ಶೀರ್ಷಿಕೆ: ಅಣ್ಣನ ನೆನಪು
ಲೇಖಕರು: ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಒಂಭತ್ತನೇ ಮುಖ್ಯ ರಸ್ತೆ, ಸರಸ್ವತಿಪುರಂ, ಮೈಸೂರು.
ಪ್ರಧಮ ಮುದ್ರಣ: 1996
ಪುಸ್ತಕ ಕುರಿತು: ನನ್ನ ಚಿಕ್ಕಂದಿನಿಂದ ನಾನು ಓದಿ ಮುಗಿಸುವವರೆಗಿನ ನಮ್ಮ ತಂದೆಯ ನೆನಪುಗಳನ್ನು ನನ್ನ ದೈನಂದಿನ ದಿನಚರಿ ಮಾದರಿಯಲ್ಲಿ ಬರೆದಿದ್ದೇನೆ. ಅಣ್ಣನ ವೈವಿಧ್ಯತಮ ವ್ಯಕ್ತಿತ್ವದಿಂದಾಗಿ ಈ ನೆನಪಿನ ಸರಣಿಯಲ್ಲಿ ರಾಜಕೀಯ ಮಿಮಾಂಸೆ, ತತ್ವಚಿಂತನೆ, ಕರ್ನಾಟಕ ಸಂಸ್ಕೃತಿ ಅವಲೋಕನ, ಸಾಹಿತ್ಯ ಮೀಮಾಂಸೆ, ಸಾಮಾಜಿಕ ಜಿಜ್ಞಾಸೆ, ಮುಂತಾದವೆಲ್ಲ ಮಿಳಿತಗೊಂಡಿವೆ. ಆದರೂ ನೆನಪುಗಳು ಸಂಕೀರ್ಣವಾಗದಂತೆ, ಜಟಿಲವಾಗದಂತೆ, ಸರಳವಾಗಿ, ಜೀವನದ ಸಹಜ ಲಯದಲ್ಲಿ ರೂಪಿಸಲು ಯತ್ನಿಸಿದ್ದೇನೆ. ಇದನ್ನು ಬರೆಯುತ್ತ ಕುವೆಂಪುರವರೊಡನಿದ್ದ ಅನೇಕರು ತಮಗೆ ಗೊತ್ತಿದ್ದುದನ್ನೆಲ್ಲ ಕಾಗದ ಬರೆದು ನನಗೆ ಸ್ಪಷ್ಟಪಡಿಸಿದ್ದಾರೆ. ಕೆಲವರು ಕೋಪಗೊಂಡು ಬಯ್ದು ಪ್ರೋತ್ಸಾಹ ನೀಡಿದ್ದಾರೆ. ಕೆಲವರು ಬಿದ್ದು ಬಿದ್ದು ನಕ್ಕು ಸ್ಫೂರ್ತಿ ನೀಡಿದ್ದಾರೆ. ಆ ಹಿರಿಕಿರಿಯರೆಲ್ಲರಿಗೂ ನನ್ನ ನಮಸ್ಕಾರಪೂರ್ವಕ ಕೃತಜ್ಞತೆಗಳು. ಇದನ್ನು ಬರೆಯುತ್ತಲೇ ಧಾರಾವಾಹಿಯಾಗಿ ಪ್ರಕಟಿಸಿದ ಗೆಳೆಯ ಲಂಕೇಶರಿಗೆ ನಾನು ಕೃತಜ್ಞ. ನನ್ನ ಬಳಿಯಿದ್ದ ಫೋಟೋಗಳ ಜೊತೆಗೆ ಅನೇಕರು ತಮ್ಮ ಬಳಿ ಇದ್ದ ಅಣ್ಣನ ಫೋಟೋಗಳನ್ನು ಒದಗಿಸಿ ತುಂಬ ಸಹಾಯ ಮಾಡಿದ್ದಾರೆ. ಅವೆಲ್ಲಾ ಕಲಬೆರಕೆಯಾಗಿ ಯಾರದ್ದು ಯಾವುದು ಎಂದು ತಿಳಿಯಲಾಗದೆ ಎಲ್ಲರಿಗೂ ಒಟ್ಟಾರೆ ಕೃತಜ್ಞತೆ ಅರ್ಪಿಸಬೇಕಾಗಿದೆ. ಎಲ್ಲಕ್ಕಿಂತ ಇದನ್ನು ಅಭೂತಪೂರ್ವವಾಗಿ ಮೆಚ್ಚಿದ ಕನ್ನಡಿಗರಿಗೆ ನನ್ನ ಕೃತಜ್ಞತೆಗಳು. - ಕೆ. ಪಿ. ಪೂರ್ಣಚಂದ್ರ ತೇಜಸ್ವಿ.
ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.
=> ಕಹಳೆ ತಂಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ