ಶುಕ್ರವಾರ, ನವೆಂಬರ್ 11, 2011

ಬಾ ಚಕೋರಿ ಚಂದ್ರಮಂಚಕೆ..


ಕಲೆ : ಶ್ರೀಯುತ ಸು. ವಿ. ಮೂರ್ತಿ

ರಾಷ್ಟ್ರಕವಿ ಕುವೆಂಪು ಅವರನ್ನು ತಿಳಿಯದ ಕನ್ನಡಿಗರು ಯಾರಿದ್ದಾರೆ? ಶ್ರೀ ರಾಮಾಯಣದರ್ಶನಂ ಹೆಸರು ಕೇಳದ ಭಾರತೀಯರು ಯಾರಿದ್ದಾರೆ? ತಮ್ಮ ಸರಳ ಹಳೆಗನ್ನಡ ಪದಗಳಿಂದ ಮನೆಮಾತಾಗಿದ್ದ ಕುವೆಂಪುರವರು ಅತ್ಯುತ್ತಮ ಕನ್ನಡ ಗೀತೆಗಳನ್ನು ನೀಡಿದ್ದಾರೆ, ಅದರಲ್ಲಿ ಒಂದು 'ಬಾ ಚಕೋರಿ ಚಂದ್ರಮಂಚಕೆ'.

ಈ ಕವಿತೆಯಲ್ಲಿ ನಲ್ಲನು ರಸವತ್ತಾದ ವಿಶೇಷಣಗಳೊಂದಿಗೆ ರಾತ್ರಿಯನ್ನು, ಆತನ ನಲ್ಲೆಯನ್ನು ಹಾಗೂ ತಮಗೆ ಒದಗಿ ಬಂದಿರುವ ಸಂದರ್ಭವನ್ನು ವರ್ಣಿಸುವ ಪರಿಯನ್ನು ವಿವರಿಸಿರುವ ಕುವೆಂಪುರವರು ತಮ್ಮ ಕಾವ್ಯಪ್ರೌಢಿಮೆಯನ್ನು ಮೆರೆದಿದ್ದಾರೆ.

ಈ ಕವನದೊಂದಿಗೆ ಒಂದು ಆಸಕ್ತಿದಾಯಕ ಸಂಗತಿಯಿದೆ. ಅದೇನೆಂದರೆ, ಈ ಕವನವನ್ನು ಕನ್ನಡ ಚಿತ್ರರಂಗದಲ್ಲಿ ಒಂದೇ ವರ್ಷ ಎರಡು ಬಾರಿ ಚಿತ್ರಗೀತೆಯಾಗಿ ಬಳಸಿಕೊಳ್ಳಲಾಗಿದೆ.

1. ಜಗ್ಗೇಶ್ ಅಭಿನಯದ 'ಎದ್ದೇಳು ಮಂಜುನಾಥ' ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಧ್ವನಿಯಲ್ಲಿ, ಅನೂಪ್ ಸೀಳಿನ್ ಅವರ ಸುಮಧುರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದೆ.


2. ಸಿ. ಆರ್. ಸಿಂಹ ಅವರು ಕುವೆಂಪುರವರ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವ, ರಾಜ್ಯ ಪ್ರಶಸ್ತಿ ವಿಜೇತ ಚಿತ್ರ 'ರಸಋಷಿ ಕುವೆಂಪು' ಚಿತ್ರದಲ್ಲಿ ವಿ. ಮನೋಹರ್ ಸಂಗೀತ ಸಾರಥ್ಯದಲ್ಲಿ ಹಾಗೂ ವಿಜಯ ಪ್ರಕಾಶ್ ರವರ ಧ್ವನಿಯಲ್ಲಿ ಇಂಪಾಗಿ ಮೂಡಿಬಂದಿದೆ.


ಅಲ್ಲದೆ, ಕುವೆಂಪು ರವರ ಇದೇ ಕವನವು ಜಿ. ಕೆ. ವೆಂಕಟೇಶ್ ಅವರ ಸಂಗೀತದಲ್ಲಿ, ಖ್ಯಾತ ಹಿನ್ನೆಲೆ ಗಾಯಕರಾದ ಪಿ. ಬಿ. ಶ್ರೀನಿವಾಸ್ ರವರ ಸಿರಿಕಂಠದ ಅದ್ಭುತ ಹಾಡುಗಾರಿಕೆಯಲ್ಲೂ ಸಹ ಮೂಡಿಬಂದಿದೆ.

ಎಲ್ಲವನ್ನೂ ಆಲಿಸಿ, ಯಾವುದು ಉತ್ತಮ ಎಂದು ತೀರ್ಮಾನಿಸುವುದು ಬಹಳ ಕಷ್ಟಕರವಾದ ಸಂಗತಿ. ಎಲ್ಲವೂ ಸಹ ಬೇರೆ ಬೇರೆ ರಾಗಗಳಲ್ಲಿದ್ದು, ಮನಮೋಹಕವಾಗಿವೆ. ಎಲ್ಲದರಲ್ಲೂ ಎದ್ದು ಕಾಣುವ ಒಂದು ಬಹುಮುಖ್ಯ ಅಂಶವೆಂದರೆ - ಕುವೆಂಪುರವರ ಅದ್ಭುತ ಪದಜೋಡಣೆ ಹಾಗೂ ತಡೆರಹಿತ ಕಾವ್ಯಧಾರೆ.

ಲೇಖಕರ ಕಿರುಪರಿಚಯ
ಶ್ರೀಮತಿ ಅನುಷ.

ಇವರು ಹುಟ್ಟಿ-ಬೆಳೆದದ್ದು ಕಡಲ ತೀರ ಬ್ರಹ್ಮಾವರದಲ್ಲಿ; ಸದ್ಯ ವಾಸಿಸುತ್ತಿರುವುದು ರಾಜಧಾನಿ ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಅಡ್ಮಿನ್ ಆಗಿರುವ ಇವರಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿ.

ಕಥೆ, ಕಾದಂಬರಿಗಳನ್ನು ಓದುವ ಅಭ್ಯಾಸವಿರುವ ಇವರು, ಕಹಳೆಯಲ್ಲಿ ಪ್ರಕಟವಾಗುತ್ತಿರುವ ಲೇಖನಗಳನ್ನು ಓದಿ ಸ್ಫೂರ್ತಿಗೊಂಡು 'ಕನ್ನಡಿಗರನ್ನು ಒಂದು ಕಡೆ ತರುವ ಪ್ರಯತ್ನ ನಡೆಸುತ್ತಿರುವ ಕಹಳೆ ತಂಡಕ್ಕೆ ಶುಭವಾಗಲಿ..' ಎಂದು ಹರಸಿ ತಮ್ಮ ಮೊಟ್ಟಮೊದಲ ಲೇಖನವನ್ನು ರಚಿಸಿದ್ದಾರೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಇತ್ತೀಚಿನ ದಿನಗಳಲ್ಲಿ ಕಾಯ್ಕಿಣಿ ಮತ್ತಿತರರ ಚಲನಚಿತ್ರ ಗೀತೆಗಳ ಸಾಹಿತ್ಯದಲೆಯಲ್ಲಿ ನಮ್ಮ ಮಹಾನ್ ಕವಿಗಳ ಕವನಗಳೆಲ್ಲಾ ಕೊಚ್ಚಿ ಹೊಗಿವೆಯೆಂಬ ನನ್ನ ಊಹೆಯು ತಪ್ಪೆಂಬುದು ನಿಮ್ಮ ಈ ಬರವಣಿಗೆಯನ್ನು ಓದಿದಮೆಲೆಯೇ ತಿಳಿಯಿತು. ಹಾಗೂ ಕುವೆಂಪು ರವರ ಜೀವನವನ್ನಾಧರಿಸಿದ 'ರಸಋಷಿ ಕೆವೆಂಪು' ಚನಲಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕರಿಸಿ ಗೌರವಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

    ಕಹಳೆಗೆ ನಿಮ್ಮಗಳೆಲ್ಲರ ಹರಕೆ ಹಾಗೂ ಬೆಂಬಲ ಅತ್ಯಗತ್ಯ, ಧನ್ಯವಾದಗಳು. ಕಹಳೆಯ ಮೂಲಕ ಪ್ರಾರಂಭಗೊಂಡಿರುವ ನಿಮ್ಮ ಈ ಕನ್ನಡ ಸಾಹಿತ್ಯ ಕೃಷಿಯು ಹೀಗೆಯೇ ಮುಂದುವರೆದು, ಕನ್ನಡ ನಾಡು-ನುಡಿಗೆ ನಿರಂತರ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಇನ್ನೂ ಹೆಚ್ಚು ಹೆಚ್ಚು ಬರವಣಿಗೆ ಮೂಡಿ ಬರುವಂತಾಗಲಿ..

    ಪ್ರತ್ಯುತ್ತರಅಳಿಸಿ