ಸೋಮವಾರ, ನವೆಂಬರ್ 14, 2011

ಅಕ್ಷರ ಚಿತ್ರ

'ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು' ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹುಟ್ಟಿದ ಮಗುವಿನ ಕಲಿಕೆಯು ತಾಯಿಯ ಗರ್ಭದಿಂದ ಹೊರಬರುತ್ತಿದ್ದಂತೆಯೇ ಪ್ರಾರಂಭವಾಗುತ್ತದೆ. ನವಮಾಸದುದ್ದಕ್ಕೂ ತನ್ನೊಳಗೇ ಇರಿಸಿಕೊಂಡು, ಪಾಲನೆ ಮಾಡಿ, ಮಗುವಿಗೆ ಸರ್ವಸ್ವವನ್ನೂ ಧಾರೆಯೆರೆಯುವ ತಾಯಿಯ ತ್ಯಾಗಕ್ಕೆ ತಾಯಿಯೇ ಸಾಟಿ!

ಜೀವ ಕೊಟ್ಟ ತಾಯಿಯು ಮಗುವಿಗೆ ವಿದ್ಯೆ-ಸನ್ನಡತೆಗಳನ್ನು ಕಲಿಸದಿದ್ದರೆ, ಆಕೆಯೇ ಆ ಮಗುವನ್ನು ಕೊಂದಂತಹ ಪಾಪಕ್ಕೆ ಗುರಿಯಾಗುತ್ತಾಳೆ. ವಿದ್ಯೆಗಿಂತ ಮಿಗಿಲಾದ ಸಂಪತ್ತು ಇನ್ಯಾವುದುಂಟು? ತನ್ನ ಮಗುವನ್ನು ವಿದ್ಯಾವಂತವನ್ನಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬ ತಾಯಿಯದ್ದಾಗಿರುತ್ತದೆ. ಆಶ್ಚರ್ಯವೆಂಬಂತೆ, ಮಗುವು ಕಲಿಯುವ ಮೊಟ್ಟಮೊದಲ ಪದ 'ಅಮ್ಮಾ'; ಇದು ಪ್ರಾರಂಭವಾಗುವುದು 'ಅ' ಅಕ್ಷರದಿಂದ. ತನಗರಿವಿಲ್ಲದೆಯೇ ಮಗುವು ಸ್ವಾಭಾವಿಕವಾಗಿ ವರ್ಣಮಾಲೆಯ ಮೊದಲನೇ ಅಕ್ಷರವನ್ನು 'ಅಮ್ಮ'ನಿಂದ ಕಲಿಯುತ್ತದೆ.

ಮಕ್ಕಳಿಗೆ ಕಲಿಕೆಯು ಹೊರೆಯಾಗದಂತೆ, ಸರಳ-ಸುಲಭ ವಿಧಾನಗಳ ಮೂಲಕ ಪಾಠ ಹೇಳುವುದು ಎಲ್ಲಾ ಹಿರಿಯರ ಮುಂದಿರುವ ಸವಾಲೇ ಸರಿ. ಶ್ರವ್ಯ ಮಾಧ್ಯಮಕ್ಕಿಂತ, ದೃಶ್ಯ ಮಾಧ್ಯಮದ ಮೂಲಕ ಕಲಿಕೆಯು ಹೆಚ್ಚು ಪ್ರಭಾವಶಾಲಿ ಆಗುವುದರಿಂದ, ಕನ್ನಡ ವರ್ಣಮಾಲೆಯನ್ನು ಬಣ್ಣ ಬಣ್ಣದ ಚಿತ್ರಗಳನ್ನುಪಯೋಗಿಸಿ ಪುಟಾಣಿ ಮಕ್ಕಳಿಗೆ ಕಲಿಸಬಹುದಾದ ವಿಧಾನವೊಂದನ್ನು ಈ ಕೆಳಗೆ ನಿರೂಪಿಸಿದ್ದೇನೆ:



ಲೇಖಕರ ಕಿರುಪರಿಚಯ
ಶ್ರೀಯುತ ಸು. ವಿ. ಮೂರ್ತಿ.

ಇವರು ಹವ್ಯಾಸಿ ಕಲಾವಿದರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರು. ಹೋಟೆಲ್ ಉದ್ಯಮದಲ್ಲಿದ್ದುಕೊಂಡು ಬಹಳಷ್ಟು ಕಲಾ ಸೇವೆ ಮಾಡಿದ್ದಾರೆ. ವಿದ್ಯಾರ್ಥಿ ಭವನದಲ್ಲಿ ಗೋಡೆಯ ಸುತ್ತಮುತ್ತಲೂ ರಾರಾಜಿಸುತ್ತಿರುವ ಕನ್ನಡದ ಕಣ್ಮಣಿಗಳ ಚಿತ್ರಪಟಗಳು ಇವರ ಪ್ರತಿಭೆಗೆ ಸಾಕ್ಷಿ.

ಮಕ್ಕಳಿಗಾಗಿ ಹಲವಾರು "ನೋಡಿ ಕಲಿ - ಮಾಡಿ ನಲಿ" ಮಾದರಿಯಲ್ಲಿ ಚಿತ್ರಗಳನ್ನು ರಚಿಸಿದ್ದಾರೆ. ಕಹಳೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ತಮ್ಮ ಅಕ್ಷರ ಚಿತ್ರಗಳ ಲೇಖನವನ್ನು ಒದಗಿಸಿದ್ದಾರೆ. ಇದಲ್ಲದೆ ಕಹಳೆಯ ಇನ್ನೂ ಇತರ ಲೇಖನಗಳಿಗೂ ಚಿತ್ರಗಳನ್ನು ಒದಗಿಸಿರುವ ಇವರಿಗೆ ಕಹಳೆ ತಂಡದ ಪರವಾಗಿ ಧನ್ಯವಾದಗಳು.

Blog  |  Facebook  |  Twitter

3 ಕಾಮೆಂಟ್‌ಗಳು:

  1. ಪೀಠಿಕೆ, ಪರಿಪಾಟ ಹಾಗು ಪ್ರೇರೇಪಣೆ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ..

    ಪ್ರತ್ಯುತ್ತರಅಳಿಸಿ
  2. ಶ್ರೀಯುತ ಸು. ವಿ. ಮೂರ್ತಿಯವರ ಅಕ್ಷರಗಳಲ್ಲಿ ಚಿತ್ರರಚನೆ ಚೆನ್ನಾಗಿದೆ .ಆದರೆ ಅಕ್ಷರಗಳಿಂದ ಪ್ರಾರಂಭವಾಗುವ,ಸಂಬಂದಿಸಿದ ಚಿತ್ರಗಳನ್ನೇ ಬಿಡಿಸಿದ್ದರೆ, ಇನ್ನೂ ಸೂಕ್ತವಾಗಿರುತ್ತಿತ್ತು ಎನ್ನುವುದು ನನ್ನ ಅನಸಿಕೆ.

    ಪ್ರತ್ಯುತ್ತರಅಳಿಸಿ
  3. ಮಕ್ಕಳಿಗೆ ಕಲಿಕೆಯನ್ನು ಆತ್ಮೀಯ ಹಾಗೂ ಉಲ್ಲಾಸಕರವಾಗಿಸುವ ನಿಟ್ಟಿನಲ್ಲಿ ನಿಮ್ಮ ಆಲೋಚನೆಗಳು ಅತ್ಯಂತ ಸಮಂಜಸ ಹಾಗೂ ಸ್ವಾಗತಾರ್ಹ. ಅಕ್ಷರ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ.

    ಪ್ರತ್ಯುತ್ತರಅಳಿಸಿ