಟ್ಟಿವೆ. ಇವುಗಳಿಂದ ನನ್ನ ನಮ್ರತೆಯೇ ಹೆಚ್ಚಾಗಬಲ್ಲದು, ನಾನು ನನ್ನಲ್ಲೇ ಆಲೋಚನೆ ಮಾಡಿ ಹಿನ್ನೋಟ ಬೀರಿದಂತೆ ನನ್ನ ದೌರ್ಬಲ್ಯ ನನಗೆ ಹೆಚ್ಚು ಸ್ಪಷ್ಟವಾಗಿ ಅನುಭವವಾಗುತ್ತಿದೆ.. - ಗಾಂಧೀ.
ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.
=> ಕಹಳೆ ತಂಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ