ಶೀರ್ಷಿಕೆ: ಯೇಗ್ದಾಗೆಲ್ಲಾ ಐತೆ
ಲೇಖಕರು: ಬೆಳಗೆರೆ ಕೃಷ್ಣಶಾಸ್ತ್ರೀ
ಪ್ರಕಾಶಕರು: ಅಭಿನವ, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.
ಪ್ರಧಮ ಮುದ್ರಣ: 1994
ಪುಸ್ತಕ ಕುರಿತು: 'ಯೇಗ್ದಾಗೆಲ್ಲಾ ಐತೆ' ಕನ್ನಡದ ಅನುಭಾವ ಸಾಹಿತ್ಯಕ್ಕೆ ಬೆಲೆಗಟ್ಟಲಾಗದ ಒಂದು ಕಾಣಿಕೆ. ಮುಕುಂದೂರು ಸ್ವಾಮಿಗಳ ಕಾರಣೀಕಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಬಿಡಿಸಿಡುವ ಈ ಪುಸ್ತಕದಲ್ಲಿ ಬರುವ ಆಧ್ಯಾತ್ಮಿಕತೆ ಆಕಾಶ ಕುಸುಮವಲ್ಲ; ನೆಲದಲ್ಲೇ ಅರಳಿದ ಬೆಟ್ಟತಾವರೆಯಂತದು. ಪ್ರದೇಶ ವಿಶಿಷ್ಟ, ಸಾಂಸ್ಕೃತಿಕ ವಿವರಗಳ ಮೂಲಕ ಪ್ರದೇಶ ವಿಶಿಷ್ಟ ನುಡಿಗಟ್ಟುಗಳಲ್ಲಿ ಕಡೆದಿಟ್ಟಿರುವ ಆ ಅವಿಸ್ಮರಣೀಯ ಚೈತನ್ಯ ಅಲ್ಲಿ, ಇಲ್ಲಿ ಎಲ್ಲೆಲ್ಲಿಯೂ ಸಲ್ಲುವಂಥದು. ಈ ಪುಸ್ತಕವನ್ನು ಬರೆದವರು, ಅಚ್ಚು ಹಾಕಿಸಿದವರು, ಓದುವರು, ಮನನ ಮಾಡುವರು ಎಲ್ಲರೂ ಪರಾ ಪ್ರತಿಭೆಯ ಸಜೀವ ಸ್ಪಂದನಗಳಲ್ಲಿ ಪಾಲುಗೊಳ್ಳುತ್ತಾರೆ, ಮುಕುಂದೂರು ಸ್ವಾಮಿಗಳೆಂಬ ನಡೆಲಿಂಗ ಈ ಪುಸ್ತಕದ ಮೂಲಕ ನುಡಿಲಿಂಗವಾಗಿದೆ. - ಎಚ್. ಎಸ್. ಶಿವಪ್ರಕಾಶ್.
ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.
=> ಕಹಳೆ ತಂಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ