ಬುಧವಾರ, ನವೆಂಬರ್ 2, 2016

ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ - ಎಂ. ಎಚ್. ಕೃಷ್ಣಯ್ಯ

ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ - ಎಂ. ಎಚ್. ಕೃಷ್ಣಯ್ಯ

ಶೀರ್ಷಿಕೆ: ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ
ಲೇಖಕರು: ಎಂ. ಎಚ್. ಕೃಷ್ಣಯ್ಯ
ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು.
ಮುದ್ರಣ: 1999 (ಪರಿಷ್ಕೃತ, ವಿಸ್ತೃತ ಪ್ರಥಮ ಆವೃತ್ತಿ)
ಐ. ಎಸ್. ಬಿ. ಎನ್.: 81-87321-33-4

ಪುಸ್ತಕ ಕುರಿತು: ಪ್ರೊಫೆಸರ್ ಎಂ. ಎಚ್. ಕೃಷ್ಣಯ್ಯನವರ 'ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ'ಯ ವ್ಯಾಪ್ತಿ ಅದರ ಹೆಸರು ಸೂಚಿಸುವುದಕ್ಕಿಂತ ಹೆಚ್ಚಿನದು. ಮೊದಲ ಆರು ಅಧ್ಯಾಯಗಳಲ್ಲಿ ಭಾಷೆಯ ಅಧ್ಯಯನಕ್ಕೆ ಅಗತ್ಯವಾದ ಹಿನ್ನೆಲೆಯನ್ನು ರೂಪಿಸಿದ್ದಾರೆ. ಕನ್ನಡ ಭಾಷೆ ನಡೆದು ಬಂದ ದಾರಿಯನ್ನು ಕೃತಿಯು ಹಂತ ಹಂತವಾಗಿ ಗುರುತಿಸುತ್ತದೆ. ಲಿಪಿ, ಶಬ್ಧ ಸಂಪತ್ತು, ವ್ಯಾಕರಣ ಎಲ್ಲ ಅಂಗಗಳ ಬೆಳವಣಿಗೆಯನ್ನು ಶಾಸ್ತ್ರೀಯವಾಗಿ ಚಾರಿತ್ರಿಕ ದೃಷ್ಟಿಯಿಂದ ಪ್ರೊ. ಕೃಷ್ಣಯ್ಯ ವಿವರಿಸುತ್ತಾರೆ. ಅಡಕತನ, ಖಚಿತತೆ, ಸ್ಫುಟತೆ ಇವು ಪ್ರೊ. ಕೃಷ್ಣಯ್ಯನವರ ನಿರೂಪಣೆಯ ಗುಣಗಳು - ಪ್ರೊ. ಎಲ್. ಎಸ್. ಶೇಷಗಿರಿರಾವ್.

ಲೇಖಕರ ನುಡಿ: ಈ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆ ಅನಿರೀಕ್ಷಿತ ಸಂತೋಷವನ್ನು ಕೊಟ್ಟಿತು. ಅಪರಿಚಿತ ಸಹೃದಯರೂ ಓದಿ ಹುಡುಕಿಕೊಂಡು ಬಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಪುರಸ್ಕರಿಸಿ ಮೆಚ್ಚುಗೆ ಸೂಚಿಸಿತು. ಅವರಿಗೆಲ್ಲ ಕೃತಜ್ಞನಾಗಿದ್ದೇನೆ. ಈ ಕೃತಿಯಲ್ಲಿ ಸಂಕ್ಷಿಪ್ತವಾಗಿ, ಸರಳವಾಗಿ, ಆದಷ್ಟು ಕಡಿಮೆ ಪಾರಿಭಾಷಿಕಗಳೊಡನೆ ಕನ್ನಡ ಭಾಷೆ ನಡೆದುಬಂದ ದಾರಿಯ ಬಗ್ಗೆ, ಅಸ್ತಿತ್ವವನ್ನು ವೈಶಿಷ್ಟ್ಯಗಳನ್ನು ಪಡೆದುಕೊಂಡ ಬಗ್ಗೆ, ಸ್ವರೂಪ ವರ್ತನೆ ಬದಲಾವಣೆಗಳ ಹಲವು ಮಜಲು ಮಗ್ಗಲುಗಳ ಬಗ್ಗೆ ಪರಿಚಯ ಮಾಡಿಕೊಡುವುದು ಉದ್ದೇಶ. ಕನ್ನಡ ಭಾಷೆಯನ್ನು ವಿಶೇಷ ಅಧ್ಯಯನ ವಿಷಯವಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ, ಕುತೂಹಲ ಆಸಕ್ತಿಯುಳ್ಳ ಸಾಮಾನ್ಯ ಓದುಗರಿಗೆ ಇದರಿಂದ ಅಲ್ಪಸ್ವಲ್ಪ ಪ್ರಯೋಜನವಾಗುವುದಾದರೆ ನನ್ನ ಶ್ರಮ ಸಾರ್ಥಕ.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ