ಶೀರ್ಷಿಕೆ: ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ
ಮೂಲ ಲೇಖಕರು: ಡಿ.ವಿ.ಜಿ. (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ)
ವ್ಯಾಖ್ಯಾನ: ಕವಿತಾಕೃಷ್ಣ
ಪ್ರಕಾಶಕರು: ತನು ಮನು ಪ್ರಕಾಶನ, ಜಿ-ಬ್ಲಾಕ್, ರಾಮಕೃಷ್ಣನಗರ, ಮೈಸೂರು.
ಮುದ್ರಣ: 2003
ಪುಸ್ತಕ ಕುರಿತು: 'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮಂಕುತಿಮ್ಮನ ಕಗ್ಗ' ಯುಗದ ಕವಿ ಜಗದ ಕವಿ ಡಿ.ವಿ.ಜಿ. ಯವರ ಮೇರುಕೃತಿ. ಕನ್ನಡ ಸಾರಸ್ವತ ಲೋಕದ ಅಮರಕೃತಿ. ಯಾವಿದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸತ್ವವನ್ನು ಗರ್ಭೀಕರಿಸಿಕೊಂಡು ಒಡಮೂಡಿದರೆ ಅದು ಕಾಲದೇಶಾದಿ ಗಡಿಗಳನ್ನು ಮೀರಬಹುದು. ಸಾಮಾನ್ಯರಿಂದ ಮಾನ್ಯರವರೆಗೆ ಎಲ್ಲರ ಮನಸೂರೆಗೊಳ್ಳಬಹುದು. ತನ್ಮೂಲಕ ಮನುಕುಲಕ್ಕೊಂದು ಕೈ ದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ - ಮಾನಸ, ಪ್ರಕಾಶಕರು.
ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.
=> ಕಹಳೆ ತಂಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ