ಶುಕ್ರವಾರ, ನವೆಂಬರ್ 18, 2016

ನೂರಿ - ಡಾ. ಜಾನಕಿ ಸುಂದರೇಶ್

ನೂರಿ - ಡಾ. ಜಾನಕಿ ಸುಂದರೇಶ್

ಶೀರ್ಷಿಕೆ: ನೂರಿ
ಲೇಖಕರು: ಡಾ. ಜಾನಕಿ ಸುಂದರೇಶ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಕ್ರೆಸೆಂಟ್ ರಸ್ತೆ, ಬೆಂಗಳೂರು. 
ಪ್ರಧಮ ಮುದ್ರಣ: 2009
ಐ.ಎಸ್.ಬಿ.ಎನ್.: 978-81-8467-076-9

ಅರ್ಪಣೆ: ಎರಡು ಸಾವಿರದ ಆರನೇ ಇಸವಿಯ ಜುಲೈ ತಿಂಗಳ ಪ್ರಥಮ ದಿನ. ಎಡೆಬಿಡದೇ ಸುರಿವ ಮಳೆಗೆ ನೇತ್ರಾವತಿ ಉಕ್ಕಿ ಹರಿಯುತ್ತಿದ್ದಳು. ತನ್ನಿಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಬಿ.ಸಿ. ರೋಡಿನ ಬಳಿ ಸೇತುವೆಯ ಮೇಲೆ ನಡೆದು ಬಂದ ಓರ್ವ ನತದೃಷ್ಟ ತಂದೆ, ಕೊಸರಾಡುತ್ತ ಪ್ರತಿಭಟಿಸುತ್ತಿದ್ದ ಮಕ್ಕಳಿಬ್ಬರನ್ನೂ ಬಲವಂತವಾಗಿ ನೀರಿಗೆ ಎಸೆದು, ತಾನೂ ಹಾರಿದರು. ನದೀತೀರದಲ್ಲಿದ್ದ ನಾಲ್ವರು ಈ ಕ್ರೂರಕೃತ್ಯವನ್ನು ಕಂಡು ಆಘಾತಗೊಂಡರು. ಅಬ್ಬರಿಸಿ ಹರಿಯುತ್ತಿದ್ದ ನದಿಗೆ ಹೆದರದೇ ದೋಣಿಯನ್ನು ನೀರಿಗಿಳಿಸಿ ಎರಡೂ ಮಕ್ಕಳ ಪ್ರಾಣ ಉಳಿಸಿದರು. ಆ ಹೃದಯವಿದ್ರಾವಕ ಘಳಿಗೆಯಲ್ಲಿ ಜಾತಿ ಧರ್ಮಗಳ ನೆನಪೂ ಸುಳಿಯದಂತೆ ಅವರ ಹೃದಯಗಳಲ್ಲಿ ಭೋರ್ಗರೆದು ಹರಿದ ಮಾನವೀಯತೆಯ ಜೀವಜಲಕ್ಕೆ ಈ ಕೃತಿಯ ಅರ್ಪಣೆ.

ಪುಸ್ತಕ ಕುರಿತು: ಮಮ್ತಾಜ್ ಳ ಸಾಕುಮಗಳು ನೂರಿ. ರೈಲ್ವೆ ಸ್ಟೇಷನ್ನಿನಲ್ಲಿ ಸಿಕ್ಕಿದ ಮಗು. ಸಾಕುತಾಯಿಯೊಂದಿಗೆ ಕೊಳೆಗೇರಿಯಲ್ಲಿ ವಾಸ. ಸದಾ ವಟಗುಟ್ಟುವ ಮುದುಕಿ ಮಮ್ತಾಜ್ ಗೆ ಜನರೊಂದಿಗೆ ಒಡನಾಟ ಅಷ್ಟಕ್ಕಷ್ಟೆ. ಆದರೆ ಪುಟ್ಟ ನೂರಿಗೆ ಊರಿನ ಎಲ್ಲರೂ ದೋಸ್ತಿಗಳೇ. ಬಹಳ ಹುಡುಗಾಟಿಕೆಯ ಹುಡುಗಿ ನೂರಿ. ಆದರೆ ತನ್ನ ಸುತ್ತಲಿನ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗ್ರಹಿಸುವ ಬುದ್ಧಿವಂತೆ! ವಿನೋದ ಪ್ರಜ್ಞೆಯ ಜೊತೆಗೆ ಸಂಪರ್ಕಕ್ಕೆ ಬಂದವರನ್ನು ತನ್ನದೇ ರೀತಿಯಲ್ಲಿ ಅಂದಾಜು ಮಾಡುವ ಮೂಲಕ ಎದುರಾಗಬಹುದಾದ ಅಪಾಯಗಳಿಂದ ಪಾರಾಗುವ ಜಾಣೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಸೋನಿಯ ರೂಪದಲ್ಲಿ ಅವಳಿಗೊಂದು ಬಾಲ! ಎಲ್ಲರಿಗೂ ಪ್ರಿಯರಾಗುವ ಹುಡುಗಿಯರು 'ನೂರಿ' ಮತ್ತು 'ಸೋನಿ'. - ಪ್ರಕಾಶಕರು.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ