ಶನಿವಾರ, ನವೆಂಬರ್ 19, 2011

ಕ್ಯಾಮರಾ ಕಣ್ಣಲ್ಲಿ ಜನಜೀವನ

ಛಾಯಾಗ್ರಹಣ ಒಂದು ವೃತ್ತಿಪರ ಹವ್ಯಾಸ; ವಿಸ್ಮಯ ಜಗತ್ತು. ಇಡಿಯ ಪ್ರಪಂಚದ ಸೌಂದರ್ಯವೆಲ್ಲವನ್ನೂ ತನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ತವಕ ಹೊತ್ತ ಛಾಯಾಗ್ರಾಹಕ, ಅದರಲ್ಲಿ ಯಶಸ್ವಿಯಾಗುತ್ತಾನೆ ಕೂಡ. ನಮ್ಮ ಕಣ್ಣೋಟವು ಸಾಮಾನ್ಯವಾಗಿ ಸುತ್ತಮುತ್ತಲಿರುವ ಅದೆಷ್ಟೋ ಚೆಲುವನ್ನು ಕಾಣದೇ ಹೋದರೂ ಸಹ, ಕ್ಯಾಮರಾ ಕಣ್ಣು ಮಾತ್ರ ಇಂತಹ ಅಂದವನ್ನು ಸೆರೆಹಿಡಿಯದೆ ಇರಲಾರದು. ಸಾವಿರ ಪದಗಳ ಸಾಲುಗಳು ಹೇಳಲಾರದ್ದನ್ನು ಒಂದು ಸ್ತಬ್ಧ ಛಾಯಾಚಿತ್ರವು ಮೌನವಾಗಿ ಹೇಳಿಬಿಡುವುದೇ ಇದರ ವೈಶಿಷ್ಟ್ಯ.

ಮನುಷ್ಯರಾದ ನಾವು ಸಾಮಾಜಿಕ ಜೀವಿಗಳು, ನಮ್ಮ ಹಾವ-ಭಾವಗಳ ಮೇಲೆ ಸಮಾಜದ ಪ್ರಭಾವ ಅಗಾಧವಾಗಿರುತ್ತದೆ. ಅದೆಷ್ಟೋ ಬಾರಿ ಸಮಾಜದಲ್ಲಿನ ಒತ್ತಡಗಳು ನಮ್ಮ ಜೀವನಶೈಲಿಯನ್ನೇ ಬದಲಿಸಿಬಿಡಬಹುದು. ಹೀಗಿರುವ ಜನರ ಬದುಕಿನ ವಿಭಿನ್ನ ಹಾಗೂ ವಿಶೇಷ ಸೂಕ್ಷ್ಮತೆಗಳನ್ನು ಕ್ಯಾಮರಾ ಕಣ್ಣಲ್ಲಿ ಹಿಡಿದಿಡುವ ಬಯಕೆ, ಹಂಬಲ ಹಾಗೂ ಹವ್ಯಾಸ ನನ್ನದು. ಈ ವಿಷಯದ ನಿಟ್ಟಿನಲ್ಲಿ ನಾನು ಕ್ಲಿಕ್ಕಿಸಿದ ಕೆಲವು ಆಯ್ದ ಛಾಯಾಚಿತ್ರಗಳು ಇಲ್ಲಿವೆ; ಅವುಗಳನ್ನು ನಿಮ್ಮ ಅಂತರಾಳದ ಭಾವನಾತ್ಮಕ ಕಣ್ಣುಗಳಿಂದೊಮ್ಮೆ ನೋಡಿ..


















ಛಾಯಾಗ್ರಾಹಕರ ಕಿರುಪರಿಚಯ
ಶ್ರೀ ನವೀನ್ ಗುರುಪ್ರಸಾದ್.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಐಟಿ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಛಾಯಾಚಿತ್ರಗ್ರಹಣದಲ್ಲಿ ಅಪೂರ್ವ ನೈಪುಣ್ಯತೆ ಸಾಧಿಸಿರುವ ನವೀನ್ ರವರು ವನ್ಯಜೀವಿಗಳ ಹಾಗೂ ಜನರ ಜೀವನಶೈಲಿಯ ಕುರಿತಾದ ಛಾಯಾಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ಸಿದ್ಧಹಸ್ತರು.

ವಿನೂತನ ಮಾದರಿ ಕಾರುಗಳ ಬಗ್ಗೆ ಇವರು ಬರೆದ ವಿಮರ್ಶಾತ್ಮಕ ಲೇಖನಗಳು ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರ ಇತರೆ ಹವ್ಯಾಸಗಳಲ್ಲಿ ಪ್ರವಾಸ ಹಾಗೂ ಹಿಂದೂ ಸಿದ್ಧಾಂತಗಳ ಅಧ್ಯಯನವೂ ಸೇರಿದೆ.

Blog  |  Facebook  |  Twitter

2 ಕಾಮೆಂಟ್‌ಗಳು:

  1. ಛಾಯಾಚಿತ್ರಗಳು ಸೊಗಸಾಗಿ ಮೂಡಿಬಂದಿದೆ.. ಕೊನೆಯಲ್ಲಿರುವ ಮಂತ್ರಾಲಯದ ಪೂರ್ಣ ಚಿತ್ರ ಎಂಥಹ ಛಾಯಾಗ್ರಹಕನಿಗೂ ಸವಾಲೇ ಸರಿ.

    ಪ್ರತ್ಯುತ್ತರಅಳಿಸಿ
  2. ಪ್ರತಿಯೊಂದು ಛಾಯಾಚಿತ್ರಗಳೂ ನಿಮ್ಮ ಅದ್ಭುತ ಪ್ರತಿಭೆಯ ಬೇರೆ ಬೇರೆ ಆಯಾಮಗಳನ್ನು ನಮಗೆ ಪರಿಚಯ ಮಾಡಿಸಿಕೊಟ್ಟಿವೆ.

    ಪ್ರತ್ಯುತ್ತರಅಳಿಸಿ