ಬುಧವಾರ, ನವೆಂಬರ್ 9, 2016

ನನ್ನ ತಮ್ಮ ಶಂಕರ - ಅನಂತ್ ನಾಗ್

ನನ್ನ ತಮ್ಮ ಶಂಕರ - ಅನಂತ್ ನಾಗ್

ಶೀರ್ಷಿಕೆ: ನನ್ನ ತಮ್ಮ ಶಂಕರ......
ಲೇಖಕರು: ಅನಂತ್ ನಾಗ್
ಪ್ರಕಾಶಕರು: ಟೋಟಲ್ ಕನ್ನಡ, ಹತ್ತನೇ 'ಬಿ' ಮುಖ್ಯರಸ್ತೆ, ಜಯನಗರ, ಬೆಂಗಳೂರು.
ಪ್ರಧಮ ಮುದ್ರಣ: 2001
(2001ನೇ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪುಸ್ತಕ)

ಪುಸ್ತಕ ಕುರಿತು: ಇಂದಿಗೆ ಶಂಕರ ಹೋಗಿ ಇಪ್ಪತ್ತು ವರ್ಷಗಳು ಸಂದಿವೆ. ಅಂದು ಅವನ ಸಾವು ಎಷ್ಟು ಭೀಕರ ಮತ್ತು ಅನಿರೀಕ್ಷಿತವೋ ಅಷ್ಟೇ ಆಘಾತಕರ. ಆಗ ಆ ಶೋಕದಿಂದ ಹೊರಬರಲೆಂದೇ ಅನವ ಬಗ್ಗೆ ಬರೆಯಲು ಮುಂದಾದೆ. ಅವನು ಬೆಳೆದ ಪರಿಸರದ ಕುರಿತು ಕೂಡ. ಅದೇ ಬರಹ ಅನಂತರ 'ನನ್ನ ತಮ್ಮ ಶಂಕರ' ಪುಸ್ತಕವಾಯಿತು. ಚಲನಚಿತ್ರ ನಟನಾಗಿ ಊರೂರು ಸುತ್ತುವುದಾಗುತ್ತದೆ. ಎಲ್ಲಿ ಹೋದರೂ ಜನರು ಶಂಕರನನ್ನು ನೆನಪಿಸಕೊಳ್ಳುತ್ತಾರೆ. ಮರಗುತ್ತಾರೆ. ಇವತ್ತಿಗೂ ಬೆಂಗಳೂರಿನ ರಸ್ತೆಗಳಲ್ಲಿ ಹೋಗುವಾಗ ಆಗಾಗ ಶಂಕರನ ಪಟವಿರುವ ಆಟೋಗಳು, ಆಟೋ ನಿಲ್ದಾಣಗಳು ಕಣ್ಣಿಗೆ ಬೀಳುತ್ತವೆ. ಅಷ್ಟೋಂದು ಅಭಿಮಾನಿಗಳನ್ನು ಅಷ್ಟಲ್ಪ ವಯಸ್ಸಿನಲ್ಲಿ ಪಡೆದುಕೊಂಡು ನಿರ್ಗಮಿಸಿದ ಶಂಕರನನ್ನು ಇಪ್ಪತ್ತು ವರ್ಷಗಳ ನಂತರವೂ ಆರಾಧಿಸುವವರಿದ್ದಾರೆಂದರೆ ಸೋಜಿಗವೇ! - ಅನಂತ್ ನಾಗ್.



ಇಂದು ನವಂಬರ್ 9, ಶಂಕರ್ ನಾಗ್ ಜನ್ಮದಿನ; ನಮ್ಮೊಡನಿಲ್ಲದೆಯೂ ನಮ್ಮೆಲ್ಲರ ಮಧ್ಯೆ ಶಾಶ್ವತವಾಗಿ ಬದುಕಿರುವ ಆ ಮಹಾನ್ ಚೇತನವನ್ನು ಸ್ಮರಿಸುತ್ತಾ, ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಶಂಕರ್ ನಾಗ್ ಕುರಿತಾದ ಪುಸ್ತಕ ಮಣಿರತ್ನವನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ