ಸೋಮವಾರ, ನವೆಂಬರ್ 21, 2011

ಕನ್ನಡದ ಗೊರೂರು

ಕನ್ನಡ ತಾಯಿ ಭುವನೇಶ್ವರಿಯ ಕೊರಳಲ್ಲಿ ನಲಿದಾಡುತ್ತಿರುವ ರತ್ನಖಚಿತ ಕಂಠೀಹಾರದಲ್ಲಿ ಅನೇಕ ಸಾಹಿತ್ಯರತ್ನಗಳು ತುಂಬಿವೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಒಬ್ಬರೇ? ಇಬ್ಬರೇ?... ಅಸಂಖ್ಯಾತ ಕನ್ನಡಿಗರು. ಅವರೆಲ್ಲರಲ್ಲಿ ಇಂಥಹವರು ಹೆಚ್ಚು, ಇಂಥಹವರು ಕಡಿಮೆ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಮ್ಮನ ಸೇವೆ ಸಲ್ಲಿಸಿದವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

'ತಾಯಿಗೆ ಎಲ್ಲಾ ಮಕ್ಕಳೂ ಒಂದೇ' ಎನ್ನುವ ಹಾಗೆ ಕನ್ನಡ ತಾಯಿ ಕನ್ನಡಾಂಬೆಗೆ ನಿಸ್ವಾರ್ಥವಾಗಿ ದುಡಿದ ಎಲ್ಲಾ ಸಾಹಿತಿಗಳೂ ಸಮಾನರೇ, ಎಲ್ಲರೂ ಕನ್ನಡದ ರತ್ನಗಳೇ ಅಲ್ಲವೇ?!. ಅಂತಹ ಅನರ್ಘ್ಯ ರತ್ನಗಳಲ್ಲಿ 'ಗೊರೂರು' ಎಂದೇ ಪ್ರಸಿದ್ಧರಾದ ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಒಬ್ಬರು.

1904, ಜುಲೈ 4 ರಂದು ಜನಿಸಿದ ಇವರ ಜನ್ಮಸ್ಥಳ ಹಾಸನ ಜಿಲ್ಲೆಯ ಗೊರೂರು. ಅಪ್ರತಿಮ ಗಾಂಧೀವಾದಿಗಳಾಗಿದ್ದ ಗೊರೂರರು ತಮ್ಮ ಶಾಲಾದಿನಗಳಲ್ಲೇ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓಗೊಟ್ಟು ತಮ್ಮ ಓದಿಗೆ ತಿಲಾಂಜಲಿಯಿತ್ತು ರಾಷ್ರ್ಟಸೇವೆಗೆ ಧುಮುಕಿದವರು. ಆನಂತರ ಅನೇಕ ಪತ್ರಿಕೆಗಳಲ್ಲಿ ಲೇಖಕರಾಗಿ, ಉಪಸಂಪಾದಕರಾಗಿ ಸೇವೆಸಲ್ಲಿಸಿದರು. ಕರ್ನಾಟಕದ ಏಕೀಕರಣದಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಮಹನೀಯರು.

ಗೊರೂರು ರವರ ಬರಹಗಳಲ್ಲಿ ಹೆಚ್ಚಾಗಿ ಸಮಾಜದ ಅಂಕು-ಡೊಂಕು ತಿದ್ದುವ, ವಿಡಂಬನೆ, ವಿಮರ್ಶೆಗೊಳಪಡಿಸುವ, ನವಿರಾದ ಹಾಸ್ಯ ಓದುಗರನ್ನು ಸೆಳೆಯುತ್ತದೆ. ಹಳ್ಳಿಯ ಚಿತ್ರಗಳನ್ನು ಮನಮುಟ್ಟುವಂತೆ ಚಿತ್ರಿಸಿದ ರೀತಿ ಅನುಪಮವಾದುದು. ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅನುಪಮ ಸೇವೆ ಸದಾ ನೆನಪಿಸಿಕೊಳ್ಳುವಂತಹುದು.


ಗೊರೂರರ ಕೃತಿಗಳು

ಕಾದಂಬರಿ
  1. ಹೇಮಾವತಿ
  2. ಪುನರ್ಜನ್ಮ
  3. ಮೆರವಣಿಗೆ
  4. ಊರ್ವಶಿ

ಪ್ರಬಂಧ ಮತ್ತು ಕಥಾ ಸಂಕಲನ
  1. ಹಳ್ಳಿಯ ಚಿತ್ರಗಳು
  2. ಗರುಡಗಂಬದ ದಾಸಯ್ಯ
  3. ನಮ್ಮ ಊರಿನ ರಸಿಕರು
  4. ಶಿವರಾತ್ರಿ
  5. ಕಮ್ಮಾರ ವೀರಭದ್ರಾಚಾರಿ
  6. ಬೆಸ್ತರ ಕರಿಯ
  7. ಬೆಟ್ಟದ ಸಂಪರ್ಕದ ಹೆಸರುಮನೆಯಲ್ಲಿ ಮತ್ತು ಇತರ ಕಥೆಗಳು
  8. ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
  9. ಗೋಪುರದ ಬಾಗಿಲು
  10. ಉಸುಬು
  11. ವೈಯ್ಯಾರಿ
  12. ಕನ್ಯಾಕುಮಾರಿ ಮತ್ತು ಇತರ ಕಥೆಗಳು

ಪ್ರವಾಸ ಕಥನ
  1. ಅಮೇರಿಕಾದಲ್ಲಿ ಗೊರೂರು

ಅನುವಾದಗಳು
  1. ಮಲೆನಾಡಿನವರು
  2. ಭಕ್ತಿಯೋಗ
  3. ಭಗವಾನ್ ಕೌಟಿಲ್ಯ

ಗೊರೂರರು 1991, ಸೆಪ್ಟೆಂಬರ್ 8 ರಂದು ನಿಧನರಾದರು.

(ಕೃತಿಗಳ ವಿವರ : ಕನ್ನಡ ವಿಕಿಪೀಡಿಯಾ)

ಲೇಖಕರ ಕಿರುಪರಿಚಯ
ಶ್ರೀ ನಾಗೇಂದ್ರ ಕುಮಾರ್ ಕೆ. ಎಸ್.

ಗೌರೀಬಿದನೂರಿನವರಾದ ಇವರು, ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಟೋಮೊಬೈಲ್ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಪಡುವ ನಾಗೇಂದ್ರ ಅವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವೂ ಇದೆ.

ಓದಿದ್ದು ಇಂಜಿನಿಯರಿಂಗ್ ಆದರೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಾರೆ. ಕಥೆ, ಕವನ ಹಾಗೂ ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿದ್ದು, ತಮ್ಮ ಕವಿತೆಗಳ ಪುಸ್ತಕ ಅಚ್ಚುಹಾಕಿಸುವ ಕನಸು ಹೊತ್ತಿದ್ದಾರೆ.

'ಕನ್ನಡದ ಸೇವೆಗೆ ಇಳಿದಿರುವ ಕಹಳೆ ತಂಡಕ್ಕೆ ಶುಭಾಶಯಗಳು' ಎಂಬ ಸಂದೇಶದೊಂದಿಗೆ ಈ ಲೇಖನವನ್ನು ಕಳುಹಿಸಿಕೊಟ್ಟಿದ್ದಾರೆ.

Blog  |  Facebook  |  Twitter

4 ಕಾಮೆಂಟ್‌ಗಳು:

  1. ನಮಗೆ ಹೈಸ್ಕೂಲ್ ನಲ್ಲಿ ಗೊರೂರರ ಕಥೆಯೊಂದು ಕನ್ನಡ ಪಾಠವಾಗಿ ಬಂದಿತ್ತು. ಬಹಳ ಸರಳವಾಗಿ ಮನಸ್ಸಿಗೆ ನಾಟುವ ಹಾಗಿದ್ದ ಆ ಕಥೆ ಈಗಲು ಮನಸಿನ್ನಲ್ಲಿ ಅಚ್ಚಳಿಯದೆ ಉಳಿದಿದೆ.. ಲೇಖನಕ್ಕಾಗಿ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. ಕನ್ನಡ ಭಾಷೆ ಮತ್ತು ಸಾಹಿತ್ಯದ ನಿಮ್ಮ ಆಸಕ್ತಿ ಹಾಗೂ ಅಧ್ಯಯನ ಹೆಮ್ಮೆಪಡುವಂಥದ್ದು. ನಿಮ್ಮ ಪರಿಶ್ರಮ ಫಲಿಸಲಿ ಎಂದು ಹಾರೈಸುತ್ತೇನೆ.

    ಪ್ರತ್ಯುತ್ತರಅಳಿಸಿ
  3. ಗೊರೂರುರವರು ಬರೆದ ಪುನರ್ಜನ್ಮ ಕೃತಿಯ pdf ಕಾಪಿ ಸಿಗಬಹುದು

    ಪ್ರತ್ಯುತ್ತರಅಳಿಸಿ
  4. ಬೆಸ್ತರ ಕರಿಯ ಪ್ರಬಂಧ ಪಿಡಿಎಫ್ ರೂಪದಲ್ಲಿ ಸಿಗುತ್ತದೆಯೇ

    ಪ್ರತ್ಯುತ್ತರಅಳಿಸಿ