ಬುಧವಾರ, ನವೆಂಬರ್ 9, 2011

ಚುಕ್ಕಿಚಿತ್ರಗಳಲ್ಲಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರು

ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ ಸಾಹಿತ್ಯಪ್ರಶಸ್ತಿ ಎಂದರೆ ತಪ್ಪಾಗಲಾರದು. ಭಾರತೀಯ ನಾಗರೀಕರಾಗಿದ್ದು, ಯಾವುದೇ ಆಡಳಿತ ಭಾಷೆಯಲ್ಲಿ ಅತ್ಯುನ್ನತ ಸಾಹಿತ್ಯ ಸೇವೆ ಸಲ್ಲಿಸಿದ್ದರೆ, ಕೇಂದ್ರ ಸರ್ಕಾರ ಅಂತಹವರನ್ನು ಗುರುತಿಸಿ ಜ್ಞಾನಪೀಠ ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಸ್ಮರಣಾ ಫಲಕ (ಬಿರುದು ಬಿಲ್ಲೆ) ಮತ್ತು ವಾಗ್ದೇವಿಯ ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ.

ಜ್ಞಾನಪೀಠ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಲಾಯಿತು. ಮೊದಲ ಪ್ರಶಸ್ತಿಗೆ 1965ರಲ್ಲಿ ಭಾಜನರಾದವರು ಮಲಯಾಳಂನ ಜಿ. ಶಂಕರ ಕುರುಪ್ ಅವರು. ಕನ್ನಡಕ್ಕೆ ಮೊದಲ ಜ್ಞಾನಪೀಠ ದೊರೆತಿದ್ದು 1967ರಲ್ಲಿ; ಇದುವರೆಗೂ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಒಲಿದಿವೆ.

ಕನ್ನಡಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರ ಚುಕ್ಕಿಚಿತ್ರಗಳನ್ನು ಖ್ಯಾತ ಚುಕ್ಕಿಚಿತ್ರ ಕಲಾವಿದ ಶ್ರೀಯುತ ಮೋಹನ್ ವೆರ್ಣೇಕರ್ ಕಹಳೆಗಾಗಿ ನೀಡಿದ್ದಾರೆ.

ಕುವೆಂಪು

ದ. ರಾ. ಬೇಂದ್ರೆ


ಶಿವರಾಮ ಕಾರಂತ

ಮಾಸ್ತಿ

ವಿ. ಕೃ. ಗೋಕಾಕ್

ಗಿರೀಶ್ ಕಾರ್ನಾಡ್

ಯು. ಅರ್. ಅನಂತಮೂರ್ತಿ

ಚಂದ್ರಶೇಖರ ಕಂಬಾರ

ಕಲಾವಿದರ ಕಿರುಪರಿಚಯ
ಶ್ರೀ ಮೋಹನ್ ವೆರ್ಣೇಕರ್.

ಇವರು ಹುಟ್ಟಿದ್ದು ಹೊನ್ನಾವರದಲ್ಲಿ. ವಿಧಾನ ಪರಿಷತ್ತಿನಲ್ಲಿ ಕಾರ್ಯಕಲಾಪಗಳ ರೆಕಾರ್ಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತಿದ್ದ ಮೋಹನ್ ವೆರ್ಣೇಕರ್ ಅವರಿಗೆ ಚುಕ್ಕಿಚಿತ್ರ ಬಿಡಿಸುವ ಕಲೆ ಕರತಲಾಮಲಕ. ಬಿಡಿಸಿರುವ ವ್ಯಕ್ತಿ ನಮ್ಮೆದುರಿಗೆ ಇರುವರೇನೋ ಎಂಬಂತೆ ಭಾಸವಾಗುವ ಅವರ ಚುಕ್ಕಿಚಿತ್ರಗಳು ಕನ್ನಡದ ಆಸ್ತಿ. ಅವರ ನೈಪುಣ್ಯಕ್ಕೆ ಇಲ್ಲಿ ಪ್ರಕಟವಾಗಿರುವ ಚುಕ್ಕಿಚಿತ್ರಗಳೇ ಸಾಕ್ಷಿ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಅದ್ಭುತ ಚಿತ್ರರಚನೆ! ಶ್ರೀ ಮೋಹನ್ ವೆರ್ಣೇಕರ್ ರವರ ಚಿತ್ರರಚನೆಯಲ್ಲಿನ ಕೈಚಳಕವನ್ನು ಮೆಚ್ಚಲೇಬೇಕು .ಅಷ್ಟು ಚೆನ್ನಾಗಿ ಸ್ವಾಭಾವಿಕವಾಗಿ ಚಿತ್ರಗಳು ಮೂಡಿಬಂದು ಗಮನಸೆಳೆಯುತ್ತಿವೆ .

    ಪ್ರತ್ಯುತ್ತರಅಳಿಸಿ
  2. ಶ್ರೀಯುತ ಮೋಹನ್ ವರ್ಣೇಕರ್ ರವರ ಈ ಕಲೆಯು ಮಾಂತ್ರಿಕವೆಂಬಂತೆ ನನಗೆ ಭಾಸವಾಗುತ್ತಿದೆ; ಬರಿಯ ಚುಕ್ಕಿಗಳನ್ನೇ ಬಳಸಿ ರೂಪಿಸಿರುವ ಈ ಎಲ್ಲಾ ಚಿತ್ರರಚನೆಗಳು ಮನೋಜ್ಞವಾಗಿವೆ.

    ಪ್ರತ್ಯುತ್ತರಅಳಿಸಿ