ಬುಧವಾರ, ನವೆಂಬರ್ 16, 2016

ಏಳು ರೊಟ್ಟಿಗಳು - ಡಾ. ಕೆ. ಎನ್. ಗಣೇಶಯ್ಯ

ಏಳು ರೊಟ್ಟಿಗಳು - ಡಾ. ಕೆ. ಎನ್. ಗಣೇಶಯ್ಯ

ಶೀರ್ಷಿಕೆ: ಏಳು ರೊಟ್ಟಿಗಳು
ಲೇಖಕರು: ಡಾ. ಕೆ. ಎನ್. ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು. 
ಪ್ರಧಮ ಮುದ್ರಣ: 2011

ಪುಸ್ತಕ ಕುರಿತು: ಹೈದರಾಬಾದನ್ನು ಆಳಿದ ನಿಜಾಮ, ಸ್ವಾತಂತ್ರ್ಯಾನಂತರ ಭಾರತದೊಂದಿಗೆ ವಿಲೀನಗೊಳ್ಳಲಿಚ್ಛಿಸದೆ ಲೋಡುಗಟ್ಟಲೆ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಭಾರತ ಸರ್ಕಾರದ ಬಿಗಿ ನಿಯಂತ್ರಣದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಹಾಗಾದರೆ ನಿಜಾಮ ಒಯ್ಯಲೆತ್ನಿಸಿದ್ದ ಅಪಾರ ನಿಧಿ ಏನಾಯಿತು? ಆ ನಿಧಿಯ ಹುಡುಕಾಟವೇ 'ಏಳು ರೊಟ್ಟಿಗಳು' ಕಾದಂಬರಿಯ ವಸ್ತು. ಇಲ್ಲಿ ಚರಿತ್ರೆಯಿದೆ. ಸಾಕ್ಷ್ಯಾಧಾರಗಳಿಗೆ ಚಿತ್ರ-ನಕ್ಷೆ-ಮಾಹಿತಿಗಳಿವೆ. ಕುತೂಹಲಕಾರಿ ನಿರೂಪಣೆಯಿದೆ. ನಮಗೆ ಗಾಬರಿ ಹಿಡಿಸಲು ಟೆರರಿಸ್ಟ್ ಗಳಿದ್ದಾರೆ. ಅವರನ್ನು ಬಗ್ಗು ಬಡಿಯಲು ಪೋಲಿಸರಿದ್ದಾರೆ. ಒಟ್ಟಿನಲ್ಲಿ ಗಣೇಶಯ್ಯನವರ ವಿಶಿಷ್ಟ ಶೈಲಿಯ ಕಥೆ ಇಲ್ಲಿ ಅನಾವರಣಗೊಂಡಿದೆ. ಈಗಾಗಲೇ 'ಕನಕ ಮುಸುಕು', 'ಕರಿಸಿರಿಯಾನ', 'ಕಪಿಲಿಪಿಸಾರ', 'ಚಿತಾದಂತ' ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿರುವ ಗಣೇಶಯ್ಯನವರು 'ಏಳು  ರೊಟ್ಟಿಗಳಲ್ಲಿ' ಓದುಗರನ್ನು ನಿಬ್ಬೆರಗಾಗಿಸುವ ಅದ್ಭುತ-ರೋಚಕ ಕಥಾನಕವನ್ನು ನಿರೂಪಿಸಿದ್ದಾರೆ. - ಪ್ರಕಾಶಕರು.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ