ಶನಿವಾರ, ನವೆಂಬರ್ 26, 2016

ಭಾವನಾತ್ಮಕ ಬದುಕು - ಡಾ. ಜೆ. ಎಸ್. ಅಶ್ವತ್ಥ ಕುಮಾರ್

ಭಾವನಾತ್ಮಕ ಬದುಕು - ಡಾ. ಜೆ. ಎಸ್. ಅಶ್ವತ್ಥ ಕುಮಾರ್

ಶೀರ್ಷಿಕೆ: ಭಾವನಾತ್ಮಕ ಬದುಕು
ಲೇಖಕರು: ಡಾ. ಜೆ. ಎಸ್. ಅಶ್ವತ್ಥ ಕುಮಾರ್
ಪ್ರಕಾಶಕರು: ಸಂಸ್ಕೃತಿ ಪ್ರಕಾಶನ, ಆದರ್ಶ ಕಾಲೋನಿ, ಬಳ್ಳಾರಿ. 
ಪ್ರಧಮ ಮುದ್ರಣ: 2012

ಪುಸ್ತಕ ಕುರಿತು: ಪ್ರಾಣಿಗಳೊಂದಿಗೆ ಕೆಲ ಕಾಲ ಒಡನಾಟವಿಟ್ಟುಕೊಂಡರೆ, ಅವುಗಳನ್ನು ಅಪರಿಮಿತವಾಗಿ ಪ್ರೀತಿಸಿದರೆ ಅದರಿಂದ ಸಿಕ್ಕುವ ಅನುಭವಗಳೇ ಬೇರೆ, ಬಹುಶಃ ಮತ್ಯಾವ ಮಾಧ್ಯಮದಿಂದಲೂ ಇಂಥಹ ಪ್ರೀತಿ, ಪ್ರೇಮವನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ. ಅಂಥಹ ನನ್ನ ಕೆಲವು ಅನುಭವಗಳನ್ನು ಇಲ್ಲಿ ನೀಡಿದ್ದೇನೆ. ಈ ಅನುಭವಗಳನ್ನು ನಾನು ಪತ್ಪ್ರೇಕ್ಷೆ ಮಾಡಿ ಬರೆದಿಲ್ಲ, ಅವು ವಾಸ್ತವವಾಗಿ ನಡೆದ ಘಟನೆಗಳ ದಾಖಲೆಗಳಷ್ಟೇ. ಪ್ರಾಣಿಗಳು ಹುಟ್ಟುವುದಕ್ಕೆ ಹೋರಾಡಬೇಕು, ಬೆಳೆಯುವಾಗ ಶತ್ರುಗಳನ್ನೆದುರಿಸಬೇಕು, ಆಹಾರಕ್ಕಾಗಿ ಹರ ಸಾಹಸ ಪಡಬೇಕು, ತನ್ನದೇ ಒಂದು ಗೂಡು ಕಟ್ಟುವುದೇ ಅವುಗಳಿಗೆ ಒಂದು ಸಾಧನೆ, ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಒಲಿಸಿಕೊಳ್ಳಲು ಹಠ ಬೇಕು, ತಾಳ್ಮೆ ಬೇಕು, ಪ್ರತಿಸ್ಪರ್ಧಿಗಳನ್ನೆದುರಿಸಿ ಕಾದಾಡಿ ಸಂಗಾತಿ ಕೈ ಹಿಡಿಯಬೇಕು. ಹೀಗೆ ಜೀವನದ ಪ್ರತಿ ಹಂತವೂ ಹೋರಾಟದಿಂದಲೇ ಸಾಗಬೇಕು. ಇಡಿಯ ಜೀವನವನ್ನು ಗಾಳಿಗಿಟ್ಟ ದೀಪವನ್ನು ಕಾಪಾಡಿದಂತೆ ಉಸಿರು ಬಿಗಿಹಿಡಿದು ಎಚ್ಚರವಹಿಸಬೇಕು. ಎಲ್ಲವೂ ಅನಿಶ್ಚಿತ. ಆದರೂ ಬದುಕುವ ಛಲವಿದೆ, ಸಂತತಿ ಬೆಳೆಸುವ ಬಯಕೆಯಿದೆ, ತೊಡಕು ತೊಂದರೆಗಳ ನಡುವೆಯೇ ಹರ್ಷ ಪಡುವ ವಿಶಾಲ ಮನೋಭಾವವನ್ನು ಕಾಪಾಡಿಕೊಂಡೇ ಜೀವಿಸುವ ಪ್ರಾಣಿಗಳಿಂದ ನಾವು ಕಲಿಯಲು ಸಾಕಷ್ಟಿದೆಯಲ್ಲವೇ? ಈ ಪುಸ್ತಕದ ಪ್ರಯೋಜನ ಕೆಲವರಿಗೆ ಕೆಲವು ತೆರನಾಗಿರಬಹುದು, ವಿದ್ಯಾರ್ಥಿಗಳಿಗೆ ಮಾಹಿತಿ ಸಾಕಾದರೆ, ಬದುಕನ್ನು ಅರ್ಥಮಾಡಿಕೊಳ್ಳಬಯಸುವವರಿಗೆ ಇದೊಂದು ವ್ಯಕ್ತಿತ್ವ ವಿಕಸನದ ಪುಸ್ತಕವಾಗಿ ಪ್ರಯೋಜನಕ್ಕೆ ಬರಬಹುದು. ನಿಮಗಿದು ಇಷ್ಟವಾದರೆ, ನನ್ನ ಶ್ರಮ ಸಾರ್ಥಕವಾದಂತೆ. - ಡಾ. ಜೆ. ಎಸ್. ಅಶ್ವತ್ಥ ಕುಮಾರ್.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ