ಗುರುವಾರ, ನವೆಂಬರ್ 24, 2011

ಕಾದಂಬರಿ ಸಾರ್ವಭೌಮರಿಗೆ ಕಲಾನಮನ

ಡಾ. ಅ ನ ಕೃಷ್ಣರಾಯರು
ಕಲೆ : ರಘುಪತಿ ಶೃಂಗೇರಿ

ಅನಕೃ ಎಂದೇ ಚಿರಪರಿಚಿತರಾದ ಡಾ. ಅ ನ ಕೃಷ್ಣರಾಯರು "ಕಾದಂಬರಿ ಸಾರ್ವಭೌಮ" ಎಂದೇ ಪ್ರಖ್ಯಾತರಾದ ಕರ್ನಾಟಕದ ಪ್ರಸಿದ್ಧ ಬರಹಗಾರರು. ಕೋಲಾರದಲ್ಲಿ 9 ಮೇ 1908 ರಂದು ಅನ್ನಪೂರ್ಣಮ್ಮ ಮತ್ತು ನರಸಿಂಗರಾವ್ ದಂಪತಿಗಳಿಗೆ ಜನಿಸಿದ ಅನಕೃ ರವರು 'ಕಥಾ ಮಂಜರಿ', 'ವಿಶ್ವ ವಾಣಿ' ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ 'ಕನ್ನಡ ನಾಡಿ'ಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ನಾಡು, ನುಡಿ, ಜನರ ಬಗ್ಗೆ ಇವರಿಗೆ ಅಪಾರವಾದ ಪ್ರೀತಿ. ಯಾರೇ ಆದರೂ ಕನ್ನಡಕ್ಕೆ ಅಪಮಾನ ಮಾಡಿದರೆ ಅದನ್ನು ಇವರು ತಮ್ಮ ಬರವಣಿಗೆಯ ಮೂಲಕ ಪ್ರತಿಭಟಿಸುತ್ತಿದ್ದರು. ಇವರು ಮಣಿಪಾಲದಲ್ಲಿ ನಡೆದ '43ನೇ ಕನ್ನಡ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರಾಗಿದ್ದರು. ಇವರ ಮೊದಲ ಕಾದಂಬರಿ 'ಜೀವನ ಯಾತ್ರೆ'. ಇವರು ಸುಮಾರು 40 ವರ್ಷಗಳಲ್ಲಿ 100 ಕೃತಿಗಳನ್ನು ರಚಿಸಿದ್ದಾರೆ. ಇವರ 'ಸಂಧ್ಯಾರಾಗ' ಕೃತಿಯು 1966 ರಲ್ಲಿ ಚಲನಚಿತ್ರವಾಗಿ ಮೂಡಿಬಂದಿದೆ.

ಇವರ ಕೃತಿಗಳು:
  1. ಸಾಹಿತ್ಯ ಮತ್ತು ಕಾಮಪ್ರಚೋದನೆ
  2. ಸಾಹಿತ್ಯ ಮತ್ತು ಜೀವನ
  3. ಪೊರಕೆ (ಹರಟೆ)
  4. ಕಾಮನ್ ಬಿಲ್ಲು
  5. ನನ್ನನ್ನು ನಾನೇ ಕಂಡೆ
  6. ಮದುವೆಯೋ ಮನೆಹಾಳು
  7. ರಾಜ ನರ್ತಕಿ
  8. ಬಣ್ಣದ ಬೀಸಣಿಕೆ
  9. ರಸಿಕಾಗ್ರಣಿ
  10. ಸಮರ ಸುಂದರಿ
  11. ರಣ್ ವಿಕ್ರಂ
  12. ಅಣ್ಣ ತಂಗಿ
  13. ಸಂಧ್ಯಾರಾಗ
ಅನಕೃ ರವರಿಗೆ ಕರ್ನಾಟಕ ರಾಜ್ಯವು "ಸಾಹಿತ್ಯ ಅಕಾಡೆಮಿ" ಪ್ರಶಸ್ತಿ ಮತ್ತು ಮೈಸೂರು ವಿಶ್ವವಿದ್ಯಾಲಯವು "ಡಾಕ್ಟರೇಟ್" ಪದವಿಯನ್ನು ನೀಡಿ ಗೌರವಿಸಿವೆ. ಅನಕೃ ರವರು 1971 ರಲ್ಲಿ ಜುಲೈ ತಿಂಗಳ 8 ರಂದು ತಮ್ಮ 63 ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು.

(ಸಂಗ್ರಹ : ರಘುಪತಿ ಶೃಂಗೇರಿ)

ಕಲಾವಿದರ ಕಿರುಪರಿಚಯ
ಶ್ರೀ ರಘುಪತಿ ಶೃಂಗೇರಿ

ಮೂಲತಃ ಶೃಂಗೇರಿಯವರಾದ ರಘುಪತಿಯವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, ಟಿಸಿಎಸ್ ಕಂಪನಿಯಲ್ಲಿ 'ಸೀನಿಯರ್ ಗ್ರಾಫಿಕ್ ಡಿಸೈನೆರ್' ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ವ್ಯಂಗ್ಯಚಿತ್ರಕಾರರು. ಇವರ 7000 ಕ್ಕೂ ಅಧಿಕ ಚಿತ್ರಗಳು 'ಸುಧಾ', 'ಕರ್ಮವೀರ', 'ರೀಡಿಂಗ್ ಅವರ್' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ.

ಇವರ ಕೆಲವು ವ್ಯಂಗ್ಯಚಿತ್ರಗಳಿಗೆ 6 ಅಂತರಾಷ್ಟ್ರೀಯ, 2 ರಾಷ್ಟ್ರೀಯ ಮತ್ತು ಹಲವು ರಾಜ್ಯ ವಲಯದ ಪ್ರಶಸ್ತಿಗಳು ಲಭಿಸಿವೆ. ಇದುವರೆಗೆ ಇವರ ಹಲವಾರು ಕಲಾಕೃತಿಗಳು ಪ್ರದರ್ಶನಗೊಂಡಿವೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಅ. ನ. ಕೃ. ಅವರ ಚಿತ್ರ ಬಹಳ ಅದ್ಭುತವಾಗಿ ಚಿತ್ತಾಕರ್ಷಕವಾಗಿ ಮೂಡಿಬಂದಿದೆ. ಅವರೆ ನಮ್ಮ ಮುಂದೆ ಬಂದು ಕುಳಿತಿರುವಂತಿದೆ. ಈಗಲೂ ನೆನಪಿದೆ, ನಾನು ಗ್ರಂಥಾಲಯಕ್ಕೆ ಹೋದಾಗೆಲ್ಲ ಅ. ನ. ಕೃ. ಅವರ ಬಹಳಷ್ಟು ಕೃತಿಗಳು ಮುಖ್ಯ ಮೇಜಿನ ಮೇಲೆ ಇರುತಿತ್ತು ಅಂದರೆ ಅವರ ಜನಪ್ರಿಯತೆಯನ್ನು ಊಹಿಸಿಕೊಳ್ಳಬಹುದು.

    ಪ್ರತ್ಯುತ್ತರಅಳಿಸಿ
  2. ಅದ್ಭುತ ಕಲೆ ಹಾಗೂ ಸಮಂಜಸ ಸಂಗ್ರಹ. ಅನಕೃ ರವರ ಚಿತ್ರಕಲೆ ನೋಡುಗರನ್ನು ಮೂಕಮುಗ್ಧರಾಗಿಸುವಂತಿದೆ.

    ಪ್ರತ್ಯುತ್ತರಅಳಿಸಿ